Chanakya Niti In Kannada: ಚಾಣಕ್ಯ ನೀತಿಯ ಪ್ರಕಾರ ಒಂದು ಹೆಣ್ಣು ಮನೆಯನ್ನು ಹೇಗೆ ನಿಭಾಯಿಸಬೇಕು ಮತ್ತು ಯಾವ ರೀತಿ ಹೆಂಡತಿ ಸಿಕ್ಕರೆ ಆ ಪುರುಷ ಭಾಗ್ಯಶಾಲಿ ಎನ್ನಬಹುದು ಎಂದು ಈ ಲೇಖನದಲ್ಲಿ ಹೇಳಿದ್ದಾರೆ. ಒಂದು ಮನೆಯನ್ನು ನಡೆಸಿಕೊಂಡು ಹೋಗುವ ಸಾಮರ್ಥ್ಯ ಹೆಣ್ಣಿಗಿರುತ್ತದೆ. ಆಕೆ ಒಳ್ಳೆಯವಳಾಗಿದ್ದರೆ ಮನೆಯನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಾಳೆ. ಚಾಣಕ್ಯ ನೀತಿಯ ಪ್ರಕಾರ ಹೆಂಡತಿಯ ಒಳ್ಳೆಯ ಗುಣವು ಕುಟುಂಬವನ್ನು ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಾಳೆ ಮತ್ತು ಕಷ್ಟ ಬಹುಬೇಗ ದೂರವಾಗುವಂತೆ ಮಾಡುತ್ತಾಳೆ.

ಮನೆಯು ಸಂಪೂರ್ಣವಾಗಿ ಒಂದು ಮಹಿಳೆಯ ಗುಣದ ಆಧಾರದ ಮೇಲೆ ನಿಂತಿರುತ್ತದೆ. ಹೆಣ್ಣು ಮನೆಯ ಏಳಿಗೆಯ ಕಡೆಗೆ ಯೋಚಿಸುತ್ತಾಳೆ. ತಾನು ಮೆಟ್ಟಿದಂತಹ ಮನೆ ಅಭಿವೃದ್ಧಿ ಆಗಬೇಕು ನನ್ನ ಕುಟುಂಬ ಚೆನ್ನಾಗಿರಬೇಕು ಎಂಬುದು ಅವಳ ಆಸೆ ಆಗಿರುತ್ತದೆ.

Chanakya Niti In Kannada

ಗಂಡನು ಕಷ್ಟ ಪಟ್ಟು ದುಡಿದಂತಹ ದುಡ್ಡನ್ನು ಹೆಂಡತಿ ಮಿತಿಯಾಗಿ ಬಳಸಿ ಉಳಿದಿದ್ದನ್ನು ಕೂಡಿ ಇಡುವ ಪ್ರಯತ್ನ ಮಾಡುತ್ತಾಳೆ .ಏಕೆಂದರೆ ಕಷ್ಟದ ಸಮಯದಲ್ಲಿ ಆ ಹಣ ಸಹಾಯಕ್ಕೆ ಬರುತ್ತದೆ ಎಂಬ ಒಳ್ಳೆಯ ಉದ್ದೇಶ ಆ ಹೆಣ್ಣು ಮಗಳಿಗಿರುತ್ತದೆ. ಇಂತಹ ಒಳ್ಳೆ ಮನಸ್ಸಿನ ಹೆಣ್ಣನ್ನು ಮದುವೆ ಮಾಡಿಕೊಂಡರೆ ನಿಮ್ಮ ಜೀವನ ಚೆನ್ನಾಗಿರುತ್ತದೆ.

ನಿಮ್ಮ ಎಲ್ಲಾ ಕಷ್ಟಕ್ಕೆ ಸ್ಪಂದಿಸಿ ನಿಮ್ಮ ಸಮಸ್ಯೆಯಲ್ಲಿ ಜೊತೆಯಾಗುವಂತಹ ಮಹಿಳೆಯನ್ನು ಮದುವೆಯಾದರೆ ನೀವು ತುಂಬಾ ಭಾಗ್ಯಶಾಲಿ ಆಗಿರುತ್ತೀರಾ. ಕಷ್ಟದ ಸಮಯದಲ್ಲಿ ಗಂಡನಿಗೆ ಧೈರ್ಯ ತುಂಬಿ ಆತನ ಜೊತೆಗೆ ಇರುವುದು ಬಹಳ ಮುಖ್ಯವಾದದ್ದು ಮತ್ತು ಕಠಿಣ ಪರಿಸ್ಥಿತಿಯಲ್ಲಿ ಅವನಿಗೆ ಬೆನ್ನೆಲುಬಾಗಿರಬೇಕು.

ಮನೆಯ ಸದಸ್ಯರನ್ನು ಪ್ರೀತಿಸಿ ಅವರ ಆರೈಕೆ ಹಾಗೂ ಅವರ ಆಗು ಹೋಗುಗಳನ್ನು ನೋಡಿಕೊಳ್ಳುವ ಕರ್ತವ್ಯ ಮನೆಯ ಸೊಸೆಯದಾಗಿರುತ್ತದೆ. ಎಂತದೇ ಸಂದರ್ಭ ಬಂದರು ತನ್ನವರನ್ನು ರಕ್ಷಿಸುವ ಒಳ್ಳೆಯ ಗುಣವನ್ನು ಹೊಂದಿರಬೇಕು. ಇದನ್ನೂ ಓದಿ Horoscope Aquarius: ಕುಂಭ ರಾಶಿಯವರಿಗೆ ಮತ್ತೆ ಬಂದಿದೆ ಒಳ್ಳೆ ಅವಕಾಶ ಮಿಸ್ ಮಾಡಿಕೊಳ್ಳಬೇಡಿ

By AS Naik

Leave a Reply

Your email address will not be published. Required fields are marked *