ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಹತ್ತಾರು ಬಗೆಯ ಸಸ್ಯ ಪ್ರಭೇದವನ್ನು ಕಾಣಬಹುದು, ಆದ್ರೆ ಎಲ್ಲ ಸಸ್ಯಗಳು ಕೂಡ ಆರೋಗ್ಯಕರ ಲಾಭವನ್ನು ನೀಡದೆ ಇರಬಹುದು ಆದ್ರೆ ಒಂದಿಷ್ಟು ಮರ ಗಿಡಗಳಂತೂ ಒಳ್ಳೆಯ ಆರೋಗ್ಯವನ್ನು ವೃದ್ಧಿಸುವಲ್ಲಿ ಹೆಚ್ಚು ಸಹಕಾರಿ ಅನ್ನೋದನ್ನ ಹೇಳಲಾಗುತ್ತದೆ. ಸಾಮಾನ್ಯವಾಗಿ ಅರಳಿಮರ ಅನ್ನೋದು ಬಹುತೇಕ ಜನರಿಗೆ ಗೊತ್ತಿರುವಂತ ಮರ ಇದು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾಣಸಿಗುತ್ತದೆ ಕೆಲವೊಂದು ಗ್ರಾಮಗಳ ಮುಂದೇನೆ ಇರುತ್ತದೆ ಇದನ್ನು ಕೆಲ ಮಹಿಳೆಯರು ಪೂಜೆ ಮಾಡುವುದುಂಟು. ಪೂಜೆಗೆ ಅಷ್ಟೇ ಸೀಮಿತವಾಗದೆ ಇದರ ಎಲೆ ತೊಗಟೆ ಔಷಧವಾಗಿ ಕೆಲಸ ಮಾಡುತ್ತೆ. ಬನ್ನಿ ಈ ಮೂಲಕ ಅರಳಿ ಮರ ಹೆಗೆಲ್ಲ್ಯಾಪ್ರಯೋಜನಕಾರಿ ಅನ್ನೋದನ್ನ ತಿಳಿದುಕೊಳ್ಳೋಣ.

ಮೊದಲನೆಯದಾಗಿ ಪಿತ್ತದ ಸಮಸ್ಯೆ ಇದ್ರೆ ದಿನನಿತ್ಯ ಒಂದು ಟೀಸ್ಪೂನ್ ಅರಳಿ ಎಲೆ ರಸವನ್ನು ಕುಡಿಯುವುದರಿಂದ ಪಿತ್ತದ ಸಮಸ್ಯೆಯನ್ನು ನಿವಾರಿಸಬಹುದು. ಹೊಟ್ಟೆಯ ಸಮಸ್ಯೆಗಳಿಗೆ ಅರಳಿ ಮರದ ಶುದ್ಧವಾದ ಎಲೆಯ ರಸವನ್ನು ಮಾಡಿಕೊಂಡು ಕುಡಿಯಬಹುದು.

ಇನ್ನು ದೇವಸ್ಥಾನದ ಬಳಿ ಇರುವಂತ ಅರಳಿ ಮರಕ್ಕೆ ಕೆಲವು ಮಹಿಳೆಯರು ಪ್ರದಕ್ಷಿಣೆ ಹಾಕಿ ಪೂಜಿಸುತ್ತಾರೆ ಆದ್ರೆ ಇದು ಕೆಳವಳ ಸಂಪ್ರದಾಯವಲ್ಲ ಇದರಲ್ಲಿ ಆರೋಗ್ಯವು ಕೂಡ ಇದೆ. ಹೌದು ಆಮ್ಲಜನಕವನ್ನು ಹೆಚ್ಚಾಗಿ ಹೊರಹಾಕುವ ಮರಗಳಲ್ಲಿ ಅಶ್ವತ್ಥ ವೃಕ್ಷ ಕೂಡ ಒಂದು. ಹಾಗೆಯೇ ಔಷಧೀಯ ದೃಷ್ಟಿಕೋನದಿಂದ ಅರಳಿ ಮರ ಅತ್ಯಂತ ಉಪಯುಕ್ತ. ಅರಳಿ ಮರದ ಎಲೆಗಳು ಮತ್ತು ಅದರ ತೊಗಟೆ, ರೆಂಬೆ ಸೇರಿದಂತೆ ಇದರ ಎಲ್ಲಾ ಭಾಗಗಳನ್ನು ಬಳಸಿ ಅನೇಕ ರೀತಿಯ ರೋಗಗಳನ್ನು ತಡೆಗಟ್ಟಬಹುದು.

ಉಸಿರಾಟದ ಸಮಸ್ಯೆಗಳಿಗೆ ಹಾಗು ಅಸ್ತಮಾ ಸಮಸ್ಯೆಗೆ ಈ ಅರಳಿ ಮರ ಹೇಗೆ ಸಹಕಾರಿ ಅನ್ನೋದನ್ನ ನೋಡುವದಾದರೆ, ಮರದ ತೊಗಟೆಯ ಒಳ ಭಾಗವನ್ನು ತೆಗೆದು ಒಣಗಿಸಿ. ಅದರ ನಂತರ ಆ ಒಣಗಿದ ಭಾಗದ ಪುಡಿಯನ್ನು ತಯಾರಿಸಿ ಅದನ್ನು ನೀರಿನೊಂದಿಗೆ ಔಷಧಿಯಾಗಿ ತೆಗೆದುಕೊಳ್ಳಿ. ಹೀಗೆ ನಿಯಮಿತವಾಗಿ ಮಾಡುವುದರಿಂದ ಅನೇಕ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಬಹುದು. ಅಷ್ಟು ಮಾತ್ರ ಅಲ್ಲದೆ ಈ ಅರಳಿ ಮರದ ಎಲೆಯನ್ನು ಹಾಲಿನಲ್ಲಿ ಕುದಿಸಿ ಕುಡಿಯಬಹುದು. ಹೀಗೆ ಮಾಡುವುದರಿಂದ, ಅಸ್ತಮಾದ ಸಮಸ್ಯೆ ನಿವಾರಣೆಯಾಗುತ್ತದೆ.

ಅರಳಿ ಮರದಲ್ಲಿ ಇರುವ ಮತ್ತೊಂದು ವಿಶೇಷತೆ ಏನು ಅಂದ್ರೆ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅದರ ಮೃದುವಾದ ಎಲೆಗಳನ್ನು ನಿಯಮಿತವಾಗಿ ಅಗಿಯುವುದರಿಂದ ದೇಹದೊತ್ತಡ ಕಡಿಮೆಯಾಗುತ್ತದೆ. ಹಾಗೆಯೇ ಯೌವ್ವನವನ್ನು ಕಾಪಾಡಿಕೊಳ್ಳಬಹುದು. ಶರೀರದ ಚರ್ಮ ಸಮಸ್ಯೆಗಳು ತುರಿಕೆ ಮತ್ತು ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಅರಳಿ ಮರದ ತೊಗಟೆ ತುಂಬಾ ಪ್ರಯೋಜನಕಾರಿ. ಈ ತೊಗಟೆಯನ್ನು ಪುಡಿ ಮಾಡಿ ತುರಿಕೆ ಇರುವ ಜಾಗದಲ್ಲಿ ಹಚ್ಚುವುದರಿಂದ ಸಮಸ್ಯೆ ನಿವಾರಿಸಿಕೊಳ್ಳಬಹುದು. ಹೀಗೆ ಹತ್ತಾರು ಲಾಭಗಳನ್ನು ಈ ಅರಳಿ ಮರದಿಂದ ಪಡೆಯಬಹುದಾಗಿದೆ, ನಿಮಗೆ ಈ ಆರೋಗ್ಯಕಾರಿ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಮರೆಯದೆ ಶೇರ್ ಮಾಡಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

By

Leave a Reply

Your email address will not be published. Required fields are marked *