ಭಿಕ್ಷುಕ ಅಂದು ಕೊಂಡು ವಿಚಾರಣೆ ಮಾಡಿದ ಪೊಲೀಸರು ಆದ್ರೆ ನಿಜ ಗೊತ್ತಾಗುತ್ತಿದ್ದಂತೆ ಫುಲ್ ಶಾ’ಕ್

0 1

ಯಾರು ಏನಾಗುತ್ತಾರೆ ಎಂದು ಹೇಳಲು ಆಗುವುದಿಲ್ಲ. ಉತ್ತಮ ಹುದ್ದೆಯಲ್ಲಿ ಇರುವವರು ಭಿಕ್ಷೆ ಬೇಡುತ್ತಿರುವ ಸ್ಥಿತಿಯನ್ನು ಕೆಲವೊಮ್ಮೆ ನೋಡಿರುತ್ತೇವೆ, ಕೇಳಿರುತ್ತೇವೆ ಅದೇ ರೀತಿ ಶಾರ್ಪ್ ಶೂಟರ್ ಒಬ್ಬರು ಮಾನಸಿಕ ಸ್ಥಿತಿ ಸರಿಯಿಲ್ಲದೆ ಭಿಕ್ಷೆ ಬೇಡುತ್ತಿರುವ ಮನ ಮಿಡಿಯುವ ಕಥೆಯನ್ನು ಈ ಲೇಖನದಲ್ಲಿ ನೋಡೋಣ.

ಮಧ್ಯಪ್ರದೇಶ ರಾಜ್ಯದ ಗ್ವಾಲಿಯರ್ ನಗರದಲ್ಲಿ 2020 ನವೆಂಬರ್ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು ಮತ ಎಣಿಕೆ ಸಮಯದಲ್ಲಿ ಯಾವುದೇ ರೀತಿಯ ತೊಂದರೆ ಆಗಬಾರದೆಂದು ಶಾಂತಿ ವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ಅಲ್ಲಿನ ಡಿಎಸ್ ಪಿ ಗಳಾದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ವಹಿಸಲಾಗಿತ್ತು. ಮತ ಎಣಿಕೆಯ ದಿನ ರಾತ್ರಿಯಿಡಿ ಮತ ಎಣಿಕಾ ಕೇಂದ್ರಗಳಲ್ಲಿ ಕಾವಲು ಕಾಯಬೇಕಿತ್ತು. ಮಧ್ಯರಾತ್ರಿ 1 ಗಂಟೆ ನಂತರ ಅಧಿಕಾರಿಗಳು ಕಚೇರಿಯಿಂದ ಹೊರಬಂದು ಸರ್ಕಾರಿ ವಾಹನದಲ್ಲಿ ಅಧಿಕಾರಿಗಳು ರೋಡಿನಲ್ಲಿ ಗಸ್ತು ತಿರುಗುವಾಗ ಅವರ ವಾಹನದ ಬೆಳಕಿನಲ್ಲಿ ಅಪರಿಚಿತ ವ್ಯಕ್ತಿ ರೋಡಿನಲ್ಲಿ ಇರುವುದನ್ನು ನೋಡಿದರು. ಅವನು ನೋಡಲು ಭಿಕ್ಷುಕನಂತೆ ಕಾಣುತ್ತಿದ್ದನು ಅಧಿಕಾರಿಗಳು ಗಾಡಿಯನ್ನು ನಿಲ್ಲಿಸಿ ಭಿಕ್ಷುಕನ ಬಳಿಬಂದು ನೀನು ಯಾರು ಎಂದು ಕೇಳುತ್ತಾರೆ.

ಭಿಕ್ಷುಕನಿಗೆ ಹೇಳಲು ಶಕ್ತಿ ಇರಲಿಲ್ಲ ಅವನು ಮೌನವಾಗಿದ್ದ ಆಗ ಅಧಿಕಾರಿಗಳು ಚಳಿ ಇರುವುದರಿಂದ ತಮ್ಮ ಬಳಿ ಇರುವ ಕೋಟ್ ನೀಡುತ್ತಾರೆ. ಕೋಟ್ ಅನ್ನು ಧರಿಸಿದ ಭಿಕ್ಷುಕನು ಕೋಮಾ ಸ್ಥಿತಿಯಲ್ಲಿ ಇರುವ ವ್ಯಕ್ತಿ ಪ್ರಜ್ಞೆಗೆ ಮರುಕಳಿಸಿ ಏಳುವಂತೆ ಭಿಕ್ಷುಕನು ಅಧಿಕಾರಿಗಳನ್ನು ಅರಳು ಕಂಗಳಿಂದ ನೋಡುತ್ತಾನೆ ಅಲ್ಲದೆ ಅವರ ಹೆಸರು ಹೇಳಿ ಕೂಗುತ್ತಾನೆ. ಅಧಿಕಾರಿಗಳು ಈ ರಾತ್ರಿಯಲ್ಲಿ ತಮ್ಮ ಹೆಸರನ್ನು ಸರಿಯಾಗಿ ಹೇಳಿದ ಭಿಕ್ಷುಕನನ್ನು ಆಶ್ಚರ್ಯಚಕಿತರಾಗಿ ನೋಡುತ್ತಾರೆ. ಅಧಿಕಾರಿಗಳು ಭಿಕ್ಷುಕನನ್ನು ನೀನು ಯಾರು, ನಿನಗೆ ನಮ್ಮ ಹೆಸರು ಹೇಗೆ ಗೊತ್ತು ಎಂದು ಕೇಳುತ್ತಾರೆ ಆದರೆ ಭಿಕ್ಷುಕನು ಉತ್ತರ ಕೊಡುವುದಿಲ್ಲ. ಅಧಿಕಾರಿಗಳು ಸ್ಟಾಫ್ ಕರೆದು ವಾಹನದಲ್ಲಿ ಹತ್ತಿರದ ಸ್ಟೇಷನ್ ಗೆ ಕರೆದೊಯ್ಯುತ್ತಾರೆ. ಸ್ಟೇಷನ್ ಹತ್ತಿರ ಹೋಗುತ್ತಿದ್ದಂತೆ ಅಧಿಕಾರಿಗಳಿಗೆ ಗಡ್ಡ ಬೆಳೆದ ಭಿಕ್ಷುಕನ ಮುಖವನ್ನು ನೋಡಿದ ತಕ್ಷಣ ಅವರಿಗೆ ಈ ಹಿಂದೆ ಪರಿಚಯವಿದ್ದಂತೆ ಅನಿಸಿತು. ಈತ ಯಾರೆಂದು ನೆನಪಿಸಿಕೊಂಡಾಗ ಆತ ಶಾರ್ಪ್ ಶೂಟರ್ ಆಗಿದ್ದ ಮನೀಷ್ ಮಿಶ್ರಾ ಎಂದು ತಿಳಿಯುತ್ತದೆ, ಅಲ್ಲದೆ ಆತ ಇವರಿಬ್ಬರ ಸ್ನೇಹಿತನಾಗಿದ್ದನು.

ಕಳೆದು ಹೋದ ತಮ್ಮ ಸ್ನೇಹಿತ ಸಿಕ್ಕಿರುವುದರಿಂದ ಅಧಿಕಾರಿಗಳು ಅವನನ್ನು ಕಾರಿನಲ್ಲಿ ಜೋಪಾನವಾಗಿ ನೋಡಿಕೊಂಡರು ಅಲ್ಲದೆ ಅವನಿಗೆ ಮಾನಸಿಕ ಚಿಕಿತ್ಸೆ ನೀಡಲು ವ್ಯವಸ್ಥೆಯನ್ನು ಮಾಡಿದರು. 2005 ರಲ್ಲಿ ಕಾಣೆಯಾದ ಮನೀಷ್ ಮಿಶ್ರಾ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ. ಮನೀಷ್ ಅವರು 1998ರ ಬ್ಯಾಚ್ ನಲ್ಲಿ ಅತ್ಯಂತ ನಿಪುಣ ಶೂಟರ್ ಆಗಿದ್ದರು. 2005 ರಲ್ಲಿ ಉದ್ಯೋಗದ ಒತ್ತಡದಿಂದಾಗಿ ಮೆಂಟಲ್ ಇಂಬ್ಯಾಲೆನ್ಸ್ ಆಗಿ ಸೇವೆಯಿಂದ ದೂರ ಆಗುತ್ತಾರೆ. ಅವರ ತಂದೆ ತಾಯಿಗೆ ವಯಸ್ಸಾಗಿತ್ತು ಮಾನಸಿಕ ಸ್ಥಿಮಿತ ಕಳೆದುಕೊಂಡು ಮೊದಲ 5-6 ತಿಂಗಳು ಮನೆಯಲ್ಲೆ ಇದ್ದರು ನಂತರ ಮಾನಸಿಕ ಕೇಂದ್ರಗಳಲ್ಲಿ ಚಿಕಿತ್ಸೆ ಕೊಡಿಸಲಾಯಿತು ಆದರೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಅವರ ಕುಟುಂಬದಲ್ಲಿ ಬಹುತೇಕ ಎಲ್ಲರೂ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಅವರು ಮನೀಷ್ ಅವರಿಗೆ ಚಿಕಿತ್ಸೆ ಕೊಡಿಸಲು ಮುಂದಾದರು ಆದರೆ ಮನೀಷ್ ಪರಾರಿಯಾಗಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು ನಂತರ ಅವರ ಹೆಂಡತಿ ಅವರನ್ನು ಬಿಟ್ಟು ಹೋಗುತ್ತಾರೆ, ಅವರಿಗೆ ಆರೈಕೆ ಮಾಡುವವರು ಇಲ್ಲದೆ ಬೀದಿಗೆ ಬರುತ್ತಾರೆ.

ಅಧಿಕಾರಿಗಳು ಮನೀಷ್ ಅವರ ಸಂಬಂಧಿಕರು ಇದ್ದಾರಾ ಎಂದು ಪರಿಶೀಲಿಸಿದಾಗ ಮನೀಷ್ ಅವರ ಸಹೋದರರೊಬ್ಬರು ಚೀನಾದಲ್ಲಿ ಇರುವ ಮಾಹಿತಿ ಪತ್ತೆಯಾಗುತ್ತದೆ. ಅಧಿಕಾರಿಗಳು ಅವರನ್ನು ಸಂಪರ್ಕಿಸಿ ಮನೀಷ್ ಅವರ ಬಗ್ಗೆ ಹೇಳುತ್ತಾರೆ. ಆಗ ಅವರು ಭಾರತಕ್ಕೆ ಬಂದು ಮನೀಷ್ ಅವರನ್ನು ನೋಡುವುದಾಗಿ ಹೇಳುತ್ತಾರೆ, ಅವರಿಗೆ ಮನೀಷ್ ಅವರ ಮುಂದಿನ ಕಾಳಜಿಯನ್ನು ಒಪ್ಪಿಸಲಾಯಿತು. ಮನೀಷ್ ಅವರ ಮಾನಸಿಕ ಸ್ಥಿತಿ ಸರಿ ಇಲ್ಲದಿದ್ದರೂ ಅವರ ಸ್ನೇಹಿತರ ಹೆಸರನ್ನು ನೆನಪಿನಲ್ಲಿ ಇಟ್ಟುಕೊಂಡಿರುವುದು ಆಶ್ಚರ್ಯವಾಗುತ್ತದೆ. ಅವರನ್ನು ಚಿಕಿತ್ಸೆಗೆ ಒಳಪಡಿಸಲಾಯಿತು ನಿಧಾನವಾಗಿ ಗುಣಮುಖರಾಗುತ್ತಿದ್ದಾರೆ. ಮನೀಷ್ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಆಶಿಸೋಣ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.