ನಟಿ ಮಯೂರಿ ಮಗು ಎಷ್ಟು ಕ್ಯೂಟ್ ಆಗಿದೆ ನೋಡಿ ಮೊದಲ ಬಾರಿಗೆ

0 0

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ನಟಿ ಮಯೂರಿ ಅವರು ತಮ್ಮ ಫೋಟೊಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಮದುವೆಯಾದಾಗಿನಿಂದ ಮದುವೆಯ ಫೋಟೋಗಳನ್ನು ನಂತರ ಗರ್ಭಿಣಿಯಾಗಿದ್ದಾಗ ಫೋಟೋಶೂಟ್ ಮಾಡಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೆ ಇದ್ದರು. ಇದೀಗ ತನ್ನ ಮಗುವಿನ ಫೋಟೋವನ್ನು ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿ ಮಯೂರಿ ಮದುವೆ ಹಾಗೂ ಅವರ ಮಗುವಿನ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ನಟಿ ಮಯೂರಿ ಅವರು ಕನ್ನಡ ಕಿರುತೆರೆಗೆ ಪ್ರವೇಶ ಮಾಡಿದರು. ನಂತರ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ದೊರೆಯಿತು. ಕೃಷ್ಣಲೀಲಾ, ಇಷ್ಟಕಾಮ್ಯ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಸ್ಸು ಗೆದ್ದಿದ್ದಲ್ಲದೆ ಮನೆ ಮಗಳಾಗಿದ್ದಾರೆ. ಬಾಲ್ಯದ ಗೆಳೆಯ ಅರುಣ್ ಅವರ ಜೊತೆ ಮಯೂರಿ ಅವರು ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವಿವಾಹವಾದರು. ಇವರ ಮದುವೆಯಲ್ಲಿ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗವಹಿಸಿ ನವಜೋಡಿಗೆ ಶುಭಹಾರೈಸಿದ್ದಾರೆ. ಮದುವೆಯಲ್ಲಿ ಕನ್ಯಾದಾನ ಮಾಡುವುದು ಪ್ರಮುಖವಾಗಿದೆ. ಮಯೂರಿ ಅವರ ತಂದೆ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಜೆಕೆ ಅವರು ಮಯೂರಿ ಅವರೊಂದಿಗೆ ನಟಿಸುತ್ತಿದ್ದರು. ಮಯೂರಿ ಅವರ ಮದುವೆಯಲ್ಲಿ ನಟ ಜೆಕೆ ಅವರ ತಂದೆ-ತಾಯಿ ಮಯೂರಿಯ ಪೋಷಕರಾಗಿ ಕನ್ಯಾದಾನ ಮಾಡಿದ್ದಾರೆ. ಅರುಣ್ ಅವರು ಐಟಿ ಉದ್ಯೋಗಿಯಾಗಿದ್ದು ಅಮೆರಿಕದಲ್ಲಿ ಸೆಟ್ಲ್ ಆಗಿದ್ದರು. ಈಗ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಹತ್ತು ವರ್ಷಗಳ ಕಾಲ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದರು. ಗರ್ಭಿಣಿಯಾಗಿದ್ದ ಮಯೂರಿ ಅವರು ಸ್ವಲ್ಪ ದಿನಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಸೀಮಂತ ಶಾಸ್ತ್ರವನ್ನು ಮಾಡಿಕೊಂಡಿದ್ದರು. ಇತ್ತೀಚೆಗೆ ಮಯೂರಿ ಅವರು ಗಂಡು ಮಗುವಿಗೆ ಜನ್ಮ ನೀಡಿದರು. ತಾಯಿಯಾದ ಖುಷಿಯ ಅನುಭವವನ್ನು ಅನುಭವಿಸುತ್ತಿದ್ದಾರೆ. ಇದೀಗ ಮೊದಲ ಬಾರಿಗೆ ತಮ್ಮ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ತೊಟ್ಟಿಲು ಗೊಂಬೆಗಳಿಂದ ಅಲಂಕೃತವಾಗಿದೆ ಅಲ್ಲದೆ ಮಗುವಿಗೆ ಹೊಸದೊಂದು ಅಲಂಕೃತ ಚೇರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ನಟಿ ಮಯೂರಿ ಅವರು ಮಗುವಿನೊಂದಿಗೆ ಸುಂದರ ಕ್ಷಣಗಳನ್ನು ಅನುಭವಿಸಲಿ ಎಂದು ಆಶಿಸೋಣ.

Leave A Reply

Your email address will not be published.