ರಾಜ್ಯ ಸರ್ಕಾರದ ಕಡೆಯಿಂದ ಎಲ್ಲಾ ರೈತರಿಗೆ ಒಂದು ಬಂಪರ್ ಕೊಡುಗೆಯನ್ನು ನೀಡಲಾಗಿದೆ. ನಿಮ್ಮ ಜಮೀನನ್ನು ನೀವೇ ಉಳುಮೆ ಮಾಡುತ್ತಿದ್ದು , ಅದರ ಪಹಣಿ ಮಾತ್ರ ನಿಮ್ಮ ತಂದೆ , ತಾತ ಅಥವಾ ಅವರ ತಂದೆ ಹೀಗೆ ನಿಮ್ಮ ಪೂರ್ವಜರ ಹೆಸರಿನಲ್ಲಿ ಇದ್ದರೆ ಅದನ್ನು ಈಗ ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಈಗ ರೈತರಿಗೆ ಒಂದು ಸುವರ್ಣ ಅವಕಾಶವನ್ನು ನೀಡಿದೆ. ನಿಮ್ಮ ಪೂರ್ವಜರ ಹೆಸರಿನಲ್ಲಿ ಇರುವಂತಹ ನಿಮ್ಮ ಜಮೀನನ್ನು ನಿಮ್ಮ ಹೆಸರಿಗೆ ಹೇಗೆ ಬದಲಾಯಿಸಿಕೊಳ್ಳಬಹುದು? ಅಥವಾ ಹೇಗೆ ವರ್ಗಾವಣೆ ಮಾಡಿಕೊಳ್ಳಬಹುದು? ಎನ್ನುವ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಾಕಷ್ಟು ಜನ ರೈತರ ಜಮೀನುಗಳು ಈಗ ಉಳುಮೆ ಮಾಡುತ್ತಾ ಇರುವವರ ಹೆಸರಿಗೆ ಇಲ್ಲದೆಯೇ ರೈತರು ತಮಗೆ ಬೇಕಾದ ಸಂದರ್ಭದಲ್ಲಿ ಬ್ಯಾಂಕ್ ಗಳಿಂದ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ ಮತ್ತು ವಿಮೆ ಹಣದ ಸೌಲಭ್ಯ ಕೂಡಾ ದೊರೆಯುತ್ತಿಲ್ಲ. ಇನ್ನು ಖಾತೆಯನ್ನು ಬದಲಾವಣೆ ಮಾಡಿಕೊಳ್ಳುವ ಸಲುವಾಗಿ ರೈತರು ಹಲವಾರು ಬಾರಿ ಕಚೇರಿಗಳಿಗೆ ಅಲೆದಾಡುತ್ತಲೆ ಇರಬೇಕು. ಈ ಮೂಲಕ ಇದು ಕೃಷಿ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಉಂಟು ಮಾಡಿತ್ತು. ಪೌತಿ ಖಾತೆ ಬದಲಾವಣೆಗೆ ಇದ್ದಂತಹ ನಿಯಮವನ್ನು ಸಡಿಲ ಮಾಡಿ , ಆಂದೋಲನ ರೂಪದಲ್ಲಿ ಖಾತೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈಗಾಗಲೇ ಇರುವ ಜಮೀನಿನ ವಾರಸುದಾರ ಮರಣ ಹೊಂದಿದ ನಂತರ ಜಮೀನಿನ ಖಾತೆಗೆ ಸಾಕಷ್ಟು ಸಮಯದಿಂದ ಕಾಯುತ್ತಾ ಇರುವ ಅನೇಕ ಕುಟುಂಬಗಳಿಗೆ ಇದೊಂದು ಶುಭ ಸುದ್ದಿ ಎನ್ನಬಹುದು. ಹಾಗಾದರೆ ಜಮೀನಿನ ಪಹಣಿಯನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ? ಎಂದು ನೋಡುವುದಾದರೆ , ಸರ್ಕಾರವು ಸೂಚಿಸಿರುವ ಮೂಲಗಳಿಂದ ವ್ಯಕ್ತಿಯು ಮರಣ ಹೊಂದಿದ ವಿವರಗಳನ್ನು ಪಡೆದುಕೊಳ್ಳಬೇಕು.

ಮರಣ ಪ್ರಮಾಣ ಪತ್ರ ಮತ್ತು ವಂಶ ವೃಕ್ಷ ಪ್ರಮಾಣ ಪತ್ರವನ್ನು ಪಡೆದು ಭೂಮಿ ತಂತ್ರಾಂಶ, ಪೌತೀ ಖಾತೆಗಾಗಿ ನಮೂನೆ ಒಂದರಲ್ಲಿ ದಾಖಲಿಸಬೇಕು. ಒಂದುವೇಳೆ ವಂಶ ವೃಕ್ಷ ಪ್ರಮಾಣ ಪತ್ರ ಲಭ್ಯ ಇಲ್ಲದೇ ಇದ್ದರೆ ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿ ಮಾಡಿ ಅಟಲ್ ಜೀ ಜನಸ್ನೇಹಿ ಕೇಂದ್ರ ( ನಾಡ ಕಚೇರಿ) ಅಥವಾ ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು.

ಒಂದುವೇಳೆ ವ್ಯಕ್ತಿಯು ಮರಣ ಹೊಂದಿ ಒಂದು ವರ್ಷಕ್ಕಿಂತಲೂ ಹೆಚ್ಚಿನ ಸಮಯ ಆಗಿದ್ದರೆ , ಮರಣ ಪ್ರಮಾಣ ಪತ್ರಕ್ಕಾಗಿ ನೋಂದಣಿ ಇಲ್ಲದೆ ಇದ್ದರೆ ಸಂಬಂಧ ಪಟ್ಟ ನ್ಯಾಯಾಲಯದಲ್ಲಿ ಮರಣ ಹೊಂದಿದ ಕುರಿತು ಆದೇಶವನ್ನು ಪಡೆದು ತಹಶೀಲ್ದಾರ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರವನ್ನು ಪಡೆಯಬೇಕು ಅಥವಾ ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ಈ ದಾಖಲೆಗಳನ್ನು ಪರಿಶೀಲಿಸಿಕೊಂಡು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ರಾಜಶ್ವ ನಿರೀಕ್ಷಕರು ಸ್ಥಳ ಪರಿಶೀಲನೆ ಮಹಜರ್ ಮಾಡಿ ಮರಣ ಹೊಂದಿದ ಬಗ್ಗೆ ಸಂಬಂಧ ಪಟ್ಟ ವಾರಸುದಾರರಿಂದ ಆಫ್ಡಿವೆಟ್ ಪಡೆದು ಅವರ ಆಧಾರ್ ಕಾರ್ಡ್ , ರೇಶನ್ ಕಾರ್ಡ್ ಇವುಗಳ ಸಹಾಯದಿಂದ ಅರ್ಜಿ ಹಾಕಬಹುದು.

ಇಂತಹ ಪೌತಿ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಶುಲ್ಕದಲ್ಲಿ ರಾಜ್ಯ ಸರ್ಕಾರ ವಿನಾಯತಿ ನೀಡಿದೆ. ಹಕ್ಕು ಬದಲಾವಣೆ ಪ್ರಕರಣದಲ್ಲಿ ನಮೂನೆ 11 ಮತ್ತು ನಮೂನೆ 31 ಇದನ್ನು ಹೊರಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಿಟೇಷನ್ ವಿಲೇವಾರಿಗೆ ಮೂವತ್ತು ದಿನಗಳ ಕಾಲ ಕಾಲಾವಕಾಶ ನೀಡಲಾಗಿದ್ದು, ಆಸಕ್ತರು ತಕರಾರನ್ನು ಸಲ್ಲಿಸಬಹುದಾಗಿದೆ. ಒಂದುವೇಳೆ ಯಾರಾದರೂ ತಕರಾರು ಅರ್ಜಿ ಸಲ್ಲಿಸಲು ಮುಂದೆ ಬಂದರೆ ಹೊಬಳಿಗಳಿಗೆ ಗ್ರೇಡ್ ಒನ್ ತಹಶೀಲ್ದಾರ್ ಮತ್ತು ಗ್ರೇಡ್ ಟೂ ತಹಶೀಲ್ದಾರ್ ಗೆ ಹೊಣೆ ನೀಡಲಾಗಿದ್ದು ಆಯಾ ಹೋಬಳಿಗಳಿಗೆ ಒಂದು ತಿಂಗಳ ಕ್ಯಾಂಪ್ ಮಾಡಿ ವಿಲೇವಾರಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು.

ಪೌತಿ ಖಾತೆ ಅಥವಾ ನಿಮ್ಮ ಹೆಸರಿಗೆ ಜಮೀನನ್ನು ಪಹಣಿ ಮಾಡಿಕೊಳ್ಳಲು ನಮೂನೆ ಒಂದು ಈ ಅರ್ಜಿಯು ರಾಜ್ಯದ ಎಲ್ಲಾ ನಾಡ ಕಛೇರಿಗಳಲ್ಲಿ ಲಭ್ಯವಿದೆ. ಇದರ ಕುರಿತಾಗಿ ಯಾವುದೇ ಅಧಿಕಾರಿಗಳು ನಿಮಗೆ ತಕರಾರು ಮಾಡಿದರೆ, ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳು ಇವರಿಗೆ ಜವಾಬ್ಧಾರಿ ನೀಡಲಾಗಿದೆ. ಯಾವುದೇ ರೀತಿಯ ಹೆಚ್ಚಿ ನ ಮಾಹಿತಿಗಾಗಿ ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳು ಇವರನ್ನು ಸಂಪರ್ಕಿಸಬಹುದು. ಮರಣ ಹೊಂದಿದವರ ಖಾತೆಯ ವಿವರ ನೀಡಲು ಇವರಿಗೆ ಜವಾಬ್ಧಾರಿ ನೀಡಲಾಗಿದೆ. ಮರಣ ಹೊಂದಿದ ರಿಜಿಸ್ಟರ್, ಪರಿಹಾರ ಹೊಂದಿದ ದಾಖಲೆ , ಮನೇ ಮನೇ ಸಂದರ್ಶನ ಮಾಡುವುದು ಹೀಗೆ ಮೂರು ಹಂತದಲ್ಲಿ ಮರಣ ಹೊಂದಿದ ಖಾತೆದಾರರ ವಿವರವನ್ನು ಸಂಗ್ರಹಿಸಲು ಸೂಚಿಸಲಾಗಿದೆ.

Leave a Reply

Your email address will not be published. Required fields are marked *