ನಟ ಚಿರಂಜೀವಿ ಸರ್ಜಾ ಅವರ ಸಾವು ಚಿತ್ರರಂಗಕ್ಕೆ ಅಪಾರ ಪ್ರಮಾಣದ ಹಾನಿಯಾಗಿದೆ. ಅವರ ಪತ್ನಿ ಮೇಘನಾ ರಾಜ್ ಅವರು ಈಗ ಹೇಗಿದ್ದಾರೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.


ಸ್ಯಾಂಡಲ್ ವುಡ್ ಹಿರಿಯ ತಾರೆಯರು ನಟ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಅವರನ್ನು ಭೇಟಿ ಮಾಡಿ ಪಾರ್ಟಿ ಮಾಡಿದ್ದಾರೆ. ಫೋಟೋಗಳನ್ನು ಹಂಚಿಕೊಂಡ ಮಾಳವಿಕಾ ಅವಿನಾಶ್ ನಾನು ಬಾಲನಟಿಯಾದಾಗಿನಿಂದ ಸುಂದರರಾಜ್ ಅವರನ್ನು ನೋಡಿದ್ದೇನೆ ನಾವಿಬ್ಬರೂ ಒಟ್ಟಿಗೆ ಹಾಗೂ ಪ್ರತ್ಯೇಕವಾಗಿ ಸಿನೆಮಾ ಭ್ರಾತೃತ್ವ ದಲ್ಲಿ ತುಂಬ ಪ್ರಯಾಣಿಸಿದ್ದೇವೆ ಎಂದಿದ್ದಾರೆ. ಮಾಳವಿಕಾ ಅವಿನಾಶ್ ಅವರು ಸಿನೆಮಾ ಇಂಡಸ್ಟ್ರಿಯ ಉತ್ತಮ ಸ್ನೇಹಿತರಾದ ಸುಧಾರಾಣಿ, ಶೃತಿ ಹಾಗೂ ಸುಂದರರಾಜ್ ಕುಟುಂಬದವರೊಂದಿಗೆ ತೆಗೆದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಶೃತಿ ಮಗಳು ಕೂಡ ಸೇರಿದ್ದಾರೆ. ಮೇಘನಾ ಗರ್ಭಿಣಿ ಹಿನ್ನಲೆ ಭೇಟಿಯಾಗಿ ಪರಸ್ಪರ ಮಾತುಕತೆ ನಡೆಸಿ ಮೇಘನಾ ಅವರ ಆರೋಗ್ಯ ವಿಚಾರಿಸಿ, ಸ್ವಲ್ಪ ಹೊತ್ತು ಕಾಲ ಕಳೆದು ಬಂದಿದ್ದಾರೆ.

ಮೇಘನಾ ರಾಜ್ ಕುಟುಂಬದವರೊಂದಿಗೆ ಹಿರಿಯ ತಾರೆಯರಾದ ಸುಧಾರಾಣಿ, ಮಾಳವಿಕಾ, ಶೃತಿ ಹರಟೆ ಹೊಡೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಹಳ ದಿನಗಳ ನಂತರ ಮೇಘನಾ ಅವರ ಮುಖದಲ್ಲಿ ನಗು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಚಿರು ಅವರ ಅಕಾಲಿಕ ಮರಣ ನೋವನ್ನು ತಂದುಕೊಟ್ಟಿದೆ. ಮೇಘನಾ ಅವರಿಗೆ ದುಃಖ ತಡೆದು ಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಲಿ ಎಂಬುದು ಎಲ್ಲರ ಆಶಯವಾಗಿದೆ.

By

Leave a Reply

Your email address will not be published. Required fields are marked *