ಮಹಿಳಾ ಸಬಲೀಕರಣಕ್ಕೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರ ಸರಕಾರವಂತೂ ಮಹಿಳೆಯರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಎಲ್ಲಾ ರಾಜ್ಯಗಳಲ್ಲೂ ಮಹಿಳಾ ಸಬಲೀಕರಣಕ್ಕೆ ವಿವಿಧ ರೀತಿಯ ಪ್ರಾಜೆಕ್ಟ್ಗಳಿವೆ. ಜೀವನದಲ್ಲಿ ಹುಟ್ಟಿದಮೇಲೆ ಏನಾದರೂ ಸಾಧಿಸಿ ತೀರಬೇಕು ಇಲ್ಲವಾದರೆ ನಾವು ಹುಟ್ಟಿದ್ದಕ್ಕೆ ಯಾವುದೇ ಪ್ರಯೋಜನ ಇರುವುದಿಲ್ಲ. ಅದಕ್ಕೆ ಮಾದರಿ ಆಗಿದ್ದಾರೆ ಈ ಮಹಿಳೆ. ಕಳೆದ ಒಂದು ತಿಂಗಳಿನಿಂದ ಮಹಿಳಾ ಆಟೋವಾಲಾಗಳು ನಗರದಲ್ಲಿ ದೊಡ್ಡ ಸುದ್ದಿ ಆಗ್ತಿದ್ದಾರೆ. ಅದೇ ರೀತಿ ಈ ಒಂದು ಮಹಿಳೆ ಕೂಡಾ ಕೆಲವು ತಿಂಗಳಿನಿಂದ ಆಟೋ ಓಡಿಸುತ್ತಿದ್ದ ಈ ಮಹಿಳೆ ಯಾರೆಂದು ನಿಜಾಂಶ ಹೊರಬರುತ್ತಿದ್ದಂತೆ ಎಲ್ಲರೂ ಶಾಕ್ ಆಗಿದ್ದಾರೆ. ಇಷ್ಟಕ್ಕೂ ಯಾರೂ ಆ ಮಹಿಳೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕೆಲವು ತಿಂಗಳುಗಳಿಂದ ಮೂವತ್ತೈದು ವರ್ಷದ ಅಂಕಿತ ಎಂಬ ಮಹಿಳೆ ಆಟೋ ಓಡಿಸುತ್ತಿದ್ದಾರೆ. ನಂತರ ಈ ಮಹಿಳೆ ಆಟೋ ಓಡಿಸುವ ಕೆಲಸ ಮಾಡಲು ಕಾರಣ ತಿಳಿದು ಪ್ರತಿಯೊಬ್ಬರು ಕೂಡ ಆಶ್ಚರ್ಯ ಪಟ್ಟಿದ್ದಾರೆ‌. ಅಷ್ಟಕ್ಕೂ ಈ ಮಹಿಳೆ ಯಾರು? ಇಷ್ಟೊಂದು ಫೇಮಸ್ ಆಗಲೂ ಕಾರಣವೇನು ಎಂಬುದನ್ನ ತಿಳಿಯೋಣ. ಈ ಸುದ್ದಿ ಕೇಳಿ ಬಂದಿರುವುದು ಅಹಮದಾಬಾದ್ ನಿಂದ. ಈಕೆ ಆಟೋ ಓಡಿಸಲು ಕಾರಣ ಇವರ ತಂದೆ. ಇವರ ತಂದೆ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಕೆಲವು ವರ್ಷಗಳ ಹಿಂದೆ ಅವರಿಗೆ ಕ್ಯಾನ್ಸರ್ ಕಾಯಿಲೆ ಬಂದ ಕಾರಣ ಅಂಕಿತ ಅವರೇ ಮನೆಯ ಎಲ್ಲಾ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡರು. ಅಂಕಿತ ಅವರಿಗೆ ಇಬ್ಬರು ತಂಗಿಯರು ಕೂಡ ಇದ್ದಾರೆ. ಅವರ ಓದು, ಮದುವೆ ಜವಾಬ್ದಾರಿಯನ್ನು ಅಂಕಿತಾ ಅವರು ವಹಿಸಿಕೊಂಡಿದ್ದಾರೆ‌‌.

ನಮಗೆಲ್ಲ ಅನ್ನಿಸಬಹುದು ಇದೇನು ದೊಡ್ಡ ವಿಷಯಾನ! ಇದೆಲ್ಲ ವಿಷಯ ಅಲ್ಲವೇ ಅಲ್ಲಾ ಈ ರೀತಿಯ ನೂರಾರು ಕಥೆಗಳನ್ನು ಟಿವಿಗಳಲ್ಲಿ, ಪೇಪರ್ ಗಳಲ್ಲಿ ನೋಡುತ್ತಿರುತ್ತೇವೆ ಅಂತ. ಆದರೆ ಯಾರಿಗೂ ಗೊತ್ತಿಲ್ಲದೇ ಇರುವ ವಿಷಯವೇನೆಂದರೆ ಚಿಕ್ಕ ವಯಸ್ಸಿನಲ್ಲಿ ಪೋಲಿಯೊ ಕಾರಣದಿಂದಾಗಿ ಅಂಕಿತ ಅವರ ಬಲಗಾಲನ್ನು ತೆಗೆಯಬೇಕಾಗಿತ್ತು. ಕೇವಲ ಒಂದು ಕಾಲಿನಿಂದಲೇ ತನ್ನ ಕುಟುಂಬದ ಭಾರವನ್ನು ಹೊರುತ್ತಿದ್ದಾರೆ. ಈ ಹಿಂದೆ ಅಂಕಿತ ಅವರು ಕಾಲ್ ಸೆಂಟರ್ ಗಳಲ್ಲಿ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಆದರೆ ಅಷ್ಟು ಸಮಯ ಕೆಲಸ ಮಾಡಿದರೂ ಸಹ ಅವರಿಗೆ ದೊರೆಯುತ್ತಿದ್ದ ಸಂಬಳ ತಿಂಗಳಿಗೆ ಕೇವಲ ಎಂಟು ಸಾವಿರ ರೂಪಾಯಿ ಮಾತ್ರ ಸಿಗುತ್ತಿತ್ತು.

ಬರುವ ಸಂಬಳದಲ್ಲಿ ಮನೆಯ ಬಾಡಿಗೆ, ತಂದೆಯ ಔಷದಿಗಳಿಗೆ, ತಂಗಿಯರ ವಿದ್ಯಾಭ್ಯಾಸಕ್ಕೆ, ಮನೆಯ ದಿನಸಿಗೆ ಸಾಲುತ್ತಿರಲಿಲ್ಲ. ಅದಕ್ಕೆ ಕಾಲ್ ಸೆಂಟರ್ ಕೆಲಸವನ್ನು ಬಿಟ್ಟು ಲೋನ್ ಮಾಡಿಸಿ ಒಂದು ಆಟೋವನ್ನು ಖರೀದಿ ಮಾಡಿಕೊಳ್ಳುತ್ತಾರೆ. ಇನ್ನೂ ಅಂಕಿತ ಅವರು ಎಂಟು ಗಂಟೆಗಳ ಕಾಲ ಆಟೋ ಓಡಿಸಿಕೊಂಡು ತಿಂಗಳಿಗೆ ಇಪ್ಪತ್ತರಿಂದ ಇಪ್ಪತ್ನಾಲ್ಕು ಸಾವಿರ ರೂಪಾಯಿ ದುಡಿಯಲು ಆರಂಭಿಸಿ ತಮ್ಮ ಕುಟುಂಬವನ್ನು ಸಂತೋಷವಾಗಿ ನೋಡಿಕೊಳ್ಳುತ್ತಿದ್ದಾರೆ. ಕೈ ಕಾಲು ಗಟ್ಟಿಮುಟ್ಟಾಗಿದ್ದರೂ ಸಹ ಸಾಕಷ್ಟು ಜನರು ಕೆಲಸ ಮಾಡಲು ಸೋಮಾರಿಗಳಾಗಿ ಬಿಡುತ್ತಾರೆ. ಆದರೆ ಇಂತಹವರನ್ನು ನೋಡಿದಾಗ ನಮಗೂ ಕೂಡ ಜೀವನದಲ್ಲಿ ಏನಾದರೂ ಒಂದನ್ನ ಸಾಧಿಸಲೇ ಬೇಕೆಂಬ ಛಲ ಹುಟ್ಟಿ ಬರುತ್ತದೆ. ಮತ್ತು ಎಷ್ಟೇ ಕಷ್ಟ ಬಂದರೂ ಸಹ ಹೆತ್ತ ತಂದೆ ತಾಯಿಯನ್ನು ನೊಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಹ ಕೈಬಿಡಬಾರದು. ತಂದೆ ತಾಯಿ ದೇವರ ಸಮಾನ. ಒಂದು ಕಾಲು ಇಲ್ಲದಿದ್ದರೂ ಸಹ ತನ್ನ ಕುಟುಂಬಕ್ಕಾಗಿ ಕಷ್ಟಪಡುತ್ತಿರುವ ಅಂಕಿತಾಗೆ ಒಳ್ಳೆಯದಾಗಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *