ಅಂದು ಸಹಾಯಕ ಸಬ್ ಇನ್ಸ್ಪೆಕ್ಟರ್, ಆದ್ರೆ ಇಂದಿನ ದಿನ ರಸ್ತೆ ಬದಿ ಚಿಂದಿ ಆಯುತ್ತಿದ್ದಾರೆ ಯಾಕೆ ನೋಡಿ

0 1

ಈ ವ್ಯಕ್ತಿಯೊಬ್ಬರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿದ್ದಂತಹ ವ್ಯಕ್ತಿ. ಇವರು ತಮ್ಮ ವೃತ್ತಿಯನ್ನು ಬಿಟ್ಟು ನೆಮ್ಮದಿಯ ಜೀವನ ನಡೆಸಲು ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಈ ವ್ಯಕ್ತಿ ತನ್ನ ವೃತ್ತಿ ಜೀವನದಿಂದ ನಿವೃತ್ತಿ ಪಡೆದ ಕೆಲವೇ ಕೆಲವು ವರ್ಷಗಳಲ್ಲಿ ಅವರ ಜೀವನ ಬೀದಿಗೆ ಬಂದಿದೆ. ಆ ವ್ಯಕ್ತಿ ಈಗ ಜೀವನ ನಡೆಸುತ್ತಿರುವ ರೀತಿ ನೋಡಿದರೆ ಎಂತವರನ್ನೂ ಬೆಚ್ಚಿ ಬೀಳುವಂತೆ ಮಾಡುತ್ತದೆ. ಆ ವ್ಯಕ್ತಿ ಯಾರು? ಅವರಿಗೆ ಈಗ ಬಂದೊದಗಿದ ಪರಿಸ್ಥಿತಿ ಆದರೂ ಏನು? ಈ ಎಲ್ಲಾ ವಿಷಯಗಳ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಉದ್ದನೆಯ ಗಡ್ಡ, ಮೀಸೆ, ಹೊಲಸು ಆಗಿರುವ ಬಟ್ಟೆ ತೊಟ್ಟು ಚಿಂದಿ ಆಯುತ್ತಾ ಇರುವ ವ್ಯಕ್ತಿ ಸಾಮಾನ್ಯ ವ್ಯಕ್ತಿ ಏನೂ ಅಲ್ಲ. ಮೇಲೆ ಹೇಳಿದ ನಿವೃತ್ತ ಸಹಾಯಕ ಸಬ್ ಇನ್ಸ್ಪೆಕ್ಟರ್ ಮಧುಸೂಧನ್ ರಾವ್. ಅವರನ್ನು ನೋಡಿದರೆ ಅವರು ನಿವೃತ್ತ ಸಹಾಯಕ ಸಬ್ ಇನ್ಸ್ಪೆಕ್ಟರ್ ಮಧುಸೂಧನ್ ರಾವ್ ಎಂದು ಹೇಳಿದರೆ ಯಾರೂ ಕೂಡಾ ನಂಬಲು ಸಾಧ್ಯ ಇಲ್ಲ. ಅಂತಹ ಸ್ಥಿತಿಗೆ ಬಂದು ತಲುಪಿದ್ದಾರೆ ಅವರು. ನಿವೃತ್ತ ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ ಮಧುಸೂಧನ್ ಅವರು ಯಾತಕ್ಕಾಗಿ ಈ ಪರಿಸ್ಥಿತಿಗೆ ಬಂದರು? ಎನ್ನುವ ಅವರ ಶೋಚನೀಯ ಪರಿಸ್ಥಿತಿಯನ್ನು ಮಧುಸೂಧನ್ ರಾವ್ ಅವರೇ ಈ ರೀತಿಯಾಗಿ ಹೇಳುತ್ತಾರೆ. ಮಧುಸೂಧನ್ ರಾವ್ ಅವರು ತಮ್ಮ ಕೆಲಸದ ಒತ್ತಡದಿಂದ ವಿಮುಕ್ತರಾಗಲು ನೆಮ್ಮದಿಯ ಜೀವನ ನಡೆಸುವ ಸಲುವಾಗಿ ತಮ್ಮ ವೃತ್ತಿಯಿಂದ 2011ರಲ್ಲಿ ಸ್ವಯಂ ನಿವೃತ್ತಿ ಪಡೆಯುತ್ತಾರೆ. ಇತ್ತೀಚಿಗಷ್ಟೇ ಇವರ ಪತ್ನಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪತ್ನಿಯ ಸಾವಿನಿಂದ ದುಃಖಗೊಂಡ ಮಧುಸೂದನ್ ರವರು ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವ ಕಾರಣ ಮಧ್ಯಪಾನಕ್ಕೆ ದಾಸರಾಗುತ್ತಾರೆ.

ಮನೆಯಲ್ಲಿನ ಕಿರಿಕಿರಿ ಹಾಗೂ ಮಧುಸುದನ್ ರಾವ್ ಅವರ ಆರಂಭಿಸಿದ ಮಧ್ಯಪಾನದ ದುಶ್ಚಟದ ಕಾರಣಕ್ಕಾಗಿ ಮನೆಯಲ್ಲಿ ಮಗ ಹಾಗೂ ಮದುವೆಯಾದ ಇಬ್ಬರು ಹೆಣ್ಣುಮಕ್ಕಳಿಗೆ ಇರಿಸು ಮುರಿಸು ಉಂಟಾಗಲು ಆರಂಭವಾಯಿತು. ಈ ಕಾರಣಕ್ಕಾಗಿ ಮನೆಯಲ್ಲಿ ಪ್ರತಿನಿತ್ಯ ಜಗಳವೇ ಬೇಡ ಎನ್ನುವ ಕಾರಣಕ್ಕೆ ಮಧುಸುದನ್ ರಾವ್ ಅವರು ಮನೆಯಿಂದ ಹೊರಬಂದು ರಸ್ತೆಯಲ್ಲಿ ಚಿಂದಿ ಆಯುವ ಕೆಲಸವನ್ನು ಆರಂಭಿಸುತ್ತಾರೆ. ಯಾರು ಇಲ್ಲದ ಅನಾಥನ ರೀತಿಯಲ್ಲಿ ಜೀವನ ನಡೆಸಲು ಆರಂಭಿಸುತ್ತಾರೆ. ಆದರೆ ಮಧುಸೂದನ ಅವರ ವಿಷಯ ತಿಳಿದ ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್ಪಿ ಮಿಥುನ್ ಕುಮಾರ್ ಎಂಬವರು ಚಿಂತಾಮಣಿ ನಗರ ಪೊಲೀಸರ ಮೂಲಕ ಮಧುಸೂದನ ಅವರಿಗೆ ಹೊಸ ಬದುಕನ್ನು ಕಟ್ಟಿಕೊಡುವ ಆಸೆಯನ್ನು ಹೊಂದಿದ್ದಾರೆ.

ಮಿಥುನ್ ಕುಮಾರ್ ಅವರಿಗೆ ಯಾವುದು ಬೇರೊಂದು ಮಾಧ್ಯಮದ ಮೂಲಕ ಮಧುಸೂದನ್ ರವರು ರಸ್ತೆಯಲ್ಲಿ ಚಿನ್ನಿ ಆಯುವುದು ಭಿಕ್ಷುಕನ ರೀತಿ ಅಲೆದಾಡುತ್ತಿರುವದನ್ನು ತಿಳಿದರು. ವಿಷಯ ತಿಳಿದ ನಂತರ ಅವರನ್ನು ಕರೆದುಕೊಂಡು ಬಂದು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸೈಕಲಾಜಿಕಲ್ ಟ್ರೀಟ್ಮೆಂಟ್ ಸಹ ನೀಡಲಾಗುತ್ತದೆ. ಒಮ್ಮೆ ಕೌನ್ಸಿಲಿಂಗ್ ಸಹ ಮಾಡಲಾಗಿದ್ದು , ಮಧುಸೂದನ್ ಅವರು ಸಹ ತಾನು ಒಮ್ಮೆ ದೇವಸ್ಥಾನಕ್ಕೆ ಹೋಗಿ ಬಂದ ನಂತರ ಹೊಸ ಜೀವನವನ್ನು ಆರಂಭಿಸುವುದರ ಕುರಿತಾಗಿ ಮಾತನಾಡಿದ್ದಾರೆ. ನಿವೃತ್ತಿ ಹೊಂದಿರುವ ಮಧುಸೂದನ ಅವರಿಗೆ ಪ್ರತಿ ತಿಂಗಳು ಒಂಬತ್ತು ಸಾವಿರ ರೂಪಾಯಿ ಪೆನ್ಶನ್ ಬರುತ್ತಿತ್ತು. ಅವರ ಅಕೌಂಟಿನಲ್ಲಿ ಲಕ್ಷ ಲಕ್ಷ ರೂಪಾಯಿ ಹಣ ಇದ್ದರೂ ಸಹ ಅದ್ಯಾವುದನ್ನು ಪಡೆಯದೆcಮಕ್ಕಳ ಸಹವಾಸದಿಂದಲೂ ದೂರವಿದ್ದು ತನ್ನ ಬಳಿ ಇರುವ ಹಣವನ್ನು ಸಹ ಸರಿಯಾಗಿ ಬಳಸಿಕೊಳ್ಳದೆ ಬೀದಿಯಲ್ಲಿ ಚಿಂದಿ ಆಯುತ್ತಾ ಅದರಿಂದ ಬರುವ ಹಣದಿಂದಲೇ ಕುಡಿಯುವುದು , ತಿನ್ನುವುದು ಬೀದಿಯಲ್ಲೇ ಜೀವನ ನಡೆಸುತ್ತಾ ಇದ್ದಾರೆ. ಬೀದಿಯ ಜೀವನವೇ ತನಗೆ ನೆಮ್ಮದಿ ನೀಡುತ್ತಿದೆ ಎಂದು ಪೋಲಿಸರ ಬಳಿ ಹೇಳಿಕೊಂಡಿದ್ದಾರೆ. ಹೇಗಿದ್ದ ವ್ಯಕ್ತಿಯ ಜೀವನ ಹೇಗೆ ಆಯಿತು!?

Leave A Reply

Your email address will not be published.