Ultimate magazine theme for WordPress.

88 ವರ್ಷದ ಕನ್ನಡ ಚಿತ್ರರಂಗದ ಎಲ್ಲ ದಾಖಲೆ ಮುರಿದು, ಹೊಸ ಇತಿಹಾಸ ಬರೆದ ಜೇಮ್ಸ್ ಬರಿ 4 ದಿನಕ್ಕೆ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ? ಇದು ಕ್ರೇಜ್ ಅಂದ್ರೆ

0 3

ಕರುನಾಡ ಯುವರತ್ನ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಸಿನೆಮಾ ಮಾರ್ಚ್ 17ರಂದು ಬಿಡುಗಡೆಯಾಗಿ ಎಲ್ಲಾ ಸಿನೆಮಾಗಳ ದಾಖಲೆಯನ್ನು ಧೂಳಿಪಟ ಮಾಡಿದೆ. ಜೇಮ್ಸ್ ಸಿನೆಮಾ ರಿಲೀಸ್ ಆದ ಮೊದಲ ದಿನವೇ ದಾಖಲೆಯ 32ಕೋಟಿ ಕಲೆಕ್ಷನ್ ಮಾಡಿದೆ ಹಾಗೂ 4ನೇ ದಿನ ಯಶ್ ನಟನೆಯ ಕೆಜಿಎಫ್ ಚಿತ್ರದ ದಾಖಲೆಯನ್ನು ಅಳಿಸಿ ಹಾಕಿ 100ಕೋಟಿ ಕ್ಲಬ್ ಸೇರಿದೆ.ಇದೀಗ ಜೇಮ್ಸ್ ಚಿತ್ರದ ಕುರಿತು ತೆಲುಗು ನಟ ಜೂನಿಯರ್ NTR ಹೇಳಿದ್ದೇನು ಎಂದು ನೋಡೋಣ.

ಆರ್ ಆರ್ ಆರ್ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ಚಿಕ್ಕಬಳ್ಳಾಪುರದಲ್ಲಿ ಅದ್ದೂರಿಯಾಗಿ ನಿನ್ನೆ ನಡೆಯಿತು. ಕಾರ್ಯಕ್ರಮಕ್ಕೂ ಮೊದಲು ಆರ್ ಆರ್ ಆರ್ ತಂಡ ಸುದ್ದಿಗೋಷ್ಠಿ ಮಾಡಿದ್ದು, ಪುನೀತ್ ಮತ್ತು ಜೇಮ್ಸ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರೀ – ರಿಲೀಸ್ ಇವೆಂಟ್‌ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಆರ್ ಆರ್ ಆರ್ ತಂಡ ವಿಶೇಷ ನಮನ ಅರ್ಪಿಸಲಿದೆ. ಪುನೀತ್ ಹಾಡುಗಳನ್ನು ರಿಮಿಕ್ಸ್ ಮಾಡಿ ಡ್ಯಾನ್ಸ್ ಮಾಡಿ ಪರ್ಫಾಮೆನ್ಸ್ ನೀಡಿದೆ. ಇದೇ ಸಮಯದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾದ ಬಗ್ಗೆಯೂ ಚಿತ್ರತಂಡ ಮಾತನಾಡಿದೆ.

ಆರ್ ಆರ್ ಆರ್ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ತೆಲುಗು ಮಾತ್ರವಲ್ಲದೆ ದೇಶದ ಎಲ್ಲಾ ಭಾಗಗಳಲ್ಲಿಯೂ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಕರ್ನಾಟಕದಲ್ಲಿಯೂ ಆರ್ ಆರ್ ಆರ್ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ ಜೇಮ್ಸ್ ಸಿನಿಮಾ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆರ್ ಆರ್ ಆರ್ ಸಿನಿಮಾದಿಂದ ಜೇಮ್ಸ್ ಚಿತ್ರಕ್ಕೆ ಸಮಸ್ಯೆ ಆಗುತ್ತಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ತಂಡ, ಜೇಮ್ಸ್ ಸಿನಿಮಾಗೆ ಯಾವುದೇ ಸಮಸ್ಯೆ ಆಗದಂತೆ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಇದೇ ಸಮಯದಲ್ಲಿ ಪುನೀತ್ ಮತ್ತು ಜೇಮ್ಸ್ ಬಗ್ಗೆ ಮಾತನಾಡಿದ ಜೂ.ಎನ್ ಟಿ ಆರ್ ಅಪ್ಪು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇನ್ನು ಜೇಮ್ಸ್ ಸಿನಿಮಾ ನೋಡಿಲ್ಲ. ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ. ಬೇರೆ ಬೇರೆ ಕಡೆ ಓಡಾಡುತ್ತಿದ್ದೇವೆ. ಹಾಗಾಗಿ ಇನ್ನು ನೋಡಲು ಸಾಧ್ಯವಾಗಿಲ್ಲ. ಪುನೀತ್ ಯಾವಾಗಲು ನಮ್ಮ ಜೊತೆ ಇರುತ್ತಾರೆ. ಅನೇಕ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆರ್ ಆರ್ ಆರ್ ಸಿನಿಮಾದ ಎಲ್ಲಾ ಕೆಲಸ ಮುಗಿದ ಮೇಲೆ ಜೇಮ್ಸ್ ನೋಡುತ್ತೇನೆ ಎಂದು ಹೇಳಿದ್ದಾರೆ.

ಪುನೀತ್ ಸದಾ ನಮ್ಮ ಹೃದಯದಲ್ಲೇ ಇರುತ್ತಾರೆ. ಅವರ ಇಲ್ಲ ಅಂತ ಖಂಡಿತ ಅನಿಸಲ್ಲ. ನಮ್ಮ ಹೃದಯಲ್ಲಿ ಯಾವಾಗಲು ಇರುತ್ತಾರೆ. ಇಲ್ಲೇ ಪಕ್ಕದಲ್ಲೇ ಇದ್ದು ಶುಭಹಾರೈಸುತ್ತಿರುತ್ತಾರೆ. ನನಗೆ ಅವರ ಬಗ್ಗೆ ತುಂಬಾ ಗೊತ್ತು ಎಂದು ಜೂ.ಎನ್ ಟಿ ಆರ್ ಹೇಳಿದ್ದಾರೆ. ಜೂ.ಎನ್ ಟಿ ಆರ್ ಮತ್ತು ಪುನೀತ್ ರಾಜ್ ಕುಮಾರ್ ಇಬ್ಬರು ಉತ್ತಮ ಸ್ನೇಹಿತರು. ಪುನೀತ್ ರಾಜಕುಮಾರ್ ಮತ್ತು ಜೂನಿಯರ್ NTR ಸ್ನೇಹ ತುಂಬಾ ಗಾಢವಾದದ್ದು. ಅಪ್ಪು ಸಿನಿಮಾಗೆ ಜೂ.ಎನ್ ಟಿ ಆರ್ ಒಂದು ಹಾಡನ್ನು ಸಹ ಹಾಡಿದ್ದಾರೆ.

Leave A Reply

Your email address will not be published.