ಪುನೀತ್ ರಾಜಕುಮಾರ್ ಅವರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪಿದರು.‌ ಅವರು ಅನೇಕ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದರು. ಅವರ ಸಾಮಾಜಿಕ ಕಾರ್ಯದ ಬಗ್ಗೆ ಹೆಚ್ಚಾಗಿ ಎಲ್ಲರಿಗೂ ತಿಳಿದಿರಲಿಲ್ಲ ಆದರೆ ಅವರ ಸಾವಿನ ನಂತರ ಅವರ ಸಾಮಾಜಿಕ ಕಾರ್ಯದ ಬಗ್ಗೆ ತಿಳಿದು ಅಪ್ಪು ಬಗ್ಗೆ ಇನ್ನಷ್ಟು ಹೆಮ್ಮೆ ಅನಿಸಿತು. ಅವರ ಕೊನೆಯ ಚಿತ್ರ ಜೆಮ್ಸ್ ಬಗ್ಗೆ ಕೆಲವು ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದು ನಮ್ಮೋಂದಿಗೆ ಇಲ್ಲ ಅವರ ನೆನಪು ಸದಾ ನಮ್ಮೆಲ್ಲರ ಮನದಲ್ಲಿ ಇರುತ್ತದೆ. ಅಪ್ಪು ಅವರ ಕೊನೆಯ ಚಿತ್ರ ಜೆಮ್ಸ್ ಚಿತ್ರ ಬಿಡುಗಡೆಯಾಗಿದ್ದು ಅಭಿಮಾನಿಗಳನ್ನು ಕೈ ಬೀಸಿ ಕರೆಯುತ್ತಿದೆ. ಜೇಮ್ಸ್ ಸಿನಿಮಾ ಸಖತ್ ಹಿಟ್ ಆಗುತ್ತಿದೆ. ಪವರ್​​ ಸ್ಟಾರ್​​ ಪುನೀತ್​​ ರಾಜಕುಮಾರ್​​ ಅವರ ಕೊನೆಯ ಸಿನಿಮಾ ಜೆಮ್ಸ್ ರಿಲೀಸ್​ ಆಗಿ ಸೂಪರ್​​ ಹಿಟ್​​ ಆಗಿದೆ. ಈ ಸಿನಿಮಾದ ಹವಾ ಭಾರತ ಮಾತ್ರವಲ್ಲದೆ ಅಮೆರಿಕಾದಲ್ಲೂ ಜೋರಾಗಿದೆ. ಸಿನಿಮಾ ಬಿಡುಗಡೆಯಾಗಿ ಈಗಾಗಲೆ ಜನಪ್ರಿಯತೆ ಗಳಿಸುತ್ತದೆ.

ಇನ್ನು ಅಮೆರಿಕಾದ ನ್ಯೂಜೆರ್ಸಿಯಲ್ಲಿರುವ ಅಭಿಮಾನಿಗಳು ಅಪ್ಪು ಬರ್ತ್ ಡೆ ಅನ್ನು ಡಿಫರೆಂಟ್ ಆಗಿ ಸೆಲೆಬ್ರೇಟ್​ ಮಾಡಿದರು, ಇದರಿಂದ ಅಪ್ಪು ಅವರಿಗೆ ಅಮೆರಿಕ ದೇಶದಲ್ಲಿಯೂ ಅಭಿಮಾನಿಗಳಿದ್ದಾರೆ ಎನ್ನುವುದು ತಿಳಿಯುತ್ತದೆ. ಅಪ್ಪು ಸಿನಿಮಾ ನೋಡಿದ ಬಳಿಕ 250ಕ್ಕೂ ಹೆಚ್ಚು ಜನ ಕಾರುಗಳಲ್ಲಿ ರ್ಯಾಲಿ ಮಾಡುವ ಮೂಲಕ ಅಪ್ಪು ಜಾತ್ರೆ ಎಂಬ ಕಾರ್ಯಕ್ರಮ ಮಾಡಿದರು. ನಾರ್ತ್ ಬುನ್ಸ್ವಿಕ್‌ನಲ್ಲಿ ರೇಗಲ್ ಸಿನಿಮಾಸ್ ನಲ್ಲಿ ಪುನೀತ್​​ ಕೊನೆಯ ಸಿನಿಮಾ ಕಣ್ತುಂಬಿಸಿಕೊಂಡರು. ಇದರ ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಪುನೀತ್​ ರಾಜಕುಮಾರ್​​ ಅವರ ಪುತ್ರಿ ಸೇರಿದಂತೆ ನೂರಾರು ಅಪ್ಪು ಅಭಿಮಾನಿಗಳು ಭಾಗಿಯಾಗಿದ್ದರು.

ಅಪ್ಪು ಅವರ ಅಗಲಿಕೆಯ ನೋವನ್ನು ಭರಿಸಲು, ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾದ್ಯವಿಲ್ಲ. ಅವರ ಕೊನೆಯ ಚಿತ್ರವನ್ನು ನೋಡಲು ಮೊದಲನೆ ದಿನವೇ ಬಹು ಸಂಖ್ಯೆಯ ಜನರು ಥಿಯೇಟರ್ ಗೆ ಬಂದಿದ್ದರು. ಪುನೀತ್ ರಾಜಕುಮಾರ್ ಅವರ ಪ್ರತಿಯೊಂದು ಸಿನಿಮಾ ಒಂದು ಅರ್ಥಪೂರ್ಣ ಕಥೆಯನ್ನು ಹೊಂದಿರುತ್ತದೆ. ಅದರಂತೆ ಜೆಮ್ಸ್ ಸಿನಿಮಾ ಕೂಡ ಉತ್ತಮ ಕಥೆಯ ಆಧಾರವನ್ನು ಹೊಂದಿದೆ. ಈ ಸಿನಿಮಾ ಭರ್ಜರಿ ಯಶಸ್ಸನ್ನು ಪಡೆಯುವಲ್ಲಿ ಯಾವ ಸಂಶಯವು ಇಲ್ಲ. ನೀವು ಸಹ ಪುನೀತ್ ಅಭಿಮಾನಿಯಾಗಿದ್ದರೆ ಅವರ ಜೆಮ್ಸ್ ಸಿನಿಮಾವನ್ನು ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ.

Leave a Reply

Your email address will not be published. Required fields are marked *