Ultimate magazine theme for WordPress.

ನಟ ಯಶ್ ಅವರ ಕನಸಿನ ಮನೆ ಹೇಗಿದೆ ನೋಡಿ ಮೊದಲಬಾರಿಗೆ

0 3

ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಯಶ್ ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಅಗಿ ಗುರುತಿಸಿ ಕೊಂಡಿದ್ದಾರೆ. ತಮ್ಮ ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಯಶ್ ಇಂದು ಭಾರತಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. 1986 ಜನವರಿ 8 ರಂದು ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಯ ಮಗನಾಗಿ ಯಶ್ ಜನಿಸಿದರು. ಇವರ ಬಾಲ್ಯದ ಹೆಸರು ನವೀನ್ ಕುಮಾರ್ ಗೌಡ. ಇವರ ತಂದೆ ಬೆಂಗಳೂರು ಬಿ.ಎಂ.ಟಿ.ಸಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

ಎಲ್‌ಕೆಜಿಯಿಂದ ಕಾಲೇಜಿನವರೆಗೆ ಮೈಸೂರಿನ ಮಹಾವೀರ್ ಸಂಸ್ಥೆಯಲ್ಲಿ ವಿಧ್ಯಾಭ್ಯಾಸವನ್ನು ಮುಗಿಸಿದ ಯಶ್ ತಮ್ಮ ಹದಿನೇಳನೆ ವಯಸ್ಸಿನಲ್ಲಿಯೇ ಕುಟುಂಬಕ್ಕೆ ಸಹಾಯವಾಗಲು ಪಿಯುಸಿಗೆ ಗುಡ್‌ಬೈ ಹೇಳಿ ಕೆಲಸ ಮಾಡಲು ಪ್ರಾರಂಭಿಸಿದರು. ನವೀನ್ ಪ್ರಾವಿಜನ್ ಸ್ಟೋರ್ ಎಂಬ ತಮ್ಮದೇ ಸ್ಟೋರ್ ತೆಗೆದು ಕುಟುಂಬದ ಜಾವಾಬ್ದಾರಿ ವಹಿಸಿಕೊಂಡರು.

ಹೈಸ್ಕೂಲ್-ಕಾಲೇಜು ದಿನಗಳಲ್ಲಿ ಹಲವು ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಯಶ್ ಒಂದು ಸಲ ಮೈಸೂರಿನಲ್ಲಿ ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಬೇಕಾದರೆ ರಿಯಲ್ ಸ್ಟಾರ್ ಉಪೇಂದ್ರರವರು ನೋಡಿ ಯಶ್‌ರನ್ನು ತುಂಬಾ ಹೊಗಳಿದ್ದರು. ವಿಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಈ ಘಟನೆ ನೆನದ ಯಶ್ ಉಪೇಂದ್ರರವರು ತಮಗೆ ಸ್ಫೂರ್ತಿ ಎಂದರು.

ನಂತರ ಅಭಿನಯದಲ್ಲಿ ಆಸಕ್ತಿ ತೋರಿ ಯಶ್ ಬಿ.ವಿ.ಕಾರಂತರ ಬೆನಕ ನಾಟಕ ಕಂಪನಿಗೆ ಸೇರಿದರು. ಹಲವು ನಾಟಕಗಳಲ್ಲಿ ಭಾಗವಹಿಸಿದ ಯಶ್ ಮುಂದೆ ನಂದಗೋಕುಲ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶವನ್ನು ಪಡೆದರು. ಇದೇ ಸೀರಿಯಲ್‌ನಲ್ಲಿ ಇವರ ಪತ್ನಿ ನಟಿ ರಾಧಿಕಾ ಪಂಡಿತ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು. ನಂತರ ಪ್ರೀತಿ ಇಲ್ಲದ ಮೇಲೆ ಸೀರಿಯಲ್‌ನಲ್ಲಿ ಅನಂತನಾಗ್‌ರ ಮಗನಾಗಿ ಸಂಗೀತದ ಹಂಬಲವಿರುವ ಯುವಕನಾಗಿ ನಟಿಸಿ ಪ್ರೇಕ್ಷಕರಿಗೆ ಹತ್ತಿರವಾದರು.

2007ರಲ್ಲಿ ತೆರೆಗೆ ಬಂದ ಜಂಬದ ಹುಡುಗಿ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಯಶ್ 2008ರಲ್ಲಿ ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಈ ಚಿತ್ರದಲ್ಲಿನ ಅಭಿನಯಕ್ಕೋಸ್ಕರ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದರು. ತಾವು ಮೊದಲ ಬಾರಿ ನಾಯಕನಾಗಿ ನಟಿಸಿದ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದು ರಾಧಿಕಾ ಪಂಡಿತ್.

2011ರಲ್ಲಿ ತೆರೆಗೆ ಬಂದ ಕಿರಾತಕ ಚಿತ್ರ ಯಶ್ ಗೆ ಬಿಗ್ ಬ್ರೇಕ್ ನೀಡಿತು. ಈ ಚಿತ್ರದಲ್ಲಿನ ಹಳ್ಳಿ ಹೈದನ ಪಾತ್ರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು. ನಂತರ ತೆರೆಗೆ ಬಂದ ಲಕ್ಕಿ, ಡ್ರಾಮಾ, ಗೂಗ್ಲಿ, ರಾಜಾಹುಲಿ, ಗಜಕೇಸರಿ ಚಿತ್ರಗಳು ಭರ್ಜರಿ ಪ್ರದರ್ಶನ ಕಂಡು ಯಶ್ ರನ್ನು ಕನ್ನಡ ಚಿತ್ರರಂಗದ ಪ್ರಮುಖ ನಟರ ಸಾಲಿನಲ್ಲಿ ನಿಲ್ಲಿಸಿದವು. 2014ರಲ್ಲಿ ತೆರೆಗೆ ಬಂದ ‘Mr & Mrs ರಾಮಾಚಾರಿ’ ಬಾಕ್ಸ್ ಆಫೀಸ್ ನಲ್ಲಿ ಐವತ್ತು ಕೋಟಿಗೂ ಹೆಚ್ಚು ಗಳಿಕೆ ಕಂಡು ದಾಖಲೆ ಬರೆಯಿತು.

ಯಶ್ ಸಿನಿಜೀವನದ ಕಳಸಪ್ರಾಯ ಚಿತ್ರ ಕೆಜಿಎಫ್. 2018 ಡಿಸೆಂಬರ್‌ನಲ್ಲಿ ತೆರೆಕಂಡ ಈ ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿ ನೂರೂ ಕೋಟಿ ಗಳಿಕೆ ಕಂಡು ಕನ್ನಡ ಚಿತ್ರರಂಗದಲ್ಲಿ ಹೊಸಪರ್ವಕ್ಕೆ ನಾಂದಿ ಹಾಡಿತು. ಈ ಚಿತ್ರ ಸುಮಾರು 240 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ನಿರ್ಮಾಪಕ ವಿಜಯ ಕಿರಗಂದೂರು ಚಿತ್ರ ಕೆ.ಜಿ.ಎಫ್ 2 ಸದ್ಯ ರಲ್ಲಿ ತೆರೆಕಂಡು ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ದಾಖಲೆಯನ್ನೇ ಬರೆಯುತ್ತಿದೆ.

ತನ್ನ ಸಿನಿಜೀವನದ ಹಲವು ಯಶಸ್ವಿ ಚಿತ್ರಗಳ ನಾಯಕಿಯಾಗಿದ್ದ ರಾಧಿಕಾ ಪಂಡಿತ್‌ರನ್ನು ಪ್ರೀತಿಸಿ ಸಪ್ತಪದಿ ತುಳಿದರು. ಗೋವಾದಲ್ಲಿ ಮದುವೆಯಾದ ಈ ಜೋಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗಾಗಿ ಅದ್ಧೂರಿ ಔತಣಕೂಟ ಏರ್ಪಡಿಸಿದ್ದರು. ದಂಪತಿಗಳಿಬ್ಬರು ಈಗ ‘ಯಶೋಮಾರ್ಗ’ ಎಂಬ ಸಂಸ್ಥೆ ಸ್ಥಾಪಿಸಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಯಶೋಮಾರ್ಗ ಸಂಸ್ಥೆಯ ಅಡಿಯಲ್ಲಿ ಯಶ್ ದಂಪತಿಗಳು 4 ಕೋಟಿ ವೆಚ್ಚ ಮಾಡಿ ಕೊಪ್ಪಳ ನಗರ ಕೆರೆಯ ಹೂಳೆತ್ತಿಸಿ, ಕೊಪ್ಪಳ ಜನತೆಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದರು. ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗು ಹಾಗೂ ಒಂದು ಗಂಡು ಮಗು ಇದೆ.

ಒಟ್ಟಾರೆಯಾಗಿ ಸದ್ಯದ ಮಟ್ಟಿಗೆ ಯಶ್ ಮತ್ತು ರಾಧಿಕಾ ಎಂಬ ಸ್ಟಾರ್ ಜೋಡಿಗಳ ಆಸ್ತಿಯ ಮೌಲ್ಯ 52 ಕೋಟಿ ರೂಪಾಯಿಗಳಷ್ಟು ಇದೆ. ಮಗಳು ಐರಾ ಹುಟ್ಟಿದ ಮೇಲೆ ಯಶ್ ಮತ್ತು ರಾಧಿಕಾ ಬಾಡಿಗೆ ಮನೆಯನ್ನು ಬಿಟ್ಟು ಸ್ವಂತ ಮನೆಗೆ ಕಾಲಿರಿಸಿದರು. ಸದ್ಯ ರಾಕಿಂಗ್ ಸ್ಟಾರ್ ಬಳಿ 90 ಲಕ್ಷ ರೂಪಾಯಿ ಮೌಲ್ಯದ ಬೆಂಜ್ ಕಾರ್ ಮತ್ತು 80 ಲಕ್ಷ ರೂಪಾಯಿ ಮೌಲ್ಯದ ಮತ್ತೊಂದು ಬೆಂಜ್ ಕಾರ್ ಇದೆ. ಈಗಾಗಲೇ ದೊಡ್ಡ ದೊಡ್ಡ ನಿರ್ದೇಶಕರು ಮತ್ತು ಕಥೆಗಾರರು ಯಶ್ ಅವರಿಗಾಗಿ ಕಥೆಯನ್ನು ಬರೆಯುತ್ತಿದ್ದು, ಇನ್ನು ಕೆಜಿಎಫ್ ಟು ಚಿತ್ರದ ಬಿಡುಗಡೆ ನಂತರ ಯಶ್ ಅವರ ಖ್ಯಾತಿ ಮತ್ತು ಗಳಿಕೆ ಭರ್ಜರಿಯಾಗಿ ಏರುವುದರಲ್ಲಿ ಯಾವುದೇ ಸಂದೇಹಗಳಿಲ್ಲ.

Leave A Reply

Your email address will not be published.