Actor Sithara: ನಟಿ ಸಿತಾರಾ ವಯಸ್ಸು 49 ಆದ್ರೂ ಇನ್ನು ಮದುವೆಯಾಗದೆ ಇರೋದ್ಯಾಕೆ? ಇನ್ನು ಆ ನಟನ ನೆನಪಲ್ಲೇ ಇದ್ದಾರಾ..

Recent Story

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಿತಾರಾ (Actor Sithara) ಸದ್ಯ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 90 ದಶಕದಲ್ಲಿ ಟಾಪ್ ನಟಿಯಾಗಿ ಮೆರೆದು ಅಭಿನಯದ ಮೂಲಕ ಸಂಚಲನ ಸೃಷ್ಟಿಸಿದ್ದ ಬಹುಭಾಷ ನಟಿ. ತಮಿಳು, ತೆಲುಗು, ಮಲಯಾಳಂ (Tamil, Telugu, Malayalam) ಮತ್ತು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಸಿತಾರಾ ಕನ್ನಡದಲ್ಲಿ ಹೆಚ್ಚಾಗಿ ಅಳುಮುಂಜಿ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು.

ಮುದ್ದು ಮುಖದ ಸುಂದರ ನಟಿ ಸಿತಾರಾ (Actor Sithara) ಹಾಲುಂಡ ತವರು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಮೊದಲ ಸಿನಿಮಾನೆ ಸೂಪರ್ ಹಿಟ್ ಆಗುತ್ತಿದ್ದಂತೆ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಾಲುಂಡ ತವರು ಚಿತ್ರದಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಜೊತೆ ಕಾಣಿಸಿಕೊಂಡಿದ್ದ ಸಿತಾರಾ ಅದ್ಭುತ ಅಭಿನಯಕ್ಕೆ ಕನ್ನಡಾಭಿಮಾನಿಗಳು ಫಿದಾ ಆಗಿದ್ದರು.

ಇದನ್ನೂ ಓದಿ..ಬಡ ಹೆಣ್ಣು ಮಕ್ಕಳ ಏಳಿಗೆಗಾಗಿಯೇ ಶಿವಣ್ಣ 2ನೇ ಪುತ್ರಿಯಿಂದ ಹೊಸ ಬ್ಯುಸಿನೆಸ್ ಶುರು

ಲೀಟರ್ ಗಟ್ಟಲೆ ಕಣ್ಣೀರು ಸುರಿಸಿ ಪ್ರೇಕ್ಷಕರ ಕಣ್ಣನ್ನು ಒದ್ದೆ ಮಾಡಿದ್ದ ನಟಿ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ. 90ರ ದಶಕದಲ್ಲಿ ಸೌತ್ ಸಿನಿ ಇಂಡಸ್ಟ್ರಿಯ ಬಹುಬೇಡಿಕೆ ನಟಿಯಾಗಿದ್ದ ಸಿತಾರಾ ಇನ್ನು ಮದುವೆಯಾಗದೆ ಸಿಂಗಲ್ ಆಗಿಯೆ ಉಳಿದಿದ್ದಾರೆ ಎನ್ನುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಅಷ್ಟಕ್ಕು ಸಿತಾರಾ ಸಿಂಗಲ್ ಆಗಿಯೇ ಇರಲು ಕಾರಣವೇನು ಮುಂದೆ ಓದಿ.

48 ವರ್ಷದ ನಟಿ ಸಿತಾರಾ ಇನ್ನು ಮದುವೆಯಾಗದೆ ಒಂಟಿ ಜೀವನ ನಡೆಸುತ್ತಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಎಲ್ಲಾ ಭಾಷೆಯಗಳಿಲ್ಲೂ ಅಭಿನಯಿಸಿರುವ ಸಿತಾರಾ, 2000ನೇ ಇಸವಿಯಲ್ಲಿ ಬೇಡಿಕೆ ಇರುವಾಗಲೆ ಚಿತ್ರರಂಗದಿಂದ ದೂರ ಸರಿಯುತ್ತಾರೆ. ಸಿತಾರಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಕುಟುಂಬದ ಜೊತೆ ಆರಾಮಾಗಿ ಇದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ ಸಿತಾರಾ ಒಬ್ಬಂಟಿಯಾಗಿಯೆ ಇದ್ದಾರೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಅಭಿನಯಿಸುತ್ತ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದ್ದ ನಟಿ ದಿಢೀರನೆ ಮಾಯವಾಗುತ್ತಾರೆ.

2000ನೇ ಇಸವಿಯ ನಂತರ ಸಿತಾರಾ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಳ್ಳುತ್ತಾರೆ. ತೆಲುಗು ಬಿಟ್ಟರೆ ಯಾವ ಭಾಷೆಯಲ್ಲೂ ಕಾಣಿಸಿಕೊಳ್ಳುವುದಿಲ್ಲ. ಅದೆ ಸಮಯದಲ್ಲಿ ಸಿತಾರಾ ತಂದೆಯನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಸುಮಾರು ಎರಡು ಮೂರು ವರ್ಷಗಳ ಕಾಲ ಸಿನಿಮಾದಿಂದ ಸಂಪೂರ್ಣ ದೂರ ಉಳಿಯುತ್ತಾರೆ. ನಂತರ ಮತ್ತೆ ವಾಪಸ್ ಆಗುವ ಸಿತಾರಾ ತೆರೆಮೇಲೆ ಮಿಂಚಲು ಪ್ರಾರಂಭಿಸುತ್ತಾರೆ.

ಈ ವಯಸ್ಸಿನಲ್ಲಿಯೂ ಚಾರ್ಮ್ ಕಳೆದುಕೊಳ್ಳದ ಸಿತಾರಾ ಮದುವೆಯಾಗದಿಲು ಕಾರಣ ನಟ ಮತ್ತು ನಿರ್ಮಾಪಕ ಮುರುಳಿ ಎನ್ನುವ ಮಾತುಗಳು ಹರಿದಾಡುತ್ತಿವೆ. ಸಿತಾರಾ ಚಿತ್ರರಂಗದ ಉತ್ತುಂಗದಲ್ಲಿರುವಾಗಲೆ ನಟ ಮುರುಳಿ ಜೊತೆ ಆತ್ಮೀಯರಾಗಿದ್ದರು. ಇಬ್ಬರ ನಡುವಿನ ಆತ್ಮೀಯತೆ ನೋಡಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ದುರದೃಷ್ಟ ಅಂದರೆ ಮುರುಳಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ.

Actor Sithara
Actor Sithara

2010ರಲ್ಲಿ ಮುರುಳಿ ಹೃದಯಾಘಾತದಿಂದ ಮೃತಪಡುತ್ತಾರೆ. ಮುರುಳಿಯ ಸಾವು ಸಿತಾರಾ ಅವನ್ನು ಖಿನ್ನತೆಗೆ ನೂಕಿತ್ತು ಎಂದು ಹೇಳಲಾಗುತ್ತೆ. ಹಾಗಾಗಿಯೆ ಸಿತಾರಾ ಮತ್ತೆ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಳ್ಳುತ್ತಾರೆ. ಅರಗಿಸಿಕೊಳ್ಳಲಾದ ಗೆಳೆಯನ ಸಾವು ಚಿತ್ರರಂಗದಿಂದ ಮಾತ್ರವಲ್ಲದೆ, ಮದುವೆಯಿಂದನೂ ದೂರ ಇರುವಂತೆ ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆ ನಂತರ ಸಿತಾರಾ ಪೋಷಕಪಾತ್ರದ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರುತ್ತಾರೆ. ನಟಿ ಸಿತಾರಾ ನಟ ಮುರಳಿಯ ಸಾವಿನ ಶಾಕ್ ನಿಂದ ಹೊರ ಬರುವುದರಲ್ಲೆ ತಂದೆಯನ್ನು ಕಳೆದುಕೊಳ್ಳುತ್ತಾರೆ.

ಇದನ್ನೂ ಓದಿ...ಪ್ರತಿದಿನ ಕುಡಿದು ಮನೆಮುಂದೆ ನಿಂತು ವಾಲಾಡುತ್ತಿದ್ದ ವ್ಯಕ್ತಿಯ ಬದುಕು ಬದಲಿಸಿದ ನಟ ವಿಷ್ಣುವರ್ಧನ್, ಇಂದು ಆ ವ್ಯಕ್ತಿ ಏನಾಗಿದ್ದರೆ ಗೊತ್ತಾ? ಇದು ಸಿನಿಮಾ ಅಲ್ಲ ರಿಯಲ್ ಕತೆ

ಸಿತಾರಾ ಪಾಲಿಗೆ ಅವರ ತಂದೆಯೆ ಎಲ್ಲದು ಆಗಿದ್ದರು. ಸ್ನೇಹಿತನಂತಿದ್ದ ತಂದೆಯನ್ನು ಕಳೆದುಕೊಂಡ ನಟಿ ಮತ್ತಷ್ಟು ಕುಗ್ಗಿಹೋಗುತ್ತಾರೆ. ಆಧಾರಸ್ತಂಭವಾಗಿದ್ದ ತಂದೆಯ ಸಾವು ಮದುವೆ ಬಗ್ಗೆ ಯೋಚಿಸುವುದಕ್ಕು ಸಾಧ್ಯವಾಗಿಲ್ಲ. ಸಿತಾರಾ ಮದುವೆ ಆಗಿದ್ದಾರೆ ಎಂದೆ ಅನೇಕರು ನಂಬಿದ್ದರು. ಆದರೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಸಿತಾರಾ ಇನ್ನು ಮದುವೆ ಆಗಿಲ್ಲ ಎನ್ನುವ ವಿಚಾರವನ್ನು ಸ್ಪಷ್ಟಪಡಿಸುತ್ತಾರೆ. ನನಗೆ ಇನ್ನು ಮದುವೆ ಆಗಿಲ್ಲ. ಮದುವೆ ಆಗುತ್ತೀನೋ ಇಲ್ಲವೊ ನನಗೆ ಗೊತ್ತಿಲ್ಲ. ಮದುವೆ ಆದರೆ ಖಂಡಿತ ಸೀಕ್ರೆಟ್ ಆಗಿ ಇರುವುದಿಲ್ಲ ಎಂದು ಹೇಳಿದ್ದಾರೆ. ಯಾಕಿನ್ನು ಮದುವೆಯಾಗಿಲ್ಲ ಎಂದರೆ ಆಗಿಲ್ಲ ಅಷ್ಟೆ ಎಂದು ಹೇಳುತ್ತಾರೆ. ಮುಂದೆ ಮದುವೆ ಆಗ್ತಾರಾ ಎನ್ನುವುದು ಗೊತ್ತಿಲ್ಲ. ಸದ್ಯ ಚಿತ್ರರಂಗದಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *