ಜೂನ್ ತಿಂಗಳಲ್ಲಿ ಜನಿಸಿದವರ ಆ ಶಕ್ತಿ ಏನು ಗೊತ್ತಾ? ನಿಜಕ್ಕೂ ತಿಳಿದುಕೊಳ್ಳಿ

0 3

ಕಲಿಯುಗದಲ್ಲಿ ಮನುಷ್ಯ ಬದಲಾಗುತ್ತಾನೆ, ಕೆಲವು ಕೆಟ್ಟ ಗುಣಗಳು ಅವನನ್ನು ಆವರಿಸುತ್ತದೆ. ಕಲಿಯುಗದಲ್ಲಿ ಪಂಚಪಿತೃ ಬಗ್ಗೆ ಪ್ರತಿಯೊಬ್ಬರು ತಿಳಿಯಬೇಕು ಹಾಗೂ ಅನುಸರಿಸಬೇಕು. ಹಾಗಾದರೆ ಪಂಚಪಿತೃದ ಬಗ್ಗೆ ಹಾಗೂ ಜೂನ್ ತಿಂಗಳಿನಲ್ಲಿ ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕಲಿಯುಗದಲ್ಲಿ ಮನುಷ್ಯರು ಆಸೆಗೆ ಒಳಗಾಗಿ ಆಸೆ ಈಡೇರದೆ ಇದ್ದಾಗ ಕ್ರೋಧಕ್ಕೆ ಒಳಗಾಗುತ್ತಾರೆ ಅಥವಾ ದುಃಖಿತನಾಗಿ ಸಾಯುವ ನಿರ್ಧಾರ ಮಾಡುತ್ತಾರೆ. ಕಲಿಯುಗದಲ್ಲಿ ನಾವು ಸ್ವಾರ್ಥಿಗಳಾಗುತ್ತೇವೆ. ಶ್ರೀಕೃಷ್ಣನ ಮಾತನ್ನು ಕೇಳಬೇಕು, ಶ್ರೀ ರಾಮನ ನಡತೆಯನ್ನು ಅನುಸರಿಸಬೇಕು ಎಂದು ಹೇಳುತ್ತಾರೆ. ಪ್ರೇತ ಸಂಸ್ಕಾರ ಎನ್ನುವುದು ಮುಖ್ಯವಾಗಿದೆ. ಪುರಾಣದ ಪ್ರಕಾರ ನಾವು ಹೇಗೆ ಬದುಕುತ್ತೇವೆ ಎಂಬುದು ಮುಖ್ಯವಲ್ಲ ಸಾವು ಹೇಗೆ ಬರುತ್ತದೆ, ಸತ್ತ ನಂತರದ ಸಂಸ್ಕಾರ ಮುಖ್ಯವಾಗಿದೆ.

ಕೊರೋನ ವೈರಸ್ ಹರಡಿದ ಭಯಾನಕ ಸಮಯದಲ್ಲಿ ಕೊರೋನದಿಂದ ಸತ್ತವರ ಶವವನ್ನು ನೀರಿನಲ್ಲಿ ಬಿಸಾಕಿದ್ದಾರೆ, ಗುಂಡಿ ತೋಡಿ ಮುಚ್ಚಿದ್ದಾರೆ, ಹದ್ದುಗಳಿಗೆ ಆಹಾರವಾಗಿ ಎಸೆದಿದ್ದಾರೆ ಅಂದರೆ ಸತ್ತವರಿಗೆ ಸಂಸ್ಕಾರ ಇರಲಿಲ್ಲ. ಬದುಕಿದ್ದಾಗ ಮಾಡುವ ಸಹಾಯಕ್ಕಿಂತ ಸಾಯುವ ಪರಿಸ್ಥಿತಿಯಲ್ಲಿ ಪಕ್ಕ ನಿಂತು ಸತ್ತ ನಂತರ ಕಾರ್ಯ ಮಾಡುವುದು ನಿಜವಾದ ಸಹಾಯ ಎನಿಸಿಕೊಳ್ಳುತ್ತದೆ. ಸತ್ತ ದೇಹಕ್ಕೆ ಮೋಕ್ಷ ಕೊಡಿಸುವುದೆ ಮನುಷ್ಯ ಧರ್ಮ.

ನಾವು ಜೀವನದಲ್ಲಿ ಪಂಚಪಿತೃವನ್ನು ನೆನಪಿಟ್ಟುಕೊಳ್ಳಬೇಕು, ಮರೆತರೆ ಶಾಪಕ್ಕೆ ಬಲಿಯಾಗಬೇಕು ಎಂದು ಶ್ರೀ ರಾಮಚಂದ್ರ ಲಕ್ಷ್ಮಣನಿಗೆ ವಿವರಿಸುತ್ತಾನೆ. ಜೀವನದಲ್ಲಿ ತಂದೆ ಮಾಡಿದ ತ್ಯಾಗ, ಬೆಳೆಸಿದ ರೀತಿಯನ್ನು ಮರೆಯಬಾರದು. ತಂದೆಯನ್ನು ನೋಯಿಸಬಾರದು ಎಂದು ರಾಮಚಂದ್ರ ಪ್ರಭು ಹೇಳಿದ್ದಾರೆ. ಪಂಚಪಿತೃಗಳಲ್ಲಿ ಮೊದಲನೆಯದಾಗಿ ಬರುವವರು ತಂದೆ. ಎರಡನೆಯದಾಗಿ ಗಂಡುಮಕ್ಕಳಿಗೆ ನಿರ್ದಿಷ್ಟ ವಯಸ್ಸಿನಲ್ಲಿ ಉಪನಯನ ಮಾಡಿಸಬೇಕು. ಉಪನಯನ ಶಿಸ್ತನ್ನು ಕಲಿಸುತ್ತದೆ, ವಿದ್ಯಾರ್ಜನೆಗೆ ಪ್ರಾರಂಭ ಮಾಡುತ್ತದೆ. ಉಪನಯನ ಮಾಡಿಸಿದ ಹಿರಿಯರನ್ನು ನೆನಪಿಟ್ಟುಕೊಳ್ಳಬೇಕು. ಮೂರನೆಯದಾಗಿ ಕೆಲವರು ಕಲಿತ ವಿದ್ಯೆಗೆ ತಕ್ಕ ಕೆಲಸ ಮಾಡುತ್ತಿರುವುದಿಲ್ಲ, ವಿದ್ಯೆಗೆ ತಕ್ಕ ಗೌರವ ಪಡೆಯುವುದಿಲ್ಲ. ವಿದ್ಯೆ ಕಲಿಸಿದ ಗುರುವನ್ನು ನಿಂದಿಸಬಾರದು. ಅಹಂಕಾರದಿಂದ ಗೌರವವನ್ನು ಕಳೆದುಕೊಳ್ಳುತ್ತಾರೆ.

ನಾಲ್ಕನೆಯದಾಗಿ ಅನ್ನ ಕೊಟ್ಟವರನ್ನು ಮರೆಯಬಾರದು, ಅನ್ನದಾತ ಸುಖಿನೋಭವ ಎಂದು ಹೇಳುತ್ತಾರೆ. ಐದನೇಯದಾಗಿ ಕಷ್ಟದಲ್ಲಿ ಸಹಾಯ ಮಾಡಿದವರನ್ನು ಎಂದಿಗೂ ಮರೆಯಬಾರದು. ಜೂನ್ ತಿಂಗಳು ಮಾಂತ್ರಿಕತೆಯ ಮಾಸ, ವರ್ಷದ ಮದ್ಯದ ತಿಂಗಳಾದ ಜೂನ್ ತಿಂಗಳು ಅದ್ಭುತ ಶಕ್ತಿಯನ್ನು ಹೊಂದಿರುತ್ತದೆ. ಜೂನ್ ತಿಂಗಳಿನಲ್ಲಿ ಹುಟ್ಟಿದವರು ಕಲ್ಪನಾ ಜೀವಿಗಳು, ಭಾವನಾಜೀವಿಗಳಾಗಿರುತ್ತಾರೆ. ಈ ತಿಂಗಳಲ್ಲಿ ಹುಟ್ಟಿದವರು ಯಾವುದಾದರೂ ಒಂದು ಕಲೆಯಲ್ಲಿ ನಿಪುಣರಾಗಿರುತ್ತಾರೆ.

ಈ ತಿಂಗಳಲ್ಲಿ ಹುಟ್ಟಿದವರು ಹೆಚ್ಚು ಯೋಚನೆ ಮಾಡುತ್ತಾರೆ. ಈ ತಿಂಗಳಲ್ಲಿ ಹುಟ್ಟಿದವರ ಮನಸ್ಸಿಗೆ ವಯಸ್ಸು ಆಗುವುದೆ ಇಲ್ಲ, ಯಾವಾಗಲೂ ಆಕ್ಟೀವ್ ಆಗಿರುತ್ತಾರೆ. ಈ ತಿಂಗಳಲ್ಲಿ ಹುಟ್ಟಿದವರು 2 ರಿಂದ3 ವಿಷಯಗಳನ್ನು ಒಂದೆ ಬಾರಿಗೆ ಕಲಿತು ಸಾಧಿಸುವ ಶಕ್ತಿ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಒಳ್ಳೆಯ ತಂದೆಯನ್ನು ಪಡೆಯುತ್ತಾರೆ, ತಂದೆಯನ್ನು ಬಹಳ ಪ್ರೀತಿಸುತ್ತಾರೆ ಜೊತೆಗೆ ಕುಟುಂಬವನ್ನು ಪ್ರೀತಿಸುತ್ತಾರೆ. ಶ್ರೀರಾಮಚಂದ್ರ ಪ್ರಭುವಿನಂತೆ ಕಷ್ಟದಲ್ಲಿ ಸಹಾಯ ಮಾಡಿದವರನ್ನು ನೆನಪಿಟ್ಟುಕೊಳ್ಳುವ ಕೆಲವೆ ಕೆಲವು ವ್ಯಕ್ತಿಗಳಲ್ಲಿ ಜೂನ್ ತಿಂಗಳಿನಲ್ಲಿ ಹುಟ್ಟಿದವರು ಒಬ್ಬರಾಗಿರುತ್ತಾರೆ.

ಜೂನ್ ತಿಂಗಳಿನಲ್ಲಿ ಹುಟ್ಟಿದವರು ಇದ್ದಕಡೆ ಸಮಾಧಾನ, ನಗು ಕಂಡುಬರುತ್ತದೆ. ಅವರ ತಮಾಷೆ, ಮಾತು ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ಜೂನ್ ತಿಂಗಳಿನಲ್ಲಿ ಹುಟ್ಟಿದವರು ಅವಮಾನ ಪಟ್ಟಿರುತ್ತಾರೆ, ಕಷ್ಟದ ಜೀವನವನ್ನು ನಡೆಸಿರುತ್ತಾರೆ. ಈ ತಿಂಗಳಲ್ಲಿ ಹುಟ್ಟಿದವರನ್ನು ಬಹಳ ಪ್ರೀತಿ ಮಾಡುತ್ತಾರೆ. ಪ್ರೀತಿಯ ಬಗ್ಗೆ ತಿಳಿಯಬೇಕಾದರೆ ಜೂನ್ ತಿಂಗಳಲ್ಲಿ ಹುಟ್ಟಿದವರ ಪಕ್ಕ ಇರಬೇಕು ಎಂದು ಹೇಳಿದರೆ ತಪ್ಪಾಗಲಾರದು. ಹಣದ ವಿಷಯದಲ್ಲಿ ಸೇಫ್ಟಿ ನೋಡುತ್ತಾರೆ ಹಾಗಂತ ಸ್ವಾರ್ಥಿಗಳಾಗುವುದಿಲ್ಲ, ಯಾರಿಗೂ ಮೋಸ ಮಾಡುವುದಿಲ್ಲ.

ಈ ತಿಂಗಳಲ್ಲಿ ಹುಟ್ಟಿದವರು ಯಾರಿಗೂ ಸೇಫ್ಟಿ ಇಲ್ಲದೆ ಹಣ ಕೊಡಬಾರದು. ಈ ತಿಂಗಳಿನಲ್ಲಿ ಹುಟ್ಟಿದವರ ಮನೆಯಲ್ಲಿ ಏನಾದರೂ ಒಂದು ವಿಶೇಷ ನಡೆಯುತ್ತಲೆ ಇರುತ್ತದೆ. ಈ ತಿಂಗಳಿನಲ್ಲಿ ಹುಟ್ಟಿದವರಿಗೆ ರಾಜಕೀಯದಲ್ಲಿ ಆಸಕ್ತಿ ಇರುತ್ತದೆ. ಇವರು ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾರೆ. ಜೂನ್ ತಿಂಗಳಿನಲ್ಲಿ ಜನಿಸಿದವರು ನಾಯಿಗಳಿಗೆ, ಹಸುಗಳಿಗೆ ಆಹಾರ ಕೊಡಬೇಕು ಇದರಿಂದ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಜೂನ್ ತಿಂಗಳಿನಲ್ಲಿ ಜನಿಸಿದವರು ಅನುಸರಿಸಿ.

Leave A Reply

Your email address will not be published.