ಹಿಂದಿನ ಕಾಲದಲ್ಲಿ ಒಂದು ಮಾತು ಇತ್ತು ದಿನಕ್ಕೆ ಒಂದು ಸೇಬು ಹಣ್ಣನ್ನು ಸೇವಿಸಿ ಹಾಗೂ ವೈದ್ಯರಿಂದ ದೂರ ಇರಿ ಎಂದು. ಆದರೆ ಇತ್ತೀಚೆಗೆ ಈ ಮಾತನ್ನು ಸ್ವಲ್ಪ ಬದಲಾಯಿಸಿ ದಿನಕ್ಕೆ ಒಂದು ಪೇರಲೆ ಅಥವಾ ಸಿಬೇಕಾಯಿ ಅಥವಾ ಹಣ್ಣನ್ನು ಸೇವಿಸುವುದರಿಂದ ವೈದ್ಯರಿಂದ ದೂರವಿರಬಹುದು. ವಿಟಮಿನ್ ಸಿ ಹೆಚ್ಚಾಗಿರುವಂತಹ ನಮ್ಮ ದೇಹಕ್ಕೆ ಹಲವಾರು ಆರೋಗ್ಯಕರ ಲಾಭವನ್ನು ತಂದು ಕೊಡುವಂತಹ ಎಲ್ಲಾ ಕಡೆಯೂ ಲಭ್ಯವಿರುವ ಸೀಬೆಹಣ್ಣು ಅಥವಾ ಪೇರಲೆ ಹಣ್ಣು ಇದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

100ಗ್ರಾಂ ಪೇರಳೆ ಹಣ್ಣಿನಲ್ಲಿ 350 ಮಿಲಿ ಗ್ರಾಂ ಗಿಂತಲೂ ಹೆಚ್ಚು ವಿಟಮಿನ್ ಸಿ ನಮಗೆ ದೊರೆಯುತ್ತದೆ. ನಾವು ಪ್ರತಿದಿನ ಒಂದೇ ಒಂದು ಸೀಬೆ ಹಣ್ಣನ್ನು ಸೇವಿಸುವುದರಿಂದ ನಮಗೆ ಸಾಕಷ್ಟು ವಿಟಮಿನ್ ಸಿ ದೊರೆಯುತ್ತದೆ. ಸಾಕಷ್ಟು ಪೋಷಕಾಂಶಗಳು ಹಾಗೂ ನಾರಿನ ಅಂಶ ಸಿಗುತ್ತದೆ ಇದನ್ನು ಸೇವಿಸುವುದರಿಂದ ಬಿಪಿ ಹತೋಟಿಗೆ ಬರುತ್ತದೆ ಸಕ್ಕರೆಯ ಅಂಶ ಇಲ್ಲದೆ ಇರುವುದರಿಂದ ಡಯಾಬಿಟಿಸ್ ಇರುವವರು ಸಹ ಪೇರಳೆ ಹಣ್ಣು ಸೇವಿಸಬಹುದು. ಸೀಬೆ ಹಣ್ಣಿನಲ್ಲಿ ಇರುವಂತಹ ನಾರಿನ ಅಂಶ ಮಲಬದ್ಧತೆ ಹಾಗೂ ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡುತ್ತದೆ. ಕೆಂಪು ಸೀಬೆ ಅಥವಾ ಕೆಂಪು ಪೇರಲೆ ಹಣ್ಣು ಇದರಲ್ಲಿ ಆಂಟಿಆಕ್ಸಿಡೆಂಟ್ ಹೆಚ್ಚಾಗಿರುವುದರಿಂದ ಹೃದಯಕ್ಕೆ ತುಂಬಾ ಒಳ್ಳೆಯದು. ಈ ರೀತಿ ನೂರಾರು ಪೋಷಕಾಂಶಗಳನ್ನು ಹೊಂದಿರುವ ಅತ್ಯಂತ ಉಪಯುಕ್ತ ಕಾರಿ ಹಣ್ಣು ಅಂದರೆ ಅದು ಸೀಬೆಹಣ್ಣು ಅಂತ ಹೇಳಬಹುದು. ಆದರೆ ಕೆಲವರು ಸೀಬೆ ಹಣ್ಣನ್ನು ತಿನ್ನುವುದರಿಂದ ತಮಗೆ ಬೇಗ ಗಂಟಲು ಉರಿ ಪ್ರಾರಂಭವಾಗುತ್ತದೆ ಶೀತ ಆಗುತ್ತದೆ ಅಂತ ಹೇಳುತ್ತಾರೆ. ಇದರಲ್ಲಿರುವ ಹೇರಳವಾದ ಪೋಷಕಾಂಶಗಳ ಪ್ರಭಾವದಿಂದ ಒಮ್ಮೊಮ್ಮೆ ದೇಹದ ಪ್ರಕೃತಿ ಬದಲಾಗುವ ಸಾಧ್ಯತೆ ಇರುತ್ತದೆ ಆದರೆ ಇದರಿಂದ ಯಾವುದೇ ಅಪಾಯವಿಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ ಈಗಿನ ಜನರಿಗೆ ಅತಿಯಾಗಿ ಇಷ್ಟಪಟ್ಟು ತಿನ್ನುವುದೆಂದರೆ ಬೇಕರಿ ತಿಂಡಿಗಳು ಅಥವಾ ಕರಿದ ತಿಂಡಿಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಇವುಗಳಲ್ಲಿ ಹಾಗೂ ನಮ್ಮ ದಿನನಿತ್ಯದ ಪದಾರ್ಥಗಳಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುತ್ತದೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸುವಂತೆ ಒಬ್ಬ ಮನುಷ್ಯ ಪ್ರತಿ ದಿನಕ್ಕೆ ಮೂರರಿಂದ ನಾಲ್ಕು ಗ್ರಾo ಮಾತ್ರ ಉಪ್ಪನ್ನು ಸೇವಿಸಬಹುದು ಆದರೆ ನಮ್ಮ ಭಾರತೀಯ ಅಡುಗೆ ಪದ್ಧತಿಯಲ್ಲಿ ಪ್ರತಿ ದಿನ ಕನಿಷ್ಠವೆಂದರೂ 10 ರಿಂದ 15 ಗ್ರಾಂ ಉಪ್ಪು ಬಳಕೆಯಾಗುತ್ತದೆ. ಅತಿಯಾದ ಉಪ್ಪು ರಕ್ತನಾಳಗಳನ್ನು ಕಟ್ಟಿಸುತ್ತದೆ ಈ ಮೂಲಕ ಬಿಪಿ ಬರಲು ಕಾರಣವಾಗುತ್ತದೆ ಅಷ್ಟೇ ಅಲ್ಲದೆ ದೇಹದಲ್ಲಿ ನೀರಿನಂಶವನ್ನು ಕಟ್ಟುತ್ತದೆ. ಹಾಗೂ ಹೃದಯದ ಕಾಯಿಲೆಗಳು ಕೂಡ ಒಂದೊಂದೇ ಆರಂಭವಾಗುತ್ತದೆ. ಹಾಗಾಗಿ ಆದಷ್ಟು ಅತಿಯಾಗಿ ಉಪ್ಪು ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು. ಬೇಕರಿ ಉತ್ಪನ್ನ, ಉಪ್ಪು ಸಕ್ಕರೆ ಮೈದಾ ಮುಂತಾದವುಗಳಲ್ಲಿ ಇರುವಂತಹ ರಾಸಾಯನಿಕಗಳು ನಮ್ಮ ದೇಹಕ್ಕೆ ತುಂಬಾ ಅಪಾಯಕಾರಿಯಾಗಿರುತ್ತವೆ ಇದು ಒಂದು ರೀತಿಯಲ್ಲಿ ಸ್ಲೋ ಪಾಯಿಸನ್ ಅಂತ ಹೇಳಬಹುದು. ಆದರೆ ನೈಸರ್ಗಿಕವಾಗಿ ಬೆಳೆದಂತಹ ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಯಾವುದೇ ಅಡ್ಡಪರಿಣಾಮಗಳು ಇರಲಾರದು. ಅಮೃತ ಸಮಾನ ವಾದಂತಹ ಸೀಬೆಹಣ್ಣಿನ ಸೇವನೆ ಮಾಡುವುದರಿಂದ ಮಲಬದ್ಧತೆ ಕೂಡ ಸರಾಗವಾಗಿ ಆಗುತ್ತದೆ ಇದನ್ನು ಮಕ್ಕಳಿಗೂ ಕೂಡ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಡಾಕ್ಟರ್ ವೆಂಕಟರಮಣ ಹೆಗಡೆ, ನಿಸರ್ಗ ಮನೆ ಸಿರ್ಸಿ. ಫೋನ್ ನಂಬರ್ 7406853563

By

Leave a Reply

Your email address will not be published. Required fields are marked *