Appu punith viral photo: ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಅಲ್ಲದೆ ಸಿನಿಮಾ ನಿರ್ದೇಶನ ಸಹ ಮಾಡಿದ್ದಾರೆ. ಇದೀಗ ಅವರೆ ನಿರ್ದೇಶನ ಮಾಡಿದ ಹಾಗೂ ನಟಿಸಿದ ಚಿತ್ರವೊಂದರ ಟೈಟಲ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ, ಈ ಸಮಯದಲ್ಲಿ ಪುನೀತ್ ಅವರ ಬಾಲ್ಯದ ಪೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಉಪೇಂದ್ರ ನಟಿಸಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಟೈಟಲ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಸಿನಿಮಾ ಮುಹೂರ್ತ ಸಮಾರಂಭಕ್ಕೆ ನಿರ್ಮಾಪಕರು, ಹಿತೈಷಿಗಳು ಮತ್ತು ಉಪೇಂದ್ರ ಅವರು ಕೂಡ ತಮ್ಮ ಚಿತ್ರದ ಟೈಟಲ್ ಅನ್ನು ಹಣೆ ಮೇಲೆ ಹಾಕಿಕೊಂಡು ಬಂದಿದ್ದರು. ಸಿನಿಮಾದ ಟೈಟಲ್ ಅದೊಂದು ಧಾರ್ಮಿಕ ಚಿಹ್ನೆಯಂತೆ ಭಾಸವಾಗುವುದರಿಂದ ವಿಪರೀತ ಕುತೂಹಲ ಕೂಡ ಮೂಡಿಸಿತ್ತು.

ಈಗ ಆ ಟೈಟಲ್ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ತಮ್ಮ ಸಿನಿಮಾದ ಟೈಟಲ್ ಬಗ್ಗೆ ಉಪೇಂದ್ರ ಅವರು ನಿರ್ದಿಷ್ಟ ಅರ್ಥವನ್ನು ಹೇಳದೆ ಇದ್ದರೂ, ಸಿನಿಮಾ ನೋಡುಗರು ಮಾತ್ರ ಅದನ್ನು ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಿದ್ದಾರೆ. ಒಬ್ಬರು ಯು ಮತ್ತು ಐ ಎಂದರೆ, ಇನ್ನೂ ಕೆಲವರು ದೇವರ ನಾಮ ಎಂದೂ ಹೇಳುತ್ತಾರೆ. ಇನ್ನೂ ಕೆಲವರು ಕುದುರೆ ಲಾಳ ಎಂದೂ ಬಣ್ಣಿಸುತ್ತಿದ್ದಾರೆ.

ಈ ಟೈಟಲ್ ಅನ್ನು ಪುನೀತ್ ರಾಜ್ ಕುಮಾರ್ ಬಾಲ್ಯದಲ್ಲಿರುವಾಗಲೆ ರಿವಿಲ್ ಮಾಡಿದ್ದರು ಎನ್ನುವುದು ವಿಶೇಷ ಹಾಗೂ ಅಪ್ಪು ಬಾಲ್ಯದ ಫೋಟೊ ನೆನಪಿಸುತ್ತಿದೆ ಮತ್ತು ಅದು ವೈರಲ್ ಆಗುತ್ತಿದೆ. ಪುನೀತ್ ರಾಜಕುಮಾರ್ ಎರಡ್ಮೂರು ವರ್ಷ ಇರುವಾಗ ತಮ್ಮ ಹಣೆಯ ಮೇಲೆ ನಾಮವನ್ನು ಹಾಕಿಕೊಂಡಿದ್ದಾರೆ. ಆ ಫೋಟೋಗೂ ಮತ್ತು ಸಮಾರಂಭದಲ್ಲಿ ಉಪೇಂದ್ರ ಕಾಣಿಸಿಕೊಂಡ ರೀತಿಗೂ ಹೋಲಿಕೆ ಆಗುವುದರಿಂದ ನಿಮಗಿಂತ ಮೊದಲೆ ಅಪ್ಪು ನಿಮ್ಮ ಸಿನಿಮಾದ ಟೈಟಲ್ ರಿವೀಲ್ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದೆ ಫೋಟೋವನ್ನು ನಿರ್ಮಾಪಕ ಕೆ.ಪಿ ಶ್ರೀಕಾಂತ್ ಕೂಡ ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, ಅಪ್ಪು ನಮ್ಮೊಂದಿಗೆ ನೀವು ಯಾವಾಗಲೂ ಇರುತ್ತೀರಿ ಎಂದು ಬರೆದುಕೊಂಡಿದ್ದಾರೆ. ಈಗ ಅಪ್ಪು ಇದ್ದಿದ್ದರೆ ಖುಷಿಪಡುತ್ತಿದ್ದರು ಹಾಗೂ ಎಲ್ಲರಿಗೂ ಸಂತಸವಾಗುತ್ತಿತ್ತು.

ಉಪೇಂದ್ರ ಅವರ ಪ್ರತಿಯೊಂದು ಸಿನಿಮಾದಲ್ಲಿ ವಿಭಿನ್ನತೆ, ವಿಶೇಷತೆ ಕಾಣಿಸುತ್ತದೆ. ಅವರು ಉಪ್ಪಿಟು, ಎಚ್ ಟು ಓ, ಉಷ್, ಬುದ್ಧಿವಂತ, ಸೂಪರ್ ಸಿನಿಮಾಗಳಲ್ಲಿ ಅವರ ವಿಭಿನ್ನತೆಯನ್ನು ನೋಡಬಹುದು. ಇದೀಗ ಅವರ ಸಿನಿಮಾ ಟೈಟಲ್ ಕೂಡ ವಿಭಿನ್ನವಾಗಿದೆ. ಅವರ ಟೈಟಲ್ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಂತು ನಿಜ. ಉಪೇಂದ್ರ ಅವರ ಸಿನಿಮಾ ಟೈಟಲ್ ನೋಡುವಾಗ ಪುನೀತ್ ಬಾಲ್ಯದ ಫೋಟೊ ನೋಡಿ ಅವರ ಅಗಲಿಕೆಯ ನೆನಪಾಗಿ ಕಣ್ಣಲ್ಲಿ ಒಂದು ಹನಿ ಜಾರುತ್ತದೆ. ಉಪೇಂದ್ರ ಅವರ ಸಿನಿಮಾ ಟೈಟಲ್ ಬಗ್ಗೆ ಅವರೆ ಹೇಳಬೇಕು. ಅವರ ಸಿನಿಮಾ ಯಶಸ್ಸು ಪಡೆಯಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *