ಇಂದಿನ ದಿನಮಾನದಲ್ಲಿ ಜಗತ್ತು ಹೊಸ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರದತ್ತ ಸಾಗುತ್ತಿದೆ. ಹೊಸ ಯೋಚನೆ, ಚಿಂತನೆಗಳನ್ನು ಮಾಡುತ್ತಾ ನಡೆಯುತ್ತಿದ್ದಾರೆ. ಇಂದಿನ ದಿನಮಾನದಲ್ಲಿ ಸಾಮಾನ್ಯ ನಗದು ಹಣದ ಬಳಕೆ ಕಡಿಮೆಯಾಗಿ ಕ್ರಿಪ್ಟೋ ಕರೆನ್ಸಿಯಂತಹ ವರ್ಚುವಲ್ ಹಣದ ಬಳಕೆ ಹೆಚ್ಚುತ್ತಾ ಹೋಗುತ್ತಿದೆ. ಕ್ರಿಬಟೊ ಕರೆನ್ಸಿಯಲ್ಲಿ ಅಲ್ಪಪ್ರಮಾಣದ ಹೂಡಿಕೆ ಮಾಡಿದರೆ ಮುಂದೆ ಬಹಳ ದೊಡ್ಡ ಸಂಪತ್ತಾಗಿ ಬದಲಾಗಲಿದೆ. ಇದರಲ್ಲಿನ ವೈವಾಟಿನ ಸಮಸ್ಯೆಯನ್ನು ಬಗೆಹರಿಸಲು ಮೂರು ಯುವಕರು ಒಂದು ಸಾಫ್ಟ್ವೇರ್ ಅನ್ನು ತಯಾರಿಸುತ್ತಾರೆ. ಆದ್ದರಿಂದ ನಾವಿಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕ್ರಿಪ್ಟೋ ಕರೆನ್ಸಿಯಲ್ಲಿ ಹಲವಾರು ಬಗೆಯ ಡಿಜಿಟಲ್ ಕರೆನ್ಸಿ ಗಳಿದ್ದರೂ ಎಥೆರಿಯಂ ಎನ್ನುವ ಕರೆನ್ಸಿ ಜಗತ್ತಿನ ಎರಡನೇ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಆಗಿದೆ. ಆದರೆ ಎಥೆರಿಯಂನಲ್ಲಿ ನಿಧಾನಗತಿಯ ವಹಿವಾಟು ಹಾಗೂ ಅತಿ ಹೆಚ್ಚು ಶುಲ್ಕದ ಪರಿಣಾಮ ವಹಿವಾಟಿನಲ್ಲಿ ಸಮಸ್ಯೆಯಾಗುತ್ತಿತ್ತು. ಇದನ್ನು ಪರಿಹರಿಸಲು 2017ರಲ್ಲಿ ಜಯಂತಿ ಕನಾನಿ, ಸಂದೀಪ್ ನರ್ವಾಲ್ ಮತ್ತು ಅನುರಾಗ ಅರ್ಜುನ್ ಎನ್ನುವ ಮೂರು ವ್ಯಕ್ತಿಗಳು ಸೇರಿ ಬ್ಲಾಕ್ಚೈನ್ ಸ್ಕೇಲ್ ಎಬಿಲಿಟಿ ಪ್ಲಾಟ್ಫಾರ್ಮ್ ಪಾಲಿಗಾನ್ ನನ್ನು ತಯಾರಿಸುತ್ತಾರೆ. ಇದನ್ನು ಈ ಹಿಂದೆ ಮ್ಯಾಜಿಕಲ್ ಎನ್ನುವ ಹೆಸರಿನಿಂದ ಆರಂಭಿಸಿದ್ದರು.

ಪಾಲಿಗನ್ ಎಥೆರಿಯಂ ಎನ್ನುವ ಡಿಜಿಟಲ್ ಕರೆನ್ಸಿಯ ಮೇಲೆ ಅವಲಂಬಿತವಾಗಿದ್ದು ಬಳಕೆದಾರರಿಗೆ ಕಡಿಮೆ ವೆಚ್ಚದಲ್ಲಿ ಅಪ್ಲಿಕೇಶನ್ ಅನ್ನು ನಿರ್ಮಿಸಲು ಅನುವು ಮಾಡಿಕೊಡುತ್ತಿದೆ. ಸ್ಥಳೀಯ ಚಿಹ್ನೆಯಾದ ಮ್ಯಾಟಿಕ್ ನ ಬೆಲೆ 2019 ರಲ್ಲಿ 26 ಮಿಲಿಯನ್ ಡಾಲರ್ ಆಗಿತ್ತು. ಮ್ಯಾಟಿಕ್ ನ ಈ ಅಗಾಧವಾದ ಬೆಲೆ ಏರಿಕೆಯಿಂದ ಇದರ ಸಹ ಸಂಸ್ಥಾಪಕರು ಶತಕೋಟ್ಯಾಧಿಪತಿಗಳು ಆಗಿದ್ದರು. ನ್ಯಾಷನಲ್ ಬಾಸ್ಕೆಟ್ಬಾಲ್ ಅಸೋಶಿಯೇಶನ್ ನ ಮಾಲೀಕರಾಗಿರುವ ಮಾರ್ಕ್ಯೂಬನ್ ಅವರು ಬೃಹತ್ ಮತವನ್ನು ಪಾಲಿಗಾನ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಒಟ್ಟು ಜಗತ್ತಿನಲ್ಲಿ ದಾಖಲೆಯನ್ನು ಕಲೆ ಹಾಕುವುದು ತುಂಬಾ ಕಷ್ಟವಾಗಿದೆ.

ಇದಕ್ಕಾಗಿ ಅನೇಕ ಭಾರತೀಯರು ಹೆಚ್ಚಿನ ಹೂಡಿಕೆಯನ್ನು ಕ್ರಿಪ್ಟೋಕರೆನ್ಸಿಯ ಮೇಲೆ ಹೂಡಿದ್ದಾರೆ. ಕಂಪನಿಯನ್ನು ಆರಂಭಿಸುವ ಯೋಜನೆ ಸಂದೀಪ್ ನೈಲ್ವಾನ್ ಅವರಿಗೆ ಮೊದಲು ಬಂದಿರುತ್ತದೆ. ನಂತರ ಇವರು ಬ್ಲಾಕ್ ಚೈನನ್ನು ಆರಂಭಿಸುತ್ತಾರೆ. ಇವರ ಜೊತೆ ಜಯಂತಿ ಕನಾನಿ ಮತ್ತು ಅನುರಾಗ ಅರ್ಜುನ್ ಜೊತೆಯಾಗುತ್ತಾರೆ ಹಾಗೂ ಮ್ಯಾಟಿಕ್ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕುತ್ತಾರೆ. ನಂತರ ಈ ಸಂಸ್ಥೆ ಪಾಲಿಗಾನ್ ಎನ್ನುವ ಹೆಸರಿನಲ್ಲಿ ಮರುಸ್ಥಾಪನೆ ಯಾಗುತ್ತದೆ. ಹೋಲಿಗನ್ ಬ್ಲಾಕ್ ಚೈನನ್ನು ಕೋವಿಡ್ ಟೆಸ್ಟ್ ನಲ್ಲಿ ಬರುವ ಫಲಿತಾಂಶವನ್ನು ನಿರ್ವಹಣೆ ಮಾಡಿಕೊಳ್ಳಲು ಕೂಡ ಬಳಸುತ್ತಿದ್ದಾರೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಆಗಿರುತ್ತವೆ. ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *