ಒಳ್ಳೆ ಹಿಟ್ ಸಿನಿಮಾಗಳನ್ನು ಕೊಟ್ಟಂತ ಪೂಜಾಗಾಂಧಿ ಇದ್ದಕಿದ್ದಂತೆ ಕಣ್ಮರೆ ಆಗಿದ್ಯಾಕೆ? ತೆರೆ ಹಿಂದಿನ ಸತ್ಯಕತೆ

0 2

Kannada Actor pooja ghandi life story ಸ್ಯಾಂಡಲ್ ವುಡ್ ಅಲ್ಲಿ ಇವರು ಒಬ್ಬ ಹೆಸರು ವಾಸಿಯಾದ ಚಿತ್ರ ನಟಿ ಹಾಗೂ ರಾಜಕೀಯ ಚಟುವಟಿಕೆ ಹಾಗೂ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಹೆಮ್ಮೆಯ ನಟಿ ಇವರು ಅವರು ಮತ್ಯಾರು ಅಲ್ಲ ಮುಂಗಾರು ಮಳೆ ಯ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಪೂಜಾ ಗಾಂಧಿ ಇವರು ಮೂಲತಃ ಪಂಜಾಬಿ ಕುಟುಂಬ ಅಲ್ಲಿ ಜನಿಸಿದ್ದು ಅವರು ಹುಟ್ಟಿದ್ದು ಉತ್ತರ ಪ್ರದೇಶದ ಮೀರುತ್ ಅಲ್ಲಿ1983 ಅಕ್ಟೋಬರ್7 ಜನಿಸಿದ್ದು ಬಾಲ್ಯವನ್ನು ಅಲ್ಲಿ ಅಲ್ಲಿಯೇ ಕಳೆದಿದ್ದರು ಇವರ ಕುಟುಂಬ ಸಂಪ್ರದಾಯಸ್ಥ ಕುಟುಂಬದ ಆಗಿದ್ದು ಇವರಿಗೆ ಸಂಜನಾ ಗಾಂಧಿ ಎಂದೇ ಕರೆಯುತ್ತಿದ್ದರು ಇವರು ತಮ್ಮ ಜೀವನ ವೃತಿಯನ್ನು ಮೊಡಲಿಂಗ್ ಅಲ್ಲಿ ತೊಡಗಿಸಿಕೊಂಡಿದ್ದರು ನಂತರ ಜಾಹೀರಾತಿನಲ್ಲಿ ಸಕ್ರಿಯವಾಗಿ ಅಭಿನಯ ಮಾಡುತ್ತಿದ್ದು ಜಮೀನ್ ಸೆ ಅಸ್ಮನ್ ತಕ್ ಎನ್ನುವ ಸೀರಿಯಲ್ ಅಲ್ಲಿ ನಟಿಸಿದ್ದು ಆ ಧಾರಾವಾಹಿಯ ನಟನೆಯು ಪೂಜಾ ಗಾಂಧಿ ಅವರಿಗೆ ತಕ್ಕ ಮಟ್ಟಿಗೆ ಹೆಸರು ತಂದುಕೊಟ್ಟಿತು

ಕಟ್ರುಮ್ ಕೆ ಕಿಲಾಡಿ ಎನ್ನುವ ಚಿತ್ರದಲ್ಲಿ ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದು ಈ ಚಿತ್ರವು ಇವರಿಗೆ ಸಾಕಷ್ಟು ಹೆಸರು ಗಳಿಸಲು ಸಾಧ್ಯವಾಗಿದ್ದು ತದನಂತರ ಬೆಂಗಾಲಿ ಸಿನಿಮಾ ಅಲ್ಲಿ ನಟಿಸುತ್ತಾರೆ ಅದಾದನಂತರ ಸೌತ್ ಸಿನಿಮಾ ಕಡೆ ಗಮನ ಹರಿಸುತ್ತಾರೆ ಕೊಕ್ಕಿ ಎನ್ನುವ ಸಿನಿಮಾ 2006ರಲ್ಲಿ ತೆರೆಮೇಲೆ ಪ್ರದರ್ಶನ ಕೊಟ್ಟಿದ್ದು ಇದರಲ್ಲಿ ಪೂಜಾ ಗಾಂಧಿ ಅವರು ಅಭಿನಯ ಮಾಡಿದ್ದು ಇದರಿಂದ ಕೂಡ ಒಳ್ಳೆಯ ಹೆಸರು ತಂದುಕೊಟ್ಟಿತು .

ನಮ್ಮ ಚಂದನವನ ಅಲ್ಲಿ ಯೋಗರಾಜ್ ಭಟ್ ಅವರು ಮುಂಗಾರು ಮಳೆ ಸಿನಿಮಾ ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದ್ದರು ಈ ಚಿತ್ರತಂಡಕ್ಕೆ ಹೊಸಬರನ್ನು ಹಾಕಿಕೊಂಡು ಮಾಡಿದ್ದ ಸಿನಿಮಾ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಗಣೇಶ ಅವರು ಕೂಡ ಹೊಸ ಕಲಾವಿದ ಇನ್ನು ಈ ಚಿತ್ರಕ್ಕೆ ನಾಯಕಿಯ ಪಾತ್ರದ ಆಯ್ಕೆ ಕನ್ನಡದಲ್ಲಿ ನಟಿಯರು ಸಂಪರ್ಕಿಸಿದರು ಯಾರು ಸರಿಯಾಗಿ ಹೊಂದಾಣಿಕೆ ಆಗಲಿಲ್ಲ ಹಾಗೂ ಯಾರು ಈ ಹೊಸ ಸಿನಿಮಾ ತಂಡದ ಮೇಲೆ ಅಷ್ಟೊಂದು ಆಸಕ್ತಿ ತೋರಲಿಲ್ಲ ಹಾಗಾಗಿ ಈ ಸಿನಿಮಾಕ್ಕೆ ಹೊಸ ನಾಯಕಿಯ ಅನ್ವೇಷಣೆ ಅಲ್ಲಿ ತೊಡಗಿದಾಗ ಸಿಕ್ಕ ಹುಡುಗಿ ಪೂಜಾ ಗಾಂಧಿ ಕೊನೆಗೂ ಮುಂಗಾರು ಮಳೆ ಸಿನಿಮಾ ಸೆಟ್ಟೇರಿತ್ತು ಆದರೆ ಆರಂಭಿಕ ಹಂತದಲ್ಲಿ ಯಾರು ಅಷ್ಟೊಂದು ಆಸಕ್ತಿ ಹಾಗೂ ಒಳ್ಳೆಯ ಮಾತುಗಳು ಈ ಸಿನಿಮಾ ಬಗ್ಗೆ ಬಂದಿಲ್ಲ ಇಲ್ಲೂ ಕೂಡ ನಟಿ ಪೂಜಾ ಗಾಂಧಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಕೇಳಿಬರುವುದು.

ನಾಯಕಿ ತುಂಬಾ ಕುಳ್ಳಗೆ ಇದಾರೆ ನೋಡಲು ಪುರುಷ ಮುಖ ಹೊಂದಿದ್ದಾರೆ ಮತ್ತು ನೋಡಲು ಚೆನ್ನಾಗಿ ಇಲ್ಲ ಎಂದು ಹೀಗೆ ಅವಹೇಳನ ಕೇಳಿಬಂದಿತ್ತು ಇದರಿಂದ ಪೂಜಾ ಅವರು ಕೂಡ ನೊಂದಿದ್ದು ನಿರ್ದೇಶಕರ ಮೇಲೆ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಸರಿಯಾಗಿ ಸೌಂದರ್ಯ ವರ್ಧಕ ಬಳಸಿಲ್ಲ ಹಾಗೂ ಸರಿಯಾದ ರೀತಿಯಲ್ಲಿ ನನ್ನ ತೋರಿಸಿಲ್ಲ ಎಂದು ಬಹಿರಂಗವಾಗಿ ಆರಂಭಿಕ ದಿನದಲ್ಲಿ ಹೇಳಿಕೊಳ್ಳುತ್ತಾರೆ ಆದರೆ ಚಿತ್ರವು ಸ್ವಲ್ಪ ದಿನದ ನಂತರ ಯಶಸ್ಸಿನ ಹಾದಿ ಹಿಡಿದು ಮುಂಗಾರು ಮಳೆ ಸಿನಿಮಾ ಪ್ರೇಕ್ಷಕರ ಜನ ಮನ ಗೆದ್ದು 2007 ರ ಕಾಲದಲಿ ಭರ್ಜರಿ ಜಯ ಭೇರಿ ಗಳಿಸಿದ ಸಿನಿಮಾವಾಯಿತು. ಅವಾಗಿನ ಕಾಲದಲ್ಲಿ 75 ಕೋಟಿಯಷ್ಟು ಬಾಕ್ಸ್ ಆಫೀಸ್ ಅಲ್ಲಿ ದೋಚಿ ಸೌತ್ ಇಂಡುಸ್ಟ್ರೀಯಲ್ಲಿ ಅತಿ ಹೆಚ್ಚು ಹಣ ಗಳಿಕೆ ಪಡೆದ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿತ್ತು.

ಮುಂಗಾರು ಮಳೆ ಸಿನಿಮಾ ಹಿಟ್ ಆದನಂತರ ಪೂಜಾ ಗಾಂಧಿ ಅವರಿಗೆ ಬಾರಿ ಬೇಡಿಕೆ ಇರುವ ನಟಿ ಎಂದೇ ಹೇಳಬಹುದು ಅವರ ಕಾಲ್ ಶೀಟ್ ಪಡೆಯಲು ಅವರ ಮನೆಯ ಮುಂದೆ ನಿರ್ಮಾಪಕರು ಕ್ಯೂ ಅಲ್ಲಿ ನಿಂತಿರುತಿದ್ದರು ಪುನೀತ್ ರಾಜಕುಮಾರ್ ಅವರ ಜೊತೆ ಮಿಲನ , ಕೃಷ್ಣ, ಮನ್ಮಥ , ಗೆಳೆಯ, ಆಕ್ಸಿಡೆಂಟ್, ಹನಿ ಹನಿ , ನೀ ಟಾಟಾ ನಾ ಬಿರ್ಲಾ, ಹುಚ್ಚಿ , ಬುದ್ದಿವಂತ , ಹೀಗೆ ಹಲವಾರು ಸಿನಿಮಾ ಅಲ್ಲಿ ನಟಿಸಿ ತಮ್ಮ ಅಭಿನಯದಿಂದ ಜನರ ಮನ ಗೆದ್ದಿದ್ದಾರೆ .

ತಾಜ್ ಮಹಲ್ ಸಿನಿಮಾ ಕೂಡ ಪೂಜಾ ಗಾಂಧಿ ಅವರಿಗೆ ಒಳ್ಳೆಯ ಹೆಸರು ನೀಡಿದ ಸಿನಿಮಾ ಹಾಗೂ ದಂಡುಪಾಳ್ಯ ಸಿನಿಮಾ ಅಲ್ಲಿ ಪೂಜಾ ಗಾಂಧಿ ಅವರ ರಗಡ್ ಪಾತ್ರ ಜನರಲ್ಲಿ ಆಶ್ಚರ್ಯ ಮೂಡಿಸಿದ್ದು ಅಲ್ಲದೆ 2012 ಅಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು ಇವೆಲ್ಲದರ ನಡುವೆಯೂ ಪೂಜಾ ಗಾಂಧಿ ಅವರು ಮಲಯಾಳಂ ತಮಿಳು ಚಿತ್ರ ಅಲ್ಲಿ ಕೂಡ ಅಭಿನಯ ಮಾಡಿದ್ದಾರೆ ತದನಂತರ ಪೂಜಾ ಗಾಂಧಿ ಅವರಿಗೆ ಅವಕಾಶ ಕೊರತೆ ಉಂಟಾಯಿತು. ಇದುಕ್ಕೇ ಏನು ಕಾರಣ ಎನ್ನುವುದನ್ನು ನಾವು ಈ ಲೇಖನದ ಅಲ್ಲಿ ನೋಡೋಣ

ದಂಡುಪಾಳ್ಯ ಸಿನಿಮಾ ತಕ್ಕ ಮಟ್ಟಿಗೆ ಹಿಟ್ ಆಗಿತ್ತು ಆದರೆ ಈ ಸಿನಿಮಾ ಅಲ್ಲಿ ಪೂಜಾ ಗಾಂಧಿ ಅವರ ಪಾತ್ರ ಅವರಿಗೆ ಒಂದು ರೀತಿ ವರ ಆದರೆ ಇನ್ನೊಂದು ಕಡೆ ಶಾಪ ಆಗಿತ್ತು ಹೇಗೆಂದರೆ ಪೂಜಾ ಅವರನ್ನು ನೋಡಿದ ಪ್ರೇಕ್ಷಕರ ಮನದಲ್ಲಿ ಅವರ ಬಗ್ಗೆ ಒಂದು ಲವ್ಲಿ ಹೀರೋಯಿನ್ ಪಾತ್ರವನ್ನು ಕೊಟ್ಟಿದ್ದರು ಆದರೆ ಅಭಿಮಾನಿಗಳು ಇವರ ರಗಾಡ್ ನೋಟ ಅಭಿನಯದ ಮೇಲೆ ಅಷ್ಟೊಂದು ಆಸಕ್ತಿ ನೀಡಲಿಲ್ಲ ನಂತರ ಇವರಿಗೆ ಪ್ರೀತಿ ಪಾತ್ರ ಸಿನಿಮಾ ಅಲ್ಲಿ ನಟಿಸಲು ಅವಕಾಶ ಕಡಿಮೆ ಹಾಗೂ ಕೆಲವೊಂದು ಹೊಸ ನಟಿಯರ ಪೈಪೋಟಿ ನಡೆದು ಅವಕಾಶ ಕೊರೆತೆ ಉಂಟಾಯಿತು ಇವೆಲ್ಲಕ್ಕಿಂತ ಮುಖ್ಯ ಕಾರಣ ಏನೆಂದರೆ ಪೂಜಾ ಗಾಂಧಿ ನೋಡಲು ತುಂಬಾನೇ ದಪ್ಪ ಆಗಿದ್ದರು ಹಾಗಾಗಿ ಸ್ವಲ್ಪ ಸಮಯದ ಚಿತ್ರರಂಗ ಇಂದ ಬ್ರೇಕ್ ಪಡೆಯುತ್ತಾರೆ

ಪೂಜಾ ಗಾಂಧಿ ಗೆ ಮತ್ತೇ ಯಾವುದೇ ಅವಕಾಶ ಸಿಗದ ಕಾರಣ ಅವರು ಸ್ವಂತ ಸಿನಿಮಾ ನಿರ್ಮಾಣ ಮಾಡಲು ಹೆಜ್ಜೆ ಇಟ್ಟು ತಾವೇ ಪ್ರೊಡ್ಯೂಸರ್ ಆಗಿ ಅಭಿನೇತ್ರಿ ಎನ್ನುವ ಸಿನಿಮಾ ಬಿಡುಗಡೆ ಮಾಡುತ್ತಾರೆ ಆದರೆ ಆ ಸಿನಿಮಾ ಜನರ ಮನ ಗೆಲ್ಲುವುದಿಲ್ಲ ಹಾಗೂ ಹಣವನ್ನು ಕೂಡ ಗಳಿಕೆ ಮಾಡಲು ವಿಫಲ ಆಗುವುದು ಆಮೇಲೆ ತಿಪ್ಪಾಜ್ಜಿಯ ಸರ್ಕಲ್ ಹೀಗೆ ಮೂರು ನಾಲ್ಕು ಸಿನಿಮಾ ಸೆಟ್ಟೇರಿದ್ದರು ಅಷ್ಟೊಂದು ಹಿಟ್ ಆಗೋಲ್ಲ ಹೇಗೆ ಹೀನಾಯ ಸೋಲು ಅನುಭವಿಸಿ ನೇರವಾಗಿ ರಾಜಕೀಯ ಪ್ರವೇಶ ಮಾಡುತ್ತಾರೆ. ಮೊದಲಿಗೆ ಜೆಡಿಎಸ್ 2012 ಸೇರುತ್ತಾರೆ ಅದಾದ ನಂತರ ಕೆಜಿಎಫ್ ಸೇರುತ್ತಾರೆ ಅಮೇಲೆ ಬಿ ಎಸ್ ಆರ್ ಕಾಂಗ್ರೆಸ್ ಸೇರಿ ರಾಯಚೂರಿನಲ್ಲಿ ಸ್ಪರ್ಧಿಸಿ ಸೋಲನ್ನು ಅನುಭವಿಸುತ್ತಾರೆ ಹೀಗೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಪಕ್ಷನಂತರ ಆಗುತ್ತಾರೆ ಹೀಗೆ ಸಿನಿಮಾ ಮತ್ತು ರಾಜಕೀಯ ರಂಗದಲ್ಲಿ ಅಂತ ಒಂದು ಬದಲಾವಣೆಯ ಹಂತ ತಲುಪಲು ಸಾಧ್ಯವಾಗಲಿಲ್ಲ.

ಕಲರ್ ಕನ್ನಡ ಅಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಅಲ್ಲಿ 2016 ಅಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಕೊನೆಯ ಫೈನಲ್ ವರೆಗೂ ಹೋಗಿದ್ದರು ಆದರೆ ಕೆಲವೊಬ್ಬರಿಗೆ ಬಿಗ್ ಬಾಸ್ ಇಂದ ಆಚೆ ಬಂದ ಕೂಡಲೇ ಹಲವಾರು ಸಿನಿಮಾ ಇಲ್ಲ ಇತರ ಕ್ಷೇತ್ರ ಕೈಬೀಸಿ ಕರೆಯುತ್ತದೆ ಆದರೆ ಪೂಜಾ ಗಾಂಧಿ ಅಂದುಕೊಳ್ಳುವ ಮಟ್ಟಿಗೆ ಯಾವುದೇ ಅವಕಾಶ ಸಿಗಲಿಲ್ಲ ಕೆಲ ಏಕಾಪತ್ರ ಅಭಿನಯ ಅಂದರೆ ಪೂಜಾ ಗಾಂಧಿ ಹೀರೋ ಹಾಗೂ ಹೀರೋಯಿನ್ ಪಾತ್ರವನ್ನು ಒಬ್ಬರೇ ನಟನೆ ಮಾಡುವ ಸಿನಿಮಾ ಆಗಿತ್ತು ಆದರೆ ಆ ಸಿನಿಮಾಗಳು ಅಷ್ಟೊಂದು ಮನ್ನಣೆ ಸಿಗಲಿಲ್ಲ ಸಂಹರಿಣಿ ಎನ್ನುವ ಸಿನಿಮಾ ಇನ್ನು ತೆರೆ ಮೇಲೆ ಬರುವುದೋ ಇಲ್ಲವೋ ಎಂಬ ಸಂದೇಹದಲ್ಲಿ ಇದ್ದು ತಗ್ಗದೆಳೆ ಎನ್ನುವ ತೆಲುಗು ಸಿನಿಮಾ ಕೂಡ ಒಪ್ಪಿ ಕೊಂಡಿದ್ದಾರೆ ಇದನ್ನು ಬಿಟ್ಟರೆ ಬೇರೆ ಯಾವುದೇ ಸಿನಿಮಾ ಪೂಜಾ ಗಾಂಧಿ ಅವರ ಹತ್ರ ಇಲ್ಲ ಎನ್ನುವುದು ಬೇಜಾರಿನ ಸಂಗತಿ

ಪೂಜಾ ಗಾಂಧಿ ಅವರ ವೈಯಕ್ತಿಕ ಜೀವನ ಕೂಡ ಅಷ್ಟೊಂದು ಸಂತೋಷದಾಯಕ ಆಗಿಲ್ಲ ಎಂದೇ ಹೇಳಬಹುದು 2012ರಲ್ಲಿ ಇವರು ಆನಂದ ಗೌಡ ಎನ್ನುವ ಉದ್ಯಮಿಯ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಆದರೆ ಆನಂದ ಅವರಿಗೆ ಎರಡನೆಯ ಸಂಬಂಧ ಇದಾಗಿದ್ದು ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದು ಅಮೇಲೆ ಇವರನ್ನು ಮೆಚ್ಚಿದರು ಆದರೆ ಇವರ ಈ ಬಂದಕ್ಕೆ ಕೇವಲ ಒಂದು ತಿಂಗಳು ಅಷ್ಟೆ ನಂತರ ಕೊಂಡಿ ಮುರಿದು ಬಿತ್ತು. ಇದಕ್ಕೆ ಪೂಜಾ ಗಾಂಧಿ ಅವರ ತಾಯಿಯ ಅತಿಯಾದ ಹಿಯಾಳಿಕೆ ಹಾಗೂ ಆನಂದ ಅವರನ್ನು ಕರಿಯ ಎಂದು ಮತ್ತು ಅವರ ಕುಟುಂಬದ ಮೇಲೆ ಇಲ್ಲ ಸಲ್ಲದ ನಿಂದನೆ ಆರೋಪ ಮಾಡಿದಾಗ ಆನಂದ್ ತಿರುಗಿ ನಿಂತು ಇಬ್ಬರ ಮದ್ಯೆ ಜಟಾ ಪಟಿ ಆಗಿ ಸಂಬಂಧ ಕಡಿದು ಹೋಗುವುದು ಇದರ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದರು.

ಬಿಗ್ ಬಾಸ್ ಇಂದ ಆಚೆ ಬಂದ ಬಳಿಕ ಪ್ರಶಾಂತ ಎನ್ನುವವರ ಜೊತೆ ಮದುವೆ ಆಗ್ತೀನಿ ಎನ್ನುವ ಬಗ್ಗೆ ಊಹಾಪೋಹ ಇತ್ತು ಕ್ರಮೇಣ ಅದರ ಬಗ್ಗೆ ಎಲ್ಲೂ ಯಾವುದೇ ಮಾಹಿತಿ ಇಲ್ಲ ಹೀಗೆ ನಿಜ ಜೀವನದಲ್ಲಿ ಕೂಡ ಸಾಕಷ್ಟು ನೋವು ನಿರಾಸೆ ಹಾಗೂ ಸಂಕಷ್ಟಗಳ ಸರಮಾಲೆ ಧರಿಸಿರುವ ಪೂಜಾ ಗಾಂಧಿ ಅವರ ಸದ್ಯದ ವಯಸ್ಸು 39 ಆಗಿದ್ದರು ಇನ್ನೂ ಒಬ್ಬಂಟಿ ಜೀವನ ಸಾಗಿಸುತಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದು ಪುನೀತ್ ರಾಜಕುಮಾರ್ ಅವರ ಸಾವಿನ ದಿನ ಕಾಣಿಸಿಕೊಂಡಿದ್ದು ಬಿಟ್ಟರೆ ಮತ್ತೆ ಮೈಸೂರಿನ ಅತ್ಯಾಚಾರ ಪ್ರಕರಣ ವೇಳೆಯಲ್ಲಿ ಕೆಲವೊಂದು ಹೇಳಿಕೆ ನೀಡಿದ್ದರು ನಿಜ ಅಲ್ವಾ ಒಬ್ಬ ವ್ಯಕ್ತಿಯ ಜೀವನದಲ್ಲಿ ಏಳು ಬೀಳು ಬಂದರೆ ಆ ವ್ಯಕ್ತಿಯ ಜೀವನ ಹೇಗೆ ಅಲ್ಲೋಲ ಕಲ್ಲೋಲ ಆಗುವುದು ಎಂಬುದಕ್ಕೆ ಪೂಜಾ ಗಾಂಧಿ ಅವರೇ ನಿದರ್ಶನ ಎಂದು ಹೇಳಬಹುದು

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.