ಪ್ರೇಮಿಗಳು ತಮ್ಮ ಪ್ರೀತಿಯನ್ನು ತೋರಿಸಲು ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಹೀಗೆ ಒಬ್ಬ ಪ್ರಿಯಕರ ತನ್ನ ಪ್ರೇಯಸಿಗೆ ತನ್ನ ಪ್ರೀತೋಯ ಕುರುಹಾಗಿ ಒಂದು ಲಾಕೆಟ್ ಅನ್ನು ನೀಡಿದ್ದ. ಆದರೆ ಅದು ನಾವು ಊಹಿಸಲೂ ಆಗದಷ್ಟು ಸಾಮಾನ್ಯ ಲಾಕೆಟ್ ಅದು ಆಗಿರಲಿಲ್ಲ. ತುಂಬಾ ವಿಶೇಷವಾದ ಒಂದು ಲಾಕೆಟ್ ಅದಾಗಿತ್ತು. ಆ ಲಾಕೆಟ್ ನಲ್ಲಿ ಏನೋ ಒಂದನ್ನು ಇಟ್ಟಿದ್ದನಂತೆ ಆ ಪ್ರಿಯತಮ. ಆದರೆ ಆ ವಿಷಯ ಅವನ ಪ್ರಿಯತಮೆಗೆ ತಿಳಿದಿರಲಿಲ್ಲ. ಆ ಲಾಕೆಟ್ ನಲ್ಲಿ ಅಂತಹದ್ದು ಏನಿತ್ತು ಅನ್ನೋದನ್ನ ತಿಳಿದುಕೊಳ್ಳೋಣ.

ಆಸ್ಟ್ರೇಲಿಯಾ ಮೂಲದ ಟೇರಿ ತನ್ನ ಪ್ರೇಯಸಿ ಯಾನಾಗೆ ಏನಾದರೂ ಒಂದು ವಿಶೇಷವಾದ ಉಡುಗೊರೆ ಒಂದನ್ನು ಕಾಣಿಕೆಯಾಗಿ ನೀಡಬೇಕು ಎಂದುಕೊಂಡ. ಆಗ ತನ್ನ ಕೈಯಾರೆ ತಾನೇ ಒಂದು ಸುಂದರವಾದ ಲಾಕೆಟ್ ಅನ್ನು ಕೆತ್ತನೆ ಮಾಡಿ ಯಾನಗೆ ಉಡುಗೊರೆಯಾಗಿ ಕೊಟ್ಟ. ಆ ಲಾಕೆಟ್ ಅನ್ನು ಯಾನ ಪ್ರತೀ ದಿನ ತನ್ನ ಕುತ್ತಿಗೆಗೆ ಹಾಕಿಕೊಳ್ಳುತ್ತಿದ್ದಳು. ಹೀಗೆ ಸುಮಾರು ಎರಡು ವರ್ಷಗಳವರೆಗೂ ಯಾನ ಪ್ರತೀ ದಿನವೂ ಆ ಲಾಕೆಟ್ ಅನ್ನು ಧರಿಸುತ್ತಲೇ ಇದ್ದಳು. ಆದರೆ ಆ ಲಾಕೆಟ್ ನಲ್ಲಿ ಏನಿದೆ ಎಂದು ಆಕೆ ಒಂದು ದಿನವೂ ನೋಡಿಯೂ ಇರಲಿಲ್ಲ ಊಹೆ ಕೂಡಾ ಮಾಡಿರಲಿಲ್ಲ. ಹೀಗೆ ಒಂದು ದಿನ ಇಬ್ಬರೂ ಪ್ರವಾಸಕ್ಕೆ ಎಂದು ಹೋಗಿದ್ದಾಗ ಟೆರ್ರಿ ಅವರಿಬ್ಬರೂ ವಿವಾಹ ಆಗುವ ಪ್ರಸ್ತಾಪವನ್ನು ಯಾನ ಮುಂದಿಟ್ಟ ಹಾಗೆ ತನ್ನ ಪ್ರೇಮನಿವೇದನೆ ಕೂಡಾ ಮಾಡಿದ್ದ.

ಇದನ್ನ ಕೇಳಿದ ಯಾನ ಟೆರ್ರಿಯ ಬಳಿ ನೀನು ಬರೀ ಮಾತಿನಾಲ್ಲೇ ಪ್ರಪೋಸ್ ಮಾಡೋದಾ? ಎಂದು ಕೇಳಿದಾಗ ಅವಳ ಸಮೀಪ ಬಂದ ಟೆರ್ರಿ ಅವಳ ಕೊರಳಲ್ಲಿ ಇದ್ದಂತಹ ಲಾಕೆಟ್ ಅನ್ನು ತೆಗೆದುಕೊಂಡು ಅದನ್ನು ಕಲ್ಲಿಗೆ ಒಡೆದು ಅದರಲ್ಲಿ ಇದ್ದ ವಜ್ರದ ಉಂಗುರವನ್ನು ತೆಗೆದುಕೊಂಡು ತನ್ನ ಪ್ರೇಯಸಿ ಯಾನಗೆ ಪ್ರಪೋಸ್ ಮಾಡಿದ್ದ. ಅದನ್ನ ನೋಡಿದ ಯಾನ ಒಂದು ಕ್ಷಣ ಆಶ್ಚರ್ಯಚಕಿತಳಾಗಿ ನೋಡಿದಳು. ತಾನು ಎರಡು ವರ್ಷಗಳ ಕಾಲ ಧರಿಸಿದ ಆ ಲಾಕೆಟ್ ನಲ್ಲಿ ಒಂದು ವಜ್ರದ ಉಂಗುರ ಇತ್ತು ಎನ್ನುವುದು ಆಕೆಗೆ ತಿಳಿದೇ ಇರಲಿಲ್ಲ. ಟೆರ್ರಿ ಯಾವಾಗ ತನಗೆ ಪ್ರಪೋಸ್ ಮಾಡ್ತಾನೆ ಎಂದು ಯಾನ ಒಂದು ವರ್ಷದಿನ ಕಾಯುತ್ತ ಇದ್ದಳಂತೆ. ಟೆರ್ರಿಯ ಪ್ರಪೋಸ್ ಒಪ್ಪಿದ ಯಾನಗೆ ಅವನ ಪ್ರೇಮ ನಿವೇದನೆಯು ಎರಡು ವರ್ಷಗಳಿಂದ ತನ್ನ ಕೊರಳಲ್ಲೇ ಇತ್ತು ಎನ್ನುವುದು ಅವಳಿಗೆ ತಿಳಿದೇ ಇರಲಿಲ್ಲ.

By

Leave a Reply

Your email address will not be published. Required fields are marked *