ಎರಡನೆ ಅಲೆಯ ಕೊರೋನ ವೈರಸ್ ಬಹಳಷ್ಟು ಜನರನ್ನು ಕಾಡುತ್ತಿದೆ. ಬಲಿಯಾದವರೆಷ್ಟೊ ಜನ, ಗುಣಮುಖರಾದವರು ಕಡಿಮೆ ಜನ. ಸಿನಿಮಾ, ಧಾರವಾಹಿ ಹಲವು ನಟ-ನಟಿಯರಿಗೆ ಕೊರೋನ ವೈರಸ್ ತಗುಲಿದೆ. ಈಗಷ್ಟೆ ಗುಣಮುಖರಾದ ನಟ ಪ್ರಜ್ವಲ್ ದೇವರಾಜ್ ಅವರು ಅವರ ಪತ್ನಿಯೊಂದಿಗೆ ಲೈವ್ ವಿಡಿಯೊ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಹಾಗಾದರೆ ಪ್ರಜ್ವಲ್ ದೇವರಾಜ್ ಅವರು ವಿಡಿಯೋದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಚಿತ್ರರಂಗದ ನಟ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ರಾಗಿಣಿ ಪ್ರಜ್ವಲ್ ಅವರು ವೀಡಿಯೊ ಮೂಲಕ ಜನರಿಗೆ ಮಾಹಿತಿ ತಿಳಿಸಿದ್ದಾರೆ. ಪ್ರಜ್ವಲ್ ಹಾಗೂ ರಾಗಿಣಿ ಅವರು ಇದುವರೆಗೂ ಅನೇಕ ಡ್ಯಾನ್ಸ್, ಫನ್ ಇತ್ಯಾದಿ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪ್ರಜ್ವಲ್ ಅವರು ನಿಮ್ಮೊಂದಿಗೆ ಮಾತನಾಡುವಾಗ ಮುಖದಲ್ಲಿ ನಗು ಇರುತ್ತದೆ, ಮನಸ್ಸಿನಲ್ಲಿ ಖುಷಿ ಇರುತ್ತದೆ ಆದರೆ ಮೊದಲಬಾರಿಗೆ ಬಹಳ ದುಃಖ, ಬೇಜಾರು, ಕೋಪ ಕೂಡ ಇದೆ. ನಮ್ಮ ದೇಶದಲ್ಲಿ ಕೊರೋನ ವೈರಸ್ ಕಾರಣಕ್ಕಾಗಿ ಬಹಳಷ್ಟು ಜನರನ್ನು ಕಳೆದುಕೊಳ್ಳುತ್ತಿದ್ದೇವೆ. ಸರ್ಕಾರ ಅಥವಾ ಪೊಲೀಸರು ಒಂದು ಸರಳ ರೂಲ್ಸ್ ಅನ್ನು ಹೇಳಿದ್ದಾರೆ. ಮನೆಯಿಂದ ಯಾರು ಅನಾವಶ್ಯಕ ಹೊರಗೆ ಹೋಗಬಾರದು, ಮಾಸ್ಕ ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಈ ರೂಲ್ಸ್ ನಮ್ಮ ಒಳ್ಳೆಯದಕ್ಕಾಗಿ ಇರುವ ರೂಲ್ಸ್ ಆಗಿದೆ ಆದರೆ ಬಹಳಷ್ಟು ಜನರು ರೂಲ್ಸ್ ಪಾಲಿಸುತ್ತಿಲ್ಲ ಇದಕ್ಕೆ ಕಾರಣ ಗೊತ್ತಿಲ್ಲ ಎಂದು ಬೇಸರದಿಂದ ಹೇಳಿದರು.

ಮುಂದುವರಿದು ಅವರು ನನಗೂ ಕೋವಿಡ್ 19 ಪೊಸಿಟಿವ್ ಇತ್ತು, ನಾನು ಕೂಡ ಹೋರಾಡಿ ಬಂದಿದ್ದೇನೆ. ಮನೆಯಲ್ಲಿ ಒಬ್ಬರಿಗೆ ಕೊರೋನಾ ಪೊಸಿಟಿವ್ ಬಂದರೆ ಮನೆಯವರಿಗೆಲ್ಲರಿಗೂ ಒತ್ತಡ, ಟೆನ್ಶನ್, ಭಯ ಇರುತ್ತದೆ. ಹೊರಗಡೆ ಮಾರ್ಕೆಟ್ ಗಳಲ್ಲಿ ಬಹಳಷ್ಟು ಜನರು ಮಾಸ್ಕ್ ಧರಿಸುತ್ತಿಲ್ಲ. ಕೆಲವರು ಸರಿಯಾದ ಕ್ರಮದಲ್ಲಿ ಮಾಸ್ಕ್ ಧರಿಸುತ್ತಿಲ್ಲ. ನಮ್ಮ ಸುತ್ತ ಬಹಳಷ್ಟು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಸಹಾಯಮಾಡುವ ಮನಸ್ಸಿದ್ದರೂ ಸಹಾಯ ಮಾಡಲು ಆಗುತ್ತಿಲ್ಲ. ರಾಗಿಣಿ ಪ್ರಜ್ವಲ್ ಅವರು ನಮಗೆಲ್ಲರಿಗೂ ನನಗೇನಾಗಿಲ್ಲ ಎಂಬ ಅಟಿಟ್ಯೂಡ್ ಸಾಮಾನ್ಯವಾಗಿ ಇರುತ್ತದೆ. ನಮ್ಮ ಫ್ರೆಂಡ್ಸ್ ಸರ್ಕಲ್ ನಲ್ಲಿ ಎಷ್ಟು ಜನ ಕೊರೋನಾ ವೈರಸ್ ಗೆ ಬಲಿಯಾಗುತ್ತಿದ್ದಾರೆ. ದಯವಿಟ್ಟು ಸರ್ಕಾರದ ರೂಲ್ಸ್ ಪಾಲಿಸಿ ನಿಮ್ಮೊಂದಿಗೆ ನಿಮ್ಮ ಮನೆಯವರನ್ನು ರಕ್ಷಿಸಿ ಎಂದು ಪ್ರಜ್ವಲ್ ಹಾಗೂ ರಾಗಿಣಿ ಅವರು ಜನರಿಗೆ ಬೇಡಿಕೊಂಡಿದ್ದಾರೆ. ಬಹಳಷ್ಟು ವೈದ್ಯರು, ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೊರೋನ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ. ನೀವಿಲ್ಲದೆ ನಾವಿಲ್ಲ, ಅಭಿಮಾನಿಗಳಿಲ್ಲದೆ ಚಿತ್ರರಂಗವಿಲ್ಲ. ದಯವಿಟ್ಟು ಎಲ್ಲರೂ ಮನೆಯಲ್ಲೆ ಇರಿ, ಸೇಫ್ ಆಗಿರಿ ಎಂದು ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ದೇವರಾಜ್ ಅವರು ಮತ್ತೆ ಮತ್ತೆ ಕೇಳಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಇದನ್ನು ನೋಡಿದ ನಂತರವಾದರೂ ಜನರು ಎಚ್ಚೆತ್ತುಕೊಂಡರೆ ಒಳ್ಳೆಯದು. ಸರ್ಕಾರದ ರೂಲ್ಸ್ ಪಾಲಿಸಿ ಭಯಪಡಬೇಡಿ ಹಾಗೆಯೇ ನಿರ್ಲಕ್ಷಿಸದಿರಿ.

Leave a Reply

Your email address will not be published. Required fields are marked *