Ultimate magazine theme for WordPress.

ಮಂಡಿ ನೋವು ನಿವಾರಣೆಗೆ ಮನೆಯಲ್ಲಿರುವ ಈ ಎರಡು ಸಾಮಗ್ರಿ ಸಾಕು ಮನೆಮದ್ದು

0 4

ಕೆಲವರಲ್ಲಿ ಈ ಮಂಡಿ ನೋವು ಸಮಸ್ಯೆ ಅನ್ನೋದು ಬಿಡದೆ ಕಾಡುತ್ತಿರುತ್ತದೆ ಆದ್ರೆ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದೇ ಇದ್ರೆ ಪ್ರತಿದಿನ ಇದರ ನೋವು ಬಿಡದೆ ಕಾಡುತ್ತದೆ, ಹಾಗಾಗಿ ಮಂಡಿನೋವು ನಿವಾರಣೆಗೆ ಒಂದಿಷ್ಟು ಮನೆಮದ್ದುಗಳನ್ನು ಈ ಮೂಲಕ ತಿಳಿಸುವ ಪ್ರಯತ್ನ ಮಾಡುತ್ತೇವೆ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಾಗು ಆತ್ಮೀಯರಿಗೂ ತಿಳಿಸುವ ಪ್ರಯತ್ನ ಮಾಡಿ.

ಮಂಡಿನೋವು ನಿವಾರಣೆಗೆ ಒಂದಿಷ್ಟು ಪರಿಹಾರ ಮಾರ್ಗಗಳಿವು.ಯಾವುದೇ ಕಾರಣಕ್ಕೂ ನಿಂತು ಕೆಲಸ ಮಾಡುವುದನ್ನು ನಿಲ್ಲಿಸಬೇಕು ಇನ್ನು ನೆಲದ ಮೇಲೆ ಕುಳಿತುಕೊಳ್ಳುವುದಕ್ಕಿಂತ ನೋವು ಆಗದಂತೆ ಕುರ್ಚಿ ಹಾಕಿಕೊಂಡು ಕುಳಿತುಕೊಳ್ಳುವುದು ಉತ್ತಮ

ಇನ್ನು ಮನೆಯಲ್ಲಿರುವಂತ ಈ ಎರಡು ಸಾಮಗ್ರಿಗಳನ್ನು ಬಳಸಿ ಮಂಡಿನೋವು ನಿವಾರಿಸಿಕೊಳ್ಳಬಹುದು ಅಥವಾ ಈ ಮನೆಮದ್ದು ಬಳಸಿ ಮಂಡಿ ನೋವು ಕಡಿಮೆ ಮಾಡಿಕೊಳ್ಳಬಹುದು ಅದು ಹೇಗೆ ಅನ್ನೋದನ್ನ ನೋಡುವುದಾದರೆ ಕೊಬ್ಬರಿ ಎಣ್ಣೆಗೆ ಇಂಗನ್ನು ಮಿಶ್ರಮಾಡಿ ನೋವಿರುವ ಭಾಗಕ್ಕೆ ಲೇಪಿಸುವುದರಿಂದ ನೋವು ಕಡಿಮೆಯಾಗುವುದು.

ಮಂಡಿಯಲ್ಲಿ ಊತವಿದ್ದರೆ ೫-೧೦ ನಿಮಿಷ ಐಸ್ ಅನ್ನು ಊತವಿರುವ ಜಾಗದಲ್ಲಿ ಇಡಬೇಕು ಇದರಿಂದ ನೋವು ಊತ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಹೆಚ್ಚು ಓಡಾಡುವುದನ್ನು ಕಡಿಮೆ ಮಾಡಬೇಕು. ಹೆಚ್ಚು ಬರವಿರುವ ವಸ್ತುಗಳನ್ನು ಎತ್ತಬಾರದು. ಇನ್ನು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಸಹ ಉತ್ತಮವಾಗಿದೆ.

ಮಂಡಿ ನೋವು ಇರುವಂತ ವ್ಯಕ್ತಿಗಳು ಆಹಾರದಲ್ಲಿ ಮೆಂತ್ಯೆ ಸೊಪ್ಪು ಉಪಯೋಗಿಸುವುದರಿಂದ ಮಂಡಿ ನೋವು ಆದಷ್ಟು ಕಡಿಮೆಯಾಗುತ್ತದೆ. ಮುಂದಿನ ಲೇಖನದಲ್ಲಿ ಮಂಡಿನೋವಿಗೆ ಮತ್ತಷ್ಟು ಮನೆಮದ್ದುಗಳನ್ನು ತಿಳಿಸುವ ಪ್ರಯತ್ನ ಮಾಡುತ್ತೇವೆ ಧನ್ಯವಾದಗಳು

Leave A Reply

Your email address will not be published.