ದೇಹಕ್ಕೆ ಶಕ್ತಿ ನೀಡುವ ಈ ಬೀಜಗಳನ್ನು ಹೇಗೆ ತಿನ್ನೋದು ಅಂತಾನೆ ಗೊತ್ತಿಲ್ಲ ಬಹಳಷ್ಟು ಜನಕ್ಕೆ

0 2

ಉತ್ತರ ಕರ್ನಾಟಕದ ಕಡೆ ಅಗಸೆ ಬೀಜವನ್ನು ಹೆಚ್ಚು ಬಳಸುತ್ತಾರೆ ಆದರೆ ಹೇಗೆ ಉಪಯೋಗಿಸಿದರೆ ಆರೋಗ್ಯಕರವಾಗಿ ಉತ್ತಮ ಲಾಭವನ್ನು ಪಡೆಯಬಹುದು ಎಂಬ ಮಾಹಿತಿ ಬಹಳಷ್ಟು ಜನರಿಗೆ ಗೊತ್ತಿಲ್ಲ. ಅಗಸೆ ಬೀಜ ಬಹಳ ಆರೋಗ್ಯಕರ ಲಾಭವನ್ನು ಹೊಂದಿದೆ. ಹಾಗಾದರೆ ಯಾವ ರೀತಿ ಅಗಸೆ ಬೀಜವನ್ನು ಸೇವಿಸಿದರೆ ಯಾವೆಲ್ಲಾ ಆರೋಗ್ಯಕರ ಪ್ರಯೋಜನವನ್ನು ಪಡೆಯಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಅಗಸೆ ಬೀಜ ಫ್ಲಾಕ್ಸ್ ಸೀಡ್ಸ್ ಇದನ್ನು ಹೆಚ್ಚು ಉಪಯೋಗಿಸುತ್ತಾರೆ ಆದರೆ ಹೇಗೆ ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಮಾಹಿತಿ ಎಲ್ಲರಿಗೂ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಅಗಸೆ ಬೀಜವನ್ನು ಹುರಿದು ಉಪಯೋಗಿಸುತ್ತಾರೆ ಹಾಗೆ ಮಾಡಿದರೆ ಅದರಲ್ಲಿರುವ ಪೋಷಕಾಂಶಗಳು ಹೊರಹೋಗುತ್ತದೆ. ಅಗಸೆ ಬೀಜವನ್ನು ಒಂದು ದಿನ ಬಿಸಿಲಿನಲ್ಲಿ ಒಣಗಿಸಿ ಸ್ವಲ್ಪ ಪುಡಿಮಾಡಿ ಒಂದು ಡಬ್ಬದಲ್ಲಿ ಹಾಕಿ ಫ್ರಿಜ್ಜಲ್ಲಿ ಇಟ್ಟು ಕೊಳ್ಳಬೇಕು ಪ್ರತಿದಿನ ಒಂದು ಚಮಚ ನಾವು ತಿನ್ನುವ ಆಹಾರದಲ್ಲಿ ಸೇರಿಸಿ ಸೇವಿಸಿದರೆ ಆರೋಗ್ಯಕರ ಪ್ರಯೋಜನ ಸಿಗುತ್ತದೆ. ಅಗಸೆ ಬೀಜವನ್ನ ಹಸಿಯಾಗಿ ಪುಡಿ ಮಾಡಿದರೆ ಇದರಲ್ಲಿ ಗುಡ್ ಫ್ಯಾಟ್, ಒಮೆಗಾ 3 ಫ್ಯಾಟಿ ಆಸಿಡ್, ವಿಟಮಿನ್, ಮೆಗ್ನೀಷಿಯಂ, ಐರನ್, ನಾರಿನ ಅಂಶ ಹೆಚ್ಚಿರುತ್ತದೆ. ಅಗಸೆ ಬೀಜ ಸೇವಿಸುವುದರಿಂದ ಮಲಬದ್ಧತೆ, ಕರುಳಿನ ಸಮಸ್ಯೆಯನ್ನು ನಿವಾರಿಸುತ್ತದೆ ಅಲ್ಲದೆ ಕ್ಯಾನ್ಸರ್ ಬರದಂತೆ ತಡೆಯುತ್ತದೆ.

ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಅಗಸೆ ಬೀಜ ಕಡಿಮೆ ಮಾಡುತ್ತದೆ. ಸಾಮಾನ್ಯವಾಗಿ ವಯಸ್ಸಾದಂತೆ ರಕ್ತದೊತ್ತಡ ಹೆಚ್ಚಾಗಿರುತ್ತದೆ ಅಗಸೆ ಬೀಜದ ಪುಡಿಯನ್ನು ಪ್ರತಿದಿನ ಸೇವಿಸುತ್ತಿದ್ದರೆ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಎಂದು ಸಂಶೋಧನೆ ತಿಳಿಸಿದೆ. ಬಹಳಷ್ಟು ಜನರು ಮಧುಮೇಹವನ್ನು ಎದುರಿಸುತ್ತಿದ್ದಾರೆ ಅಗಸೆ ಬೀಜದ ಪುಡಿಯನ್ನು ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಅಗಸೆ ಬೀಜ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ತೂಕವನ್ನು ಇಳಿಸುತ್ತದೆ. ಕೆಲವರಿಗೆ ಅಗಸೆ ಬೀಜ ತಿನ್ನುವುದರಿಂದ ಅಜೀರ್ಣವಾಗುತ್ತದೆ ಅಂತವರು ಅದನ್ನು ತೆಗೆದುಕೊಳ್ಳದೇ ಇರುವುದು ಉತ್ತಮ. ಗಮನಿಸಬೇಕಾದ ಅಂಶವೆಂದರೆ ಅಗಸೆ ಬೀಜವನ್ನು ಹಾಗೆಯೇ ಸೇವಿಸಬಾರದು ಏಕೆಂದರೆ ಅದು ಜೀರ್ಣವಾಗುವುದಿಲ್ಲ ಆದ್ದರಿಂದ ಪುಡಿಮಾಡಿ ಸೇವಿಸಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಇಂದಿನಿಂದಲೇ ಅಗಸೆ ಬೀಜದ ಪುಡಿಯನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿ ಸೇವಿಸುವುದನ್ನು ರೂಢಿಸಿಕೊಳ್ಳಿ.

Leave A Reply

Your email address will not be published.