ಸ್ವಾಮಿ ನಾನೇಕೆ ಬಡವನಾಗಿಯೇ ಇದ್ದೇನೆ? ಎಂದು ಕೇಳಿದಕ್ಕೆ ಬುದ್ಧ ನೀಡಿದ ಸಂದೇಶ

0 0

ಗೌತಮ್ ಬುದ್ಧ ಅವರು ತತ್ವಜ್ಞಾನಿ, ಸಾಧಕ, ಧ್ಯಾನಕಾರ, ಆಧ್ಯಾತ್ಮಿಕ ಶಿಕ್ಷಕ ಮತ್ತು ಪ್ರಾಚೀನ ಭಾರತದಲ್ಲಿ ವಾಸಿಸುತ್ತಿದ್ದ ಧಾರ್ಮಿಕ ಮುಖಂಡರಾಗಿದ್ದರು, ಬೌದ್ಧಧರ್ಮದ ವಿಶ್ವ ಧರ್ಮದ ಸ್ಥಾಪಕರಾಗಿದ್ದರು. ಗೌತಮ್ ಬುದ್ಧ ರಾಜಕುಮಾರನಾಗಿದ್ದನು ಮತ್ತು ಹೊರಗಿನ ಪ್ರಪಂಚದ ವಾಸ್ತವತೆಗಳನ್ನು ಅವನು ಅನುಭವಿಸಿದಾಗ ಅದು ಜ್ಞಾನೋದಯದ ಅನ್ವೇಷಣೆಗೆ ಕಾರಣವಾಯಿತು. ಸಿದ್ಧಾರ್ಥ ಅರಮನೆಯನ್ನು ಹುಡುಕಲು ಹೊರಟು ಕೊನೆಗೆ ಜ್ಞಾನೋದಯವನ್ನು ಪಡೆದನು.ಸಂತೋಷವು ನಿಮ್ಮಲ್ಲಿರುವ ಅಥವಾ ನೀವು ಯಾರೆಂಬುದನ್ನು ಅವಲಂಬಿಸಿರುವುದಿಲ್ಲ. ಇದು ನಿಮ್ಮ ಅನಿಸಿಕೆಗಳನ್ನು ಮಾತ್ರ ಅವಲಂಬಿಸಿದೆ. 

ನಮ್ಮೆಲ್ಲರಿಗೂ ತಿಳಿದಿರುವಂತೆ ಸದಾ ಹರಿಯುವ ನದಿಯ ನೀರು ಶುದ್ಧ ಹಾಗೂ ಸ್ವಚ್ಛವಾಗಿರುತ್ತದೆ ಮತ್ತು ಉಪಯೋಗಿಸಲು ಯೋಗ್ಯವಾಗಿರುತ್ತದೆ. ಯಾವ ನೀರು ಸದಾ ನಿಂತಲ್ಲೇ ಇರುತ್ತದೆಯೋ ಆ ನೀರು ಸ್ವಲ್ಪ ಸಮಯದ ನಂತರ ಕೊಳಕಾಗಿ ಕೆಸರಾಗಿ ಬಿಡುತ್ತದೆ. ಎಲ್ಲರೂ ಸಹ ಯಾವಾಗಲೂ ಕಾರ್ಯ ನಿರತರಾಗಿರಬೇಕು ನಿಂತ ನೀರಾಗಬಾರದು, ಹರಿಯುವ ನೀರಾದರೆ ಉತ್ತಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಒಂದು ದಿನ ಗೌತಮಬುದ್ಧ ರವರು ಒಂದು ಊರಿನಲ್ಲಿ ಧರ್ಮ ಸಭೆಯನ್ನು ನಡೆಸುತ್ತಿರುತ್ತಾರೆ, ಅಲ್ಲಿನ ಜನರು ಗೌತಮಬುದ್ದ ಬಳಿಬಂದು ತಮ್ಮ ಕಷ್ಟಗಳನ್ನು ಹೇಳಿಕೊಂಡು ಹೋಗುತ್ತಿರುತ್ತಾರೆ. ಊರಿನ ಹೆಬ್ಬಾಗಿಲಿನಲ್ಲಿ ಒಬ್ಬ ವ್ಯಕ್ತಿ ಕೂತಿರುತ್ತಾರೆ. ವ್ಯಕ್ತಿ ಅದೇ ಊರಿನ ಜನರನ್ನು ನೋಡುತ್ತಾ ಕೂತಿರುತ್ತಾನೆ ಜನರು ತಮ್ಮ ಕಷ್ಟಗಳನ್ನು ಹೊತ್ತು ಬೇಸರ ಮುಖದಲ್ಲಿ ಗೌತಮಬುದ್ಧ ಬಳಿ ಹೋಗುತ್ತಾರೆ ನಂತರ ಹಿಂದಿರುಗಬೇಕಾದರೆ ಆನಂದಮಯವಾಗಿ ಬರುತ್ತಿರುವುದನ್ನು ಕಂಡು ತಾನೂ ಸಹ ಬುದ್ಧರ ಬಳಿ ಹೋದರೆ ನನಗೂ ಕಷ್ಟಗಳ ನಿಭಾಯಿಸುವ ದಾರಿ ಕಾಣಬಹುದು ಎಂದು ಆ ವ್ಯಕ್ತಿ ಬುದ್ಧನ ಬಳಿ ಹೋಗುತ್ತಾರೆ.

ಆ ವ್ಯಕ್ತಿ ಬುದ್ಧರ ಬಳಿ ಈ ಊರಿನ ಜನರು ಸುಖಜೀವನವನ್ನು ನಡೆಸುತ್ತಿದ್ದಾರೆ ಹಾಗೂ ಆನಂದಮಯವಾಗಿದ್ದಾರೆ, ಆದರೆ ನಾನೇಕೆ ಬಡವನು ಆಗಿದ್ದೇನೆ ಎಂದು ಪ್ರಶ್ನಿಸುತ್ತಾನೆ ಗೌತಮ ಬುದ್ಧರು ನೀನು ಬಡವನಾಗಿ ದುಃಖದಿಂದ ಇರಲು ಕಾರಣ ನೀನು ಯಾರಿಗೂ ಏನನ್ನು ಕೊಟ್ಟಿಲ್ಲ ಎಂದು ಹೇಳಿದಾಗ ಸ್ವಾಮಿ ನನ್ನಲ್ಲಿ ಕೊಡಲು ಏನಿದೆ ನಾನೇ ಒಂದು ಹೊತ್ತಿನ ಊಟವನ್ನು ಬೇಡಿ ತಿನ್ನುತ್ತಿದ್ದೇನೆ ಎಂದು ಹೇಳಿದಾಗ ಬುದ್ಧರು ನಗುತ್ತಾ ಕೊಡಲು ನಿನ್ನ ಬಳಿ ನಗು ಹಾಗೂ ಭರವಸೆಯ ಎರಡು ಮಾತುಗಳು ಇವೆ ಅಲ್ಲವೇ, ನಿನ್ನ ಎರಡು ಕೈಗಳಿಂದ ಸಹಾಯ ಮಾಡಬಹುದಲ್ಲವೇ, ನೀನು ಇತರರಿಗೆ ಸಹಾಯ ಮಾಡಿದರೆ ಭಗವಂತ ನಿನ್ನ ಸಹಾಯಕ್ಕೆ ಇದ್ದೇ ಇರುತ್ತಾನೆ ಎಂದು ಸಾಂತ್ವನದ ಮಾತನ್ನು ಬುದ್ಧರು ಆ ವ್ಯಕ್ತಿಗೆ ಹೇಳುತ್ತಾರೆ.

Leave A Reply

Your email address will not be published.