Baby Name Prediction: ಪ್ರತಿಯೊಂದು ಮನೆಗಳಲ್ಲಿ ಮಗು ಹುಟ್ಟಿದ ನಂತರ ಹೆಸರು ಇಡುವುದು ಒಂದು ಪ್ರಕ್ರಿಯೆಯಾಗಿದ್ದು ಹೆಸರು ಇಡುವ ದಿನವನ್ನು ಹಿಂದೂ ಸಂಪ್ರದಾಯದ ಪ್ರಕಾರ ಮಗುವಿಗೆ (Baby Name) ನಾಮಕರಣ ಮಾಡುವುದು ಎಂದು ಮನೆಯಲ್ಲಿ ತುಂಬಾ ಸಡಗರ ಸಂಭ್ರಮದಿಂದ ಮಗುವಿಗೆ ಹೆಸರನ್ನು ಇಡುತ್ತಾರೆ ಹಾಗೆಯೇ ಮಗುವಿಗೆ ಕೆಲವರು ದೇವರನ್ನು ಹೆಸರನ್ನು ಹಾಗೂ ಪ್ರಖ್ಯಾತ ಮತ್ತು ಮಹನೀಯರ ಹೆಸರನ್ನು ಇಡುವುದು ಸರ್ವೇ ಸಾಮಾನ್ಯವಾಗಿದೆ ಹಾಗೆಯೇ ಹೆಸರನ್ನು ಇಡುವಾಗ ಗೊತ್ತೋ ಗೊತ್ತಿಲ್ಲದೆ ಕೆಲವು ತಪ್ಪುಗಳನ್ನು ಮಾಡಬಾರದು ಮಗುವಿಗೆ ಒಳ್ಳೆಯ ಅರ್ಥ ಗರ್ಭಿತವಾದ ಹೆಸರನ್ನು ಇಡಬೇಕು.

(Baby Name) ಮಗುವಿಗೆ ಇಡುವ ಹೆಸರು ಮಗುವಿನ ಗುಣ ಸ್ವಭಾವ ಹಾವ ಭಾವವನ್ನು ಸೂಚಿಸುತ್ತದೆ ಹಾಗಾಗಿ ಬಹಳ ವಿಚಾರಿಸಿ ಮಗುವಿಗೆ ನಾಮಕರಣ ಮಾಡಬೇಕು ಜೀವನದಲ್ಲಿ ತುಂಬಾ ಕಷ್ಟ ಪಟ್ಟಿರುವ ಮಹನೀಯರ ಹಾಗೂ ದೇವರ ಹೆಸರನ್ನೂ ಎಂದಿಗೂ ಸಹ ಇಡಬಾರದು ಇದರಿಂದ ಮುಂದಿನ ದಿನಗಳಲ್ಲಿ ಮಗು ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾದ ಪ್ರಸಂಗ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಹೆಸರು ಇಡುವಾಗ ಬಹಳ ಜಾಗರೂಕತೆಯಿಂದ ಇಡಬೇಕು ನಾವು ಈ ಲೇಖನದ ಮೂಲಕ ಮಗುವಿಗೆ ಹೆಸರು ಇಡುವಾಗ ಯಾವ ತರದ ಹೆಸರನ್ನು ಇಡಬಾರದು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಮಗು ಹುಟ್ಟಿದಾಗ ಇಷ್ಟಬಂದಂತೆ ಹೆಸರನ್ನು ಇಡುತ್ತಾರೆ ಕೆಲವರು ಕೆಲವು ಮಹಾನ್ ವ್ಯಕ್ತಿಗಳ ಹೆಸರನ್ನು ಇಡುತ್ತಾರೆ ಹೆಸರು ತುಂಬಾ ಪ್ರಾಮುಖ್ಯತೆಯನ್ನು ಪಡೆದು ಇರುತ್ತದೆ ಸ್ವಭಾವ ಗುಣ ಪ್ರತಿಯೊಂದರ ಮೇಲೆ ಪ್ರಭಾವವನ್ನು ಬೀರುತ್ತದೆ ಹೆಸರಿನ ಮೇಲೆ ಸಹ ಸ್ವಭಾವ ತಿಳಿದುಬರುತ್ತದೆ ತುಂಬಾ ಜನರು ದೇವರ ಹೆಸರನ್ನು ಇಡುತ್ತಾರೆ ಆದರೆ ಕೆಲವು ದೇವರು ಸಹ ತುಂಬಾ ಕಷ್ಟವನ್ನು ಪಟ್ಟಿರುತ್ತಾರೆ ಹಾಗೆಯೇ ಅನೇಕ ತ್ಯಾಗವನ್ನು ಮಾಡಿರುತ್ತಾರೆ

ಇಂತಹ ದೇವರ ಹೆಸರನ್ನು ಮಕ್ಕಳಿಗೆ ಇಡಬಾರದು ಮತ್ತು ದೇವರ ಕಷ್ಟದ ಜೀವನದ ಹಾಗೆ ಮಕ್ಕಳ ಜೀವನದಲ್ಲಿ ಸಹ ಕಷ್ಟಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಹೆಸರನ್ನು ಇಡುವಾಗ ಸರಿಯಾಗಿ ಯೋಚಿಸಿ ಇಡಬೇಕು. ಮಹಾಭಾರತದಲ್ಲಿ ಬರುವ ಕೌರವರ ಹೆಸರನ್ನು ಇಡಬಾರದು ಕೌರವರಲ್ಲಿ ಕ್ರೋಧ ಇತ್ತು ಹಾಗೂ ಸ್ವಭಾವ ಹಾವ ಭಾವದಲ್ಲಿ ಕೆಡುಕಿನ ಭಾವನೆಗಳು ಇದ್ದವು ಹಾಗಾಗಿ ಕೌರವರ ಹೆಸರನ್ನು ಇಡಬಾರದು .

ಪಾಂಡವರ ಹೆಸರನ್ನು ಇಡಬಹುದಾಗಿದೆ ಹಾಗೆಯೇ ದ್ರೌಪದಿಯ ಹೆಸರನ್ನು ಇಡಬಾರದು ತುಂಬಾ ಕಷ್ಟವನ್ನು ಪಟ್ಟಿರುವ ಸ್ತ್ರೀ ಹಾಗಾಗಿ ದ್ರೌಪದಿಯ ಹೆಸರನ್ನು ಇಡಬಾರದು ತುಂಬಾ ಜನರು ಮಕ್ಕಳಿಗೆ ಕರ್ಣ ಎಂದು ಹೆಸರನ್ನು ಇಡುತ್ತಾರೆ ಕರ್ಣನು ಸಹ ಜೀವನದಲ್ಲಿ ಅನೇಕ ಕಷ್ಟವನ್ನು ಎದುರಿಸಿದ್ದಾರೆ ಚಿಕ್ಕ ವಯಸ್ಸಿನಿಂದಲೇ ಕರ್ಣ ಅನೇಕ ಕಷ್ಟವನ್ನು ಕಂಡಿದ್ದಾನೆ ಹಾಗಾಗಿ ಕರ್ಣನ ಹೆಸರನ್ನು ಇಡಬಾರದುವಿಭೀಷಣ ಎನ್ನುವ ಹೆಸರು ತುಂಬಾ ಒಳ್ಳೆಯ ಹೆಸರಾಗಿದೆ ಇದರ ಅರ್ಥವೇನೆಂದರೆ ಶಾಂತವಾಗಿರುವ ವ್ಯಕ್ತಿ ಎಂದು ಅರ್ಥ ಹಾಗೆಯೇ ಕೋಪ ಎನ್ನುವುದು ಬರುವುದು ಇಲ್ಲ ಎನ್ನುವ ಅರ್ಥವಾಗಿದೆ ಆದರೆ ವಿಭೀಷಣ ಎನ್ನುವುದು ರಾವಣನ ತಮ್ಮನ ಹೆಸರಾಗಿದೆ

ವಿಭೀಷಣ ರಾವಣನಿಗೆ ಸಾವಿನ ಸತ್ಯವನ್ನು ಹೇಳಿರುತ್ತಾನೆ ತಮ್ಮ ಅಣ್ಣನ ಸಾವಿಗೆ ವಿಭೀಷಣ ಕಾರಣ ಆಗಿರುತ್ತಾರೆ ಆದರೆ ಈ ಹೆಸರನ್ನು ಸಹ ಮಕ್ಕಳಿಗೆ ಇಡಬಾರದು ಸುಗ್ರೀವ ಎನ್ನುವ ಹೆಸರು ರಾಮಾಯಣದಲ್ಲಿ ಬರುವ ಹೆಸರಾಗಿದ್ದು ಸುಗ್ರೀವ ಎನ್ನುವ ಹೆಸರನ್ನು ಸಹ ಇಡಬಾರದು ಕಾರಣವೇನೆಂದರೆ ಅಣ್ಣನ ಸಾವಿಗೆ ಕಾರಣ ಆಗಿರುತ್ತಾನೆ ಹಾಗಾಗಿ ಈ ಹೆಸರನ್ನು ಇಡಬಾರದು.

ನಾವು ಹೆಸರಿಡುವ ಸಮಯದಲ್ಲಿ ಗೊತ್ತೋ ಗೊತ್ತಿಲ್ಲದೆ ಮಾಡುವ ತಪ್ಪಿನಿಂದ ಮಕ್ಕಳ ಮುಂದಿನ ಭವಿಷ್ಯದಲ್ಲಿ ಕಷ್ಟವನ್ನು ತಂದು ಕೊಡುವ ಸಾಧ್ಯತೆ ಇರುತ್ತದೆ ಹಾಗಾಗಿ ಪ್ರತಿಯೊಬ್ಬರೂ ಸಹ ಸರಿಯಾಗಿ ಯೋಚಿಸಿ ಅರ್ಥ ಗರ್ಭಿತವಾದ ಒಳ್ಳೆಯ ಹೆಸರನ್ನು ಮಕ್ಕಳಿಗೆ ಇಡುವ ಮೂಲಕ ಜೀವನದ ಮುಂದಿನ ಕಷ್ಟಗಳನ್ನು ಶಮನಗೊಳಿಸಬಹುದು.

Leave a Reply

Your email address will not be published. Required fields are marked *