ಇವತ್ತಿನ ಈ ಲೇಖನದಲ್ಲಿ ನಾವು ಬೀಟ್ರೂಟ್ ಜ್ಯೂಸ್ ಮಾಡುವುದು ಹೇಗೆ ಮತ್ತು ಅದರ ಮಹತ್ವಗಳನ್ನು ಹಾಗೂ ಲಾಭಗಳು ಎನು ಅನ್ನೋದನ್ನ ನೋಡೋಣ. ಬೀಟ್ರೂಟ್ ನಿಂದ ನಮ್ಮ ದೇಹಕ್ಕೆ ಅತೀ ಹೆಚ್ಚು ಲಾಭ ಇದೆ. ಇದರಲ್ಲಿ ಕ್ಯಾಲ್ಶಿಯಂ, ಮೆಗ್ನೀಷಿಯಂ, ಪೊಟ್ಯಾಶಿಯಂ, ವಿಟಮಿನ್ ಸಿ, ವಿಟಮಿನ್ ಏ, ಫೈಬರ್ ಅಂಶಗಳು ತುಂಬಾ ಹೇರಳವಾಗಿ ಇದೆ. ಇಟಾ ಕ್ಯಾರೋಟಿನ್ ಅಂಶಗಳು ಸಹ ಸಾಕಷ್ಟು ಇವೆ. ನಾವು ಪ್ರತೀ ದಿನ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಅಥವಾ ನಮ್ಮ ಅಡುಗೆಯಲ್ಲಿ ಬೀಟ್ರೂಟ್ ಬಳಕೆ ಮಾಡುವುದರಿಂದ ನಮಗೆ ಏನೆಲ್ಲಾ ಲಾಭಗಳು ಇದೆ ಅನ್ನೋದನ್ನ ನೋಡೋಣ.

ಬೀಟ್ರೂಟ್ ನಿಂದ ನಾವು ನಮ್ಮ ದೇಹಕ್ಕೆ ಬೇಕಾದ ಸಾಕಷ್ಟು ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳಬಹುದು. ಹಾಗೆಯೇ ಇದರಲ್ಲಿ ವಿಟಮಿನ್ ಸಿ ಹಾಗೂ ರಕ್ತವನ್ನು ಶುದ್ಧಿ ಮಾಡುವ ಅಂಶಗಳು ಇರುವುದರಿಂದ ಬೀಟ್ರೂಟ್ ಸೇವನೆಯಿಂದ ರಕ್ತದ ಒತ್ತಡವನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಮೆದುಳಿನ ಆರೋಗ್ಯವನ್ನು ಹೆಚ್ಚಿಸಿ ಬುದ್ಧಿಮತ್ತೆಯನ್ನು ಚುರುಕು ಗೊಳಿಸುತ್ತದೆ. ಮಾಂಸಖಂಡಗಳನ್ನು ಶಕ್ತಿಯುತವಾಗಿ ಮಾಡುತ್ತದೆ ಹಾಗೇ ಬಲವನ್ನು ಹೆಚ್ಚಿಸುತ್ತದೆ. ನಮ್ಮ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಗರ್ಭಿಣಿಯರಿಗೆ ಕೂಡಾ ಬೀಟ್ರೂಟ್ ಸೇವನೆ ತುಂಬಾ ಒಳ್ಳೆಯದು. ತಾಯಿ ಮತ್ತು ಮಗುವಿನ ಆರೋಗ್ಯವನ್ನು ವೃದ್ಧಿಸಲು ಬೀಟ್ರೂಟ್ ಜ್ಯೂಸ್ ಬಹಳ ಉತ್ತಮ ಎನ್ನಬಹುದು.

ಬೀಟ್ರೂಟ್ ನಲ್ಲಿ ಫೈಬರ್ ಅಂಶ ಜಾಸ್ತಿ ಇರುವುದರಿಂದ ಜೀರ್ಣ ಕ್ರಿಯೆಗೆ ಸಹಾಯಕಾರಿ ಹಾಗೂ ಮಲಬದ್ಧತೆ ಸಮಸ್ಯೆಯನ್ನು ಸಹ ಹೋಗಲಾಡಿಸುತ್ತದೆ. ಕ್ರೀಡಾ ಪ್ರಿಯರಿಗೆ ಉತ್ತಮ ಪ್ರದರ್ಶನ ನೀಡಲೂ ಸಹ ಬೀಟ್ರೂಟ್ ಜ್ಯೂಸ್ ಬಹಳ ಸಹಾಯಕಾರಿ. ಇವೆಲ್ಲ ಬೀಟ್ರೂಟ್ ಜ್ಯೂಸ್ ಅಥವ ಬೀಟ್ರೂಟ್ ಬಳಕೆಯಿಂದ ನಮಗೆ ಆಗುವ ಪ್ರಯೋಜನಗಳಾಗಿವೆ. ಪ್ರತೀ ದಿನವೂ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ನಾವು ಈ ಎಲ್ಲಾ ಲಾಭಗಳನ್ನು ಪಡೆಯಬಹುದು.

ಇನ್ನು ಬೀಟ್ರೂಟ್ ಜ್ಯೂಸ್ ತಯಾರಿಸುವುದು ಹೇಗೆ ಎಂದು ನೋಡುವುದಾದರೆ ಎರಡು ಬೀಟ್ರೂಟ್ ತೆಗೆದುಕೊಂಡು ಅದರ ಸಿಪ್ಪೆ ತೆಗೆದು, ನೀರಿನಲ್ಲಿ ಚೆನ್ನಾಗಿ ತೊಳೆಕೊಳ್ಳಬೇಕು. ನಂತರ ಇದನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಒಂದು ಮಿಕ್ಸಿ ಜಾರ್ ಗೆ ಹಾಕಿ ಸ್ವಲ್ಪ ನೀರು ಸೇರಿಸಿ ನೂಣ್ಣಗಾಗುವವರೆಗೂ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಲೋಟಕ್ಕೆ ಹಾಕಿಕೊಂಡು ಹಾಗೆಯೇ ಕುಡಿಯಬೇಕು. ಹಾಗೆಯೇ ಸೇರದೆ ಇದ್ದಲ್ಲಿ ಸ್ವಲ್ಪ ಸಕ್ಕರೆ ಮತ್ತು ಉಪ್ಪು ಸೇರಿಸಿ ಕೂಡಾ ಸೇವಿಸಬಹುದು.

By

Leave a Reply

Your email address will not be published. Required fields are marked *