ಕೇಂದ್ರ ಸರ್ಕಾರದ ಹೊಸ ಯೋಜನೆ ರೇಷನ್ ಕಾರ್ಡ್ ಇದ್ದವರಿಗೆ

0 1

ಕೇಂದ್ರ ಸರ್ಕಾರವು ಜನರ ಕಲ್ಯಾಣಕ್ಕಾಗಿ ಒಂದಲ್ಲ ಒಂದು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ ಮತ್ತು ಜಾರಿಗೆ ತರುತ್ತಲೂ ಇದೆ. ಇತ್ತೀಚೆಗೆ ಹೊಸದಾಗಿ ಜಾರಿಗೆ ಬಂದ ಕೇಂದ್ರ ಸರ್ಕಾರದ ಯೋಜನೆ ಎಂದರೆ ಅದು LIC ಆಮ್ ಆದ್ಮಿ ಬೀಮಾ ಯೋಜನಾ. ಈ ಲೇಖನದ ಮೂಲಕ ನಾವು LIC ಆಮ್ ಆದ್ಮಿ ಬೀಮಾ ಯೋಜನಾ ಇದರ ಬಗ್ಗೆ ಯಾರಿಗೆಲ್ಲ ಇದರ ಪ್ರಯೋಜನ ಇದೆ? ಹಾಗೂ ಈ ಯೋಜನೆಯನ್ನು ನಾವು ಬಳಕೆ ಮಾಡಿಕೊಳ್ಳುವುದು ಹೇಗೆ? ಎನ್ನುವುದರ ಕುರಿತಾಗಿ ನಾವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

LIC ಆಮ್ ಆದ್ಮಿ ಬೀಮಾ ಯೋಜನಾ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು , ತುಂಬಾ ಬಡವರಿಗೆ ಅವರಿಗೂ ಸಹ ಇನ್ಸೂರೆನ್ಸ್ ತುಂಬಲು ಸಹಾಯ ಆಗಲಿ ಎನ್ನುವ ಕಾರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದಕ್ಕೂ ಮೊದಲೇ ಜನಶ್ರೀ ಬೀಮಾ ಯೋಜನೆ ಮತ್ತು ಆಮ್ ಆದ್ಮಿ ಬೀಮಾ ಯೋಜನೆ ಎಂಬ ಎರಡು ಯೋಜನೆಗಳನ್ನು ಜಾರಿಗೆ ತರಲಾಗಿತ್ತು.

ನಂತರ ೨೦೧೩ ರಲ್ಲಿ ಈ ಎರಡೂ ಯೋಜನೆಗಳನ್ನು ಒಂದು ಮಾಡಿ LIC ಆಮ್ ಆದ್ಮಿ ಬೀಮಾ ಯೋಜನಾ ಎಂಬ ಹೆಸರಿನಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರಲಾಯಿತು. ಇನ್ನು ಈ ಯೋಜನೆಯ ಬಳಕೆ ಮಾಡಿಕೊಳ್ಳಲು ಬಯಸುವವರು ಅಥವಾ ಫಲಾನುಭವಿಗಳಿಗೆ ಹದಿನೆಂಟು ವರ್ಷ ವಯಸ್ಸು ಆಗಿರಲೇಬೇಕು ಹಾಗೂ ಐವತ್ತೊಂಬತ್ತು ವರ್ಷ ಒಳಗಿನ ವ್ಯಕ್ತಿ ಆಗಿರಬೇಕು. ಹದಿನೆಂಟು ವರ್ಷಕ್ಕಿಂತ ಕೆಳಗಿನ ವ್ಯಕ್ತಿಗಳು ಹಾಗೂ ಐವತ್ತೊಂಬತ್ತು ವರ್ಷಕ್ಕಿಂತ ಮೇಲಿನ ವ್ಯಕ್ತಿಗಳು ಸಹ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.

ಇನ್ನು ಈ ಯೋಜನೆಯ ಲಾಭ ಪಡೆಯಲು ಕೆಲವು ದಾಖಲೆಗಳನ್ನು ಒದಗಿಸಬೇಕು ಹಾಗಾಗಿ ನೀವು ನೀಡಬೇಕಾದ ಅವಶ್ಯ ಇರುವ ದಾಖಲೆಗಳು ಎನು ಅಂತಾ ನೋಡುವುದಾದರೆ , ರೇಶನ್ ಕಾರ್ಡ್ , ಬರ್ತ್ ಸರ್ಟಿಫಿಕೇಟ್ , ಸ್ಕೂಲ್ ಸರ್ಟಿಫಿಕೇಟ್, ವೋಟರ್ ಐಡಿ, ಆಧಾರ್ ಕಾರ್ಡ್ ಇವುಗಳಲ್ಲಿ ಯಾವುದೇ ಒಂದನ್ನು ನೀಡಿದರೂ ಸಹ ನೀವು ಈ ಪಾಲಿಸಿಯನ್ನು ಪಡೆದುಕೊಂಡು ಇದರ ಲಾಭ ಪಡೆದುಕೊಳ್ಳಬಹುದು. ಇನ್ನು ಈ ಯೋಜನೆಗೆ ಕಟ್ಟಬೇಕಾದ ಪ್ರೀಮಿಯಂ ಮೊತ್ತ ಅಂದರೆ ಅದು ಬಹಳ ಕಡಿಮೆ ಇದೆ ಕೇವಲ ೨೦೦ ರೂಪಾಯಿ ಪ್ರೀಮಿಯಂ ಮೊತ್ತವನ್ನು ತುಂಬಬಹುದು.

ಅಂದರೆ ಯಾವ ವ್ಯಕ್ತಿ ಪಾಲಿಸಿ ಮಾಡಿಸಿರುತ್ತಾರೋ ಆ ವ್ಯಕ್ತಿ ವರ್ಷಕ್ಕೆ ಒಂದು ಬಾರಿ ಕೇವಲ ನೂರು ರೂಪಾಯಿ ಪ್ರೀಮಿಯಂ ಹಣವನ್ನು ಕಟ್ಟಬೇಕು. ಇನ್ನುಳಿದ ನೂರು ರೂಪಾಯಿ ಪ್ರೀಮಿಯಂ ಹಣವನ್ನು ಸರ್ಕಾರದ ಕಡೆಯಿಂದ ಸೋಷಿಯಲ್ ಸೆಕ್ಯುರಿಟಿ ಫಂಡ್ ಕಡೆಯಿಂದ ೫೦ ರೂಪಾಯಿ ಹಾಗೂ ನೋಡಲ್ ಏಜೆನ್ಸಿ ಕಡೆಯಿಂದ ೫೦ ರೂಪಾಯಿ ಎಂದು ಒಟ್ಟೂ ಇನ್ನುಳಿದ ನೂರು ರೂಪಾಯಿ ಪ್ರೀಮಿಯಂ ಹಣವನ್ನು ಸರ್ಕಾರದ ಕಡೆಯಿಂದ ಕಟ್ಟಲಾಗುತ್ತದೆ.

ಇನ್ನು ಈ LIC ಆಮ್ ಆದ್ಮಿ ಬೀಮಾ ಯೋಜನೆ ಇದರಿಂದ ನಾವು ಪಡೆಯುವ ಲಾಭ ಅಥವಾ ಪ್ರಯೋಜನ ಏನು ಅಂತ ನೋಡುವುದಾದರೆ, ಪಾಲಿಸಿ ಮಾಡಿಸಿದ ವ್ಯಕ್ತಿ ನೈಸರ್ಗಿಕವಾಗಿ ಸಾವನ್ನಪ್ಪಿದರೆ ಅವರ ನಾಮಿನಿ ವ್ಯಕ್ತಿಗೆ ೩೦,೦೦೦ ರೂಪಾಯಿ ಹಣವನ್ನು ಕೇಂದ್ರಸರ್ಕಾರದ ಕಡೆಯಿಂದ ನೀಡಲಾಗುವುದು. ಆಕ್ಸಿಡೆಂಟ್ ಆಗಿ ಮರಣ ಹೊಂದಿದರೆ, ಆಗ ಅವರ ನಾಮಿನಿ ಗೆ ಕೇಂದ್ರ ಸರ್ಕಾರದಿಂದ ದೊರೆಯುವ ಮೊತ್ತ ೭೫,೦೦೦ ರೂಪಾಯಿ. ಒಂದುವೇಳೆ ಪಾಲಿಸಿ ಮಾಡಿಸಿದ ವ್ಯಕ್ತಿಗೆ ಆಕ್ಸಿಡೆಂಟ್ ಆಗಿ ಎರಡೂ ಕೈ ಕಾಲು ಕಳೆದುಕೊಂಡರೆ, ಆಗ ಸಹ ೭೫,೦೦೦ ರೂಪಾಯಿ ಹಣವನ್ನು ನೀಡಲಾಗುವುದು ಹಾಗೂ ಒಂದುವೇಳೆ ಒಂದು ಕಣ್ಣು, ಕೈ, ಕಾಲು ಕಳೆದುಕೊಂಡರೆ ಅಂತವರಿಗೆ ೩೭,೫೦೦ ರೂಪಾಯಿಯನ್ನು ಕೇಂದ್ರ ಸರ್ಕಾರದ ಕಡೆಯಿಂದ ನೀಡಲಾಗುವುದು.

ಇಷ್ಟಲ್ಲದೆ ಸ್ಕಾಲರ್ಶಿಪ್ ಕೂಡಾ ನೀಡುವ ಸೌಲಭ್ಯವೂ ಇದ್ದು , ಪಾಲಿಸಿ ಮಾಡಿಸಿದ ವ್ಯಕ್ತಿಗೆ ಆಕ್ಸಿಡೆಂಟ್ ಆಗಿದ್ದಾಗ ಅವರಿಗೆ ಇಬ್ಬರು ಮಕ್ಕಳು ಇದ್ದರೆ ಅವರಿಗೆ ಒಂಭತ್ತನೇ ತರಗತಿಯಿಂದ ಪಿಯುಸಿ ವರೆಗೆ ಓದುವವರು ಆಗಿದ್ದರೆ ಪ್ರತೀ ತಿಂಗಳು ನೂರು ರೂಪಾಯಿ ಸ್ಕಾಲರ್ಶಿಪ್ ಹಣವನ್ನು ನೀಡಲಾಗುವುದು. ಇನ್ನು ಈ ಪಾಲಿಸಿಯನ್ನು ಮಾಡುವುದಾದರೆ ನೀವು ರಿಜಿಸ್ಟರ್ ನೋಡಲ್ ಏಜೆನ್ಸಿ ಅವರ ಬಳಿ ಅಥವಾ LIC ಆಫೀಸ್ ನಲ್ಲಿಯೇ ಆದರೂ ನೇರವಾಗಿ ಇದನ್ನು ಮಾಡಿಸಬಹುದು.

Leave A Reply

Your email address will not be published.