ಆಧಾರ್ ಕಾರ್ಡ್ ನಲ್ಲಿ ಯಾವುದೇ ತಿದ್ದುಪಡಿ ಮಾಡಲು ಸುಲಭ ಮಾರ್ಗ

0 12

ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ವಿಳಾಸ ಬದಲಾವಣೆ ಮತ್ತು ಜನ್ಮ ದಿನಾಂಕ ಬದಲಾವಣೆ ಮಾಡಬೇಕಾದರೆ ನಿಮ್ಮ ಹತ್ತಿರ ಯಾವುದೇ ರೀತಿಯ ದಾಖಲೆಗಳಿಲ್ಲದಿದ್ದರು ಸುಲಭವಾಗಿ ಹೇಗೆ ಬದಲಾವಣೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ . ಈ ಬದಲಾವಣೆಗೆ ಸಂಬಂಧಿಸಿದಂತೆ ಅಪ್ಲಿಕೇಶನ್ ಕೊಟ್ಟಿದ್ದಾರೆ ಮತ್ತು ನಿಮ್ಮ ಬಳಿ ದಾಖಲೆ ಗಳಿಲ್ಲದಿದ್ದರೆ ಯಾರ ಸಹಿ ಮಾಡಿಸಿ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಮೊದಲು ನಿಮ್ಮ ಆಧಾರ್ ವೆಬ್ ಸೈಟ್ ಯುಐಡಿಎಐ. ಜಿಒಟಿ. ಇನ್ ಓಪನ್ ಮಾಡಿದಾಗ ಮೈ ಆಧಾರ್ ಅಂತ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಬಲಬದಿಯಲ್ಲಿ ಡೌನ್ಲೋಡಸ್ ಅಂತ ಆಯ್ಕೆ ಇರುತ್ತದೆ ಅದರ ಕೆಳಗೆ ಲಿಸ್ಟ್ ಆಫ್ ಸಪೊರ್ಟಿಂಗ ಡಾಕ್ಯುಮೆಂಟ್ಸ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮಮುಂದೆ ಒಂದು ಪುಟ ತೆರೆದುಕೊಳ್ಳುತ್ತದೆ. ನಿಮ್ಮ ಹತ್ತಿರ ದಾಖಲೆಗಳಿದ್ದಾಗ ನೀವು ಬದಲಾವಣೆಯನ್ನು ಮಾಡಲು ಯಾವ ಯಾವ ದಾಖಲೆಗಳು ಬೇಕು ಎಂಬುದನ್ನು ತಿಳಿದುಕೊಳ್ಳಬಹುದು.

ನಿಮ್ಮ ಹೆಸರು ಮತ್ತು ಫೋಟೊವನ್ನು ಬದಲಾವಣೆ ಮಾಡಲು ಮೂವತ್ತೆರಡು ದಾಖಲೆಗಳ ಹೆಸರನ್ನು ನೀಡಿದ್ದಾರೆ. ಅದರಲ್ಲಿ ಯಾವುದಾದರು ಒಂದು ದಾಖಲೆಗಳಿದ್ದರು ನೀವು ನಿಮ್ಮ ಹೆಸರು ಫೋಟೊ ಬದಲಾವಣೆ ಮಾಡಬಹುದು.

ನಿಮ್ಮ ಕುಟುಂಬದಲ್ಲಿರುವ ಯಾವುದೇ ಸದಸ್ಯರ ಹೆಸರನ್ನು ಅಥವಾ ಫೋಟೊ ಅಥವಾ ಜನ್ಮದಿನಾಂಕವನ್ನು ಬದಲಾವಣೆ ಮಾಡುವುದಿದ್ದರೆ ಅಲ್ಲಿ ಹದಿನಾಲ್ಕು ದಾಖಲೆಗಳ ಬಗ್ಗೆ ತಿಳಿಸಿದ್ದಾರೆ ಅವುಗಳು ನಿಮ್ಮ ಬಳಿ ಇದ್ದರೆ ನೀವು ಸ್ವತಃ ಬದಲಾವಣೆ ಮಾಡಬಹುದು.
ಅಥವಾ ಜನ್ಮ ದಿನಾಂಕ ಬದಲಾವಣೆ ಮಾಡಬೇಕಿದ್ದರೆ ಒಂಬತ್ತು ದಾಖಲೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅವು ಇದ್ದರೆ ಬದಲಾವಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ನೀವು ಆಧಾರ್ ಲಿಂಕನ್ನು ತೆರೆದಾಗ ಅಲ್ಲಿ ಆರು ಪೂಟಗಳಿರುತ್ತವೆ ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಅದರಲ್ಲಿ ಮೂರನೇ ಪುಟದಲ್ಲಿ ಒಂದು ಫಾರ್ಮ್ ಬರುತ್ತದೆ ಅಲ್ಲಿರುವ ಫಾರ್ಮ್ಯಾಟ್ ಅನ್ನು ತುಂಬಿ ನೀವು ಆಧಾರ್ ಕಾರ್ಡನ್ನು ಬದಲಾವಣೆ ಮಾಡಬಹುದು ನಿಮಗೆ ಆ ಫಾರ್ಮ್ಯಾಟ್ ತುಂಬಲು ಸರಿಯಾಗಿ ಗೊತ್ತಿಲ್ಲದಿದ್ದರೆ ಪುಟ ಸಂಖ್ಯೆ ನಾಲ್ಕರಲ್ಲಿ ಒಂದು ಡೆಮೊ ಕೊಡಲಾಗಿದೆ. ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಯಾವ ರೀತಿ ಅರ್ಜಿ ತುಂಬಬೇಕು ಅಂತ ಇದೆ ಇದನ್ನು ಪ್ರಿಂಟ್ ತೆಗೆದುಕೊಳ್ಳಬಹುದು.

ನೀವು ಆಧಾರ್ ಬದಲಾವಣೆ ಮಾಡಲು ಅರ್ಜಿ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನೀವು ಯಾವ ಅಧಿಕಾರಿಯ ಸಹಿ ಮಾಡಿಸುತ್ತಿರೋ ಆ ದಿನಾಂಕವನ್ನು ತುಂಬಬೇಕು ನಂತರ ರೆಸಿಡೆಂಟ್ ನ್ನು ಗುರುತು ಮಾಡಿ ನಂತರ ಅಪ್ಡೇಟ್ ರಿಕ್ವೆಸ್ಟ್ ನ್ನು ಗುರುತುಮಾಡಿ ನಿಮ್ಮ ಹಳೆಯ ಆಧಾರ್ ನಂಬರ್ ಅನ್ನು ತುಂಬಿ ನಿಮ್ಮ ಹೆಸರು ಆಧಾರ್ ಕಾರ್ಡ್ ನಲ್ಲಿರುವಂತೆ ತುಂಬಿ ಕೆಳಗೆ ಕೇಳುವ ವಿಲಾಸಗಳನ್ನು ತುಂಬಬೇಕು.ಯಾರ ಆಧಾರ್ ಬದಲಾವಣೆ ಮಾಡುತ್ತಿದ್ದೀರಿ ಅವರ ಸಹಿ ಮಾಡಿಸಿ ಪಕ್ಕದಲ್ಲಿ ಆಧಾರ್ ಬದಲಾವಣೆ ಮಾಡುವವರ ಫೋಟೊ ಹಚ್ಚಿ ಅದರ ಮೇಲೆ ಗೆಜೆಟೆಡ್ ಅಧಿಕಾರಿಗಳ ಸಹಿ ಮಾಡಿಸಬೇಕು. ಅವರ ಸಹಿ ಕ್ರಾಸ್ ನಲ್ಲಿರಬೇಕು ಮತ್ತು ಅವರ ಸೀಲ್ ಬೇಕಾಗುತ್ತದೆ.

ನಂತರ ಕೆಳಗಡೆ ಗೆಜೆಟೆಡ್ ಅಧಿಕಾರಿಗಳ ಹೆಸರು ಹುದ್ದೆ ಅವರ ಕಛೇರಿಯ ವಿಳಾಸ ಅವರ ಫೋನ್ ನಂಬರ್ ಹಾಕಿ ಅವರು ಯಾವ ಅಧಿಕಾರದಲ್ಲಿದ್ದಾರೆ ಅದನ್ನು ಗುರುತು ಮಾಡಿ ಅವರು ಸಹಿ ಮತ್ತು ಸೀಲ್ ಹಾಕಿ ಕೊಡುತ್ತಾರೆ. ಅಲ್ಲಿ ಕೆಳಗಡೆ ಯಾವ ಬದಲಾವಣೆಗೆ ಯಾವ ಅಧಿಕಾರಿಗಳು ಸಹಿ ಮಾಡಬಹುದು ಎಂಬುದನ್ನು ತಿಳಿಸಿದ್ದಾರೆ.

ದಾಖಲೆಗಳಿಲ್ಲದಿದ್ದರು ನೀವು ಈ ಫಾರ್ಮ್ ಅನ್ನು ಪ್ರಿಂಟ್ ತೆಗೆದು ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ವಿಳಾಸ ಜನ್ಮ ದಿನಾಂಕ ವನ್ನು ಸುಲಭವಾಗಿ ಬದಲಾವಣೆ ಮಾಡಬಹುದು. ನಿಮ್ಮ ಹತ್ತಿರ ಕಂಪ್ಯೂಟರ್ ಅಥವಾ ಮೊಬೈಲ್ ಇದ್ದರೆ ಕೇವಲ ಇವತ್ತು ರೂಪಾಯಿಗಳಲ್ಲಿ ನಿಮ್ಮ ಆಧರನ್ನು ಸ್ವತಃ ಬದಲಾವಣೆ ಮಾಡಬಹುದು ನಿಮಗೆ ಬದಲಾವಣೆ ಮಾಡಲು ಬರದಿದ್ದರೆ ನಿಮ್ಮ ಹತ್ತಿರದ ಸಿ ಎಸ್ ಸಿ ಸೆಂಟರ್ ಗ್ರಾಮ ಒಂದು ಅಥವಾ ಯಾವುದೇ ನೆಟ್ ಸೆಂಟರ್ ಗೆ ಹೋಗಿ ಬಹಳ ಸುಲಭವಾಗಿ ಆಧಾರ್ ಬದಲಾವಣೆ ಮಾಡಬಹುದಾಗಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.