ವಿಜಯ್ ತಮಿಳು ಚಿತ್ರ ರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ದಕ್ಷಿಣ ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರಾಗಿರುವ ವಿಜಯ್ ಹಲವು ತಮಿಳು ಚಿತ್ರಗಳ ಮೂಲಕ ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಜೋಸೆಫ್ ವಿಜಯ್ ಚಂದ್ರಶೇಖರ್ ಇವರ ಪೂರ್ಣ ಹೆಸರು. ವಿಜಯ್ ಎಂದು ಏಕನಾಮದಲ್ಲಿ ಕರೆಯುತ್ತಾರೆ. ಇವರು 22 ಜೂನ್ 1974ರಲ್ಲೀ ಜನಿಸಿದರು. ಒಬ್ಬ ಭಾರತೀಯ ನಟ, ಡಾನ್ಸರ್, ಹಿನ್ನೆಲೆ ಗಾಯಕ ಮತ್ತು ಲೋಕೋಪಕಾರಿ ಇವರು ತಮಿಳು ಚಿತ್ರರಂಗದಲ್ಲಿ ಪ್ರಧಾನವಾಗಿ ಕೆಲಸ ಮಾಡುತ್ತಾರೆ ಮತ್ತು ಇತರ ಭಾರತೀಯ ಭಾಷೆಗಳ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ವಿಜಯ್ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ. ಅವರು ಜಾಗತಿಕವಾಗಿ ಗಮನಾರ್ಹ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ನಾಯಕ ನಟನಾಗಿ 65 ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಅವರು ಸ್ಟಾರ್ ಇಂಡಿಯಾದಿಂದ ಎಂಟು ವಿಜಯ್ ಪ್ರಶಸ್ತಿಗಳು, ತಮಿಳುನಾಡು ಸರ್ಕಾರದಿಂದ ಮೂರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು SIIMA ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಭಾರತೀಯ ಪ್ರಸಿದ್ಧ ವ್ಯಕ್ತಿಗಳ ಗಳಿಕೆಯ ಆಧಾರದ ಮೇಲೆ ಅವರು ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಹಲವಾರು ಬಾರಿ ಸೇರ್ಪಡೆಗೊಂಡಿದ್ದಾರೆ. ಅವರ ಚಲನಚಿತ್ರಗಳಿಗೆ ಪ್ಯಾನ್-ಇಂಡಿಯನ್ ಬೇಡಿಕೆ, ಅವರನ್ನು ಹಿಂದಿ ಚಿತ್ರರಂಗದಲ್ಲಿ ಬೇಡಿಕೆಯ ನಟನನ್ನಾಗಿ ಮಾಡಿತು.

ತಮಿಳಿನ ಸ್ಟಾರ್ ನಟ ದಳಪತಿ ವಿಜಯ್. 25 ವರ್ಷಗಳ ಹಿಂದೆ ಹೇಗಿದ್ದರೋ ಇಂದು ಕೂಡ ವಿಜಯ್ ಹಾಗೆ ಇದ್ದಾರೆ. ಇವರ ಸಿನಿಮಾಗಳಲ್ಲಿ ಹಲವು ಗೆದ್ದರೆ, ಇನ್ನೂ ಕೆಲವು ಕಮರ್ಷಿಯಲ್ ಆಗಿ ಪ್ಲಾಫ್ ಆದವು. ಆದರೆ ಇವರು ಅಭಿಮಾನಿಗಳ ಹೃದಯ ಸಂಪಾದನೆ ಮಾಡತೊಡಗಿದರು. ತಮಿಳು ಸಿನಿಮಾ ನಿರ್ದೇಶಕ, ಗಾಯಕಿ ಮಗನಾಗಿ ಹುಟ್ಟಿದ ವಿಜಯ್ ಅವರಿಗೆ ಈಗ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಮಹಿಳಾ ಅಭಿಮಾನಿಗಳಿಗಂತೂ ಬರ ಇಲ್ಲ ಬಿಡಿ. ಹೀಗೆ ಓರ್ವ ಮಹಿಳಾ ಅಭಿಮಾನಿಯನ್ನು ಮದುವೆಯಾಗಿದ್ದಾರೆ ದಳಪತಿ ವಿಜಯ್. ಇವರ ಮಕ್ಕಳು ಕೂಡ ಅವರದ್ದೇ ಆದ ರಂಗದಲ್ಲಿ ಸಾಧನೆ ಮಾಡುತ್ತಿದ್ದಾರೆ.

ಮದುವೆ ಎಂಬುದು ನಿಜಕ್ಕೂ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದಂತೆ. ನಟ ದಳಪತಿ ವಿಜಯ್ ಅವರ ಮದುವೆ ಕೂಡ ಹೀಗೆ ಆಯ್ತು. ಪ್ರೀತಿಸಿದ ಹುಡುಗಿಯನ್ನೋ, ಪಾಲಕರು ಇಷ್ಟಪಟ್ಟ ಹುಡುಗಿಯನ್ನು ನಟರು ಮದುವೆಯಾಗುವುದುಂಟು. ಆದರೆ ನಟ ದಳಪತಿ ವಿಜಯ್ ಅವರು ಅಭಿಮಾನಿಯನ್ನೇ ಮದುವೆಯಾದರು.

ಸಂಗೀತಾ ತಮಿಳುನಾಡು ಮೂಲದ ಉದ್ಯಮಿ ಮಗಳು.ಸಂಗೀತಾ ಪಾಲಕರು ಯು ಕೆ ಯಲ್ಲಿ ಸೆಟಲ್ ಆಗಿದ್ದರು. ವಿಜಯ್ ಸಿನಿಮಾ ನೋಡಿ ಫ್ಯಾನ್ ಆಗಿದ್ದ ಸಂಗೀತಾ ಯುಕೆಯಲ್ಲಿದ್ದರು. ಇಷ್ಟದ ನಟ ದಳಪತಿ ವಿಜಯ್ ನೋಡಲು ಚೆನ್ನೈಗೆ ಆಗಮಿಸಿದ್ದರು. 1996ರಲ್ಲಿ ಸಂಗೀತಾ-ವಿಜಯ್ ಭೇಟಿಯಾಗಿತ್ತು. ಸಂಗೀತಾ ಜೊತೆ ವಿಜಯ್ ಕೂಡ ತುಂಬ ಚೆನ್ನಾಗಿ ಮಾತನಾಡಿದ್ದರಂತೆ. ಆಮೇಲೆ ವಿಜಯ್‌ಗಾಗಿ ಸಂಗೀತಾ ಪದೇ ಪದೇ ಚೆನ್ನೈಗೆ ಬರುತ್ತಿದ್ದರು. ವಿಜಯ್ ಅವರು ಸಂಗೀತಾರನ್ನು ಮನೆಗೆ ಕರೆದುಕೊಂಡು ಹೋಗಿ ತಂದೆ-ತಾಯಿಗೂ ಪರಿಚಯ ಮಾಡಿಸಿದ್ದರು. ಆ ಸಮಯದಲ್ಲಿ ವಿಜಯ್ ಅವರು ಒಂದಾದ ಮೇಲೆ ಒಂದು ಹಿಟ್ ಸಿನಿಮಾ ನೀಡುತ್ತ ಸ್ಟಾರ್ ಆಗಿದ್ದರು.

ಮಗನಿಗೆ ಮದುವೆ ಮಾಡಬೇಕು ಎಂದು ವಿಜಯ್ ಪಾಲಕರು ಯೋಚಿಸುತ್ತಿದ್ದರು. ಆಗ ಅವರಿಗೆ ಸಂಗೀತಾ ನೆನಪಾಯ್ತು. ಲಂಡನ್‌ನಲ್ಲಿ ವಿಜಯ್ ಹಾಗೂ ಸಂಗೀತಾ ಪಾಲಕರು ಭೇಟಿಯಾಗಿ ಈ ಬಗ್ಗೆ ನಿರ್ಣಯ ಕೈಗೊಂಡರು. ಆಮೇಲೆ ವಿಜಯ್ ಹಾಗೂ ಸಂಗೀತಾ ಇಬ್ಬರೂ ಮದುವೆಗೆ ಒಪ್ಪಿದಮೇಲೆ ಅದ್ದೂರಿಯಾಗಿ ಮದುವೆ ಕೂಡ ನಡೆಯಿತು. 1999 ಆಗಸ್ಟ್ 25ರಂದು ವಿಜಯ್ ಸಂಗೀತಾ ಕಲ್ಯಾಣ ನೆರವೇರಿತು. ವಿಜಯ್ ಅವರು ಕ್ರಿಶ್ಚಿಯನ್, ಸಂಗೀತಾ ಹಿಂದೂ. ಹೀಗಾಗಿ ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಸಂಪ್ರದಾಯದಂತೆ ಮದುವೆ ನೆರವೇರಿರೋದು ವಿಶೇಷ. ಮದುವೆಯಾಗಿ ಒಂದು ವರ್ಷದ ನಂತರದಲ್ಲಿ ಈ ಜೋಡಿಗೆ ಜಾಸೋನ್ ಸಂಜಯ್ ಎಂಬ ಮಗ ಹಾಗೂ 2005ರಲ್ಲಿ ಈ ದಂಪತಿಗೆ ದಿವ್ಯಾ ಸಾಶಾ ಎಂಬ ಮಗಳು ಹುಟ್ಟಿದ್ದಳು.

ದಳಪತಿ ವಿಜಯ್ ಚಿತ್ರರಂಗಕ್ಕೆ ಬಂದು ಇಷ್ಟು ವರ್ಷ ಕಳೆದರೂ ಕೂಡ ಅವರ ಚಾರ್ಮ್ ಇಂದಿಗೂ ಕೊಂಚವೂ ಮಾಸಿಲ್ಲ. ಅಂದು-ಇಂದು ಕೂಡ ಅವರು ಅಭಿಮಾನಿಗಳ ಫೇವರಿಟ್ ಅದರಲ್ಲೂ ಹೆಣ್ಣುಮಕ್ಕಳ ಇಷ್ಟದ ನಟ. ವಿಜಯ್ ಮತ್ತು ಸಂಗೀತಾ ಈ ಜೋಡಿಗೆ ಓರ್ವ ಮಗ, ಓರ್ವ ಮಗಳಿದ್ದಾಳೆ. ತಮಿಳು ಚಿತ್ರರಂಗದಲ್ಲಿ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ನಾನಾ ಪಾತ್ರಗಳ ರಂಜಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಬೀಸ್ಟ್ ಚಿತ್ರದ ಕುರಿತು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.

Leave a Reply

Your email address will not be published. Required fields are marked *