ವಿಳ್ಳೇದೆಲೆ ಅನ್ನೋದು ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಕೆಮ್ಮು ಕಫ ನಿವಾರಣೆಗೆ ವಿಳ್ಳೆದೆಯಲಿದ್ದೆ ಔಷದಿ ಗುಣ ಇದನ್ನು ಹೇಗೆ ಬಳಸಬೇಕು ಅನ್ನೋದನ್ನ ಮುಂದೆ ತಿಳಿಯೋಣ. ವಿಳ್ಳೇದೆಲೆ ಬರಿ ಶಾಸ್ತ್ರಕ್ಕೆ ಪೂಜೆಗೆ ಸೀಮಿತವಾಗದೆ ಹಲವು ಬೇನೆಗಳಿಗೆ ಮನೆಮದ್ದಾಗಿ ಕೆಲಸ ಮಾಡುತ್ತದೆ.

ಹಿಂದಿನ ಕಾಲದಿಂದಲೂ ಕೂಡ ಇದರ ಉಪಯೋಗವನ್ನು ನೋಡಬಹುದಾಗಿದೆ ನಮ್ಮ ಹಿರಿಯರು ಕೂಡ ವಿಳ್ಳೇದೆಲೆಯನ್ನು ಹೆಚ್ಚಾಗಿ ಬಳಸುತ್ತಿದ್ದರು ಈಗಲೂ ಕೂಡ ಬಳಕೆಯಲ್ಲಿದೆ. ಊಟದ ನಂತರ ವಿಳ್ಳೇದೆಲೆ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಅಜೀರ್ಣತೆ ಕಾಡೋದಿಲ್ಲ.

ಧ್ವನಿ ಸ್ವರ ಮೃದುವಾಗಲು ಹಾಗೂ ಗಡಸು ಧ್ವನಿ ನಿವಾರಣೆಗೆ ವೀಳ್ಯದೆಲೆ ಬೇರನ್ನು ಜಗಿದರೆ ಸ್ವರವು ಮೃದುವಾಗುತ್ತದೆ. ಅಲ್ಲದೆ ಮೂರ್ನಾಲ್ಕು ಮಿಲಿ ವೀಳ್ಯದೆಲೆಯ ರಸವನ್ನು ಒಂದು ಚಮಚ ಜೇನು ತುಪ್ಪದ ಜತೆ ಸೇವಿಸಿದರೆ ಒಣ ಕೆಮ್ಮು ಕಮ್ಮಿಯಾಗುತ್ತದೆ. ಒಂದೆರಡು ವೀಳ್ಯದೆಲೆಯನ್ನು ದಿನಕ್ಕೆ ಎರಡು -ಮೂರು ಬಾರಿ ಜಗಿದರೆ ಕಫಯುಕ್ತ ಕೆಮ್ಮು ಕಡಿಮೆಯಾಗುತ್ತದೆ. ವೀಳ್ಯದೆಲೆ ರಸಕ್ಕೆ, ತುಳಸಿ ಎಲೆಯ ರಸ, ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ನೆಗಡಿ ವಾಸಿಯಾಗುತ್ತದೆ.

ನೆನಪಿರಲಿ: ರಕ್ತಸ್ರಾವ, ಪಿತ್ತದಿಂದ ತಲೆ ಸುತ್ತು ಇಂತಹವುಗಳಾದರೆ ವೀಳ್ಯದೆಲೆಯನ್ನು ಸೇವಿಸಬಾರದು. ವೀಳ್ಯೆದೆಲೆಯನ್ನು ಹೆಚ್ಚಾಗಿ ಬಳಸಿದಲ್ಲಿ ಲಿವರ್ ಬೇಗ ಕ್ರಿಯಾ ಹೀನವಾಗಬಹುದು.

.

Leave a Reply

Your email address will not be published. Required fields are marked *