ಸಂಪಾದನೆ ಇಲ್ಲ ಜೀವನ ಕಷ್ಟವಾಗಿದೆ ಸಂಗೀತ ನಿರ್ದೇಶಕ ರಘು ದೀಕ್ಷಿತ್

0 5

ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ತಮ್ಮ ಹೊಸದಾದ ಪ್ರಾಜೆಕ್ಟ್ ಬಗ್ಗೆ ಮಾತನಾಡಿ ಲಾಕ್ಡೌನ್ ನಿಂದಾಗಿ ಅವರು ಎದುರಿಸಿದ ಅಂತಹ ಕಷ್ಟಗಳು ಹಾಗೂ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ ಹಾಗೂ ಅವರು ಎದುರಿಸಿದ ಸಮಸ್ಯೆಗಳ ಬಗ್ಗೆ ಎನು ಹೇಳಿದ್ದಾರೆ ಹಾಗೂ ಸಂಪಾದನೆ ನಿಂತು ಹೋಗಿ ಜೀವನ ಕಷ್ಟವಾಗಿದೆ ಎಂದೂ ಸಹ ಹೇಳಿದ್ದಾರೆ ಇದರ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪತ್ರಕರ್ತರು ಒಬ್ಬರು ರಘು ದೀಕ್ಷಿತ್ ಅವರನ್ನು ಭೇಟಿ ಮಾಡಿ ಅವರಿಗೆ ಲಾಕ್ ಡೌನ್ ಸಮಯವನ್ನ ಹೇಗೆ ಕಳೆದರಿ? ಎಂದು ಕೇಳಿದಾಗ ರಘು ದೀಕ್ಷಿತ್ ಅವರು ನಾನು ಚೆನ್ನಾಗಿದ್ದೀನಿ. ಲಾಕ್ ಡೌನ್ ಸಮಯದಲ್ಲಿ ಫುಲ್ ಬ್ಯುಸಿ ಇದ್ದೆ ಒಂದಿಷ್ಟು ಸಾಂಗ್ ಕಂಪೋಸ್ ಮಾಡಿದೆ. ಹೊಸ ಹೊಸ ಐಡಿಯಾ ಹೊಳೆಯಿತು ಅದನೆಲ್ಲ ಇಂಪ್ರೂವೈಸ್ ಮಾಡ್ತಾ ಇದ್ದೆ. ಜೊತೆಗೆ ಆನ್ಲೈನ್ ಪಿಯಾನೋ ಕ್ಲಾಸ್ಗೆ ಸೇರಿಕೊಂಡಿದ್ದೇನೆ ಹಾಗಾಗಿ ಫ್ರೀ ಆಗಿರೋಕಂತು ಟೈಂ ಸಿಗಲಿಲ್ಲ ಫುಲ್ ಬ್ಯುಸಿ ಆಗಿದ್ದೆ ನಾನು ಎಂದು ಹೇಳಿದ್ದಾರೆ. ಇನ್ನೂ ಇವರ ಸುನಾಮಿ ವಿಡಿಯೋ ಸಾಂಗ್ ತುಂಬಾ ವೈರಲ್ ಆಗಿದ್ದರ ಬಗ್ಗೆ ಕೇಳಿದಾಗ ಅವರು ಈ ರೀತಿಯಾಗಿ ಹೇಳಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಲವ್ ಕಾನ್ಸೆಪ್ಟ್ ಇಟ್ಟುಕೊಂಡು ಏಳು ಹಾಡುಗಳನ್ನು ಬರೆದಿದ್ದೇನೆ. ಅದರಲ್ಲಿ ಒಂದು ಈ ಸುನಾಮಿ ವಿಡಿಯೋ ಸಾಂಗ್. ಲವ್ ಅಂದ್ರೆ ಬರೀ ಹುಡುಗ ಹುಡುಗಿ ಪ್ರೀತಿ ಮಾತ್ರ ಅಲ್ಲ, ಸಾಕು ಪ್ರಾಣಿಗಳ ಮೇಲೆ, ನೇಚರ್, ಟ್ರಾವೆಲ್ ಇವುಗಳನ್ನು ಪ್ರೀತಿಸುವುದು ಕೂಡ ಪ್ರೀತಿನೆ. ಈ ಕಾನ್ಸೆಪ್ಟ್ ಇಟ್ಟುಕೊಂಡು ಸುನಾಮಿ ಅನ್ನೋ ಆಲ್ಬಂ ಸಾಂಗ್ ಮಾಡಿದ್ದೀನಿ. ಅದರಲ್ಲಿ ಮೊದಲನೇ ಆಲ್ಬಂ ಸಾಂಗ್ ಸುನಾಮಿಯನ್ನು ನನ್ನ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದೇನೆ, ಜನವರಿಯಲ್ಲಿ ನನ್ನ ಸಾಕು ನಾಯಿ ತುಂಟಿ ಮನೆಬಿಟ್ಟು ಹೋಯ್ತು ಮತ್ತೆ ಬರಲೇ ಇಲ್ಲ. ಅದ್ರ ಮೇಲಿರೋ ಪ್ರೀತಿ ಇಟ್ಟುಕೊಂಡು ಈ ಹಾಡು ಬರೆದಾಗ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ಜನರು ಈ ಕಾನ್ಸೆಪ್ಟ್ ಅನ್ನು ಮೆಚ್ಚಿಕೊಂಡಿದ್ದಾರೆ. ಉಳಿದ ಆರು ಹಾಡುಗಳನ್ನು ಒಂದೊಂದಾಗಿಯೇ ನನ್ನ ಯೂಟ್ಯೂಬ್ ಚಾನೆಲ್ನಲ್ಲಿ ರಿಲೀಸ್ ಮಾಡುತ್ತೇನೆ. ಕನ್ನಡ ಮತ್ತು ಹಿಂದಿ ಎರಡೂ ಭಾಷೆಯಲ್ಲಿ ಸುನಾಮಿ ಆಲ್ಬಂ ಸಾಂಗ್ ಬಿಡುಗಡೆಯಾಗುತ್ತಿದೆ ಎಂದು ಹೇಳಿದ್ದಾರೆ.

ಎಲ್ಲರಿಗೂ ಕನೆಕ್ಟ್ ಆಗುವ ಸುನಾಮಿ ವಿಡಿಯೋ ಕಾನ್ಸೆಪ್ಟ್ ಹೊಳೆದದ್ದು ಹೇಗೆ ಎಂದು ಕೇಳಿದರೆ ರಘು ದೀಕ್ಷಿತ್ ಅವರ ಪ್ರತಿಕ್ರಿಯೆ ಹೀಗಿತ್ತು. ಇದರ ಎಲ್ಲ ಕ್ರೆಡಿಟ್ ನಟಿ ಸಂಯುಕ್ತ ಹೊರನಾಡ್ ಅವರಿಗೆ ಸರಬೇಕು. ಆಕೆ ಪ್ರಾಣಿ ಪ್ರೇಮಿ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಅವರ ಪೋಸ್ಟ್ಗಳನ್ನ ನೋಡ್ತಿದ್ದೆ. ಅವರಿಗೆ ಈ ವಿಡಿಯೋನಲ್ಲಿ ಹಾಡ್ತೀರಾ ಎಂದು ಕೇಳಿದಾಗ ಒಪ್ಪಿಕೊಂಡಿದ್ದರು. ಸುನಾಮಿ ವಿಡಿಯೋಗಾಗಿ ಮೊದಲ ಬಾರಿ ಹಿನ್ನೆಲೆ ಗಾಯಕಿಯಾಗಿ ಅವರು ಹಾಡಿದ್ದಾರೆ. ಜೊತೆಗೆ ವಿಡಿಯೋ ಆ ರೀತಿ ಬರೋದಕ್ಕೆ ಮೂಲ ಕಾರಣ ಅವರೇ. ಸೆಲೆಬ್ರೆಟಿಗಳು, ಸ್ನೇಹಿತರು, ಫ್ಯಾನ್ಸ್ ಕಾಂಟ್ಯಾಕ್ಟ್ ಮಾಡಿ ಸಾಕು ಪ್ರಾಣಿಗಳ ಜೊತೆ ಇರೋ ಪೋಟೋ ಕಲೆಕ್ಟ್ ಮಾಡಿ ಹಾಡಿಗೆ ತಕ್ಕ ಹಾಗೆ ಅದನ್ನು ಎಡಿಟ್ ಮಾಡಿಸಿದ್ದಾರೆ. ಅವರಿಗೆ ಸಿನಿಮಾ ಬಗ್ಗೆ ಗೊತ್ತಿರೋದ್ರಿಂದ ಇಡೀ ಕಾನ್ಸೆಪ್ಟ್ ಅವರೇ ಸಿದ್ದ ಮಾಡಿದ್ರು.ನಾನು ಸಾಹಿತ್ಯ ಮತ್ತು ಸಂಗೀತ ಕೆಲಸ ಮಾಡಿದೆ. ಈಗ ಈ ಹಾಡಿಗೆ ಸಿಕ್ತಿರೋ ಮೆಚ್ಚುಗೆ ನೋಡಿ ತುಂಬಾ ಖುಷಿಯಾಗ್ತಿದೆ. ನಮ್ಮ ಪ್ರಯತ್ನಕ್ಕೆ ಒಳ್ಳೆಯ ಪ್ರತಿಕ್ರಿಯೆ ಪ್ರೀತಿ ಸಿಕ್ಕಿದೆ ಎಂಬ ತೃಪ್ತಿ ಇದೆ ಎಂದು ಹೇಳಿದರು.

ಕೋವಿಡ್-19 ನಿಂದ ಸಿನಿಮಾಗಳು ನಿಂತು ಹೋಗಿದೆ ಆರ್ಥಿಕಸಮಸ್ಯೆ ಎದುರಾಯಿತಾ? ಎಂದು ಕೇಳಿದ್ದಕ್ಕೆ ಇದೊಂದು ವೈರಸ್ ಎಲ್ಲಿಂದ ಬಂತೋ ಬೇಗ ತೊಲಗಿದರೆ ಸಾಕಾಗಿದೆ. ನನಗೆ ಆರ್ಥಿಕವಾಗಿ ತುಂಬಾ ಸಂಕಷ್ಟ ಎದುರಾಯಿತು. ನಾನು ನನ್ನ ಮೋಟರ್ ಸೈಕಲ್ ಮಾರಬೇಕಾದ ಅನಿವಾರ್ಯತೆ ಎದುರಾಯಿತು. ನಾವು ಈ ಮಾತು ಹೇಳಿದ್ರೆ ಯಾರೂ ನಂಬೋದಿಲ್ಲ, ನಿಜವಾಗಿಯೂ ಇದು ಸತ್ಯ. ಬೇರೆ ದಾರಿಯಿಲ್ಲದೆ ಮೋಟರ್ ಸೈಕಲ್ ಮಾರಿದೆ. ಇದೆಲ್ಲ ಬೇಗ ಸುಧಾರಿಸಿ ಎಲ್ಲ ಮೊದಲಿನ ಸ್ಥಿತಿಗೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಕೊರೊನಾದಿಂಡ ಸ್ಟೇಜ್ ಪರ್ಫಾಮೆನ್ಸ್ ನಿಂತು ಹೋಗಿರುವುದರ ಬಗ್ಗೆ ಕೇಳಿದಾಗ, ತುಂಬಾ ಕಷ್ಟ ಆಯ್ತು ನನಗೆ ಲೈವ್ ಬ್ಯಾಂಡ್ ಪರ್ಫಾಮೆನ್ಸ್ ಇಲ್ಲದೆ ಮೈ ಪರಚಿಕೊಳ್ಳುವ ಹಾಗಾಗಿತ್ತು. ತುಂಬಾ ಮಿಸ್ ಮಾಡಿಕೊಂಡೆ. ಜೊತೆಗೆ ಸಂಪಾದನೆ ನಿಂತು ಹೋಗಿದೆ. ನಮಗೆ ತಿಂಗಳ ಸಂಬಳ ಇಲ್ಲ, ಕೆಲಸ ಇದ್ರೆ ಮಾತ್ರ ಸಂಬಳ ಹೀಗಾಗಿ ತುಂಬಾ ಕಷ್ಟ ಆಗಿದೆ. ನಾನು ನನ್ನ ಮೋಟರ್ ಬೈಕ್ ಇಎಂಐ ಕಟ್ಟೋಕೆ ಆಗದೇ ಮಾರಿ ಬಿಟ್ಟೆ. ನನ್ನ ಟೀಂ ನವರ ಜೀವನ ತುಂಬಾ ಕಷ್ಟ ಆಗಿದೆ. ಹೇಗೋ ಜೀವನ ಸಾಗಿಸಿಕೊಂಡು ಹೋಗ್ತಿದ್ದಾರೆ. ಆರಂಭದಲ್ಲಿ ನಾವೇ ಸಂಕಷ್ಟದಲ್ಲಿರುವವರಿಗೆ ಫಂಡ್ ರೈಸ್ ಮಾಡ್ತಾ ಇದ್ವಿ ಆದ್ರೀಗ ನಮ್ಮ ಪರಿಸ್ಥಿತಿ ಕೂಡ ಫಂಡ್ ರೈಸ್ ಮಾಡಿಕೊಟ್ಟರೆ ಬದುಕೋ ಹಂತಕ್ಕೆ ಬಂದಿದೆ. ನಮ್ಮ ಜೀವನ ನಿಂತಿರೋದೇ ಲೈವ್ ಕನ್ಸರ್ಟ್ ಮೇಲೆ. ಏಳು ತಿಂಗಳಿನಿಂದ ಯಾವುದೇ ಲೈವ್ ಬ್ಯಾಂಡ್ ನಡೆದಿಲ್ಲ.ಸಂಪಾದನೆ ನಿಂತು ಹೋಗಿದೆ ಎಂದು ಈ ರೀತಿಯಾಗಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

ಪ್ರತೀ ತಿಂಗಳು ಸಂಬಳ ಪಡೆಯುವವರೇ ತಿಂಗಳ ಕೊನೆಗೆ ಎಷ್ಟೊಂದು ಹೆಣಗಾಡುತ್ತಾರೆ ಆದರೆ ತಾವು ಸ್ಟೇಜ್ ಮೇಲೆ ಹಾಡು ಹೇಳಿ ಸಂಪಾದನೆ ಮಾಡಿದರೆ ಮಾತ್ರ ಜೀವನ ನಡೆಯುತ್ತದೆ ಎಂದರೆ ಅವರ ಜೀವನ ನಡೆಸುವುದು ಇನ್ನೆಷ್ಟು ಕಷ್ಟಕರ ಆಗಿರಬಹುದು

Leave A Reply

Your email address will not be published.