ರೈತರು ದೇಶದ ಬೆನ್ನೆಲುಬಿನಂತೆ ಇದ್ದಾರೆ. ಜಮೀನು ಕಡಿಮೆಯೆ ಇರಲಿ ಅವರು ಬೆಳೆದ ಬೆಳೆಗಳಿಂದ ಇತರರ ಅನ್ನಕ್ಕಾಗಿ ಶ್ರಮಿಸೋದನ್ನ ರೈತ ಎಂದಿಗೂ ಹಿಂದೆಟು ಹಾಕಿಲ್ಲ. ಆದರೆ ರೈತರು ಕಡಿಮೆ ಜಮೀನು ಇದೆ, ನೀರಿನ ಪೂರೈಕೆ ಕಡಿಮೆ ಇದೆ ಎಂದು ಹಾಗೆ ಕುಳಿತರೆ ಲಾಭ ಪಡೆಯಲು ಸಾಧ್ಯವಿಲ್ಲ. ವೈಶಿಷ್ಟ್ಯವಾಗಿ ಯೋಚಿಸುವುದು ಉತ್ತಮ. ಎಲ್ಲರ ಯೋಚನೆಯಂತೆಯೆ ಇದ್ದರೆ ಎಲ್ಲಿದ್ದೆವೆಯೋ ಅಲ್ಲೆ ಉಳಿದು ಬಿಡುತ್ತೆವೆ. ಹಾಗಾದರೆ ಕಡಿಮೆ ಜಮೀನು, ಕಡಿಮೆ ನೀರಿನ ಪೂರೈಕೆ ಇದ್ದರೂ ಲಾಭ ಗಳಿಸುವ ಬಗೆ ಹೇಗೆ ಎಂಬುದು ಈ ಮಾಹಿತಿಯಿಂದ ತಿಳಿಯೋಣ.

ವ್ಯವಸಾಯದಲ್ಲೂ ತುಂಬಾ ಬಗೆಯ ವ್ಯವಸಾಯವಿದೆ. ಅದರಲ್ಲಿ ಒಂದು ಮಲ್ಟಿ ಲೇಯರ್ ಫಾರ್ಮಿಂಗ್, ಮಲ್ಟಿ ಕ್ರಾಫಿಂಗ್. ಮಹಾರಾಷ್ಟ್ರದ ವಿಶ್ವನಾಥ ಎಂಬ ರೈತನಿಗೆ ತುಂಬಾ ಆಕರ್ಷಿಸಿತ್ತು ಈ ಪದ್ದತಿ. ಅವರಿಗೆ ಅಲ್ಪ ಸ್ವಲ್ಪ ನೀರಾವರಿ ಇರುವ ಒಂದು ಎಕರೆಯಲ್ಲಿ ಜಮೀನಿನಲ್ಲಿ ಈ ಪದ್ದತಿಯನ್ನು ಅಳವಡಿಸಿದರು. ಈ ಪದ್ದತಿಯ ಪ್ರಕಾರ ಅವರು ಮೊದಲು ಭೂಮಿಯ ಅಡಿಯಲ್ಲಿ ಬೆಳೆಯುವ ಬೆಳೆ, ಭೂಮಿಯನ್ನು ಅಂಟಿಕೊಂಡು ಬೆಳೆಯುವ ಬೆಳೆ, ಭೂಮಿಯಿಂದ ಸ್ವಲ್ಪ ಎತ್ತರಕ್ಕೆ ಬೆಳೆಯುವ ಬೆಳೆ, ಭೂಮಿಯಿಂದ ಆರು ಅಡಿ ಎತ್ತರ ಬೆಳೆಯುವ ಬೆಳೆ ಹಾಗೂ ಮರವಾಗುವ ಬೆಳೆ ಹೀಗೆ ಐದು ರೀತಿಯ ಬೆಳೆ ಹಾಕಿದರು. ಇದರಿಂದ ಭೂಮಿ ಫಲವತ್ತಾಗುವುದಲ್ಲದೆ, ನೀರು ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತದೆ. ಒಂದು ಬೆಳೆ ಹಾಳಾಗಿ ನಷ್ಟವಾದರೂ ಇರುವ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ.

ಗೊಬ್ಬರವನ್ನು ಸರಿಯಾಗಿ ಬಳಕೆ ಮಾಡಿ ಬೆಳೆಯಿಂದ ಲಾಭಗಳಿಸಬಹುದು. ಕಡಿಮೆ ಭೂಮಿ, ತಕ್ಕ ಮಟ್ಟಿನ ನೀರು ಇದ್ರೂ ಲಾಬಕ್ಕೆನೂ ಕೊರತೆ ಬರುವುದಿಲ್ಲ. ಹೀಗೆ ವಿವಿಧ ಬೆಳೆಗಳನ್ನು ಬೆಳೆದ ವಿಶ್ವನಾಥ್ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಹತ್ತು ಲಕ್ಷದ ವರೆಗೂ ಲಾಭ ಮಾಡುತ್ತಿದ್ದಾರೆ. ಇವರ ನಂತರ ಈ ಪದ್ದತಿಯನ್ನು ಅಳವಡಿಸಿಕೊಂಡ ಕೆಲ ರೈತರು ಏಳರಿಂದ ಎಂಟು ಲಕ್ಷ ಲಾಭ ಗಳಿಸುತ್ತಿದ್ದಾರೆ. ನೀರು, ಗೊಬ್ಬರ ಇರುವ ಸೌಲಭ್ಯಗಳ ಸರಿಯಾದ ಬಳಕೆ ಮಾಡಲೂ ಸರಿಯಾಗಿರುವ ಈ ಪದ್ದತಿ ಅಳವಡಿಕೆಗೂ ತುಂಬಾ ಸುಲಭ.

ಕೃಷಿ ಪದ್ದತಿಯಲ್ಲಿಯೂ ಹಲವಾರು ವಿಧಗಳು, ಹಲವಾರು ರೀತಿಯ ಪದ್ದತಿಗಳನ್ನು ಪರಿಚಯಿಸಿದ್ದಾರೆ. ಅದರ ಬಗ್ಗೆ ಮಾಹಿತಿ ಅರಿತು, ಸರಯಾಗಿ ಬಳಸಿದರೆ, ಬೆಳೆಯಲು ಸೌಲಭ್ಯದ ಕೊರತೆ ಇದ್ದ ಜಮೀನಿನಲ್ಲಿಯೂ ಲಾಭ ಪಡೆಯಬಹುದು. ಆದರೆ ಜಮೀನಿಗೆ ತಕ್ಕಂತ ಪದ್ದತಿಯ ಆಯ್ಕೆ ಇಲ್ಲಿ ಮುಖ್ಯ.

Leave a Reply

Your email address will not be published. Required fields are marked *