ಯೋಗಮಾಡಲು ಆನೆ ಮೇಲೆ ಕುಳಿತ ಬಾಬಾ ರಾಮ್‌ದೇವ್, ಮುಂದೇನಾಯ್ತು ನೋಡಿ

0 3

ಯೋಗಕ್ಕೆ ಹೆಸರಾದವರು ಬಾಬಾ ರಾಮ್‌ದೇವ್ ಅವರು‌. ಅವರು ಮಾಡುವ ಯೋಗಾಸನ ಶೈಲಿ ಬೇರೆಯವರು ಮಾಡುವುದು ತುಂಬಾ ಕಷ್ಟಕರ ಅನ್ನಿಸುತ್ತದೆ. ಹಾಗೆಯೆ ಭಾರತದಲ್ಲಿ ಆಯುರ್ವೇದ ಪದ್ದತಿಯನ್ನು ಅನುಸರಿಸಿ ಪತಂಜಲಿ ಎಂಬ ಸಂಸ್ಥೆ ಸ್ಥಾಪಿಸಿದರು. ಮಾತ್ರೆಗಳು, ಗೊಬ್ಬರಗಳು, ಇತರ ಸ್ವದೇಶಿ ವಸ್ತುಗಳನ್ನು ಪತಂಜಲಿಯಲ್ಲಿ ನೀಡಲಾಗುತ್ತದೆ. ಹೀಗೆ ಹೆಸರು ಮಾಡಿರುವ ವ್ಯಕ್ತಿ ಬಾಬಾ ರಾಮ್‌ದೇವ್ ಅವರು ಆನೆಯ ಮೇಲೆ ಕುಳಿತು ಯೋಗಾಸನ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ನಾವು ತಿಳಿಯೋಣ.

ಲಕ್ನೊದ ಊರೊಂದರಲ್ಲಿ ಆನೆಯ ಮೇಲೆ ಬಾಬಾ ರಾಮ್‌ದೇವ್ ಅವರು ಕುಳಿತು ಯೋಗ ಮಾಡುತ್ತಿರುವುದು ಕಂಡುಬಂದಿದೆ. ಆದರೆ ಹೀಗೆ ಯೋಗ ಮಾಡುತ್ತಿರುವ ಸಂದರ್ಭದಲ್ಲಿ ಯೋಗ ಗುರುವಾದ ಬಾಬಾ ರಾಮ್‌ದೇವ್ ಆನೆಯ ಮೇಲಿಂದ ಬಿದ್ದಿರುವುದು ವಿಡಿಯೋದಲ್ಲಿ ದಾಖಲೆಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣ ತಲುಪಿದ್ದು ತುಂಬಾ ವೈರಲ್ ಆಗುತ್ತಿದೆ. ಇದನ್ನು ನೋಡಿದ ಟ್ವಿಟ್ಟಿಗರು ವಿರೋಧಿಸಿದ್ದಾರೆ. ಬಾಬಾ ರಾಮ್‌ದೇವ್ ಆನೆಯ ಬೆನ್ನಿನ ಮೇಲೆ ಕುಳಿತು ಯೋಗ ಮಾಡುವ ಸಮಯದಲ್ಲಿ ಆನೆಯು ತನ್ನ ಮೈ ಕೊಡವಿ, ತನ್ನ ಒಂದು ಕಾಲನ್ನು ಎತ್ತಿದೆ. ಆದ ಕಾರಣ ಸಮತೋಲನ ಸಿಗದೆ ಯೋಗ ಗುರು ಬಾಬಾ ರಾಮ್‌ದೇವ್ ಆನೆಯಿಂದ ಕೆಳಗೆ ಬಿದ್ದಿದ್ದಾರೆ.

ಆನೆಯ ಮೇಲಿನಿಂದ ಬಿದ್ದಾಗ ರಾಮ್ ದೇವ್ ನಿಧಾನವಾಗಿ ಎದ್ದು, ಸಹಾಯಕ್ಕೆ ಬಂದ ಭದ್ರತಾ ಸಿಬ್ಬಂದಿಯ ನೆರವಿನೊಂದಿಗೆ ಹೋದರು. ಈ ವಿಡಿಯೋ ನೋಡಿದ ಅರ್ಚನಾ ಗೌಡ ಎನ್ನುವವರು ” ಆನೆಯ ಮೇಲೆ ಸರ್ಕಸ್ ಮಾಡಲು ಹೋದ ಜೋಕರ್ ರಾಮ್‌ದೇವ್ ಕೆಳಗೆ ಬಿದ್ದಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ. ಹಾಗೆಯೆ ಮತ್ತೊಬ್ಬರು ಪೂಜಾ ಪ್ರಿಯಂವದ ಅವರು ” ಭಾರತದ ಆನೆಗಳಿಗೆ ಮನುಷ್ಯರಿಗಿಂತ ಹೆಚ್ಚಿನ ಬುದ್ದಿ ಇದೆ. ಪ್ರಾಣಿಗಳನ್ನು ಪ್ರಚಾರಕ್ಕೆ ಮಾತ್ರವೇ ನಕಲಿ ಯೋಗಿ ಯಾವಾಗ ಬಳಸುತ್ತಾರೆ ಎನ್ನುವುದು ಪ್ರಾಣಿಗಳಿಗೂ ಚೆನ್ನಾಗಿ ತಿಳಿದಿದೆ. ಎಂದು ಟ್ವೀಟ್ ಮಾಡಿದ್ದಾರೆ.

ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಕೆಲವು ಜನರನ್ನು ಸಿಟ್ಟಿಗೆಳಿಸಿದ್ದಂತು ಸುಳ್ಳಲ್ಲ. ಈ ತರಹದ ಸಾಹಸಗಳು ಬಾಬಾ ರಾಮ್‌ದೇವ್ ಅವರಿಗೆ ಬೇಕಿದ್ದವಾ ಎಂಬ ಮಾತುಗಳು ಕೇಳಿ ಬರುತ್ತಲಿದೆ.

Leave A Reply

Your email address will not be published.