Aishwariyaa Bhaskaran: ಸಿನಿಮಾ ಅವಕಾಶ ಇಲ್ದೆ ಸೋಪು ಮಾರುತಿದ್ದ ನಟಿ ಲಕ್ಷ್ಮಿ ಮಗಳಿಗೆ, ಖಾಸಗಿ ವಿಡಿಯೋ ಕಳುಹಿಸಿ ಕಾಟ ಕೊಟ್ಟ ಕಾಮುಕರು

movies News

Aishwariyaa Bhaskaran: ಕನ್ನಡ ಚಿತ್ರ ರಂಗದಲ್ಲಿ ತನ್ನದೆಯಾದ ವಿಶೇಷತೆ ಹಾಗೂ ನಟನೆ ಮೂಲಕ ಗುರುತಿಸಿ ಕೊಂಡಿರುವ ಹಿರಿಯ ನಟಿ (Actor Lakshmi) ಲಕ್ಷ್ಮಿ ಅವರ ಪುತ್ರಿ ಐಶ್ವರ್ಯ (Aishwariyaa Bhaskaran) ಅವರು ಒಂದಿಷ್ಟು ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸಿದ್ದಾರೆ ಆದರೆ ಸರಿಯಾದ ಅವಕಾಶ ಸಿಗದೇ ಐಶ್ವರ್ಯ ಅವರು ಸಿನಿಮಾ ಮತ್ತು ಕಿರುತೆರೆಯಿಂದ ದೂರ ಉಳಿದಿದ್ದಾರೆ.

ಐಶ್ವರ್ಯ (Aishwariyaa Bhaskaran) ಅವರು ತಮ್ಮ ಬದುಕಿನ ಬವಣೆಗಾಗಿ (ಹೊಟ್ಟೆಪಾಡಿಗಾಗಿ) ಸಾಬೂನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ, ಆದ್ರೆ ಇಲ್ಲಿ ಕೂಡ ಐಶ್ವರ್ಯ ಅವರಿಗೆ ಕಷ್ಟ ತಪ್ಪಿಲ್ಲ ಹೌದು ಆನ್ಲೈನ್ ಮೂಲಕ ಸಾಬೂನು ಮಾರಾಟ ಮಾಡಲು ತಮ್ಮ ಮೊಬೈಲ್ (Mobile) ಸಂಖ್ಯೆಯನ್ನು ಹಂಚಿಕೊಂಡಿರುವ ಕಾರಣ, ಆ ನಂಬರ್ ಅನ್ನು ಕೆಲವು ಕಾಮುಕರು ಕೆಟ್ಟದಾಗಿ ಬಳಸುತ್ತಿದ್ದಾರೆ .

ಗ್ರಾಹಕರೊಂದಿಗೆ ಆರ್ಡರ್ ಪಡೆಯಲು ತಮ್ಮ ಫೋನ್ ನಂಬರ್ ಅನ್ನು ಐಶ್ವರ್ಯ ಅವರು ಹಂಚಿಕೊಂಡಿದ್ದು ತಪ್ಪಾಯ್ತಾ ಎಂಬುದಾಗಿ ವಿಡಿಯೋ (VIdeo) ಮೂಲಕ ತಮಗೆ ಆಗಿರುವಂತ ಕಿರುಕುಳದ ಬಗ್ಗೆ ಸಂಪೂರ್ಣವಾಗಿ ತಮ್ಮದೇಯಾದ ಯೂಟ್ಯೂಬ್ ಚಾನಲ್ ನಲ್ಲಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ಬೇಸರ ಹೊರಹಾಕಿದ್ದಾರೆ

ಕೆಲ ಪುಂಡರು ಅನುಚಿತವಾಗಿ ಮೆಸೇಜ್ ಮಾಡುವುದಲ್ಲದೆ ತಮ್ಮ ಖಾಸಗಿ ಭಾಗದ ವಿಡಿಯೋ ಫೋಟೋಗಳನ್ನು ವಾಟ್ಸಾಪ್ನಲ್ಲಿ ಕಳುಹಿಸುತ್ತಿದ್ದಾರೆ ಎಲ್ಲವು ಕೂಡ ತಮ್ಮ ಬಳಿ ಇವೆ, ಇದನ್ನು ಇಟ್ಟುಕೊಂಡು ಸೈಬರ್ ಕ್ರೈಮ್ ಗೆ ಹೋಗಲು ಬಯಸುವುದಿಲ್ಲ, ಆದ್ರೆ ಇದೆ ರೀತಿ ಇವರ ಕಿರುಕುಳ ಮುಂದುವರೆದದ್ದೇ ಆದಲ್ಲಿ ಖಂಡಿತ ಇದರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ..Kodi Sree: ಕೊಡಿ ಶ್ರೀಗಳ ಭವಿಷ್ಯ 2023 ರಾಜ್ಯದಲ್ಲಿ ಈ ಪಕ್ಷ ಅಧಿಕಾರಕ್ಕೆ ಬರುತ್ತೆ

Leave a Reply

Your email address will not be published. Required fields are marked *