ದೆಹಲಿಯಲ್ಲಿ ಕಾರುಗಳ ಬೆಲೆ ಕಡಿಮೆ ಆದ್ರೆ ಕರ್ನಾಟಕದಲ್ಲಿ ಜಾಸ್ತಿ ಯಾಕೆ ನೋಡಿ

0 1

ಕಾರು ಖರೀದಿಸುವುದು ಬಹಳಷ್ಟು ಜನರ ಕನಸಾಗಿರುತ್ತದೆ. ಕಾರನ್ನು ಖರೀದಿಸುವುದು ಅಷ್ಟು ಸುಲಭವಲ್ಲ. ದೆಹಲಿಯಲ್ಲಿ ಕಾರಿನ ಬೆಲೆ ಕಡಿಮೆ ಇರುತ್ತದೆ ಮತ್ತು ಕರ್ನಾಟಕದಲ್ಲಿ ಕಾರಿನ ಬೆಲೆ ಹೆಚ್ಚಿರುತ್ತದೆ ಇದಕ್ಕೆ ಕಾರಣವೇನು. ದೆಹಲಿಯಲ್ಲಿ ಕಾರನ್ನು ಖರೀದಿಸಿ ಕರ್ನಾಟಕದಲ್ಲಿ ರಿಜಿಸ್ಟ್ರೇಷನ್ ಹೇಗೆ ಮಾಡಬೇಕು, ಏನೆಲ್ಲಾ ಡಾಕ್ಯುಮೆಂಟ್ ಬೇಕಾಗುತ್ತದೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.

ದೆಹಲಿಯಲ್ಲಿ ಮತ್ತು ಕಲ್ಕತ್ತಾದಲ್ಲಿ ಕಾರಿನ ಬೆಲೆ ಕಡಿಮೆ ಇದೆ. ನಮ್ಮ ದೇಶದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೋಡ್ ಟ್ಯಾಕ್ಸ್ ಇರುತ್ತದೆ. 5 ಲಕ್ಷ ರೂಪಾಯಿ ಒಳಗಿನ ಕಾರಿಗೆ ಇಷ್ಟು ಪರ್ಸೆಂಟ್, 5 ಲಕ್ಷದಿಂದ 10 ಲಕ್ಷ ರೂಪಾಯಿ ಒಳಗಿನ ಕಾರಿಗೆ ಇಷ್ಟು ಪರ್ಸೆಂಟ್ ಎಂದು ಫಿಕ್ಸ್ ಮಾಡಲಾಗುತ್ತದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಮಾನದಂಡಗಳ ಮೇಲೆ ರೋಡ ಟ್ಯಾಕ್ಸ್ ಫಿಕ್ಸ್ ಮಾಡಲಾಗುತ್ತದೆ. ಒಂದು ಕಾರಿನ ಎಕ್ಸ್ ಶೋರೂಮ್ ಬೆಲೆ ಇಡಿ ದೇಶದಲ್ಲಿ ಒಂದೇ ಆಗಿರುತ್ತದೆ. ಎಕ್ಸ್ ಶೋರೂಮ್ ಬೆಲೆಯಲ್ಲಿ ರೋಡ್ ಟ್ಯಾಕ್ಸ್ ಇನಕ್ಲೂಡ್ ಆಗುವುದರಿಂದ ಒಂದು ರಾಜ್ಯದಲ್ಲಿ ಬೆಲೆ ಹೆಚ್ಚಿರುತ್ತದೆ ಇನ್ನೊಂದು ರಾಜ್ಯದಲ್ಲಿ ಬೆಲೆ ಕಡಿಮೆ ಇರುತ್ತದೆ.

ದೆಹಲಿಯಲ್ಲಿ ರೋಡ್ ಟ್ಯಾಕ್ಸ್ 4% ನಿಂದ 6% ಇರುತ್ತದೆ. ಕರ್ನಾಟಕದಲ್ಲಿ 18% ವರೆಗೂ ರೋಡ್ ಟ್ಯಾಕ್ಸ್ ಇರುವುದನ್ನು ನೋಡಬಹುದು. ದೆಹಲಿಯಲ್ಲಿ ಡಿಸೇಲ್ ಗಾಡಿಗಳಿಂದ ವಾಯು ಮಾಲಿನ್ಯ ಉಂಟಾಗುವುದರಿಂದ ಡಿಸೇಲ್ ಗಾಡಿಗಳಿಗೆ 10 ವರ್ಷ ಮಾತ್ರ ವ್ಯಾಲಿಡಿಟಿ ಕೊಡಲಾಗುತ್ತದೆ. ಈ ನಿಯಮ ಹೊಸದಾಗಿ ಖರೀದಿಸಿದ ಗಾಡಿಗಳಿಗೆ ಅನ್ವಯವಾಗುತ್ತದೆ. 10 ವರ್ಷಕ್ಕಿಂತ ಹೆಚ್ಚು ವೆಲಿಡಿಟಿ ಮುಗಿದಿರುವ ಗಾಡಿಗಳನ್ನು ಪೊಲೀಸರಿಗೆ ಸೀಸ್ ಮಾಡುವ ಅಧಿಕಾರವನ್ನು ಸರ್ಕಾರದಿಂದ ಕೊಡಲಾಗಿದೆ ಈ ಕಾರಣದಿಂದ ಅಲ್ಲಿ ಕಾರಿನ ಬೆಲೆ ಕಡಿಮೆ ಇರುತ್ತದೆ. ದೆಹಲಿಯಿಂದ ಒಂದು ಗಾಡಿಯನ್ನು ಖರೀದಿಸಿ ಕರ್ನಾಟಕದಲ್ಲಿ ರಿಜಿಸ್ಟರ್ ಮಾಡಬೇಕು ಎಂದರೆ ಆರ್ ಟಿಓದವರಿಗೆ ಅವರದೆ ಆದ ರೂಲ್ಸ್ ಇದೆ ಅದರಂತೆ ಗಾಡಿಯನ್ನು ಚೆಕ್ ಮಾಡಿ ಟ್ಯಾಕ್ಸ್ ಹಾಕುತ್ತಾರೆ.

ಕಾರನ್ನು ಖರೀದಿಸಿದಾಗ ಮುಖ್ಯವಾಗಿ ಬೇಕಾಗುವ ದಾಖಲಾತಿ ಎಂದರೆ ಎನ್ ಓಸಿ ಅಂದರೆ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್, ಇದರಿಂದ ಗಾಡಿ ಮೇಲೆ ಕೇಸ್ ಇದ್ದರೆ ಗೊತ್ತಾಗುತ್ತದೆ. ಎನ್ ಓಸಿ ಸಿಕ್ಕರೆ ಮಾತ್ರ ಗಾಡಿ ರಿಜಿಸ್ಟರ್ ಆಗುತ್ತದೆ. ಗಾಡಿಯನ್ನು ಲೋನ್ ಮೂಲಕ ಖರೀದಿಸಿದರೆ ಬ್ಯಾಂಕ್ ಎನ್ ಓಸಿ ಕೂಡ ಮುಖ್ಯವಾಗುತ್ತದೆ. ಬ್ಯಾಂಕ್ ನಿಂದ ಎನ್ ಓಸಿ ಸಿಕ್ಕರೆ ಆ ಗಾಡಿಯ ಮೇಲೆ ಲೋನ್ ಇದೆಯಾ ಅಥವ ಕ್ಲಿಯರ್ ಆಗಿದೆಯಾ ಎಂಬುದು ತಿಳಿಯುತ್ತದೆ. ಆರ್ಸಿ ಬುಕ್, ಪೊಲ್ಯೂಷನ್ ಸರ್ಟಿಫಿಕೇಟ್ ಗಳು ಆರ್ ಟಿಓ ದಲ್ಲಿ ರಿಜಿಸ್ಟರ್ ಆಗಲು ಬೇಕಾಗುತ್ತದೆ. ನಂತರ ಆರ್ ಟಿಓದಲ್ಲಿ ಕೆಲವು ಪ್ರೊಸೆಸ್ ಇರುತ್ತದೆ ಅದನ್ನು ಮುಗಿಸಿದ ನಂತರ ಗಾಡಿಯನ್ನು ನಮ್ಮ ಹೆಸರಿಗೆ ಮಾಡಿಕೊಡುತ್ತಾರೆ. ಬೇರೆ ಸ್ಟೇಟ್ ಗಳಲ್ಲಿ ಗಾಡಿಯನ್ನು ಪರ್ಚೆಸ್ ಮಾಡಿದರೆ ಬ್ರೋಕರ್ ಇರುತ್ತಾರೆ ಅವರ ಮೂಲಕ ಕೆಲಸ ಮಾಡಿಸಿದರೆ ಬೇಗ ಕೆಲಸ ಆಗುತ್ತದೆ. ಬೇರೆ ರಾಜ್ಯಗಳಲ್ಲಿ ಗಾಡಿ ಖರೀದಿಸುವುದಕ್ಕಿಂತ ಕರ್ನಾಟಕದಲ್ಲಿಯೇ ಗಾಡಿಯನ್ನು ಖರೀದಿಸುವುದು ಒಳ್ಳೆಯದು. ಎನ್ ಸಿಆರ್ ಪ್ರದೇಶಗಳಲ್ಲಿ ಹೆಚ್ಚಿನ ಬೆಲೆಯ ಗಾಡಿಗಳು ಕಡಿಮೆ ಬೆಲೆಗೆ ಸಿಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಕಾರು ಖರೀದಿಸುವವರಿಗೆ ತಿಳಿಸಿ.

Leave A Reply

Your email address will not be published.