10 ಲಕ್ಷದಲ್ಲಿ ಅಚ್ಚುಕಟ್ಟಾಗಿ ಕಟ್ಟಬಹುದಾದ ಮನೆ ಇಲ್ಲಿದೆ ಮಾಹಿತಿ

0 15,231

ಮನೆ ಕಟ್ಟುವುದು ಎಲ್ಲರಿಗೂ ಇರುವ ಒಂದು ಪ್ರಮುಖ ಕನಸಾಗಿರುತ್ತದೆ. ನಮ್ಮದೆ ಆದ ಒಂದು ಮನೆ ಇರಬೇಕು ಎಂದು ಎಲ್ಲರಿಗೂ ಇರುತ್ತದೆ. ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ ಮಾಡಬಹುದು ಹಾಗಾದರೆ ಮನೆಯನ್ನು ಹೇಗೆ ನಿರ್ಮಾಣ ಮಾಡಬೇಕು, ಯಾವೆಲ್ಲಾ ಸಾಮಗ್ರಿಗಳನ್ನು ಬಳಸಬೇಕು ಎಂದು ಈ ಲೇಖನದಲ್ಲಿ ನೋಡೋಣ

ಸಿಕ್ಸ್ಟಿ ಫೊರ್ಟಿ ಸೈಟ್ ನಲ್ಲಿ 500 ಸ್ಕ್ವೇರ್ ಫೀಟ್ ನಲ್ಲಿ ರೆಡಿಯಾಗಿರುವ ಮನೆಯಾಗಿದೆ. ಎದುರುಗಡೆ ಗೇಟ್ ಮಾಡಲಾಗಿದೆ ಗೇಟ್ ಒಳಗಡೆ ಪಾರ್ಕಿಂಗ್ ಏರಿಯಾ ಕೂಡ ಇದೆ, ಅಲ್ಲಿ 8000 ಲೀಟರ್ ಸಂಗ್ರಹಿಸುವ ಸಂಪನ್ನು ಇಟ್ಟು ಎಂಎಸ್ ಡೋರ್ ಅನ್ನು ಹಾಕಲಾಗಿದೆ. ಫ್ರಂಟ್ ಲ್ಲಿ ಸುಂದರವಾಗಿ ಕಾಣಲು ಗೋಡೆಗೆ ಟೈಲ್ಸ್ ಹಾಕಲಾಗಿದೆ, ಒಂದು ಟೈಲ್ಸ್ ಗೆ 70 ರೂಪಾಯಿ ಆಗುತ್ತದೆ. ಮನೆಯ ಮೇನ್ ಬಾಗಿಲು 25000 ರೂಪಾಯಿ ಆಗುತ್ತದೆ, ಹೆಚ್ಚಿನ ಡಿಸೈನ್ ಬೇಕೆಂದರೆ 50000 ರೂಪಾಯಿವರೆಗೆ ಆಗುತ್ತದೆ. ಒಳಗಡೆ ಸೆರಾಮಿಕ್ ಟೈಲ್ಸ್ ಹಾಕಲಾಗಿದೆ, ಟೆನ್ ಬೈ ಟ್ವೆಲ್ ಫೀಟ್ ಇದೆ, ಒನ್ ಬಿಎಚ್ ಕೆ ಆಗಿದೆ, ವೆಂಟಿಲೇಶನ್ ಸಲುವಾಗಿ ಫೋರ್ ಬೈ ತ್ರೀನ ಎರಡು ವಿಂಡೋಗಳನ್ನು ಫಿಕ್ಸ್ ಮಾಡಲಾಗಿದೆ. ನೆಲಕ್ಕೆ ಹಾಕಿರುವ ಟೈಲ್ಸ್ 50 ರಿಂದ 60 ರೂಪಾಯಿಗೆ ಸಿಗುತ್ತದೆ.

ದೇವರ ಕೋಣೆಯನ್ನು ತ್ರಿ ಬೈ ತ್ರಿ ಮಾಡಲಾಗಿದೆ, ದೇವರ ಕೋಣೆಯ ಬಾಗಿಲಿಗೆ 22000 ರೂಪಾಯಿ ಆಗುತ್ತದೆ, ಒಳಗಡೆ ಒನ್ ಆಂಡ್ ಒನ್ ಹಾಫ್ ಟೈಲ್ಸ್ ಅನ್ನು ಹಾಕಲಾಗಿದೆ. ಪಕ್ಕದಲ್ಲಿ ಓಪನ್ ಕಿಚನ್ ಎಲ್ ಶೇಪ್ ನಲ್ಲಿದೆ. ಫೋರ್ ಬೈ ತ್ರಿ ನ ಯುಪಿವಿಸಿ ವಿಂಡೋ ಹಾಕಲಾಗಿದೆ. ನಂತರ ಒಂದು ರೂಮ್ ಇಡಲಾಗಿದೆ ರೂಮ್ ಗೆ 3,000 ರೂಪಾಯಿ ಡೋರ್ ಮಾಡಲಾಗಿದೆ, ರೂಮ್ ಟೆನ್ ಬೈ ಟೆನ್ ಅಳತೆಯ ರೂಮ್ ಇದೆ, ಫೋರ್ ಬೈ ತ್ರಿ ನ ಎರಡು ವಿಂಡೋಗಳನ್ನು ಇಡಲಾಗಿದೆ. ರೂಮಿನಲ್ಲಿ ಒಂದು ಸ್ಟ್ರೇಟ್ ಸಜ್ಜಾವನ್ನು ಹಾಕಲಾಗಿದೆ, ಸಜ್ಜಾದ ಕೆಳಗಡೆ ವಾರ್ಡ್ರೋಬ್ ಇಡಲಾಗಿದೆ. ಒಂದು ಕಾರ್ನರ್ ಗೆ ಒಂದು ಕಾಮನ್ ವಾಷ್ ಬೇಸಿನ್ ಅನ್ನು ಕೊಟ್ಟಿದ್ದಾರೆ, ಗೋಡೆ ಗಲೀಜ್ ಆಗಬಾರದು ಎಂದು ಟೈಲ್ಸ್ ಅಪ್ಲೈ ಮಾಡಲಾಗಿದೆ.

ಬಾತ್ರೂಮ್ ಮೇಲ್ಗಡೆ ಸ್ಟೋರೇಜ್ ರೀತಿ ಮಾಡಲಾಗಿದೆ. ಬಾತ್ರೂಮ್ ಫೋರ್ ಬೈ ತ್ರಿ ಇದ್ದು 7 ಫೀಟ್ ವರೆಗೆ ಟೈಲ್ಸ್ ಹಾಕಲಾಗಿದೆ, ಕೆಳಗೆ ಟೈಲ್ಸ್ ಹಾಕಲಾಗಿದೆ, ಕಾಮನ್ ಕಮೋರ್ಡ್ ಫಿಕ್ಸ್ ಮಾಡಲಾಗಿದ್ದು, ಬಾತ್ರೂಮ್ ಫಿಟ್ಟಿಂಗ್ ಅನ್ನು ಸೆರಾ ಫಿಟ್ಟಿಂಗ್ ಕೊಡಲಾಗಿದೆ, ಬಾತ್ರೂಮ್ ಗೆ ಪಿವಿಸಿ ಡೋರ್ ಬಳಸಲಾಗಿದೆ. ಹಿಂದಗಡೆ ಒಂದು ಫ್ಲಶ್ ಡೋರ್ ಇಡಲಾಗಿದೆ ಹಾಗೂ ಇಂಡಿಯನ್ ಟಾಯ್ಲೆಟ್ ಅನ್ನು ಇಡಲಾಗಿದೆ, ತ್ರಿ ಬೈ ಫೋರ್ ನ ರೂಮ್ ಆಗಿದ್ದು 7 ಫೀಟ್ ವರೆಗೆ ಟೈಲ್ಸ್ ಹಾಕಲಾಗಿದೆ, ಮೇಲ್ಗಡೆ ಏರಿಯಾ ಸ್ಟೋರೇಜ್ ಆಗಿ ಬಳಕೆಯಾಗುತ್ತದೆ, ಪಿವಿಸಿ ಡೋರ್ ಬಳಸಲಾಗಿದೆ. ಹೊರಗಡೆ 2 ಫೀಟ್ ಜಾಗ ಬಿಡಲಾಗಿದೆ ಅಲ್ಲಿ ಓಡಾಡಬಹುದು, ಬಟ್ಟೆ ಒಣಗಿಸಬಹುದು ಹೀಗೆ ಮನೆ ನಿರ್ಮಾಣ ಮಾಡಬಹುದು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.

Leave A Reply

Your email address will not be published.