ಸರ್ಕಾರಿ ಜಾಗಗಳಲ್ಲಿ ಮನೇ ಕಟ್ಟಿಕೊಂಡು ಅಲ್ಲಿಯೇ ವಾಸ ಮಾಡುತ್ತಿದ್ದ ಜನರಿಗೆ ಸರ್ಕಾರದ ಕಡೆಯಿಂದ ಈಗೊಂದು ಸಿಹಿ ಸುದ್ಧಿ ದೊರಕಿದೆ. ಇಷ್ಟು ದಿನ ಅಕ್ರಮವಾಗಿ ಸರ್ಕಾರದ ಜಾಗದಲ್ಲಿ ಮನೇ ಕಟ್ಟಿಕೊಂಡು ವಾಸಿಸುವ ಜನರು ಆ ಜಾಗವನ್ನು ಸಕ್ರಮ ಮಾಡಿಕೊಳ್ಳಲು ಈಗೊಂದು ಅವಕಾಶವನ್ನು ಸರ್ಕಾರ ನೀಡಿದೆ. ಆ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಸರ್ಕಾರ ಅರ್ಜಿ ಸಲ್ಲಿಸಲು ಸೂಚಿಸಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಎಲ್ಲಾ ಜನರಿಗೂ ಅಕ್ರಮ ಹಾಗೂ ಸಕ್ರಮ ಜಾಗಗಳ ಬಗ್ಗೆ ಮಾಹಿತಿ ಇರುತ್ತದೆ ಇದರ ಕುರಿತಾಗಿ ರಾಜ್ಯ ಕಂದಯಾ ಸಚಿವ R ಅಶೋಕ್ ಅವರು ತಿಳಿಸಿರುವ ಹಾಗೆಯೇ ಈಗಾಗಲೇ ಸರ್ಕಾರದ ಜಾಗದಲ್ಲಿ ಇರುವ ಮನೆಯನ್ನು ಸಕ್ರಮ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನೇ ನಿಲ್ಲಿಸಿದ್ದರು ಆದರೆ ಈಗ ಮತ್ತೆ ಈ ಅವಧಿಯನ್ನು 2022 ಮಾರ್ಚ್ 31 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಂದರೆ ರಾಜ್ಯದಲ್ಲಿ ಇರುವಂತಹ ನಗರ ಹಾಗೂ ಗ್ರಾಮಾಂತರ ಪ್ರದೇಶ ಇಲ್ಲಿನ ಸರ್ಕಾರಿ ಜಮೀನುಗಳಲ್ಲಿ 2015 ಜನವರಿ ಒಂದರ ಮೊದಲು ಅನಧಿಕೃತವಾಗಿ ನಿರ್ಮಿಸಿಕೊಂಡ ಮನೆಗಳನ್ನು ಸಕ್ರಮ ಮಾಡಿಕೊಂಡು ಜನರು ಅವರವರ ಹೆಸರಿಗೆ ಮಾಡಿಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ 2015 ಜನವರಿ 1ಕ್ಕಿಂತ ಮೊದಲು ಮನೆಗಳನ್ನು ಕಟ್ಟಿಕೊಂಡವರು ಮಾತ್ರ ಇದಕ್ಕೆ ಅರ್ಜಿ ಸಲ್ಲಿಸಬಹುದು. 2015 ಜನವರಿ ಒಂದರ ನಂತರ ಮನೆಗಳನ್ನು ಕಟ್ಟಿಕೊಂಡವರು ಇದಕ್ಕೆ ಅರ್ಜಿಯನ್ನು ಸಲ್ಲಿಸಲು ಅನರ್ಹರು ಎಂದೇ ಹೇಳಬಹುದು.

ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಕರ್ನಾಟಕ ಕಂದಾಯ ಕಾಯ್ದೆಯ ಕಾಲಂ 94ಸಿ ಹಾಗೂ 94ಸಿಸಿ ಇದರ ಅನ್ವಯ ಅರ್ಜಿಯನ್ನು ಸಲ್ಲಿಸಲು 2019 ಮಾರ್ಚ್ 31 ರ ವರೆಗೆ ಅವಕಾಶವನ್ನು ನೀಡಲಾಗಿತ್ತು. ನಂತರ ಅದನ್ನು ತಿದ್ದುಪಡಿ ಮಾಡಿ 2022 ಮಾರ್ಚ್ 31 ರವರೆಗೂ ವಿಸ್ತಾರ ಮಾಡಲಾಗಿದೆ. ಈ ಮೂಲಕ ಸಾಕಷ್ಟು ಜನರಿಗೆ ಇನ್ನೊಂದು ಉತ್ತಮ ಅವಕಾಶವನ್ನು ನೀಡಲಾಗಿದೆ ಎಂದು ಹೇಳಬಹುದು. ಇನ್ನು ಈಗಾಗಲೇ ಬಹುತೇಕ ಅರ್ಜಿಗಳ ವಿಲೇವಾರಿ ಆಗಿದ್ದು ಬಾಕಿ ಉಳಿದಿರುವಂತಹ ಜನರು ಈ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕಂದಾಯ ಇಲಾಖೆಯ ಸಚಿವ R ಅಶೋಕ್ ಅವರು ತಿಳಿಸಿದ್ದಾರೆ. ಇದರ ಕುರಿತಾಗಿ ನಿಮ್ಮ ನಿಮ್ಮ ವಾರ್ಡ್ ಕೌನ್ಸಿಲರ್ ಇವರನ್ನು ಭೇಟಿಯಾಗಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ರೀತಿಯಾಗಿ ಅಕ್ರಮವಾಗಿ ಸರ್ಕಾರದ ಜಾಗದಲ್ಲಿ ಮನೆಯನ್ನು ಕಟ್ಟಿಕೊಂಡಿದ್ದರೆ ಅದನ್ನು ಸಕ್ರಮವಾಗಿ ನಿಮ್ಮ ನಿಮ್ಮ ಹೆಸರಿಗೆ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *