20 ರೂಪಾಯಿಗೆ ಹೊಟ್ಟೆತುಂಬ ಊಟ ನೀಡುತ್ತಿದ್ದ ಅಜ್ಜ, ಆಮೇಲೆ ಗೊತ್ತಾಯಿತು ಅಸಲಿ ಸತ್ಯ.!

0 3

ಹೋಟೆಲ್ ನಡೆಸುವುದೇ ಲಾಭ ಮಾಡಲು, 50-1000 ರೂಪಾಯಿವರೆಗೂ ಬಗೆ ಬಗೆಯ ಊಟದ ಬೆಲೆ ನೋಡಬಹುದು ಆದರೆ ಕೇವಲ 20 ರೂಪಾಯಿಗೆ ಹೊಟ್ಟೆ ತುಂಬ ಊಟ ಕೊಡುವ ಡಾಬಾಗಳು ಇವೆ. ಅದು ಎಲ್ಲಿದೆ, ಊಟ ಕೊಡುವವರು ಯಾರೂ, ಅದಕ್ಕೆ ಕಾರಣವೇನು ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸಾಮಾನ್ಯವಾಗಿ ನಗರಗಳಲ್ಲಿ ರೋಡ್ ಗಳ ಬದಿಯಲ್ಲಿ ಮನೆಯಲ್ಲಿ ಅಡುಗೆ ಮಾಡಿಕೊಂಡು ಬಂದು ಮಾರಾಟ ಮಾಡುತ್ತಾರೆ. ಕೆಲವು ತಿಂಗಳ ಹಿಂದೆ ಬಾಬಾ ಕಾ ಡಾಬಾ ಎಂಬ ವಯಸ್ಸಾದ ಗಂಡ ಹೆಂಡತಿಯ ವಿಡಿಯೋ ವೈರಲ್ ಆಗಿದ್ದು ಎಲ್ಲರೂ ನೋಡಿರುತ್ತೀರಿ. ಲಾಕ್ ಡೌನ್ ಕಾರಣದಿಂದ ನಮಗೆ ವ್ಯಾಪಾರ ಆಗುತ್ತಿಲ್ಲ ದಯವಿಟ್ಟು ಸಹಾಯ ಮಾಡಿ ಎಂದು ಕೇಳಿದ್ದರು ಈ ವಿಡಿಯೋ ಯೂ ಟ್ಯೂಬ್ ನಲ್ಲಿ ಲಾಕ್ ಡೌನ್ ಸಮಯದಲ್ಲಿ ವೈರಲ್ ಆಗಿತ್ತು. ನಂತರ ಸಾವಿರಾರು ಮಂದಿ ಅವರ ಹೋಟೆಲ್ ಗೆ ಭೇಟಿ ನೀಡಿ ಸಹಾಯ ಮಾಡಿದರು ಇದೆ ರೀತಿ ಗುಜರಾತ್ ನ ಮೂರಬ್ಬಾ ನಗರದಲ್ಲಿ ಬಚ್ಚುದಾದಾ ಎಂಬ ಹೆಸರಿನ ಒಂದು ಡಾಬಾ ಇದೆ. ಈ ಡಾಬಾದ ಮಾಲಿಕ ಬಚ್ಚುದಾದಾ ಅವರಿಗೆ 72 ವರ್ಷ ವಯಸ್ಸು ಅಲ್ಲದೇ ಅವರ ಡಾಬಾ ಬಹಳ ಚಿಕ್ಕದಾಗಿದೆ. ಇವರು ಪ್ರತಿದಿನ 150-200 ಜನರಿಗೆ ಊಟವನ್ನು ನೀಡುತ್ತಾರೆ, ಊಟಕ್ಕೆ ಕೇವಲ 20 ರೂಪಾಯಿ. ಅವರ ಡಾಬಾದಲ್ಲಿ ಸಿಗುವ ಊಟದಲ್ಲಿ ಮೂರು ಬಗೆ ಬಗೆಯಾದ ಸಾರು, ಪಲ್ಯ, 3 ರೊಟ್ಟಿ ಮತ್ತು ಅನ್ನ ಇರುತ್ತದೆ. ಇದೇ ಊಟಕ್ಕೆ ಬೇರೆ ಕಡೆ ಕನಿಷ್ಟ 50-80 ರೂಪಾಯಿ ಕೊಡಬೇಕಾಗುತ್ತದೆ.

ಕೆಲವರಿಗೆ ಅನುಮಾನ ಬಂದು ತಾತನ ಹತ್ತಿರ ನೀವು ಕೇವಲ 20 ರೂಪಾಯಿಗೆ ಊಟ ಕೊಡಲು ಕಾರಣ ಏನು ಎಂದು ಕೇಳಿದ್ದಾರೆ ಅದಕ್ಕೆ ಅವರು ಕೊರೋನ ಬಂದ ಮೇಲೆ ದೇವರು ನಮಗೆ ಪಾಠ ಕಲಿಸಿದ್ದಾನೆ. ಜೀವನದಲ್ಲಿ ದುಡ್ಡು ಮಾತ್ರ ಮುಖ್ಯವಲ್ಲ, ಪ್ರತಿಯೊಬ್ಬರು ಒಂದಲ್ಲ ಒಂದು ದಿನ ಸಾಯಲೇಬೇಕು, ಹೋಗುವಾಗ ಏನನ್ನು ನಾವು ಹೊತ್ತುಕೊಂಡು ಹೋಗುವುದಿಲ್ಲ. ನನಗೆ ಜನರಿಗೆ ಫ್ರೀಯಾಗಿ ಊಟ ಕೊಡಬೇಕು ಎಂಬ ಆಸೆ ಇದೆ ಆದರೆ ಆ ದೇವರು ನನಗೆ ಅಷ್ಟು ಶಕ್ತಿಯನ್ನು ನೀಡಿಲ್ಲ ಆದಕ್ಕೆ ನಾನು ಅಡುಗೆ ಮಾಡಲು 20 ರೂಪಾಯಿ ಖರ್ಚಾಗುತ್ತದೆ ಅಷ್ಟನ್ನು ಮಾತ್ರ ತೆಗೆದುಕೊಳ್ಳುತ್ತೇನೆ. ಹಸಿದಿದ್ದು 20 ರೂಪಾಯಿ ಕೊಡಲು ಸಾಧ್ಯವಿಲ್ಲದಿದ್ದರೆ ಅವರಿಗೆ ಫ್ರೀಯಾಗಿ ಊಟ ಕೊಡುತ್ತೇನೆ ಎಂದು ಹೇಳಿದ್ದಾರೆ. ಇಂದಿಗೂ ಇಂತಹ ವ್ಯಕ್ತಿಗಳು ನಮ್ಮ ಮಧ್ಯೆ ಇರುವುದು ನಿಜಕ್ಕೂ ಆಶ್ಚರ್ಯವಾಗುತ್ತದೆ. ನಾವು ಇರುವಷ್ಟು ದಿವಸ ಜಗಳ, ದ್ವೇಷ ಮಾಡದೆ ಎಲ್ಲರೊಂದಿಗೂ ನಗು ನಗುತಿದ್ದು ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು.

Leave A Reply

Your email address will not be published.