ಬ್ರೆಡ್ ಶರೀರಕ್ಕೆ ನಿಜಕ್ಕೂ ಒಳ್ಳೇದಾ? ವೈದ್ಯರು ಏನ್ ಅಂತಾರೆ ನೋಡಿ

0 5

ಬ್ರೆಡ್ ಒಂದು ಬೇಕರಿಯ ಆಹಾರಪದಾರ್ಥ.ಇದಕ್ಕೆ ಮೈದಾಹಿಟ್ಟು, ಸಕ್ಕರೆ, ಉಪ್ಪು ಇವನ್ನೆಲ್ಲ ಸೇರಿಸಿ ತಯಾರಿಸಲಾಗುತ್ತದೆ. ಹಾಗೆ ಬೆಣ್ಣೆಯನ್ನು ದನಗಳ ಹಾಲಿನಿಂದ ತಯಾರಿಸಿಕೊಳ್ಳಲಾಗುತ್ತದೆ. ಈಗಿನ ಕಾಲದಲ್ಲಿ ಬೆಣ್ಣೆ ಜೊತೆಗೂಡಿ ಬ್ರೆಡ್ಡನ್ನು ಸೇವಿಸುವುದು ಒಂದು ರುಚಿಕರವಾದ ಆಹಾರವಾಗಿದೆ. ವೈದ್ಯರ ಸಲಹೆಯ ಪ್ರಕಾರ ಬೆಣ್ಣೆಯಲ್ಲಿರುವ ಗುಣಗಳು ಮನುಷ್ಯನ ದೇಹಕ್ಕೆ ಸಾವಿರ ಪಟ್ಟು ಒಳ್ಳೆಯ ಅಂಶಗಳನ್ನು ನೀಡುತ್ತದೆ ಎನ್ನುತ್ತಾರೆ. ಆದ್ದರಿಂದ ಬ್ರೆಡ್ ನ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮನುಷ್ಯನ ಹೃದಯದ ಕಾಯಿಲೆ ಅಥವಾ ಬೊಜ್ಜನ್ನು ಉಂಟುಮಾಡುವುದು ಬ್ರೆಡ್ಡಿನಲ್ಲಿರುವ ಅಂಶವಾಗಿದೆ ಹೊರತು ಬೆಣ್ಣೆಯಲ್ಲ. ಬೆಣ್ಣೆ ಆರೋಗ್ಯಕ್ಕೆ ಪೂರಕವಾಗಿದೆ. ಬ್ರೆಡ್ ನಲ್ಲಿ ಇರುವ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ ಮನುಷ್ಯನ ದೇಹಕ್ಕೆ ಮಾರಕವಾಗಿದೆ. ಏಕೆಂದರೆ ಒಂದು ಪೀಸ್ ಬ್ರೆಡ್ಡಿನಲ್ಲಿ 20 ಗ್ರಾಂ ನಷ್ಟು ಕಾರ್ಬೋಹೈಡ್ರೇಟ್ ಅಂಶವಿರುತ್ತದೆ. ಜೊತೆಗೆ ಇದರೊಳಗೆ 500ಎಂಜಿಯಷ್ಟು ಉಪ್ಪಿನಂಶ ಇರುತ್ತದೆ. ಮನುಷ್ಯನ ದೇಹಕ್ಕೆ ಒಂದು ದಿನಕ್ಕೆ ಅಗತ್ಯವಿರುವ ಉಪ್ಪಿನ ಅಂಶ ಕೇವಲ1000ಎಂಜಿ ಆಗಿರುತ್ತದೆ. ಜೊತೆಗೆ ಒಂದು ಪೀಸ್ ಬ್ರೆಡ್ ನಲ್ಲಿ  5 ಗ್ರಾಮಿನಷ್ಟು ಸಕ್ಕರೆ ಅಂಶ ಇರುತ್ತದೆ. ಜೊತೆಗೆ ಈ ಬ್ರೆಡ್ ಹಾಳಾಗದಂತೆ ಕಾಪಾಡಲು ಪ್ರಿಸರ್ವೇಟಿವ್ಸ್ ಗಳನ್ನು ಬಳಸುತ್ತಾರೆ.

ಬ್ರೆಡ್ ನಲ್ಲಿ ಸಿಗುವಂತಹ ಪೋಷಕಾಂಶ ಅಂಶವೆಂದರೆ ಅದು ಕಾರ್ಬೋಹೈಡ್ರೇಟ್ ಮಾತ್ರವಾಗಿದೆ. ಒಂದು ಲೋಟ ಹಾಲು ಹಾಗೂ 2ಪೀಸ್ ಬ್ರೆಡ್ಡಿನ ಕ್ಯಾಲೋರಿಗಳು ಒಂದೇ ಆಗಿದ್ದರು ಅದರ ಒಳಗಿನ ಪೋಷಕಾಂಶದ ಸಾಮ್ಯತೆ ಬೇರೆಯಾಗಿದೆ.  ನಮ್ಮ ದೇಹಕ್ಕೆ ಹಾಲಿನಿಂದ ದೊರಕುವ ಪೋಷಕಾಂಶಗಳು ಹಲವಾರಿದೆ. ಒಂದು ಲೋಟ ಹಾಲಿನಿಂದ 4.9 ಕ್ಯಾಲೋರಿ ಪ್ಯಾಟ್ ಹಾಗೂ ಕಾರ್ಬೋಹೈಡ್ರೇಟ್ 13 ಗ್ರಾಂ ಮತ್ತು ಪ್ರೋಟೀನ್ 9.7 ಗ್ರಾಂ ದೊರಕುತ್ತದೆ.

ಹಾಲಿನಲ್ಲಿರುವ ಫ್ಯಾಟನ್ ಊಟದಲ್ಲಿ ತೆಗೆದುಕೊಂಡವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲವೆಂದು ಮೆಡಿಕಲ್ ನಿಂದ ಸಾಬೀತಾಗಿದೆ. ಬೆಣ್ಣೆಯಲ್ಲಿ ದೇಹಕ್ಕೆ ಸಂಬಂಧಪಟ್ಟ ಒಳ್ಳೆಯ ಅಂಶಗಳು ಇರುತ್ತವೆ. ಇದರಲ್ಲಿ ಕಾಂಜಿಕೆಟೆಡ್ ಲಿನೊಲಿಕ್ ಆಸಿಡ್ ಎಂಬ ಅಂಶವು ದೇಹಕ್ಕೆ ಅತ್ಯುತ್ತಮ ಶಕ್ತಿಯನ್ನು ಮತ್ತು ಪೋಷಕಾಂಶವನ್ನು ನೀಡುತ್ತದೆ. ಆಯುರ್ವೇದ ಅಲ್ಲಿಯೂ ಕೂಡ ಬೆಣ್ಣೆ ಮತ್ತು ತುಪ್ಪಗಳ ಬಳಕೆಯನ್ನು ಹೇಳುತ್ತಿದ್ದರು. ಕಾರಣ ಅಲ್ಲಿನ ಔಷಧೀಯ ಗುಣ ದೇಹಕ್ಕೆ ತುಂಬಾ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ಎಲ್ಲ ವಿಚಾರಗಳ  ಚರ್ಚೆಗಳ ಮೂಲಕ ತಿಳಿಯುವುದೆಂದರೆ ಅದು ಬ್ರೆಡ್ ಗಿಂತ ಬೆಣ್ಣೆಯೇ ದೇಹಕ್ಕೆ ಉತ್ತಮವಾದ ಆಹಾರ.

Leave A Reply

Your email address will not be published.