ಮೇ ತಿಂಗಳಿನಲ್ಲಿ ಮೇಷ ರಾಶಿಯಲ್ಲಿ ಜನಿಸಿದವರ ರಾಶಿ ಭವಿಷ್ಯ ಹೇಗಿರುತ್ತದೆ ಈ ತಿಂಗಳಿನಲ್ಲಿ ಅವರಿಗೆ ಯಾವೆಲ್ಲಾ ವಿಷಯದಲ್ಲಿ ಲಾಭವಿದೆ, ಸವಾಲುಗಳೇನು ಹಾಗೂ ಮೇಷ ರಾಶಿಯವರು ಮೇ ತಿಂಗಳಲ್ಲಿ ಏನೆಲ್ಲ ಪರಿಹಾರ ಮಾಡಿಕೊಳ್ಳಬೇಕು ಯಾವ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂಬೆಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಮೇಷ ರಾಶಿಯಲ್ಲಿ ಅಶ್ವಿನಿ ನಕ್ಷತ್ರದ 4 ಚರಣ ಭರಣಿ ನಕ್ಷತ್ರದ ನಾಲ್ಕು ಚರಣ ಕೃತಿಕ ನಕ್ಷತ್ರದ ಮೊದಲನೆ ಚರಣದಲ್ಲಿ ಜನಿಸಿರುತ್ತಾರೆ. ಮೇಷ ರಾಶಿಯವರಿಗೆ ಸಿಂಹ ತುಲಾ ಧನು ರಾಶಿಯವರು ಮಿತ್ರ ರಾಶಿಗಳಾಗಿರುತ್ತಾರೆ ಮಿಥುನ ಹಾಗೂ ಕನ್ಯಾ ರಾಶಿಯಲ್ಲಿ ಜನಿಸಿದವರು ಶತ್ರುಗಳಾಗಿರುತ್ತಾರೆ. ಮೇಷ ರಾಶಿಯವರು ಮೇ ತಿಂಗಳಿನಲ್ಲಿ ಎಂತಹ ಪರಿಸ್ಥಿತಿಯಲ್ಲೂ ತಾವು ತೆಗೆದುಕೊಂಡ ನಿರ್ಧಾರದ ಬಗ್ಗೆ ಬದ್ಧವಾಗಿರಬೇಕು.

ಆತುರದಲ್ಲಿ ದುಡುಕಬಾರದು ಯಾವುದೆ ಕೆಲಸವನ್ನಾದರೂ ಸಮತೋಲನ ಮನಸ್ಥಿತಿ ತಂದುಕೊಂಡು ಮಾಡಬೇಕಾಗುತ್ತದೆ. ಇವರು ಕೆಲಸಕ್ಕೆ ಮಹತ್ವವನ್ನು ಕೊಟ್ಟರೆ ಅದ್ಭುತ ಸಾಧನೆ ಮಾಡುತ್ತಾರೆ, ಇದರಿಂದ ಆರ್ಥಿಕ ಪರಿಸ್ಥಿತಿಯು ಸುಧಾರಣೆಯಾಗುತ್ತದೆ. ಮೇಷ ರಾಶಿಯವರಿಗೆ ಮೇ ತಿಂಗಳಲ್ಲಿ ಮರೆವಿನ ಸಮಸ್ಯೆ ಬರಬಹುದು ಬೆಲೆಬಾಳುವ ವಸ್ತುಗಳನ್ನ ಕಳೆದುಕೊಳ್ಳಬಹುದು ಅಥವಾ ಹೆಚ್ಚಿನ ಮೊತ್ತದ ಹಣ ಯಾರಿಗಾದರೂ ಕೊಟ್ಟಿದ್ದಲ್ಲಿ ಅದು ಮರೆತು ಹೋಗಬಹುದು ಹೀಗಾಗಿ ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಮೇಷ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಬರುವುದಿಲ್ಲ ದುಡಿತಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಮೇಷ ರಾಶಿಯವರು ಹಣಕಾಸಿನ ಸ್ಥಿತಿಯನ್ನು ನೋಡಿಕೊಂಡು ಮೇ ತಿಂಗಳಿನಲ್ಲಿ ವಾಹನಗಳನ್ನು, ಸೈಟ್ ಹೀಗೆ ದುಬಾರಿ ವಸ್ತುಗಳನ್ನು ಖರೀದಿ ಮಾಡಬಹುದು. ಮೇಷ ರಾಶಿಯ ವಿದ್ಯಾರ್ಥಿಗಳಿಗೆ ಮೇ ತಿಂಗಳಿನಲ್ಲಿ ತೊಂದರೆ ಇಲ್ಲ ಆದರೆ ಹಠದಿಂದ ಓದಿದರೆ ಮಾತ್ರ ಫಲ ಸಿಗುತ್ತದೆ.

ಮೇಷ ರಾಶಿಯವರು ಇನ್ವೆಸ್ಟ್ ಮಾಡುವ ವ್ಯವಹಾರ ಮಾಡುತ್ತಿದ್ದರೆ ಲೇವಾದೇವಿ ವ್ಯವಹಾರ ಮಾಡುತ್ತಿದ್ದರೆ ಎಚ್ಚರಿಕೆಯಿಂದ ಹಣವನ್ನು ಇನ್ವೆಸ್ಟ್ ಮಾಡಬೇಕಾಗುತ್ತದೆ. ಮೇಷ ರಾಶಿಯ ಬೋಧನಾ ವೃತ್ತಿಯಲ್ಲಿರುವವರಿಗೆ ಸ್ವಲ್ಪ ನಿಧಾನಗತಿಯ ಪ್ರಗತಿ ಇರುತ್ತದೆ ರಾಜಕೀಯದಲ್ಲಿರುವ ವ್ಯಕ್ತಿಗಳಿಗೆ ಉತ್ತಮವಾಗಿದೆ, ರಾಜಕೀಯದಲ್ಲಿರುವ ಮಹಿಳೆಯರಿಗೆ ಉತ್ತಮ ಅವಕಾಶಗಳು ಸಿಗುತ್ತದೆ, ಜವಾಬ್ದಾರಿಯುತ ಕೆಲಸ ಸಿಗುತ್ತದೆ.

ಮೇಷ ರಾಶಿಯವರಿಗೆ ಮೇ ತಿಂಗಳಿನಲ್ಲಿ ಧನ ಲಾಭವಾಗುತ್ತದೆ. ಮೇಷ ರಾಶಿಯವರಿಗೆ ಕೆಲಸದಲ್ಲಿ ಸ್ಥಾನಮಾನದ ಬಗ್ಗೆ ನಿರೀಕ್ಷೆ ಇರುತ್ತದೆ ಅದಕ್ಕೆ ತಕ್ಕಂತೆ ಅವಕಾಶಗಳು ಸಿಗುತ್ತದೆ ಆದರೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮೇಷ ರಾಶಿಯವರಿಗೆ ಮೇ ತಿಂಗಳಿನಲ್ಲಿ ಕೆಲಸದ ಒತ್ತಡ ಇರುತ್ತದೆ ಆದರೆ ಕೆಲಸವನ್ನು ಇಷ್ಟಪಟ್ಟು ಮಾಡಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಮೇಷ ರಾಶಿಯವರು ಈ ತಿಂಗಳಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು, ಮೇಷ ರಾಶಿಯ ಕೆಲವರಿಗೆ ಸಣ್ಣಪುಟ್ಟ ಜ್ವರ, ಕೆಮ್ಮು ಮೇಲಿಂದ ಮೇಲೆ ಬರುತ್ತದೆ ಮೇಷ ರಾಶಿಯವರು ಯೋಗ ಧ್ಯಾನ ಮಾಡುವುದು ಒಳ್ಳೆಯದು. ಮೇ ತಿಂಗಳಿನಲ್ಲಿ ಆದಿತ್ಯ ಹೃದಯ ಪಠಣ ಮಾಡಬೇಕು ಹಾಗೂ ನವಗ್ರಹ ಶಾಂತಿ ಮಾಡಿಸುವುದರಿಂದ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಮೇಷ ರಾಶಿಯವರಿಗೆ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Reply

Your email address will not be published. Required fields are marked *