ಐಎಎಸ್ ಅಧಿಕಾರಿ ಡಿ.ಕೆ ರವಿಕುಮಾರ್ ಅವರ ಪತ್ನಿ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ರಾಜ ರಾಜೇಶ್ವರಿ ನಗರ ಉಪ ಚುನಾವನೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಐಎಎಸ್ ಅಧಿಕಾರಿ ಡಿ.ಕೆ. ರವಿ ಪತ್ನಿ ಹಾಗೂ ಹನುಮಂತ ರಾಯಪ್ಪನವರ ಪುತ್ರಿ ಕುಸುಮ ಸ್ಪರ್ಧಿಸಲಿದ್ದಾರೆ. ಕುಸುಮ ಹುಟ್ಟಿದ್ದು ಮಂಗಳವಾರ ಹಾಗಾಗಿ ಆ ದಿನ ಶುಭ ಸಂಕೇತ ಎಂದು ಜ್ಯೋತಿಷಿಗಳ ಸಲಹೆಯಂತೆ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಅಫಿಡೆವಿಟ್ ನಲ್ಲಿ ತಾನು 12 ಕೋಟಿ ಆಸ್ತಿ ಒಡತಿ ಎಂದು ಘೋಷಿಸಿಕೊಂಡಿದ್ದಾರೆ. ತನ್ನ ಹೆಸರಿನಲ್ಲಿ ಯಾವುದೇ ವಾಹನ ಹೊಂದಿಲ್ಲ ಎಂದು ಹೇಳಿದ್ದಾರೆ. ಪ್ರಮಾಣ ಪತ್ರದಲ್ಲಿ ಪತಿ ಡಿ.ಕೆ ರವಿ ಹೆಸರನ್ನು ಪ್ರಸ್ತಾಪಿಸಿಲ್ಲ. ಕುಸುಮಾ ಅವರು ಬುಧವಾರ ಬೆಳಿಗ್ಗೆ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ತಂದೆ ಮತ್ತು ಕುಟುಂಬಸ್ಥರೊಂದಿಗೆ ನಾಗರಬಾವಿ ಬಳಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕುಸುಮ ಪೂಜೆ ಸಲ್ಲಿಸಿದ್ದರು.

1.13 ಕೋಟಿ ರೂ. ಮೌಲ್ಯದ ಚರಾಸ್ತಿ,1.54 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 20.48 ಲಕ್ಷ ರೂ ಸಾಲ ಇದೆ, 2.45 ಲಕ್ಷ ರೂ ಷೇರು ಹಣ ಹೊಂದಿದ್ದಾರೆ,1.45 ಲಕ್ಷ ನಗದು ಹಣ ಇದೆ, 45 ಲಕ್ಷ ರೂ ಮೌಲ್ಯದ ಚಿನ್ನಾಭರಣ ಇದೆ. ಬಿಬಿಎಂಪಿ ವಾರ್ಡ್ 40 ರಲ್ಲಿ 1,500 ಚದರ ಅಡಿ ಹಾಗೂ 2,380 ಚದರ ಅಡಿ ವಿಸ್ತೀರ್ಣದ 2 ನಿವೇಶನ ಹೊಂದಿದ್ದಾರೆ. ಈ 2 ನಿವೇಶನದ ಸದ್ಯದ ಮಾರುಕಟ್ಟೆ ಮೌಲ್ಯ 1.37 ಕೋಟಿ, ಇದು ಅವರ ಆಸ್ತಿಯ ವಿವರವಾಗಿದೆ. ಕುಸುಮಾ ಅವರು ಬೆಂಗಳೂರಿನ ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 2016 ರಿಂದ ನಿರಾಂತಕ ಸ್ವಯಂ ಸೇವಾ ಸಂಸ್ಥೆಯಲ್ಲಿ ಪ್ರವರ್ತಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

Leave a Reply

Your email address will not be published. Required fields are marked *