ಕೊರೋನವೈರಸ್ ಬಂದ ಕಾರಣ ಬಹಳಷ್ಟು ಜನರಿಗೆ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲೇ ನೈಸರ್ಗಿಕವಾಗಿ ತಯಾರಾದ ಜೀನಿ ಎಂಬ ಸಿರಿಧಾನ್ಯ ಪೌಡರ್ ಬಿಪಿ, ಶುಗರ್, ಎಲ್ಲಾ ರೀತಿಯ ನೋವು ನಿವಾರಿಸಲು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯವಾಗುತ್ತದೆ. ಈ ಉತ್ಪನ್ನದ ಬಗ್ಗೆ ಮಾಹಿತಿಯನ್ನು ಲೇಖನದ ಮೂಲಕ ತಿಳಿಯೋಣ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಎರಗುಂಟೆ ಗ್ರಾಮದಲ್ಲಿ ಸಿರಿಧಾನ್ಯದ ಜೀನಿ ಎಂಬ ಉತ್ಪನ್ನವನ್ನು ದಿಲೀಪ್ ಅವರ ಮನೆಯಲ್ಲಿ ತಯಾರಿಸಲಾಗುತ್ತದೆ. ಇದು ಸಿರಿಧಾನ್ಯ ಮತ್ತು ಬೇರೆ-ಬೇರೆ ಕಾಳುಗಳಿಂದ ತಯಾರಿಸುವ ಪೌಡರ್ ಆಗಿದೆ. ಇದಕ್ಕೆ ಯಾವುದೇ ರೀತಿಯ ಕೆಮಿಕಲ್ ಹಾಕಲಾಗುವುದಿಲ್ಲ ರೈತರು ಬೆಳೆದಿರುವ ಕಾಳುಗಳನ್ನು ಬಳಸಲಾಗುತ್ತದೆ. ಸಿರಿಧಾನ್ಯವನ್ನು ಎರಡು ರೀತಿಯಾಗಿ ತಯಾರಿಸಲಾಗುತ್ತದೆ, ಮಕ್ಕಳಿಗೆ ಒಂದು ದೊಡ್ಡವರಿಗೆ ಒಂದು. ದಿನಕ್ಕೆ ಏಳುನೂರು ಪೌಡರ್ ತಯಾರಿಸಲಾಗುತ್ತದೆ. ಸಿರಿಧಾನ್ಯವನ್ನು ಸೇವಿಸುವುದರಿಂದ ಬಿಪಿ, ಶುಗರ್, ಸುಸ್ತು, ಗ್ಯಾಸ್ಟಿಕ್, ಕೈಕಾಲು ನೋವು ಸೊಂಟ ನೋವು, ಕ್ಯಾನ್ಸರ್, ಲಕ್ವ ಹೊಡೆದರೆ ಕಂಟ್ರೋಲ್ ಗೆ ಬರುತ್ತದೆ. ಇಲ್ಲಿ ಯಾವುದೇ ಮಷೀನ್ ಅನ್ನು ಬಳಸಲಾಗುವುದಿಲ್ಲ. ಮಿಲ್ ನಿಂದ ತಂದ ಕಾಳುಗಳನ್ನು ಕ್ಲೀನ್ ಮಾಡಿ ಬಳಸಲಾಗುತ್ತದೆ. ನಂತರ ನೀರಿನಲ್ಲಿ ಸ್ವಚ್ಛವಾಗಿ ತೊಳೆಯಲಾಗುತ್ತದೆ. ನಂತರ ಇದನ್ನು ನೀರಿನಂಶ ಹೋಗಲು ಆರಲು ನೆರಳಿನಲಿ ಒಣಗಿಸಬೇಕು. ನಂತರ ಮಡಿಕೆಯಲ್ಲಿ ಹುರಿಯುತ್ತಾರೆ. ಕಾಳಿನಲ್ಲಿರುವ ಸತ್ವ ನಾಶವಾಗದೆ ಇರಲಿ ಎಂದು ಮಡಕೆಯಲ್ಲಿ 7 ನಿಮಿಷ ಹುರಿಯುತ್ತಾರೆ. ಹುರಿದ ನಂತರ ಬಟ್ಟೆಯ ಮೇಲೆ ಹಾಕಿ ನೆರಳಲ್ಲಿ ಒಣಗಿಸುತ್ತಾರೆ. ನೆರಳಲ್ಲಿ ಒಣಗಿಸುವುದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ನಂತರ ಕಲ್ಲಿನ ಮಷೀನ್ ನಲ್ಲಿ ಪೌಡರ್ ಮಾಡಲಾಗುತ್ತದೆ. ಇದನ್ನು ನೆರಳಲ್ಲಿ ಒಣಗಿಸುತ್ತಾರೆ ನಂತರ ಜರಡಿ ಹಿಡಿದು ಪೌಡರನ್ನು ತೆಗೆಯುತ್ತಾರೆ. ನಂತರ ಪೌಡರನ್ನು ಪ್ಯಾಕ್ ಮಾಡುತ್ತಾರೆ. ಇದರಲ್ಲಿ 27 ರೀತಿಯ ಧಾನ್ಯಗಳಿವೆ. ನವಣೆ, ಆರ್ಕ, ಉದ್ದು ಬರ್ಗು, ಸಜ್ಜೆ, ಜೋಳ, ರಾಗಿ ಬಾದಾಮಿ, ಗೋಡಂಬಿ, ಏಲಕ್ಕಿ, ಮೆಂತೆ, ಮೆಣಸು, ಅವರೆಕಾಳು, ಹೆಸರುಕಾಳು, ಉದ್ದಿನ ಕಾಳು, ಸೋಯಾ, ಬಾರ್ಲಿ ತೊಗರಿಬೇಳೆ, ಹುರುಳಿ ಕಾಳು ಹೀಗೆ ಪ್ರೋಟಿನ್, ವಿಟಮಿನ್ಸ್ ಇರುವ ಕಾಳುಗಳನ್ನು ಬಳಸಲಾಗುತ್ತದೆ. ನಮ್ಮ ದೇಹಕ್ಕೆ ಯಾವ ಕಾಳು ಯಾವ ಪ್ರಮಾಣದಲ್ಲಿ ಇರಬೇಕು ಅಷ್ಟೇ ಪ್ರಮಾಣದಲ್ಲಿ ಹಾಕಲಾಗುತ್ತದೆ. ಇದನ್ನು ದಿನಕ್ಕೆ ಒಂದು ಗ್ಲಾಸ್ ನೀರಿಗೆ ಒಂದುವರೆ ಸ್ಪೂನ್ ಪೌಡರ್ ಹಾಕಿ ಬೆಲ್ಲ ಅಥವಾ ಉಪ್ಪು ಹಾಕಬಹುದು ನಂತರ ಐದು ನಿಮಿಷ ಕುದಿಸಿ ಕುಡಿಯಬೇಕು. ಹೀಗೆ ಮೂರು ತಿಂಗಳು ಕುಡಿದರೆ ಶುಗರ್, ಬಿಪಿ, ಕಾಲು ನೋವು, ಮಂಡಿ ನೋವು ಇಂಥ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ಇವರು ಧಾನ್ಯಗಳನ್ನು ಕರ್ನಾಟಕದ ಮೂಲೆ ಮೂಲೆಯಿಂದ ಪರ್ಚೇಸ್ ಮಾಡುತ್ತಾರೆ.

ಮಕ್ಕಳಿಗೆ ತಯಾರಿಸುವಾಗ ತೊಳೆದ ದಾನ್ಯಗಳನ್ನು ನಾಲ್ಕು ತಾಸುಗಳು ಒಣ ಹಾಕುತ್ತಾರೆ, ಐದು ನಿಮಿಷ ಹುರಿಯುತ್ತಾರೆ, ಎರಡು ಸಾರಿ ಜರಡಿ ಹಿಡಿಯುತ್ತಾರೆ. ಮಕ್ಕಳಿಗೆ ನಿಶಕ್ತಿ, ಬುದ್ಧಿ ಬೆಳವಣಿಗೆ ಆಗದಿರುವುದು, ಇನ್ನಿತರ ಹಲವು ಸಮಸ್ಯೆಯ ನಿವಾರಣೆಗೆ ಈ ಪೌಡರನ್ನು ಬಳಸಬಹುದು. ಈ ಪೌಡರ್ ನ್ನು ಲ್ಯಾಬನಲ್ಲಿ ಕೂಡ ಪರೀಕ್ಷೆ ಮಾಡಲಾಗಿದೆ, ಸರ್ಕಾರದಿಂದ ಎಲ್ಲಾ ರೀತಿಯ ಅನುಮತಿಯನ್ನು ಪಡೆದಿದ್ದಾರೆ. ಐಎಸ್ಐ ಸರ್ಟಿಫೈಡ್ ಆಗಿದೆ. ಪ್ರತಿದಿನ 100 ಗ್ರಾಹಕರಿಗೆ ನೇರವಾಗಿ ಕೋರಿಯರ್ ಮಾಡಲಾಗುತ್ತದೆ. 200 ಕೆ.ಜಿ ಗಳನ್ನು ಅಂಗಡಿಗಳಿಗೆ ಕೊಡುತ್ತಿದ್ದರು. ಕೊರೋನ ಬಂದನಂತರ ದಿನಕ್ಕೆ 700 ಕೆ.ಜಿಯನ್ನು ಮಾರಲಾಗುತ್ತಿದೆ. ಒಮ್ಮೆ ಬಳಸಿದವರು ಮತ್ತೆ ಮತ್ತೆ ಪ್ರೊಡಕ್ಟ್ ಅನ್ನು ಕೊಂಡುಕೊಳ್ಳುತ್ತಿದ್ದಾರೆ. 1ಕೆಜಿ ಪೌಡರ್ 369 ರೂಪಾಯಿಗೆ ಸಿಗುತ್ತದೆ. ಒಬ್ಬರಿಗೆ ಒಂದು ಕೆ.ಜಿ ಒಂದು ತಿಂಗಳು ಬರುತ್ತದೆ. ದಿಲೀಪ್ ಅವರು ಜನತೆಗೆ ಒಂದು ಬಾರಿ ಪೌಡರನ್ನು ಬಳಸಿ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದರೆ ಇನ್ನೊಬ್ಬರಿಗೆ ತಿಳಿಸಿ 100 ಪರ್ಸೆಂಟ್ ರಿಸಲ್ಟ್ ಬರುತ್ತದೆ ಎಂದು ಹೇಳಿದ್ದಾರೆ. ತುಮಕೂರಿನಲ್ಲಿ ಜಗದೀಶ್ ಎನ್ನುವವರ ಹತ್ತಿರ ಫ್ರಾಂಚೈಸಿ ಕೊಟ್ಟಿದ್ದಾರೆ. ದಿಲೀಪ್ ಅವರ ಕುಟುಂಬದವರೆಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ. ಮತ್ತು ಕೆಲಸಗಾರರಿಗೆ ಇವರೇ ಊಟ, ಉಪಹಾರವನ್ನು ಕೊಡುತ್ತಾರೆ. ದಿಲೀಪ್ ಅವರ ಹೆಂಡತಿಯ ತಾಯಿ ಸಿರಿಧಾನ್ಯದ ಯೋಚನೆಯನ್ನು ಹೇಳಿದರು. ಈ ಉತ್ಪನ್ನದಿಂದ ಸಾಕಷ್ಟು ಜನರಿಗೆ ಉಪಯೋಗವಾಗಲಿದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.ವಿಡಿಯೋ ಕೃಪೆ ಪ್ರಗತಿ ಟಿವಿ

Leave a Reply

Your email address will not be published. Required fields are marked *