ಮುಖ ಸುಂದರವಾಗಿ ಇರಬೇಕು ಎಂದರೆ ಯಾವುದೇ ರೀತಿಯ ಕಲೆಗಳು ಮುಖಕ್ಕೆ ಇರಬಾರದು. ಕೆಲವರಿಗೆ ಮುಖಕ್ಕೆ ಮೊಡವೆಗಳು ಆಗಿರುತ್ತವೆ. ಆ ಮೊಡವೆಗಳು ಕಲೆಗಳನ್ನು ಉಂಟು ಮಾಡುತ್ತವೆ. ಇದರಿಂದ ಮುಖ ಅಸಹ್ಯವಾಗಿ ಕಾಣುತ್ತದೆ. ಹಾಗೆಯೇ ಮೂಗಿನ ಮೇಲೆ ಕೆಲವರಿಗೆ ಕಪ್ಪು ಕಲೆಗಳು ಉಂಟಾಗಿರುತ್ತವೆ. ಅವುಗಳನ್ನು ಹೋಗಲಾಡಿಸಲು ಹಲವಾರು ಮಾರ್ಗಗಳಿವೆ. ಅಂತಹವುಗಳ ಐದು ಮಾರ್ಗಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲನೆಯದಾಗಿ ಮೊಟ್ಟೆಯನ್ನು ತೆಗೆದುಕೊಳ್ಳಬೇಕು. ಅದನ್ನು ಒಡೆದು ಅದರ ಬಿಳಿ ಭಾಗವನ್ನು ಮೂಗಿನ ಮೇಲೆ ಹಚ್ಚಬೇಕು. ಇದನ್ನು ಸ್ವಲ್ಪ ಸಮಯದ ಬಳಿಕ ಹಾಗೆಯೇ ಬಿಡಬೇಕು. ಒಣಗಿದ ನಂತರ ಪೇಪರ್ ಚೂರನ್ನು ಬಳಸಿ ವರೆಸಿಕೊಳ್ಳಬೇಕು. ಮುಗಿನ ಕಲೆ ಕಡಿಮೆ ಆಗುವವರೆಗೆ ಇದನ್ನು ಮಾಡಬೇಕು.

ಎರಡನೆಯದಾಗಿ ಲಿಂಬೆಹಣ್ಣನ್ನು ಕತ್ತರಿಸಿಕೊಂಡು ಅದರ ರಸಕ್ಕೆ ಎರಡು ಚಮಚ ಸಕ್ಕರೆಯನ್ನು ಸೇರಿಸಬೇಕು. ಮೂಗಿಗೆ ಇದನ್ನು ಹಚ್ಚಿಕೊಂಡು ವೃತ್ತಾಕಾರವಾಗಿ ಮಸಾಜ್ ಮಾಡಬೇಕು. ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು.

ಮೂರನೆಯದಾಗಿ ಅನಾನಸ್ ಹಣ್ಣನ್ನು ಕೊರೆದು ರಸ ತೆಗೆದುಕೊಳ್ಳಬೇಕು. ಅದಕ್ಕೆ ಎರಡು ಚಮಚ ಜೇನುತುಪ್ಪ ಸೇರಿಸಬೇಕು. ಎರಡನ್ನು ಚೆನ್ನಾಗಿ ಮಿಶ್ರಣ ಮಾಡಿ ಹಚ್ಚಬೇಕು. 20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಒದ್ದೆ ಮಾಡಿದ ಬಟ್ಟೆಯಿಂದ ಮುಖವನ್ನು ವರೆಸಿಕೊಳ್ಳಬೇಕು. ನಾಲ್ಕನೆಯದಾಗಿ ಟೊಮೆಟೊ ಹಣ್ಣನ್ನು ತೆಗೆದುಕೊಂಡು ಅದರ ರಸವನ್ನು ತೆಗೆದುಕೊಳ್ಳಬೇಕು. ಅದಕ್ಕೆ ಒಂದು ಚಮಚ ಉಪ್ಪು ಹಾಕಬೇಕು. ಇದನ್ನು ಮಿಶ್ರಣ ಮಾಡಿ ಮೂಗಿಗೆ ಹಚ್ಚಿ ವೃತ್ತಾಕಾರವಾಗಿ ಮಸಾಜ್ ಮಾಡಬೇಕು. ಹತ್ತು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದುಕೊಳ್ಳಬೇಕು.

ಐದನೆಯದಾಗಿ ಹಸಿ ಆಲೂಗಡ್ಡೆಯನ್ನು ತೆಗೆದುಕೊಂಡು ಅದನ್ನು ಚೂರು ಮಾಡಿ ಮೂಗಿನ ಕಲೆಯ ಮೇಲೆ ಚೆನ್ನಾಗಿ ಉಜ್ಜಬೇಕು. ಸ್ವಲ್ಪ ಸಮಯ ಬಿಟ್ಟು ದಪ್ಪನೆಯ ಟವೆಲ್ ತೆಗೆದುಕೊಂಡು ಒರೆಸಿದಾಗ ಒಣಗಿದ ಆಲೂಗಡ್ಡೆಯ ರಸ ಹಾಗೆಯೇ ಬರುತ್ತದೆ. ಇದರಿಂದ ಕಲೆಗಳು ಬರುತ್ತವೆ. ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆಯಬೇಕು. ಹೀಗೆ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ಇದನ್ನು ಮಾಡಿ ಮೂಗಿನ ಮೇಲಿನ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಿಕೊಳ್ಳಬಹುದು.

Leave a Reply

Your email address will not be published. Required fields are marked *