ನಿಮ್ಮ ಜಮೀನಿನ ನಕ್ಷೆ ಹಾಗೂ ಹೊಲದ ನಕ್ಷೆ  ಯಾವುದು?ಕಾಲುದಾರಿ ಯಾವುದು? ಎಲ್ಲಿಂದ ಹಾದು ಹೋಗುತ್ತದೆ? ಹಾಗೆಯೇ ನಿಮ್ಮ ಜಮೀನಿನ ಸರ್ವೇ ನಂಬರ್ ಸುತ್ತ ಮುತ್ತ ಯಾವ ಯಾವ ಸರ್ವೇ ನಂಬರ್ ಬರುತ್ತೆ? ನಿಮ್ಮ ಹಳ್ಳಿಯ ಯಾವ ಯಾವ ಸರ್ವೇ ನಂಬರ್ ಬರುತ್ತೆ?  ಇವೆಲ್ಲವನ್ನೂ ತಿಳಿಯಯಬೇಕೆಂದರೆ ಮೊದಲು ಸುಲಭದ ಕೆಲಸವಲ್ಲವಾಗಿತ್ತು. ಇಂತಹ ವಿಷಯಗಳಿಗೆ ಅನಾವಶ್ಯಕ ಎಷ್ಟೋ ತಿರುಗಾಟ ಆಗುತ್ತಿತ್ತು. ಆದರೆ ಈಗ ಅದು ಬಹಳ ಸುಲಭದ ಕೆಲಸವಾಗಿದೆ. ಇಂತಹ ಮಾಹಿತಿಗಳನ್ನು  ಭೂಮಾಪನಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಮೂಲಕ ತಿಳಿದುಕೊಳ್ಳಬಹುದು. ಭೂ ಕಂದಾಯ ಇಲಾಖೆಯು ಸಿದ್ಧಪಡಿಸಿದ ನಕ್ಷೆಯ ವ್ಯವಸ್ಥೆಯಿಂದ ನೋಡಬಹುದು. ಅದರ ಬಗ್ಗೆ ಮಾಹಿತಿಯನ್ನು ನಾವು ಇಲ್ಲಿ ನೋಡೋಣ.

ಇದನ್ನು  ನಾವು ತಿಳಿಯಬೇಕಾದಲ್ಲಿ ಹಲವಾರು ವಿಧಾನಗಳನ್ನು ಅನುಸರಿಸಬೇಕಿದೆ. ಅವುಗಳನ್ನು  ವಿವರವಾಗಿ ತಿಳಿಯೋಣ.

ಮೊದಲು ಮೊಬೈಲ್ ನಲ್ಲಿ ‘ಬ್ರೌಸರ್’ ಓಪನ್ ಮಾಡಿಕೊಳ್ಳಬೇಕು. ನಂತರ ಬ್ರೌಸರ್ ಅಡ್ರೆಸ್ ಬಾರ್ ನಲ್ಲಿ ‘landrecords.karnataka.govt.in’ ಎಂದು ಟೈಪ್ ಮಾಡಬೇಕು. ಬ್ರೌಸ್ ಮಾಡಿದಾಗ ವೆಬ್ ಸೈಟ್ ಓಪನ್ ಆಗುತ್ತದೆ.ಇದು ಕಂದಾಯ ಇಲಾಖೆಯ ವೆಬ್ ಸೈಟ್ ಆಗಿದೆ. ಬೇಸ್ ಕೆಳಗಡೆ ಸ್ಕ್ರೋಲ್ ಮಾಡಬೇಕು. ಅಲ್ಲಿ’ Revenue maps’  ಕ್ಲಿಕ್ ಮಾಡಬೇಕು.ತದನಂತರ ಮುಂದಿನ ಹಂತ ತೆರೆಯುತ್ತದೆ. ಅಲ್ಲಿ Revenue maps ಕೆಳಗಡೆ ಕೆಲವು ಜಾಗಗಳನ್ನು ಭರ್ತಿ ಮಾಡಬೇಕು. ಅಲ್ಲಿ ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕು. ತಾಲೂಕನ್ನು ಸಲೆಕ್ಟ್ ಮಾಡಬೇಕು.ಹಾಗೆಯೇ ಹೋಬಳಿ ಆಯ್ಕೆ ಮಾಡಬೇಕು.ನಂತರ ಮಾಪ್ ಟೈಪಲ್ಲಿ  ಕಡಸ್ಟ್ರಾಲ್ ಮಾಪ್ ಸೆಲೆಕ್ಟ್ ಮಾಡಬೇಕು.

ಹೋಬಳಿಯಲ್ಲಿ ಬರುವ ಎಲ್ಲಾ ಹೆಸರುಗಳನ್ನು ಇಲ್ಲಿ ನೋಡಬಹುದು. ಈಗ ನಮಗೆ ಬೇಕಾದ ಹಳ್ಳಿಯನ್ನು ಗುರುತಿಸಬೇಕು. ಅಲ್ಲಿಯ ಎದುರಿಗಿನ ಪಿಡಿಎಫ್ ಫೈಲ್ ನ್ನು ಕ್ಲಿಕ್ ಮಾಡಬೇಕು.ತಕ್ಷಣ ಮೊಬೈಲ್ ಕೆಳಭಾಗದಲ್ಲಿ ‘ಪಾಪ್ ಅಪ್ ಬ್ಲಾಕ್ಡ್’ ಎಂದು ತೋರಿಸುತ್ತದೆ. ಅಲ್ಲಿ ‘ಅಲ್ವೇಸ್ ಷೋ’ ಮೇಲೆ ಕ್ಲಿಕ್ ಮಾಡಬೇಕು.ತದನಂತರ ಊರಿನ ಜಮೀನಿನ ನಕ್ಷೆ ಪಿಡಿಫ್ ಫೈಲ್ನಲ್ಲಿ ಡೌನ್ಲೋಡ್ ಆಗುತ್ತದೆ.ಡೌನ್ಲೋಡ್ ಆಗಿರುವ ವಿಡಿಯೋ ಫೈಲ್ ಒಪನ್ ಮಾಡಿದಾಗ ನಿಮ್ಮ ಹಳ್ಳಿಯ ಸಂಪೂರ್ಣ ಜಮೀನಿನ ನಕ್ಷೆಯನ್ನು ಕಾಣಬಹುದು.

ಈ ನಕ್ಷೆಯಲ್ಲಿ ‘ಫೈನ್ಡ್ ಇನ್ ಡಾಕ್ಯುಮೆಂಟ್’ನಲ್ಲಿ ನಿಮ್ಮ ಸರ್ವೇ ನಂಬರ್ ಕೊಡಬೇಕು.ಅದು ‘ಅಡಾಬರೇಟರ್ ಆಪ್’ಇದ್ದಲ್ಲಿ ಮಾತ್ರ. ಇಲ್ಲವಾದಲ್ಲಿ ಆ ನಕ್ಷೆಯಲ್ಲಿ ಸರ್ವೇ ನಂಬರ್ ಹುಡುಕಬೇಕು. ಸರ್ವೇ ನಂಬರ್ ಸಿಕ್ಕ ನಂತರ ಜಮೀನಿನ ದಾರಿಯನ್ನು ಸಹ ಕಾಣಬಹುದು. ಹೊಲದ ಸುತ್ತ ಮುತ್ತ ಇರುವ ಸರ್ವೇ ನಂಬರ್ ಗಳನ್ನು ಕಾಣಬಹುದು.ಹೊಲಕ್ಕೆ ಹೋಗುವ ರಸ್ತೆ ಮತ್ತು ಊರಿನ ಮಾಹಿತಿಗಳನ್ನು ಸಂಪೂರ್ಣವಾಗಿ ಈ ನಕ್ಷೆಯಲ್ಲಿ ಕಂಡುಹಿಡಿಯಬಹುದಾಗಿದೆ.

ಒಂದುವೇಳೆ ಮಾಹಿತಿಗಳು ತಿಳಿಯುತ್ತಿಲ್ಲವಾದರೆ ಎಡಪಕ್ಕದಲ್ಲಿ ಅದರ ಬಗ್ಗೆ ಮಾಹಿತಿ ಇರುತ್ತದೆ.ಯಾವ ಯಾವ ಗುರುತುಗಳಿಗೆ ಯಾವ ಯಾವ ಚಿಹ್ನೆಯಿದೆ ಎಂದು ತಿಳಿಯುತ್ತದೆ.ಚಿಹ್ನೆಗಳ ಮೂಲಕ ದೇವಸ್ಥಾನ, ಕಾಲುದಾರಿ ಹೆಚ್ಚಿನ ವಿವರಗಳನ್ನು ತಿಳಿಯಬಹುದು. ಈ ಮಾಪ್ ನ್ನು ಸಿದ್ಧ ಪಡಿಸಿದವರು ಕರ್ನಾಟಕ ಸರಕಾರದ ಭೂ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ.ಈ ವ್ಯವಸ್ಥೆಯ ನಿಜವಾದ ಉದ್ದೇಶ ರೈತರ ಕಾಲುದಾರಿ ಯಾವುದು ಮತ್ತು ಎತ್ತಿನಬಂಡಿದಾರಿ ತಿಳಿಯಲಿ ಎಂದು. ಇದು ರೈತರಿಗೆ ಅಷ್ಟೆ ಅಲ್ಲ ಎಲ್ಲರಿಗೂ ಬಹಳ ಪ್ರಯೋಜನ ನೀಡುತ್ತದೆ.

Leave a Reply

Your email address will not be published. Required fields are marked *