ಬಾಳಸಂಗಾತಿ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ಕೊಟ್ಟ ಧೃವ ಸರ್ಜಾ ಆದ್ರೆ ಮೇಘನಾ ಹೇಳಿದ್ದೇನು ನೋಡಿ

0 11

ಸ್ಯಾಂಡಲ್ವುಡ್ ನಟ ಆಕ್ಷನ್ ಪ್ರಿನ್ಸ್ ಖ್ಯಾತಿಯ ಧ್ರುವ ಸರ್ಜಾ ಅವರ ಮನೆಯಲ್ಲಿ ಇಂದು ವಿಶೇಷವಾದ ದಿನ. ಇದು ಕೇವಲ ವಿಶೇಷವಾದ ದಿನ ಮಾತ್ರವಲ್ಲದೆ ಒಂದು ಸಂತೋಷದ ದಿನ ಕೂಡ ಹೌದು ಎನ್ನಬಹುದು. ಏಕೆ ಈ ದಿನ ವಿಶೇಷ ಹಾಗೂ ಸಂತೋಷದ್ದು ಎನ್ನುವುದಾದರೆ, ಇಂದು ಧೃವ ಸರ್ಜಾ ಅವರ ಪತ್ನಿ ಪ್ರೇರಣಾ ಅವರ ಜನ್ಮ ದಿನವಾಗಿದೆ. ಪ್ರೇರಣ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಈಗಾಗಲೇ ಅವರಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ, ಪ್ರೇರಣಾ ಅವರ ಜನ್ಮದಿನಕ್ಕೆ ನಟಿ ಮೇಘನಾ ರಾಜ್ ಕೂಡಾ ಶುಭಾಶವನ್ನು ಕೋರಿದ್ದಾರೆ. ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಇಂದು ಪತ್ನಿಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.‌ ಧೃವ ಸರ್ಜಾ ಅವರ ಪತ್ನಿ ಪ್ರೇರಣಾ ಸರ್ಜಾ ಅವರ ಹುಟ್ಟುಹಬ್ಬದ ದಿನ ಸ್ನೇಹಿತರು ಆಪ್ತರು ಕುಟುಂಬದವರು ಧೃವ ಸರ್ಜಾ ಅವರ ಅಭಿಮಾನಿಗಳು ಎಲ್ಲರೂ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಶುಭ ಹಾರೈಸಿದ್ದಾರೆ. ಇನ್ನು ಧೃವ ಸರ್ಜಾ ಅವರೂ ಸಹ ಮಡದಿಯ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದು ಪತ್ನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಇನ್ನು ಕೆಲ ದಿನಗಳ ಹಿಂದಷ್ಟೇ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ಧೃವ ಹಾಗೂ ಪ್ರೇರಣಾ ಇದೀಗ ಪ್ರೇರಣಾರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ ಸರ್ಪ್ರೈಸ್ ನೀಡಿದ್ದಾರೆ. ಕಳೆದ ವರ್ಷ ಮದುವೆಯಾಗಿ ಕೆಲವೇ ದಿನಗಳಾದ್ದರಿಂದ ಪತ್ನಿ ಪ್ರೇರಣಾ ಸರ್ಜಾ ಹುಟ್ಟುಹಬ್ಬಕ್ಕಾಗಿ ಕನಕಪುರ ರಸ್ತೆಯಲ್ಲಿ ಫಾರ್ಮ್ ಹೌಸ್ ಒಂದನ್ನು ಕೊಂಡುಕೊಂಡು ಅದನ್ನೇ ಉಡುಗೊರೆಯಾಗಿ ನೀಡಿದ್ದರು. ಅದೇ ತೋಟದಲ್ಲಿ ಸತ್ಯ ನಾರಾಯಣ ಪೂಜೆ ಮಾಡಿಸಿ ಕುಟುಂಬದೊಂದಿಗೆ ಆಚರಿಸಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಬೇರೆಯೇ ಇದೆ. ಕುಟುಂಬದೊಂದಿಗೆ ಆಚರಣೆಗೆ ಸಂದರ್ಭ ಸರಿಯಿಲ್ಲದ ಕಾರಣ ಪ್ರೇರಣಾ ಅವರನ್ನು ವಿಶೇಷ ಜಾಗವೊಂದಕ್ಕೆ ಕರೆದೊಯ್ದು ಆಚರಣೆ ಮಾಡಿದ್ದಾರೆ.

ಬಾಲ್ಯದ ಗೆಳತಿಯಾಗಿದ್ದ ಪ್ರೇರಣಾ ಧೃವ ಸರ್ಜಾರ ಬಾಳ ಸಂಗಾತಿಯಾದರು. ಧೃವ ಸರ್ಜಾ ಹಾಗೂ ಪ್ರೇರಣಾ ಸರ್ಜಾ ಕಳೆದ ವರ್ಷ ನವೆಂಬರ್ 24 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಹಳಷ್ಟು ವರ್ಷಗಳಿಂದಲೂ ಪ್ರೀತಿಸುತ್ತಿದ್ದ ಈ ಜೋಡಿ ಇಬ್ಬರೂ ಸಹ ಜೀವನದಲ್ಲಿ ಸೆಟಲ್ ಆದ ಬಳಿಕ ಮದುವೆಯ ನಿರ್ಧಾರ ಮಾಡಿದರು. ಇತ್ತ ಧೃವ ಸರ್ಜಾ ತಮ್ಮ ಸಿನಿಮಾ ಕೆಲಸದಲ್ಲಿ ತೊಡಗಿಕೊಂಡರೆ ಅತ್ತ ಪ್ರೇರಣಾ ಸರ್ಜಾ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿದ್ದರು. ಸರ್ಜಾ ಅವರದ್ದು ಕೂಡು ಕುಟುಂಬವಾದ್ದರಿಂದ ಕುಟುಂಬವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಪ್ರೇರಣಾ ಆ ಮನೆಗೆ ತಕ್ಕ ಸೊಸೆಯಾದರು. ಮೇಘನಾಗೆ ಒಳ್ಳೆಯ ತಂಗಿಯಾದರು. ಇನ್ನು ಚಿರು ಸರ್ಜಾ ಅವರು ಈ ಮುನ್ನ ಪ್ರೇರಣಾ ಅವರ ಬಗ್ಗೆ ಮಾತನಾಡಿ ನಮ್ಮ ಮನೆಗೆ ಪ್ರೇರಣಾ ಒಂದು ರೀತಿ ಪ್ರೊಫೆಸರ್ ಇದ್ದ ಹಾಗೆ. ನಮ್ಮೆಲ್ಲರ ತಪ್ಪನ್ನು ತಿದ್ದಿ ಹೀಗಲ್ಲಾ ಹಾಗೆ ನಡೆದುಕೊಳ್ಳಬೇಕು ಎಂದು ತಿಳಿಸಿ ಹೇಳುತ್ತಾಳೆ ಅವಳಿಗೆ ನಮ್ಮ ಫ್ಯಾಮಿಲಿಗೆ ವೆಲ್ಕಮ್ ಎಂದಿದ್ದರು. ಬೀಚ್ ಒಂದಕ್ಕೆ ಪ್ರೇರಣಾರನ್ನು ಕರೆದೊಯ್ದಿರುವ ಧೃವ ಸರ್ಜಾ ಅಲ್ಲಿಯೇ ಸಂಪೂರ್ಣ ಸ್ಥಳಕ್ಕೆ ದೀಪಾಲಂಕಾರ ಮಾಡಿ ಪಟಾಕಿ ಸಿಡಿಸಿ ಮಡದಿಯ ಜೊತೆ ಸಮಯ ಕಳೆಯುವ ಮೂಲಕ ಹುಟ್ಟುಹಬ್ಬ ಆಚರಿಸಿ. ನನ್ನ ಸ್ನೇಹಿತೆ , ನನ್ನ ಹೆಂಡತಿ. ನನ್ನ ಪ್ರೀತಿ ಎಲ್ಲವೂ ನೀನೆ. ಈಗ ಹಾಗೂ ಸದಾ ನಿನ್ನೊಂದಿಗೆ ಇರುವೆ. ಹುಟ್ಟುಹಬ್ಬದ ಶುಭಾಶಯಗಳು ಮೈ ಲವ್ ಎಂದು ಧೃವ ಸರ್ಜಾ ಶುಭಾಶಯ ತಿಳಿಸಿದ್ದಾರೆ.

ಇನ್ನು ಪ್ರೇರಣಾ ಅವರಿಗೆ ಶುಭಾಶಯ ತಿಳಿಸಿದ ಮೇಘನಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡುವ ಮೂಲಕ ಪ್ರೇರಣಾ ಅವರಿಗೆ ಜನ್ಮದಿನದ ಶುಭಾಶಯಗಳು ತಿಳಿಸಿದ್ದಾರೆ. ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾನು ಮತ್ತು ಪ್ರೇರಣಾ ಇಬ್ಬರೂ ಜೊತೆಯಾಗಿರುವ ಒಂದು ಸುಂದರವಾದ ವೈಟ್ ಅಂಡ್ ಬ್ಲಾಕ್ ಫೋಟೋವನ್ನು ಹಂಚಿಕೊಂಡಿದ್ದಾರೆ ಪೋಟೋದ ಜೊತೆಗೆ ಪ್ರೇರಣಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ ಮೇಘನಾ. ಮೇಘನಾ ಜನ್ಮದಿನದ ಶುಭಾಶಯ ಹೇಳುತ್ತಾ, ಸದಾ ಅಮೇಜಿಂಗ್ ಆಗಿರು ಎಂದು ಹಾರೈಸಿದ್ದಾರೆ.‌ ಮೇಘನಾ ಸರ್ಜಾ ಅವರು ತಂಗಿ ಪ್ರೇರಣಾ ರಿಗೆ ಭಾವನಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ ಮೇಘನಾ ರಾಜ್ ಅವರು ಹುಟ್ಟುಹಬ್ಬದ ಶುಭಾಶಯಗಳು ಸೋಲ್ , ನೀನೊಂದು ಸುಂದರ ಆತ್ಮ. ಎಂದು ಬರೆದು ಪ್ರೇರಣಾ ಒಟ್ಟಿಗಿನ ಫೋಟೋ ಹಂಚಿಕೊಂಡಿದ್ದಾರೆ. ಇನ್ನು ಫೋಟೋಗೆ ಕಮೆಂಟ್ ಮೂಲಕ ಅಭಿಮಾನಿಗಳು ಸಹ ಪ್ರೇರಣಾರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಪ್ರೇರಣಾ ಸರ್ಜಾ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿ ಧನ್ಯವಾದಗಳನ್ನು ತಿಳಿಸಿ ಹೃದಯದ ಎಮೋಜಿ ಹಾಕಿಂಡು ಥ್ಯಾಂಕ್ ಯು ಸಿಲ್ ಮಾ ಎಂದಿದ್ದಾರೆ

Leave A Reply

Your email address will not be published.