ದೇವಸ್ಥಾನಗಳ ಮೇಲೆ ಶೃಂಗಾರದ ಶಿಲ್ಪಗಳು ಇರಲು ಕಾರಣವೇನು ತಿಳಿಯಿರಿ

0 2,010

ಭಾರತ ದೇಶ ಸಂಪ್ರದಾಯಗಳನ್ನು ತನ್ನ ಮಡಿಲಲ್ಲಿರಿಸಿಕೊಂಡಿರುವಂತಹ ಸುಸಂಸ್ಕೃತ ದೇಶ. ಭಾರತ ದೇಶದಲ್ಲಿ ಎಷ್ಟೋ ವರ್ಷಗಳಿಂದ ನಡೆದು ಬರುತ್ತಿರುವ ಆಚಾರ ವಿಚಾರ ಗಳ ಬಗ್ಗೆ ನೀವು ಕೇಳಿ ಇರುತ್ತೀರಿ. ಆದರೆ ಒಂದು ಬಾರಿ ನಮ್ಮ ಚರಿತ್ರೆಯನ್ನು ಪರಿಶೀಲಿಸಿದರೆ ವಿಧ ವಿಧವಾದ ಆಚಾರ ಬಗೆ ಬಗೆಯಾದ ಸಂಸ್ಕೃತಿಗಳು ಕಂಡು ಬರುತ್ತದೆ.

ಅಷ್ಟು ವಿಧ ವಿಧವಾದ ಸಂಪ್ರದಾಯಗಳನ್ನು ಒಳಗೊಂಡಿರುವ ನಮ್ಮ ಭಾರತ ದೇಶದಲ್ಲಿ ಶೃಂಗಾರದ ಬಗ್ಗೆ ನಾಲ್ಕು ಜನರ ಮಧ್ಯೆ ಮಾತನಾಡುವುದು ದೊಡ್ಡ ಸಾಧನೆ ಎಂದೇ ಹೇಳಬಹುದು. ಪ್ರತಿಯೊಬ್ಬರೂ ಭಾಗವಹಿಸುವ ಈ ಶೃಂಗಾರದ ಬಗ್ಗೆ ಮಾತನಾಡಲು ನಮ್ಮ ಭಾರತೀಯ ಜನರು ಹಿಂಜರಿಯುತ್ತಾರೆ . ಹಾಗಾದರೆ ಶೃಂಗಾರದ ಬಗ್ಗೆ ಮಾತನಾಡಲು ಅಸಹ್ಯ ಪಡುವಂತಹ ನಮ್ಮ ದೇಶದಲ್ಲಿ ಕೆಲವು ದೇವಾಲಯದಲ್ಲಿ ಶೃಂಗಾರದ ಶಿಲ್ಪಗಳಿರಲು ಕಾರಣವೇನು? ಎಂಬ ಪ್ರಶ್ನೆಗೆ ನಾವಿಂದು ಉತ್ತರ ಕಂಡು ಕೊಳ್ಳುಣ.

ಶೃಂಗಾರದ ಬಗ್ಗೆ ಮತ್ತೊಬ್ಬರ ಎದುರಿಗೆ ಮಾತನಾಡುವುದು ಸ್ವಲ್ಪ ಕಷ್ಟ ಕರವಾದ ವಿಷಯ ಆದರೆ ಪ್ರಾಚೀನ ಕಾಲದ ಬಗ್ಗೆ ನಾವು ಪರಿಸಾಶಿಲಿಸಿದರೆ ಶೃಂಗಾರವನ್ನೂ ಸಹ ವಿದ್ಯಾಭ್ಯಾಸದ ಒಂದು ಭಾಗ ದಂತೆ ನೋಡುತ್ತಿದ್ದರು. ಶೃಂಗಾರದ ಬಗ್ಗೆ ಪ್ರಪಂಚದಲ್ಲಿ ಮೊಟ್ಟಮೊದಲನೆಯದಾಗಿ ಬರೆದಿರುವ ಗ್ರಂಥ ಕಾಮ ಸೂತ್ರ ಈ ಗ್ರಂಥವನ್ನು ಕ್ರಿ. ಪೂ ನಾಲ್ಕನೆಯ ಹಾಗೂ ಕ್ರಿ. ಪೂ ಎರಡನೇ ಶತಮಾನದ ಮಧ್ಯಭಾಗದಲ್ಲಿ ರಚಿಸಲಾಗಿದೆ ಎಂದು ಹೇಳಲಾಗಿದೆ. ಪ್ರಾಚೀನ ಕಾಲದಲ್ಲಿ ಶೃಂಗಾರಕ್ಕೆ ಕೊಡುತ್ತಿದ್ದಂತಹ ಬೆಲೆ ಏನೆಂಬುದು ನಮಗಿಗಾಗಲೇ ಅರ್ಥ ವಾಗಿರಬೇಕು.

ಒರಿಸ್ಸಾದಲ್ಲಿ ಇರುವ ಕೊನಾರ್ಕ್ ಸೂರ್ಯ ದೇವಾಲಯದ ಮೇಲೆ ಹಾಗೂ ಮಧ್ಯಪ್ರದೇಶದಲ್ಲಿರುವ ಕಾಜರಾಹೋ ಆಲಯದಂತಹ ಬಹಳಷ್ಟು ಆಲಯದ ಮೇಲೆ ನಾವು ಶೃಂಗಾರ ಶಿಲ್ಪ ಗಳನ್ನೂ ಕಾಣಬಹುದು. ಹದಿಮೂರನೇ ಶತಮಾನದಲ್ಲಿ ನರಸಿಂಹ ದೇವ ಎನ್ನುವ ರಾಜ ಸೂರ್ಯ ದೇವಾಲಯವನ್ನು ನಿರ್ಮಿಸಿದ್ದಾರೆ. ಒಂಬತ್ತು ರಿಂದ ಹನ್ನೆರಡನೇ ಶತಮಾನದ ಮಧ್ಯದಲ್ಲಿ ಕಾಜರಾಹೋ ಆಲಯ ನಿರ್ಮಿಸಲಾಗಿದೆ.

ಈ ಆಲಯವನ್ನು ಚಂಡೆಲ್ ರಾಜ ವಂಶಸ್ಥರು ನಿರ್ಮಿಸಿದ್ದಾರೆ ಈ ಎರಡು ಪ್ರಮುಖ ಆಲಯಗಳ ಮೇಲೆ ಬಹಳಷ್ಟು ಶೃಂಗಾರ ಶಿಲ್ಪ ಗಾಳನ್ನು ಕಾಣಬಹುದು. ಈ ಆಲಯವನ್ನು ನೋಡುವವರ ಮನಸ್ಸಿನಲ್ಲಿ ಮೊದಲು ಮೂಡುವ ಪ್ರಶ್ನೆ ಆಲಯಗಳ ಮೇಲೆ ಈ ಶೃಂಗಾರ ಶಿಲ್ಪ ಗಳು ಏಕಿವೆ ಎಂದು. ಆ ಆಲಯದ ನಿರ್ಮಾಣ ಶೈಲಿ ಈಗಲೂ ಸಹ ಬಹಳ ಜನರಿಗೆ ಆಶ್ಚರ್ಯ ವನ್ನುಂಟು ಮಾಡುತ್ತದೆ ಈ ಕಾಜರಾಹೋದಲ್ಲಿ ಒಟ್ಟು ಎಂಬತ್ತೈದು ಆಲಯಗಳಿದ್ದು ಈಗ ಕೇವಲ ಇಪ್ಪತ್ತೆರಡು ಮಾತ್ರ ಉಳಿದಿವೆ. ಮಿಕ್ಕ ಆಲಯಗಳು ಪ್ರಕೃತಿ ವಿಕೋಪಕ್ಕೆ ನಾಶ ಗೊಂಡಿವೆ ಈ ಆಲಯವನ್ನು ಸಾವಿರದ ಒಂಬೈನೂರಾ ಎಂಬತ್ತಾರರಲ್ಲಿ ಯುನೆಸ್ಕೋದವರು ಇದನ್ನು ವಿಶ್ವ ಪರಂಪರೆಯ ತಾಣವನ್ನಾಗಿ ಪ್ರಕಟಿಸಿದ್ದಾರೆ.

ಈ ಆಲಯದ ಒಳಗೆ ಪ್ರವೇಶಿಸಿದೊಡನೆ ಗಂಡು ಹೆಣ್ಣು ಹಾಗೂ ಪ್ರಾಣಿಗಳ ಶೃಂಗಾರ ಶಿಲ್ಪ ಗಳು ನಮಗೆ ಕಾಣಸಿಗುತ್ತವೆ ಈ ಶಿಲ್ಪಗಳಿಗೆ ಸಂಬಂಧಿಸಿದ ಹಾಗೆ ಕೆಲವು ಕಥೆಗಳಿವೆ ಅದರಲ್ಲೊಂದು ಕಥೆಯನ್ನು ನೋಡುವುದಾದರೆ ಈ ಆಲಯವನ್ನು ನಿರ್ಮಿಸಿರು ವಂತಹ ಚಂಡೆಲ ವಂಶಸ್ಥರು ತಾಂತ್ರಿಕ ಸೂತ್ರಗಳನ್ನು ಬಹಳಷ್ಟು ನಂಬುತ್ತಿದ್ದರು ಕಾರಣ ಈ ಆಲಾಯಗಳ ಮೇಲೆ ಶೃಂಗಾರ ಶಿಲ್ಪ ಗಳ್ಳನ್ನು ಕೆತ್ತಿಸಿದ್ದಾರೆ ಎಂದು ದೇವಾಲಯದ ಪುರಾಣಗಳು ಹೇಳುತ್ತವೆ. ಮತ್ತೊಂದು ಕತೆಯ ಪ್ರಕಾರ ಪ್ರಾಚೀನ ಕಾಲದಲ್ಲಿ ಆಲಯಗಳನ್ನು ವಿದ್ಯಾಭ್ಯಾಸ ಸ್ಥಳಗಳೆಂದು ಪರಿಗಣಿಸುತ್ತಿದ್ದರು ಆದ್ದರಿಂದಲೇ ಶೃಂಗಾರವನ್ನು ಕಲಿಸುವುದಕ್ಕಾಗಿ ಈ ಶಿಲ್ಪಗಳನ್ನು ಕೆತ್ತಲಾಗಿದೆ ಎಂದು ಹೇಳುತ್ತಾರೆ.

ಅದು ಮಾತ್ರವಲ್ಲದೆ ದೇವಾಲಯಗಳಲ್ಲಿ ಶೃಂಗಾರವನ್ನು ತಿಳಿಸುವ ಮತ್ತು ತೋರಿಸುವಂತಹ ಶಿಲ್ಪಗಳು ಹೊಸಜೀವನಕ್ಕೆ ಮತ್ತು ಹೊಸ ಪ್ರಾರಂಭಕ್ಕೆ ಶುಭ ಸೂಚಕ ಎಂದು ನಂಬುತ್ತಾರೆ ಅದು ಮಾತ್ರವಲ್ಲದೆ ದೇವಾಲಯದ ಹೊರಗಡೆ ಇರುವಂತಹ ಈ ಶಿಲ್ಪಗಳನ್ನು ನೋಡಿ ನಿಮ್ಮ ಭಾವನೆ ಬೇರೆಡೆಗೆ ವಾಲದೆ ದೇವರನ್ನು ಮನಸಾರೆ ಪ್ರಾರ್ಥಿಸುತ್ತಿರ ಎಂದು ಈ ಆಲಯಗ ಮೇಲೆ ಶೃಂಗಾರ ಶಿಲ್ಪ ಗಳನ್ನ ಕೆತ್ತಲಾಗಿದೆ ಎಂದು ಹೇಳುತ್ತಾರೆ.

ಜೀವನಕ್ಕೆ ಸಂಬಂಧಿಸಿದ ಎಲ್ಲ ಅಂಶಳನ್ನೂ ನಾವು ಆಲಯಗಳಲ್ಲಿ ಕಾಣಬಹುದು ಶೃಂಗಾರ ಕೇವಲ ಅದರಲ್ಲೊಂದು ಭಾಗ ಮಾತ್ರವೇ ಎಂದು ಕೆಲವರ ನಂಬಿಕೆ ಆದರೆ ಈಗಲೂ ಸಹ ಈ ರೀತಿಯಾದ ಶೃಂಗಾರ ಶಿಲ್ಪ ಗಳು ದೇವಾಲಯಗಳ ಮೇಲೆ ಏತಕ್ಕಾಗಿ ಕೆತ್ತಿದ್ದಾರೆ ಎಂದು ಸ್ಪಷ್ಟ ವಾದ ಕಾರಣ ತಿಳಿದು ಬಂದಿಲ್ಲ ಆದರೆ ಹಲವವರು ಈ ದೇವಾಲಯಗಳ ಮೇಲಿರುವ ನಗ್ನ ಶಿಲ್ಪಗಳು ಸ್ವತಃ ದೇವರೇ ನಡೆಸುತ್ತಿರುವ ಶೃಂಗಾರ ವೆಂದು ಹೇಳುತ್ತಾರೆ.

ಆದರೆ ಆ ಶಿಲ್ಪಗಳು ಯಾವ ದೇವರಿಗೂ ಸಂಬಂಧಿಸಿರುವುದಿಲ್ಲ. ಇನ್ನು ಕೆಲವರು ಇವು ಪ್ರಾಚೀನ ಕಾಲದಲ್ಲಿ ಸುಂದರವಾದ ಮಹಿಳೆಯರು ಗಂಧರ್ವರೊಂದಿಗೆ ನಡೆಸುತ್ತಿರುವ ಶೃಂಗಾರಕ್ಕೆ ಸಂಕೇತವೆಂದು ಹೇಳುತ್ತಾರೆ. ಈ ಮೇಲಿನ ಕಾರಣಗಳನ್ನು ನೋಡಿದಾಗ ನಮ್ಮ ಪವಿತ್ರ ದೇವಾಲಯಗಳ ಮೇಲೆ ಏತಕ್ಕಾಗಿ ಶೃಂಗಾರದ ಶಿಲ್ಪಗಳನ್ನು ಕೆತ್ತಲಾಗಿದೆ ಎಂಬುದು ನಮಗೆ ತಿಳಿಯುವುತ್ತದೆ.

Leave A Reply

Your email address will not be published.