ರಕ್ತ ನಮ್ಮ ಜೀವದ್ರವವಾಗಿದ್ದು ಇದಕ್ಕೆ ಬೆಲೆಕಟ್ಟಲಾಗಲೀ ಪರ್ಯಾಯ ಒದಗಿಸುವುದಾಗಲೀ ಸಾಧ್ಯವಿಲ್ಲ. ನಮ್ಮ ದೇಹದ ಹಲವಾರು ಕೆಲಸಗಳನ್ನು ರಕ್ತ ಸತತವಾಗಿ ನಿರ್ವಹಿಸುತ್ತಲೇ ಇರುತ್ತದೆ. ಇದರಲ್ಲಿ ಮುಖ್ಯವಾದವು ಎಂದರೆ ಆಮ್ಲಜನಕದ ಸಹಿತ ಪೋಷಕಾಂಶಗಳನ್ನು ರಸದೂತಗಳನ್ನು ಕಲ್ಮಶಗಳನ್ನು, ಕೊಬ್ಬು ಹಾಗು ಇತರ ಅಂಶಗಳನ್ನು ದೇಹದ ಎಲ್ಲೆಡೆ ತಲುಪಿಸುವುದು ಮತ್ತು ಸಂಗ್ರಹಿಸಿ ಸಂಬಂಧಪಟ್ಟ ಅಂಗಕ್ಕೆ ಹಿಂದೆ ತರುವುದಾಗಿದೆ.

ಅಷ್ಟೇ ಅಲ್ಲದೇ ಪ್ರತಿ ಜೀವಕೋಶ ನೀಡುವ ಕಲ್ಮಶಗಳನ್ನೂ ಸಂಗ್ರಹಿಸಿ ದೇಹದಿಂದ ವಿಸರ್ಜಿಸಲು ತಂದುಕೊಡುವುದು ರಕ್ತದ್ದೆ ಕೆಲಸವಾಗಿದೆ. ಸತತವಾಗಿ ಕ್ರಿಮಿಗಳ ವಿರುದ್ಧ ಹೋರಾಡುವುದು, ರೋಗ ನಿರೋಧಕ ಶಕ್ತಿಯೊಂದಿಗೆ ಕಾರ್ಯನಿರ್ವಹಿಸುವುದು, ಪರಾಗ ಧೂಳು ಮೊದಲಾದ ಕಣಗಳಿಂದ ರಕ್ಷಣೆ ಒದಗಿಸುವುದು, ಬೆಳವಣಿಗೆಗೆ, ಅಗತ್ಯ ಬದಲಾವಣೆಗೆ ನೆರವಾಗುವುದು ಮೊದಲಾದ ಹತ್ತು ಹಲವು ಕಾರ್ಯಗಳಿವೆ. ಹಾಗಾಗಿ, ರಕ್ತ ಸದಾ ಆರೋಗ್ಯಕರವಾಗಿರ ಬೇಕಾಗಿರುವುದು ಅವಧ್ಯವಾಗಿದೆ. ಆರೋಗ್ಯಕರವಾಗಿರಬೇಕೆಂದರೆ ಇದರಲ್ಲಿ ಸತತವಾಗಿ ಆಗಮಿಸುವ ಕಲ್ಮಶಗಳನ್ನು ಆದಷ್ಟೂ ಬೇಗನೇ ಶೋಧಿಸಿ ವಿಸರ್ಜಿಸುವುದು ಅಗತ್ಯವಾಗಿದೆ.

ನಾವು ರಕ್ತವನ್ನು ಶುದ್ಧೀಕರಿಸುವ ಮೂಲಕ ಮೂತ್ರ ಪಿಂಡದ ಮೇಲಿನ ಒತ್ತಡವನ್ನು ಕಡಿಮೆ ಮಾಡಿದ ಹಾಗೇ ಆಗುವುದು. ಈ ಕಾರ್ಯವನ್ನು ಕೆಲವು ಆಹಾರಗಳು ಸಮರ್ಥವಾಗಿ ನಿಭಾಯಿಸುತ್ತವೆ. ಬನ್ನಿ, ಈ ಗುಣವಿರುವ ಕೆಲವು ಬಗೆಯ ಆಹಾರಗಳ ಬಗ್ಗೆ ಅರಿತುಕೊಳ್ಳೋಣ ಹಾಗೂ ನಿತ್ಯವೂ ಸೇವಿಸುವ ಮೂಲಕ ರಕ್ತದ ಆರೋಗ್ಯವನ್ನು ಉತ್ತಮವಾಗಿರಿಸೋಣ. ಆ ಕೆಲವು ಪದಾರ್ಥಗಳು ಎಂದರೆ ಮೊದಲಿಗೆ ಬೆಳ್ಳುಳ್ಳಿ. ಬೆಳ್ಳುಳ್ಳಿಯಲ್ಲಿರುವ ಆಂಟಿಆಕ್ಸಿಡೆಂಟ್ ಗುಣವು ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗೂ ರಕ್ತವನ್ನು ಶುದ್ಧೀಕರಿಸುತ್ತದೆ. ಈ ಕಾರಣದಿಂದಾಗಿ ನಾವು ಪ್ರತಿದಿನ ಒಂದೆರಡು ಹಸಿ ಬೆಳ್ಳುಳ್ಳಿಯನ್ನು ತಿನ್ನಬೇಕು. ಎರಡನೆಯ ವಸ್ತುವಾಗಿ ಅರಿಶಿನ. ಅರಿಶಿಣದ ಅಂಡ್ ಬ್ಯಾಕ್ಟೀರಿಯಲ್ ಆಗಿದೆ . ಉರಿ ಊತ ಹಾಗು ಒತ್ತಡ ನಿವಾರಕವಾಗಿ ಅರಿಶಿನ ಕಾರ್ಯನಿರ್ವಹಿಸುತ್ತದೆ. ಅರಿಶಿಣ ಇದು ನಮಗೆ ರಕ್ತವನ್ನು ಶುದ್ಧೀಕರಿಸುವ ಅದಕ್ಕೂ ಕೂಡ ಸಹಾಯಕಾರಿಯಾಗುತ್ತದೆ ಹಾಗಾಗಿ ಪ್ರತಿದಿನ ನಮ್ಮ ಆಹಾರದಲ್ಲಿ ಅರಿಶಿನವನ್ನು ತಪ್ಪದೆ ಮಾಡುವುದು ಒಳ್ಳೆಯದು.

ಮೂರನೆಯದಾಗಿ ಕೊತ್ತಂಬರಿ ಸೊಪ್ಪು. ಕೊತ್ತಂಬರಿ ಸೊಪ್ಪಿನಲ್ಲಿ ಕೂಡ ರಕ್ತವನ್ನು ಶುದ್ಧೀಕರಿಸುವ ಷಧೀಯ ಗುಣ ಇದೆ. ಇದರಲ್ಲಿ ಉತ್ತಮ ಪೋಷಕಾಂಶಗಳಿದ್ದು ರಕ್ತದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಗುಣವನ್ನು ನಾಶಪಡಿಸಲು ಸಹಾಯಕಾರಿಯಾಗುತ್ತದೆ. ನಾಲ್ಕನೆಯದಾಗಿ ತುಳಸಿ ಎಲೆ. ತುಳಸಿ ಎಲೆಯಲ್ಲಿ ಆಂಟಿಆಕ್ಸಿಡೆಂಟ್ ಹಾಗೂ ಒತ್ತಡ ನಿವಾರಕ ಗುಣಗಳು ಇದರಲ್ಲಿವೆ. ಮೂಲಕ ನಮ್ಮ ರಕ್ತವನ್ನು ಶುದ್ಧೀಕರಿಸಿ ಕೊಳ್ಳಬಹುದು. ಐದನೆಯದಾಗಿ ಈರುಳ್ಳಿ. ಪ್ರತಿನಿತ್ಯ ನಮ್ಮ ಆಹಾರದಲ್ಲಿ ಈರುಳ್ಳಿ ಏನು ಬಳಕೆ ಮಾಡುವುದರಿಂದ ಇದು ನಮ್ಮ ರಕ್ತ ಶುದ್ಧೀಕರಿಸಲು ಸಹಾಯಕಾರಿಯಾಗುತ್ತದೆ. ಆರನೆಯದಾಗಿ ಬೀಟ್ರೂಟ್ ಇದರಲಿರುವ ನೈಟ್ರೇಟುಗಳಿಂದಾಗಿಯೇ ಇದರ ಬಣ್ಣ ಗಾಢಕೆಂಪಾಗಿದೆ. ಸಾಮಾನ್ಯವಾಗಿ ಈ ಬಣ್ಣದಿಂದಾಗಿಯೇ ಹೆಚ್ಚಿನವರು ಬೀಟ್ರೂಟನ್ನು ಇಷ್ಟಪಡುವುದಿಲ್ಲ. ಆದರೆ ವಾಸ್ತವದಲ್ಲಿ ಈ ಪೋಷಕಾಂಶಗಳಲ್ಲಿ ಬೀಟಾಲೈನ್ ಎಂಬ ಆಂಟಿ ಆಕ್ಸಿಡೆಂಟ್ ಗುಣವಿದ್ದು ಉರಿಯೂತ ಮತ್ತು ಯಕೃತ್ತಿಗೆ ಉತ್ಕರ್ಷಣಶೀಲ ಘಾಸಿಯಾಗುವುದನ್ನು ತಡೆಯುತ್ತದೆ. ಅಲ್ಲದೇ ಇದರ ರಸ ಕಿಣ್ವಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ ಮತ್ತು ಕಲ್ಮಶಗಳ ನಿವಾರಣೆಗೆ ನೆರವಾಗುತ್ತದೆ. ಹಾಗಾಗಿ ಇಷ್ಟವಾಗದಿದ್ದರೂ ಸರಿ, ಈ ಕೆಂಪುರಸದ ತರಕಾರಿಯನ್ನು ಹಸಿಯಾಗಿಯೂ ಬೇಯಿಸಿಯೂ ಸೇವಿಸಿ.

ನೀರು ಅತ್ಯಂತ ಸಾಮಾನ್ಯ ಮತ್ತು ಸರಳವಾದ ನೈಸರ್ಗಿಕ ರಕ್ತ ಶುದ್ಧೀಕರಣ ಸಾಧನಗಳಲ್ಲಿ ಒಂದಾಗಿದೆ. ಮೂತ್ರಪಿಂಡಗಳು ಮೂತ್ರದ ಮೂಲಕ ರಕ್ತದಿಂದ ಕಲ್ಮಶಗ್ಳನ್ನು ಹೊರಹಾಕುತ್ತವೆ ಮತ್ತು ಈ ಪ್ರಕ್ರಿಯೆಯನ್ನು ಉತ್ತೇಜಿಸಲು ನೀರು ಅತ್ಯುತ್ತಮ ಸಹಕಾರ ನೀಡುತ್ತದೆ. ಆಯುರ್ವೇದದ ಪ್ರಕಾರ, ನೀರನ್ನು ರಕ್ತ ಶುದ್ಧೀಕರಣವಾಗಿ ಬಳಸುವ ಒಂದು ಉತ್ತಮ ವಿಧಾನವೆಂದರೆ ರಾತ್ರಿಯಿಡೀ ತಾಮ್ರದ ಪಾತ್ರೆಯಲ್ಲಿ ಸ್ವಲ್ಪ ಬೆಚ್ಚಗಿನ ನೀರನ್ನು ಸಂಗ್ರಹಿಸಿ ಮರುದಿನ ಅದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು. ತಾಮ್ರವು ನಿಮ್ಮ ರಕ್ತದಿಂದ ಕಲ್ಮಶಗಳನ್ನು ನಿವಾರಿಸಿದ ಬಳಿಕ ಬಿಸಿಯಾಗಿದ್ದ ಯಕೃತ್ತನ್ನು ತಣ್ಣಗಾಗಿಸುತ್ತದೆ. ಈ ಆಹಾರಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ನಿಮ್ಮ ನಿತ್ಯದ ಆಹಾರಕ್ರಮದಲ್ಲಿ ಅಳವಡಿಸಿ ಕೊಂಡು ಉತ್ತಮ ಆಹಾರಕ್ರಮವನ್ನು ಪಾಲಿಸುವ ಮೂಲಕ ಉತ್ತಮ ಆರೋಗ್ಯವನ್ನು ಹಾಗೂ ವಿಶೇಷವಾಗಿ ಶುದ್ದವಾದ ರಕ್ತವನ್ನು ಪಡೆಯಬಹುದು.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ
ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave a Reply

Your email address will not be published. Required fields are marked *