Ultimate magazine theme for WordPress.

ಜೂನ್ ತಿಂಗಳಿಂದ ಈ ರಾಶಿಯವರಿಗೆ ಗುರುಬಲ ಶುರು

0 6

೨೯ ಜೂನ್ ೨೦೨೦ ರಿಂದ ಯಾವ ಯಾವ ರಾಶಿಗಳಿಗೆ ಗುರು ಬಲ ಇರತ್ತೆ ಅನ್ನೋದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ ನೋಡಿ. ಯಾರ ಯಾರ ರಾಶಿಗಳಿಗೆ ಗುರುಬಲ ಇದೆ ಹಾಗೂ ಏನೆಲ್ಲಾ ಫಲಾಫಲಗಳು ಇವೆ ಏನೂ ಮಾಡಬೇಕು ಅನ್ನೋದರ ಬಗ್ಗೆ ಮಾಹಿತಿ ಕೂಡಾ ಇದೆ.

ಜೂನ್ ಇಂದ ಆರಂಭ ಆಗಿ ನವೆಂಬರ್ ೨೦, ೨೦೨೦ ರ ವರೆಗೂ ಇರತ್ತೆ ಈ ಗುರುಬಲ. ಆದರೆ ಯಾವ ಯಾವ ರಾಶಿಗಳಿಗೆ ಅನ್ನೋದನ್ನ ನೋಡೋಣ. ಗುರು ಅಂದರೆ ಜ್ಞಾನಕರಕ, ಜೀವಕಾರಕ, ನವಗ್ರಹಗಳಲ್ಲಿಯೆ ಅತ್ಯಂತ ಶ್ರೇಷ್ಠ ಗ್ರಹ ಎಂದರೆ ಅದು ಗುರು ಗ್ರಹ. ಅದಕ್ಕಾಗಿಯೇ ಹೇಳುವುದು “ಗುರುರ್ ಬ್ರಹ್ಮ ಗುರುರ್ ವಿಷ್ಣು ಗುರುರ್ ದೇವೋ ಮಹೇಶ್ವರಹ ಗುರೂರ್ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ”. ಯಾರೇ ಆದರೂ ಕೂಡಾ ಜಾತಕವನ್ನು ತೋರಿಸುವಾಗ ಮೊದಲು ಕೇಳುವುದೇ ನಮಗೆ ಗುರು ಬಲ ಇದೆಯೋ ಅಥವಾ ಇಲ್ಲವೋ ಎಂದು. ಗುರು ಬಲ ಬಂದಾಗ ಮತ್ತು ನಿಮ್ಮ ದಶಾ ಬುಕ್ತಿಗಳಲ್ಲಿ ಕೂಡಾ ಗುರು ಬಲ ಬಂದಾಗ ಇಂತಹ ಸಂದರ್ಭದಲ್ಲಿ ಖಂಡಿತವಾಗಿಯೂ ಶುಭ ಫಲ ದೊರಕುತ್ತದೆ.

ರಾಶಿ ಚಕ್ರದಲ್ಲಿ ಐದನೆಯ ರಾಶಿಯೇ ಸಿಂಹ ರಾಶಿ. ಸಿಂಹ ರಾಶಿಗೆ ಗುರು ಬಲ ಅನ್ನೋದು ಜೂನ್ ೨೦ ಬೆಳಿಗ್ಗೆ ೫:೨೦ ರಿಂದ ಗುರು ಬಲ ಆರಂಭ ಆಗತ್ತೆ. ಯಾರೆಲ್ಲ ಸಿಂಹ ರಾಶಿಯವರು ಇದ್ದೀರಿ ಅವರಿಗೆಲ್ಲ ಈ ಸಮಯದಿಂದ ಧೈರ್ಯವಂತರಾಗುತ್ತೀರ, ಸಾಹಸವಂತರಾಗುತ್ತೀರ, ಪುತ್ರ ಸಂತಾನ ಇಲ್ಲದವರಿಗೆ ಪುತ್ರ ಸಂತಾನ ಭಾಗ್ಯ, ಶೀಘ್ರ ವಿವಾಹ ಎಲ್ಲವೂ ಕೂಡಿ ಬರತ್ತೆ. ಒಳ್ಳೆಯದು ಆಗತ್ತೆ. ಇನ್ನೂ ಗುರು ಬಾಲ್ಯದಲ್ಲಿ ವಿವಾಹದ ವಿಷಯಕ್ಕೆ ಬಂದರೆ, ವಧು ಮತ್ತು ವರ ಇಬ್ಬರ ಜಾತಕದಲ್ಲಿ ಕೂಡಾ, ಅವರ ಹುಟ್ಟಿದ ದಿನಾಂಕ, ಟೈಮ್ ಮತ್ತು ಹುಟ್ಟಿದ ಜಾಗ ಇವೆಲ್ಲವನ್ನೂ ಸರಿಯಾಗಿ ಗಮನಿಸಿ, ಜಾತಕವನ್ನು ಹೊಂದಿಸಲಾಗುತ್ತದೆ. ಸಿಂಹ ರಾಶಿಯವರಿಗೆ ಯಾರಿಗೆಲ್ಲ ಧನ ಹೂಡಿಕೆಯಲ್ಲಿ ಆಸಕ್ತಿ ಇದೆ ಅಂತಹ ವ್ಯಕ್ತಿಗಳು ಈ ಸಮಯದಲ್ಲಿ ಧನ ಹೂಡಿಕೆ ಮಾಡಿದರೆ ಉತ್ತಮ ಲಾಭವನ್ನು ಪಡೆಯಬಹುದು.

ರಾಶಿ ಚಕ್ರದಲ್ಲಿ ಮೊದಲ ರಾಶಿ ಮೇಷ ರಾಶಿ. ೨೦/೧೧/೨೦೨೦ ರ ವರೆಗೂ ಕೂಡಾ ಈ ರಾಶಿಯವರಿಗೆ ಗುರುಬಲ ಇರತ್ತೆ. ಮೇಷ ರಾಶಿಯವರು ದೇವರಲ್ಲಿ ಹಾಗೂ ಗುರು ಹಿರಿಯರಲ್ಲಿ ಭಕ್ತಿಯನ್ನು ಹೊಂದುವಿರಿ. ಮೇಷ ರಾಶಿ ಹೊಂದಿರುವ ರೈತರಿಗೆ ವ್ಯವಸಾಯದಲ್ಲಿ ಉತ್ತಮ ಲಾಭ ಬರಲಿದೆ. ರಾಜಕಾರಣಿಗಳಿಗೆ ಸಕಲ ರೀತಿಯಲ್ಲಿ ಜನಪ್ರಿಯತೆ ಸಿಗಲಿದೆ. ಎಲ್ಲಾ ರೀತಿಯ ಸೌಕರ್ಯಗಳೂ ಸಹ ಮೇಷ ರಾಶಿಯ ಜನರಿಗೆ ಸಿಗಲಿದೆ.

ರಾಶಿ ಚಕ್ರದಲ್ಲಿ ಮೂರನೆಯ ರಾಶಿ ಮಿಥುನ ರಾಶಿ. ಈ ಮಿಥುನ ರಾಶಿ ಜನರಿಗೂ ಸಹ ಗುರು ಬಲ ಪ್ರಾಪ್ತಿ ಆಗತ್ತೆ. ಅದರ ಜೊತೆಗೆ ಹಂಸ ಫಲವೂ ಸಹ ಪ್ರಾಪ್ತಿ ಆಗುತ್ತದೆ. ಇವರು ಭಾಗ್ಯವಂತರು, ಉತ್ತಮ ಪತಿ / ಪತ್ನಿಯನ್ನು ಹೊಂದುತ್ತೀರ. ಸಂಸಾರದಲ್ಲಿ ನೆಮ್ಮದಿ ನೆಲೆಸುತ್ತದೆ ಉತ್ತಮ ವೈವಾಹಿಕ ಜೀವನ ನಡೆಸಬಹುದು. ಲಾಭ ತಂದುಕೊಡುವ ಅವಶ್ಯಕ ಪ್ರಮಾಣಗಳನ್ನು ಮಾಡುತ್ತಾರೆ.

ಇನ್ನೂ ರಾಶಿ ಚಕ್ರದಲ್ಲಿನ ಏಕಾದಶ ರಾಶಿ ಅಂದರೆ ೧೧ ನೇ ರಾಶಿ ಕುಂಭ ರಾಶಿ. ಕುಂಭ ರಾಶಿಯ ಜನರಿಗೆ ಗುರು ಬಲದಿಂದ ವ್ಯಾಪಾರದಲ್ಲಿ ಹೆಚ್ಚು ಲಾಭ ಉಂತಾಗತ್ತೆ. ಒಳ್ಳೆಯ ಸ್ನೇಹಿತರು ಸಿಗುತ್ತಾರೆ. ಪ್ರೀತಿ ಪ್ರೇಮದಲ್ಲಿ ಸಫಲತೆ ಆಗತ್ತೆ. ಒಳ್ಳೆಯ ಸ್ನೇಹಿತರಿಂದ ನಿಮ್ಮ ವೃತ್ತಿಯಲ್ಲಿ ಅಭಿವೃದ್ಧಿ, ವೈವಾಹಿಕ ಜೀವನದಲ್ಲಿ ನೆಮ್ಮದಿ. ಅತ್ಯುತ್ತಮ ಧನ ಐಶ್ವರ್ಯ ಲಾಭವೂ ಆಗತ್ತೆ.

ಇನ್ನೂ ರಾಶಿ ಚಕ್ರದ ಎಂಟನೇ ರಾಶಿ ವ್ರಶ್ಚಿಕ ರಾಶಿ. ಈ ರಾಶಿಯ ಜನರಿಗೆ ಗುರು ಬಲ ಇವರಿಗೂ ಸಹ ಜೂನ್ ೨೯, ೨೦೨೦ ರಿಂದ ೨೦ ನವೆಂಬರ್ ೨೦೨೦ ರ ವರೆಗೂ ಗುರು ಬಲ ಪ್ರಾಪ್ತಿ ಆಗಿರುತ್ತೆ. ಹಣಕಾಸು ಅಭಿವೃದ್ಧಿ ಆಗಿ ಯಾವುದೇ ಸಾಲಗಳು ಇದ್ದರೆ ಸಾಲಗಳಿಂದ ಮುಕ್ತಿ ಹೊಂದೂತ್ತೀರ. ಉತ್ತಮ ಸೌಲಭ್ಯಗಳು ದೊರೆಯಲಿದೆ. ಯಾರೆಲ್ಲ ಮಾತು ಕತೆಯಿಂದ ವ್ಯವಹಾರ ನಡೆಸುತ್ತಾ ಇರುತ್ತೀರಿ ಅವರಿಗೆಲ್ಲ ನಿಮ್ಮ ಮಾತು ಕತೆಯಿಂದಲೆ ಕಾರ್ಯ ಸಾಧನೆ ಆಗುತ್ತದೆ. ಗೃಹ ಜೀವನದಲ್ಲಿ ಸಂತೋಷ ಅಭಿವೃದ್ಧಿ ಆಗತ್ತೆ.

Leave A Reply

Your email address will not be published.