ಮೂಲವ್ಯಾಧಿ ಸಮಸ್ಯೆಗೆ ಆಪರೇಷನ್ ಇಲ್ಲದೆ ಗುಣಪಡಿಸುವ ಸಸ್ಯ

0 48

ಕೆಲವು ರೋಗಕ್ಕೆ ವೈದ್ಯರನ್ನು ಸಂಪರ್ಕಿಸುವುದಕ್ಕಿಂತ ನಿಸರ್ಗದ ಮೊರೆ ಹೋಗುವುದೇ ಸರಿ. ಅಂತಹ ರೋಗಗಳಲ್ಲಿ ಮೂಲವ್ಯಾಧಿ ರೋಗವು ಒಂದು. ಈ ರೋಗಕ್ಕೆ ನಿಸರ್ಗದಲ್ಲಿ ಸಿಗುವ ಗಿಡಗಳಿಂದ ಕಡಿಮೆ ಸಮಯದಲ್ಲಿ ನಿವಾರಣೆ ಮಾಡಿಕೊಳ್ಳಬಹುದು. ಹಾಗಾದರೆ ಮೂಲವ್ಯಾಧಿ ಸಮಸ್ಯೆಗೆ ಪರಿಹಾರ ನೀಡುವ ಗಿಡ ಯಾವುದು ಹಾಗೂ ಅದರ ಬಳಕೆಯ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಮೂಲವ್ಯಾಧಿ ಫೈಲ್ಸ್ ಸಮಸ್ಯೆ ಎದುರಿಸುತ್ತಿದ್ದಾರೆ. ವೈದ್ಯರ ಬಳಿ ಹೋದರೆ ಕೆಲವರು ಆಪರೇಷನ್ ಮಾಡಬೇಕಾಗುತ್ತದೆ ಎಂದು ಹೇಳುತ್ತಾರೆ ಆದರೆ ಆಪರೇಷನ್ ಮಾಡಿಸಿಕೊಳ್ಳಲು ಬಹಳಷ್ಟು ಜನರಿಗೆ ಭಯವಿದೆ. ಇನ್ನು ಕೆಲವು ಕಡೆ ಮೂಲವ್ಯಾಧಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಬೋರ್ಡ್ ಹಾಕಿಕೊಂಡು ಹಣ ಪಡೆದುಕೊಂಡು ಮೋಸ ಮಾಡುತ್ತಾರೆ. ಮೂಲವ್ಯಾಧಿಯಲ್ಲಿ ಅನೇಕ ರೀತಿಗಳಿವೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಮೂಲವ್ಯಾಧಿ ಸಮಸ್ಯೆ ಇರುತ್ತದೆ. ಕೆಲವು ಸಲ ಮಲ ವಿಸರ್ಜನೆ ಮಾಡುವಾಗ ರಕ್ತ ಬರುತ್ತದೆ ಮೂಲವ್ಯಾಧಿ ಆಗಿದೆ ಎಂದು ಜನರು ಹೆದರುತ್ತಾರೆ ಹೆದರಿಕೆಯಿಂದ ಅದು ಉಲ್ಬಣಗೊಳ್ಳುತ್ತದೆ. ಹೊಟ್ಟೆಯಲ್ಲಿ ಮಲ ಗಟ್ಟಿಯಾಗಿ ಮಲ ವಿಸರ್ಜನೆ ಮಾಡುವಾಗ ಪ್ರೆಷರ್ ಹಾಕಿದಾಗ ರಕ್ತ ಬರುತ್ತದೆ ಇದು ಫೈಲ್ಸ್ ಆಗಿರುವುದಿಲ್ಲ.

ಮೊಳೆ ರೋಗ ಎಂಬುದು ಮೂಲವ್ಯಾಧಿಯ ಒಂದು ರೂಪ, ಗುದದ್ವಾರದ ಸುತ್ತಲೂ ಚರ್ಮ ಮೊಳೆಯಂತೆ ಬರುತ್ತದೆ ಇದರಿಂದ ಬಹಳ ಹಿಂಸೆ ಆಗುತ್ತದೆ. ಮಲಮೂತ್ರ ವಿಸರ್ಜನೆ ಮಾಡಲು ಕಷ್ಟಪಡುತ್ತಾರೆ. ಮೂಲವ್ಯಾಧಿ ಸಮಸ್ಯೆ ಅನುಭವಿಸುತ್ತಿರುವವರು ಕುಳಿತುಕೊಳ್ಳಲು ಕಷ್ಟಪಡುತ್ತಾರೆ. ತುತ್ತಿ ಗಿಡ ಅಥವಾ ತುತ್ತಿ ಫಲ ಎಂದು ಕರೆಯುತ್ತಾರೆ. ಮೂಲವ್ಯಾಧಿ ಅಥವಾ ಗುದದ್ವಾರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಸಮಸ್ಯೆಗಳಿಗೆ ಈ ಗಿಡ ಉತ್ತಮ ಔಷಧಿಯಾಗಿದೆ. ತುತ್ತಿ ಗಿಡದ ಎಲೆಗಳನ್ನು ಬಿಡಿಸಿಕೊಂಡು ಅರೆದು ಅದಕ್ಕೆ ಅರಿಶಿಣ, ಹರಳೆಣ್ಣೆ, ಸ್ವಲ್ಪ ಉಪ್ಪು ಸೇರಿಸಿ ರಾತ್ರಿ ಮಲಗುವಾಗ ಗುದದ್ವಾರಕ್ಕೆ ಹಚ್ಚಿಕೊಂಡು ಟೈಟ್ ಆಗಿ ಬಟ್ಟೆ ಕಟ್ಟಿಕೊಂಡು ಮಲಗಬೇಕು. ತುತ್ತಿ ಸೊಪ್ಪನ್ನು ಅರೆದು ಸ್ಟೋರ್ ಮಾಡಬಾರದು ಹಚ್ಚಿಕೊಳ್ಳುವಾಗಲೆ ಅರೆದು ಪೇಸ್ಟ್ ಮಾಡಿಕೊಂಡು ಹಚ್ಚಿಕೊಳ್ಳಬೇಕು. ಮೂರು ದಿನ ಹೀಗೆ ಹಚ್ಚಿಕೊಳ್ಳುವುದರಿಂದ ಮೂಲವ್ಯಾಧಿ ಅಥವಾ ಗುದದ್ವಾರ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಹಾಗೆಯೇ ಇನ್ನೊಂದು ಗಿಡ ಕನ್ನೆ ಸೊಪ್ಪು ಇದನ್ನು ಎಲ್ಲರೂ ನೋಡಿರ್ತೀರಾ. ಕೆಲವರು ಈ ಸೊಪ್ಪಿನಿಂದ ಸಾಂಬಾರ್ ಮಾಡುತ್ತಾರೆ. ಈ ಸೊಪ್ಪಿನಿಂದಲೂ ಗುದದ್ವಾರಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಈ ಎರಡು ಗಿಡಗಳಿಂದ ಮೂಲವ್ಯಾಧಿ, ಮೊಳೆರೋಗ, ಮಲ ವಿಸರ್ಜನೆ ಮಾಡುವಾಗ ರಕ್ತ ಬರುವುದು ಈ ಎಲ್ಲಾ ಸಮಸ್ಯೆಯಿಂದ ನಿವಾರಣೆ ಮಾಡಿಕೊಳ್ಳಬಹುದು. ನಮ್ಮ ನಿಸರ್ಗದಲ್ಲಿ, ಸುತ್ತಮುತ್ತ ಇರುವ ಬಹುತೇಕ ಗಿಡಗಳು ಔಷಧೀಯ ಗುಣವನ್ನು ಹೊಂದಿದೆ. ಗಿಡಮೂಲಿಕೆಯನ್ನು ಬಳಸಿ ತಯಾರಿಸಿದ ಔಷಧಿಯನ್ನು ಬಳಸುವುದರಿಂದ ಸುಲಭವಾಗಿ ವಾಸಿಯಾಗುತ್ತದೆ. ಮೂಲವ್ಯಾಧಿ ಇದ್ದವರು ವೈದ್ಯರನ್ನು ಸಂಪರ್ಕಿಸಿದರೆ ಆಪರೇಷನ್ ಮಾಡುತ್ತಾರೆ ಇದರಿಂದ ಹಿಂಸೆಯನ್ನು ಪಡಬೇಕಾಗುತ್ತದೆ ಆದರೆ ಈ ಗಿಡಗಳಿಂದ ಮೂರರಿಂದ ನಾಲ್ಕು ದಿನದಲ್ಲಿ ಸಂಪೂರ್ಣ ನಿವಾರಣೆ ಮಾಡಿಕೊಳ್ಳಬಹುದು. ಈ ಮಾಹಿತಿ ಬಹಳ ಉಪಯುಕ್ತವಾಗಿದ್ದು ಎಲ್ಲರಿಗೂ ತಿಳಿಸಿ.

Leave A Reply

Your email address will not be published.