ಇನ್ನು 25ರ ಹರೆಯದ ಯುವತಿಯಂತೆ ಕಾಣುವ ನಟಿ ಸುಧಾರಾಣಿ ಅವರ ಅಸಲಿ ವಯಸ್ಸೆಷ್ಟು ಗೊತ್ತಾ, ಇಲ್ಲಿದೆ

0 1,209

Actor Sudha Rani: ಬರೋಬ್ಬರಿ ನಾಲ್ಕು ದಶಕಗಳಿಗಿಂತಲೂ ಅಧಿಕಕಾಲ ಕನ್ನಡ ಚಿತ್ರರಂಗದಲ್ಲಿ ನಟಿ ಸುಧಾರಾಣಿ ಅವರು ವಿಭಿನ್ನ ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಸಕ್ರಿಯರಾಗಿದ್ದಾರೆ. ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುವಂತಹ ಶ್ರೀರಸ್ತು ಶುಭಮಸ್ತು ಕಾರ್ಯಕ್ರಮದಲ್ಲಿ ಕೂಡ ಸುಧಾರಾಣಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಸುಧಾರಾಣಿ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡು ನಂತರ ನಾಯಕ ನಟಿಯಾಗಿ ಕೂಡ ಚಿಕ್ಕವಯಸ್ಸಿಗೆ ಕಾಣಿಸಿಕೊಳ್ಳುವ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಹೊಂದಿರುವ ನಟಿಯಾಗಿದ್ದಾರೆ.

Actor Sudha Rani Real Age

1970ರಲ್ಲಿ ಜನಿಸುವ ಸುಧಾರಾಣಿ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಕಿಲಾಡಿ ಕಿಟ್ಟು ಹಾಗೂ ಕಳ್ಳ ಕುಳ್ಳಿ ಅಂತಹ ಹಲವಾರು ಸಿನಿಮಾಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ನಂತರ ನಾಯಕ ನಟಿಯಾಗಿ ಕೇವಲ 16 ವರ್ಷ ವಯಸ್ಸಿರಬೇಕಾದರೆ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಚೊಚ್ಚಲ ಸಿನಿಮಾ ಆನಂದ್ ಸಿನಿಮಾದಲ್ಲಿ ನಾಯಕಿಯಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾದಲ್ಲಿ ನಟಿಸಿದ ನಂತರ ಮತ್ತೆ ಸುಧಾರಾಣಿ ಅವರು ಹಿಂದಿರುಗಿ ನೋಡಲೇ ಇಲ್ಲ. ಒಂದಾದ ಮೇಲೊಂದರಂತೆ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಲೇ ಹೋದರು.

ಅಣ್ಣ ತಂಗಿ, ಶ್ರುತಿ ಸೇರಿದಾಗ, ಆಸೆಗೊಬ್ಬ ಮೀಸೆಗೊಬ್ಬ ಹೀಗೆ ಕನ್ನಡ ಚಿತ್ರರಂಗದ ಪ್ರೇಕ್ಷಕರು ಎಂದಿಗೂ ಕೂಡ ನೆನಪಿಟ್ಟುಕೊಳ್ಳುವಂತಹ ಎವರ್ಗ್ರೀನ್ ಸಿನಿಮಾಗಳಲ್ಲಿ ನಟಿ ಸುಧಾರಾಣಿ ಅವರು ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕ ನಟಿಯಾಗಿ ಕಾಲ ಕಳೆದ ನಂತರ ಮುಂದಿನ ಸಮಯದಲ್ಲಿ ಚಿತ್ರರಂಗದಲ್ಲಿ ಅತ್ಯುನ್ನತ ಪೋಷಕ ನಟಿಯಾಗಿ ಕೂಡ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ರು ಕೂಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಸೂಪರ್ ಹಿಟ್ ಧಾರವಾಹಿ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಕೂಡ ಸುಧಾರಾಣಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಒಳ್ಳೆ ಹಿಟ್ ಸಿನಿಮಾಗಳನ್ನು ಕೊಟ್ಟಂತ ಪೂಜಾಗಾಂಧಿ ಇದ್ದಕಿದ್ದಂತೆ ಕಣ್ಮರೆ ಆಗಿದ್ಯಾಕೆ? ತೆರೆ ಹಿಂದಿನ ಸತ್ಯಕತೆ

ಇನ್ನು ಇಂದಿಗೂ ಕೂಡ ಯಾವುದೇ ಪಾತ್ರದಲ್ಲಿ ಕಾಣಿಸಿಕೊಂಡರು ನಟಿ ಸುಧಾರಾಣಿ ಅವರ ಸೌಂದರ್ಯ ಕೊಂಚವೂ ಕೂಡ ತಗ್ಗಿಲ್ಲ. 25ರ ಹರೆಯದ ಯುವತಿಯರು ಕೂಡ ನಾಚುವಂತೆ ತಮ್ಮ ಸೌಂದರ್ಯವನ್ನು ನಿಭಾಯಿಸಿಕೊಂಡು ಬಂದಿರುವ ಸುಧಾರಾಣಿ ಅವರ ನಿಜವಾದ ವಯಸ್ಸು 52 ವರ್ಷ ವಯಸ್ಸಾಗಿದೆ ಎಂದರೆ ಯಾರು ಕೂಡ ನಂಬುವುದಿಲ್ಲ. ನಟಿ ಸುಧಾರಾಣಿ ಅವರ ನಟನೆಯ ಬಗ್ಗೆ ಹಾಗೂ ಅವರು ನಟಿಸಿರುವ ಯಾವುದು ನಿಮ್ಮ ನೆಚ್ಚಿನ ಸಿನಿಮಾ ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.