ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವ.

ಬೆಳದಿಂಗಳ ತಂಪು, ಆಹ್ಲಾದ, ನಿರ್ಲಿಪ್ತತೆ, ಶಾಂತಿ, ಏಕಾಂತ, ಪ್ರೇಮ, ಪ್ರಶಾಂತತೆ, ತೇಜಸ್ಸು- ಇವೆಲ್ಲಕ್ಕೂ ಸಂಕೇತವಾಗಿದೆ. ತನ್ನ ಅಂಗಳದಲ್ಲಿ ಚೆಲ್ಲಿರುವ ಬೆಳದಿಂಗಳು ತನ್ನದೆಂಬಂತೆ ಕಂಡರೂ ಅದು ತನ್ನದಲ್ಲ ಎಂಬುದು ಮನುಷ್ಯರಲ್ಲಿ ಅಂತರ್ಗತವಾದ ಎಚ್ಚರ. ಬದುಕಿನ ಪ್ರತಿ ಹೆಜ್ಜೆಯಲ್ಲೂ ಈ ಎಚ್ಚರವನ್ನೂ ಕಾಪಿಟ್ಟುಕೊಳ್ಳುವುದೇ ಗುರು ಗೌತಮನ ಉಪದೇಶಗಳಲ್ಲಿ ಮಹತ್ವದ್ದಾಗಿದೆ. ಬುದ್ಧ ಹೇಳುವಂತೆ ಬದುಕೆಂಬುದು ಶುದ್ಧ ಬೆಳಕು. ಇಲ್ಲಿ ಯಾವುದೂ ಯಾರ ಸ್ವತ್ತೂ ಅಲ್ಲ. ಸುಖವನ್ನು ವಸ್ತುಗಳಲ್ಲಿ ಅರಸಲು ಹೋಗುವುದರಿಂದಲೇ ಮನುಷ್ಯ ದುಃಖಕ್ಕೀಡಾಗುತ್ತಾನೆ ಎಂದು ಗೌತಮಬುದ್ಧ ಹೇಳಿದ್ದರು. ಯಾವುದನ್ನೂ ಸ್ವಂತವೆಂದು ಪರಿಗಣಿಸದವನಿಗೆ ನೋವೂ ಇಲ್ಲ, ನಲಿವೂ ಇಲ್ಲ.
ಅಂತಹ ನಿರ್ಲಿಪ್ತ ಸಮಚಿತ್ತ ಮಾತ್ರ ಬುದ್ಧನ ನಗೆಯಂತಹ ಕಿರು ನಗೆಯನ್ನು ಹೊಳೆಯಬಹುದು. ಹೀಗೆ ಗೌತಮಬುದ್ಧನು ಪ್ರತಿದಿನವೂ ಧ್ಯಾನ ಪೂಜೆ ಇವುಗಳಲ್ಲಿ ಮಗ್ನರಾಗುತ್ತಿದ್ದರು, ಇಂತಹ ಸಂದರ್ಭದಲ್ಲಿ ಬುದ್ಧರು ಏಕಾಂತದಲ್ಲಿ ಧ್ಯಾನ ಮಾಡುವಾಗ ಶಿಷ್ಯನಾದ ಆನಂದ ಹೀಗೆ ಕೇಳುತ್ತಾನೆ.

ಸ್ವಾಮಿ ಪ್ರತಿ ಮನುಷ್ಯನಿಗೂ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಹಾಗೂ ಎಷ್ಟು ಜನರು ಎಷ್ಟೋ ಸಲಹೆಗಳನ್ನು ನೀಡುತ್ತಾರೆ, ಆದರೆ ಆ ಸಂದರ್ಭದಲ್ಲಿ ಮನಸ್ಸು ನಿರಾಸೆ ಹಾಗೂ ದುಃಖಗಳಿಗೆ ಒಳಗಾಗಿರುತ್ತದೆ ಆದ್ದರಿಂದ ಯಾರು ಹೇಳಿದರೂ ಅದು ಸರಿ ಎಂದಿರುತ್ತದೆ ಇಂತಹ ಸಂದರ್ಭದಲ್ಲಿ ಯಾರು ಹೇಳಿದ್ದನ್ನು ಕೇಳಬೇಕು, ನಿರ್ಣಯಗಳನ್ನು ನಾವು ತೆಗೆದುಕೊಳ್ಳಬೇಕು ಎಂದು ವಿನಯದಿಂದ ತಮ್ಮ ಗುರುಗಳ ಬಳಿ ಶಿಷ್ಯ ಕೇಳುತ್ತಾನೆ. ಆಲ್ಬಮ್ ಗುಡ್ಡದ ಭಗವಾನನು ಈ ರೀತಿ ಹೇಳುತ್ತಾರೆ ಯಾವುದೇ ಸಂದರ್ಭದಲ್ಲಿಯೂ ಯಾರೇ ಹೇಳಿದರು ಕೇಳಬೇಕು ಆದರೆ ಮನಸಿಗೆ ಯಾವುದು ಸರಿ ಅನಿಸುತ್ತದೆಯೋ ಅದನ್ನು ಮಾತ್ರ ಮಾಡಬೇಕು. ದುಃಖದಲ್ಲಿ ಮುಳುಗಿರುವ ಮನಸ್ಸು ಸ್ವಲ್ಪ ಸಮಾಧಾನ ವನ್ನು ಕೋರುತ್ತದೆಆಗ ಯಾರೇ ಸಮಾಧಾನದ ಮಾತುಗಳನ್ನು ಹೇಳಿದರು ಅದನ್ನು ನಾವು ನಮ್ಮ ಒಳ್ಳೆಯದಕ್ಕೆ ನಮ್ಮ ಒಳಿತಿಗಾಗಿ ಮಾತನಾಡುತ್ತಿದ್ದಾರೆ ಎಂದು ಅನಿಸುತ್ತದೆ ಆದರೆ ಸ್ವಲ್ಪ ತಾಳ್ಮೆಯಿಂದ ವಿವೇಚನೆ ಮಾಡಿ ಯಾವುದು ಮಾಡಿದರೆ ಒಳ್ಳೆಯದು ಎಂಬುದನ್ನು ನಿರ್ಧರಿಸಬೇಕು. ಇದಕ್ಕೆ ಉದಾಹರಣೆಯಾಗಿ ಒಂದು ಚಿಕ್ಕ ಕತೆಯನ್ನು ಹೇಳುತ್ತೇನೆ ಶ್ರದ್ಧೆಯಿಂದ ಕೇಳು ಎಂದು ಬುದ್ಧರು ತಮ್ಮ ಶಿಷ್ಯನಿಗೆ ಹೇಳಿದರು.

ಒಂದು ಊರಿನಲ್ಲಿ ಒಬ್ಬ ವ್ಯಾಪಾರಿ ಇದ್ದನು, ಅವನಿಗೆ ಮದುವೆಯಾಗಿ ಒಂದು ವರ್ಷವಾದರೂ ಮಕ್ಕಳಾಗುವುದಿಲ್ಲ ಅದಕ್ಕೆ ಸಂತಾನ ಭಾಗ್ಯಕ್ಕಾಗಿ ದಂಪತಿಗಳು ಅನೇಕ ಪೂಜೆ ವ್ರತಗಳನ್ನು ಮಾಡುತ್ತಾರೆ. ನಂತರ ಕಾಲದ ಅನುಕೂಲದಿಂದ ಒಂದು ಗಂಡು ಮಗು ಜನನವಾಗುತ್ತದೆ. ತುಂಬಾ ವರ್ಷಗಳಿಂದ ಮಕ್ಕಳಿಲ್ಲದ ಕಾರಣದಿಂದ ಈ ಮಗುವನ್ನು ತುಂಬಾ ಪ್ರೀತಿಯಿಂದ ಬೆಳೆಸುತ್ತಾರೆ. ಹಾಗೇ ಸ್ವಲ್ಪ ದಿನಗಳಾದ ಬಳಿಕ ಮಗುವನ್ನು ಒಂದು ಸರ್ಪ ಕಚ್ಚಿ ಬಿಡುತ್ತದೆ, ಇದರಿಂದ ಹುಡುಗನು ಸ್ಥಳದಲ್ಲಿಯೇ ಸತ್ತು ಹೋಗುತ್ತಾನೆ. ಕ್ಷೇತ್ರದ ದಂಪತಿಗಳು ತುಂಬಾ ರೋದನೆಯನ್ನು ಪಡುತ್ತಾರೆ, ಯಾರು ಸಹ ಸಮಾಧಾನ ಮಾಡಲು ಸಾಧ್ಯವಾಗದಷ್ಟು ದುಃಖವನ್ನು ಪಡುತ್ತಾರೆ. ಕೊನೆಗೆ ಅಂತ್ಯಸಂಸ್ಕಾರಕ್ಕಾಗಿ ಹುಡುಗನ ಹೆಣವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಬಂಧುಗಳೆಲ್ಲ ಸೇರಿ ದುಃಖ ಪಡುತ್ತಿರುವಾಗ, ತುಂಬ ಸಮಯವಿರುತ್ತದೆ ಇದನ್ನು ಗಮನಿಸುತ್ತಿದ್ದು ಹದ್ದು ನಿಧಾನವಾಗಿ ಯೋಚಿಸುತ್ತದೆ ಇವರೆಲ್ಲರೂ ಇಲ್ಲೇ ದುಃಖಿಸುತ್ತಿದ್ದರು ನನಗೆ ಅಲ್ಲಿರುವ ತಿಂಡಿತಿನಿಸುಗಳನ್ನು ತಿನ್ನಲು ನಿಧಾನವಾಗುತ್ತದೆ ಎಂದು ಯೋಚಿಸಿ ಜನರ ಬಳಿ ಬಂದು ಆಗಿದ್ದರ ಬಗ್ಗೆ ಯೋಚನೆ ಎಲ್ಲರೂ ಬೇಗ ಮನೆಕಡೆ ಸೇರಿ ಇಲ್ಲವಾದರೆ ಇಲ್ಲಿನ ಭೂತಪ್ರೇತಗಳು ಬಂದು ನಿಮ್ಮನ್ನು ಸಾಯಿಸುತ್ತದೆ ಎಂದು ಆದರೆ ಅದನ್ನು ನೋಡುತ್ತಿದ್ದ ನರಿ ಅದು ನೋಡಿ ಹದ್ದಿನ ಮಾತನ್ನು ಕೇಳಬೇಡಿ ಎಂದು ಗೋಗರಿಯುತ್ತದೆ.

Leave a Reply

Your email address will not be published. Required fields are marked *