ಅಭಿಮನ್ಯು ಸಾವನ್ನು ಈ ಎರಡು ಕಾರಣಕ್ಕೆ ಶ್ರೀ ಕೃಷ್ಣ ತಡೆಯಲಿಲ್ಲವಂತೆ

0 41

ಯುಗ ಯುಗಗಳ ವರೆಗೂ ಚಿರಸ್ಥಾಯಿಯಾಗಿರುವ ಯೋಧ ಎಂದರೆ ಅದು ಮಹಾಭಾರತದ ಅಭಿಮನ್ಯು. ಕಾರಣ ಏನು ಅಂದ್ರೆ ಅಭಿಮನ್ಯುವಿನ ಶೌರ್ಯ ಹಾಗೂ ಪರಾಕ್ರಮವಾಗಿದೆ. ಅಭಿಮನ್ಯು ಸಾಯುವ ಗಳಿಗೆಯಲ್ಲಿ ಮಹಾರಥಿ ಕರ್ಣ ಹೇಳಿದ್ದು ಕೂಡ ಇದೇ ಮಾತಾಗಿತ್ತು ಈ ಜಗತ್ತಲ್ಲಿ ವೀರಯೋಧ ಎಂದು ಯಾರಾದರು ಇದ್ದಲ್ಲಿ ಅದು ನೀನು ಮಾತ್ರವೇ ಆಗಿರಲು ಸಾಧ್ಯ ನಾನು ಅಲ್ಲ ಹಾಗೂ ಅರ್ಜುನನೂ ಅಲ್ಲ ಎಂದು ಕರ್ಣ ಹೇಳಿದ್ದ. ಆದರೆ ಸಾಕ್ಷಾತ್ ಭಗವಂತ ಶ್ರೀಕೃಷ್ಣನೇ ಅಭಿಮನ್ಯವಿನ ಸೋದರಮಾವ ಆಗಿದ್ದರೂ ಸಹ ರಣರಂಗದಲ್ಲಿ ಅಭಿಮನ್ಯುವಿನ ಸಾವನ್ನು ತಪ್ಪಿಸಲು ಆಗಲಿಲ್ಲ. ಯಾಕೆ? ಅಭಿಮನ್ಯು ತನ್ನ ಸ್ವಂತ ತಂಗಿಯ ಮಗನೇ ಆಗಿದ್ದರೂ ಕೂಡ ಅಷ್ಟು ಚಿಕ್ಕ ವಯಸ್ಸಿನಲ್ಲಿ ಅವನಿಗೆ ಸಾವು ಬರುವುದು ಎಂದು ತಿಳಿದಿದ್ದರು ಶ್ರೀಕೃಷ್ಣ ಯಾಕೆ ಅಭಿಮನ್ಯುವಿನ ಸಾವನ್ನು ತಪ್ಪಿಸಲಿಲ್ಲ? ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ ಅದನ್ನು ಇಲ್ಲಿ ಈ ಲೇಖನದ ಮೂಲಕ ತಿಳಿಯೋಣ.

ಪಾಂಡವರ ಮಹಾರಥಿ ಅರ್ಜುನ ರಣಭೂಮಿಯಲ್ಲಿ ಇಲ್ಲದ ಸಮಯ ನೋಡಿಕೊಂಡು ಗುರು ದ್ರೋಣಾಚಾರ್ಯರ ಚಕ್ರವ್ಯೂಹ ರಣರಂಗದಲ್ಲಿ ಪಾಂಡವರ ವಿರುದ್ಧ ಸಜ್ಜಾಗಿ ನಿಂತಿತ್ತು. ಇಂತಹ ಸಂದರ್ಭದಲ್ಲಿ ಒಂದು ದಿನದ ಮಟ್ಟಿಗೆ ತನ್ನನ್ನು ಯಾರೂ ಸೋಲಿಸಲು ಆಗದಂತೆ ಪರಶಿವನಿಂದ ವರ ಪಡೆದಿದ್ದ ಜಯದೃತ ಅಬ್ಬರಿಸುತ್ತಿದ್ದ. ಈ ಸಂದರ್ಭದಲ್ಲಿಯೇ ಚಕ್ರವ್ಯೂಹವನ್ನು ಭೇದಿಸಲು ಅಭಿಮನ್ಯು ಮುಂದಾಗುತ್ತಾನೆ. ಅಭಿಮನ್ಯು ಚಕ್ರವ್ಯೂಹವನ್ನು ಬೇಧಿಸಲು ಹೊರಟಾಗ ಯುಧಿಷ್ಠಿರ ಭೀಮ ನಕುಲ ಸಹದೇವ ತಡೆಯುತ್ತಾರೆ. ಇಷ್ಟು ಚಿಕ್ಕವಯಸ್ಸಿನಲ್ಲಿಯೇ ನಮ್ಮ ಕಣ್ಣೆದುರು ನಿನ್ನ ಸಾವನ್ನು ನೋಡಲಾರೆವು ಎನ್ನುತ್ತಾರೆ. ಆದರೆ ವೀರ ಅಭಿಮನ್ಯು ಇವರ ಯಾರ ಮಾತನ್ನು ಕೇಳದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕಿಡದೆ ಚಕ್ರವ್ಯೂಹವನ್ನು ಭೇದಿಸಿ ಒಳಕ್ಕೆ ಹೋಗಿ ಕೌರವರ ಮಹಾರಥಿಗಳ ಎದುರು ನಿಂತು ಹೋರಾಡಿ ವೀರ ಮರಣವನ್ನು ಹೊಂದುತ್ತಾನೆ. ಈ ಕಥೆ ನಮ್ಮೆಲ್ಲರಿಗೂ ತಿಳಿದಿದೆ. ಆದರೆ ಭೂತ-ಭವಿಷ್ಯ ದವನು ತಿಳಿದು ಸಾಕ್ಷಾತ್ ಭಗವಂತನ ಅಭಿಮನ್ಯುವಿನ ಸೋದರಮಾವನಾಗಿದ್ದಾಗ ಕುರುಕ್ಷೇತ್ರದ ರಣರಂಗದಲ್ಲಿ ಅಭಿಮನ್ಯವಿನ ಮರಣ ಆಗಿದ್ದು ಯಾತಕ್ಕಾಗಿ? ಇಂತಹ ಮಹಾನ್ ವೀರಯೋಧನಿಗೆ ಅನ್ಯಾಯವಾಗುತ್ತಿದ್ದರೂ ಕೂಡ ಶ್ರೀಕೃಷ್ಣ ತಡೆಯಲಿಲ್ಲ ಯಾಕೆ? ಕುರುಕ್ಷೇತ್ರ ಯುದ್ಧ ಒಂದು ಧರ್ಮಯುದ್ಧ ವಾಗಿದ್ದು ಇಲ್ಲಿ ಧರ್ಮ ಗೆಲ್ಲಬೇಕಿತ್ತು ಹೊರತು ಅಧರ್ಮವಲ್ಲ. ಈ ಕಾರಣಕ್ಕೆ ಶ್ರೀಕೃಷ್ಣ ಅಭಿಮನ್ಯವಿನ ಸಾವನ್ನು ತಡೆಯಲಿಲ್ಲ ಎಂದು ಸಾಮಾನ್ಯವಾಗಿ ನಾವು ಹೇಳಬಹುದು. ಆದರೆ ಇದಕ್ಕೂ ಮೀರಿದ ಪೌರಾಣಿಕ ಹಿನ್ನೆಲೆ ಯೊಂದು ಅಭಿಮನ್ಯುವಿನ ಸಾವಿನ ಹಿಂದೆ ಇದೆ.

ಮಹಾಭಾರತದ ಒಂದು ಧರ್ಮಯುದ್ಧ. ಈ ಧರ್ಮಯುದ್ಧದಲ್ಲಿ ನಡೆದದ್ದು ದೇವಾಸುರರ ಕಾಳಗ. ಮಹಾಭಾರತದಲ್ಲಿ ಧರ್ಮದ ರಕ್ಷಣೆಗಾಗಿ ಹೇಗೆ ಭಗವಾನ್ ವಿಷ್ಣು ಶ್ರೀಕೃಷ್ಣನ ಅವತಾರ ದಲ್ಲಿ ಭೂಮಿಗೆ ಬಂದಿದ್ದ ಅದೇ ರೀತಿಯಲ್ಲಿ ಇನ್ನು ಹಲವಾರು ದೇವತೆಗಳು ಬೇರೆ ಬೇರೆ ಅವತಾರದಲ್ಲಿ ಬಂದಿದ್ದರು. ಒಂದೊಂದು ಮನುಷ್ಯ ರೂಪದಲ್ಲಿ ಒಬ್ಬೊಬ್ಬ ದೇವತೆಗಳು ಅವತಾರವೆತ್ತಿದ್ದರು. ಧರ್ಮ ಸಂಸ್ಥಾಪನೆಯ ಕಾರ್ಯದಲ್ಲಿ ಎಲ್ಲ ದೇವತೆಗಳು ಕೂಡ ಶ್ರೀಕೃಷ್ಣನಿಗೆ ಬೆನ್ನೆಲುಬಾಗಿ ಇರುತ್ತಾರೆ. ಆದಿಶೇಷ ಬಲರಾಮನಾಗಿರುತ್ತಾನೆ. ಕೃಷ್ಣನ ಜನನದ ಸಮಯದಲ್ಲಿ ದೇವಕಿ ಇಂದ ಕೃಷ್ಣನ ಯಶೋದೆಯ ಬಳಿ ತೆಗೆದುಕೊಂಡು ಹೋಗಲಾಗುತ್ತದೆ ಯಶೋದೆಯ ಬಳಿ ಇರುವಂತಹ ಇನ್ನೊಂದು ಮಗು ಅದು ದೇವ ಮಾಯೆ ಆಗಿರುತ್ತದೆ. ಈ ದೇವ ಮಾಯೆಯೆ ಕೃಷ್ಣನ ಸಹೋದರಿ ಸುಭದ್ರ ಆಗಿ ಜನ್ಮತಾಳಿರುತ್ತಾಳೆ. ಸುಭದ್ರೆಯ ಪುತ್ರನಾಗಿ ಜನಿಸುವವ ಕೂಡ ಸಾಮಾನ್ಯ ಮನುಷ್ಯನಾಗಿ ಇರದೆ ಓರ್ವ ದೇವತೆ ಆಗಿರುತ್ತಾನೆ. ಚಂದ್ರದೇವನ ಪುತ್ರ ವರ್ಚ ಆಗಿರುತ್ತಾನೆ. ಮಹಾಭಾರತದ ಧರ್ಮ ಸ್ಥಾಪನೆಗೆ ಎಲ್ಲರೂ ಒಕ್ಕೊರಲಿನಿಂದ ಒಪ್ಪಿಗೆ ನೀಡಿದಾಗ ಚಂದ್ರದೇವ ಒಂದು ಶರತ್ತನ್ನು ಹಾಕುತ್ತಾನೆ. ನಾನು ನನ್ನ ಮಗನನ್ನು ಕೃಷ್ಣಾವತಾರ ಕ್ಕೇ ಸಂಯೋಜಿಸುತ್ತೇನೆ ಆದರೆ ಸುಧೀರ್ಘವಾಗಿ ನನಗೆ ನನ್ನ ಮಗ ವರ್ಚ ನನ್ನು ಬಿಟ್ಟಿರಲು ಆಗುವುದಿಲ್ಲ ಹಾಗಾಗಿ ಆದಷ್ಟು ಬೇಗ ಮತ್ತೆ ದೇವಲೋಕಕ್ಕೆ ಹಿಂತಿರುಗಿಸುವಂತೆ ಕೇಳಿಕೊಳ್ಳುತ್ತಾನೆ. ಆಗ ಭಗವಾನ್ ವಿಷ್ಣು ಚಂದ್ರನ ಮಾತಿಗೆ ಒಪ್ಪಿಕೊಂಡು ಅಭಿಮನ್ಯುವಿನ ಅವತಾರದಲ್ಲಿ ಚಂದ್ರದೇವನ ಮಗನಿಗೆ ಕೇವಲ ಹದಿನಾರು ವರ್ಷ ಮಾತ್ರ ಆಯಸ್ಸು ನೀಡುತ್ತಾನೆ. ಸಾಕ್ಷಾತ್ ಭಗವಂತನೇ ಆಗಿದ್ದ ಶ್ರೀಕೃಷ್ಣ ತಾನು ಚಂದ್ರ ದೇವನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಅಭಿಮನ್ಯವಿನ ಸಾವಿನ ವಿಷಯ ತನಗೆ ಮೊದಲೇ ತಿಳಿದಿದ್ದರೂ ಕೂಡ ಶ್ರೀಕೃಷ್ಣ ಮಧ್ಯ ಪ್ರವೇಶಿಸಲಿಲ್ಲ.

ಮಹಾಭಾರತ ಯುದ್ಧದಲ್ಲಿ ಯುದ್ಧವನ್ನು ಗೆಲ್ಲಿಸುವ ಹೊಣೆ ಮಧ್ಯಮ ಪಾಂಡವ ಎನಿಸಿಕೊಂಡ ಅರ್ಜುನನ ಮೇಲೆ ಇರುತ್ತದೆ. ಏಕೆಂದರೆ ಭೀಮು ದ್ರೌಪದಿಯ ವಸ್ತ್ರಾಪಹರಣದಿಂದ ಆದ ಅವಮಾನದ ಪ್ರತೀಕಾರ ತೆಗೆದುಕೊಳ್ಳುವುದಾಗಿ ನೂರು ಜನ ಕೌರವರನ್ನು ಪಡೆಯುವುದರಲ್ಲಿ ಮಗ್ನನಾಗಿರುತ್ತಾನೆ. ಈ ಸಮಯದಲ್ಲಿ ಕೌರವರ ಪಕ್ಷದ ಮಹಾರಥಿಗಳು ಆದ ಭೀಷ್ಮ ದ್ರೋಣ ಕರ್ಣ ಇವರು ಪಾಂಡವರ ಮೇಲೆ ಯುದ್ಧಕ್ಕೆ ಬಂದಾಗ ಇವರನ್ನು ಮನಸಲು ಕೇವಲ ಅರ್ಜುನನಿಂದ ಮಾತ್ರ ಸಾಧ್ಯವಾಗಿರುತ್ತದೆ. ಹೀಗಿದ್ದಾಗ ಅರ್ಜುನನ ಕೋಪ ಅತಿ ಯಾಗುವುದು ಅಭಿಮನ್ಯುವಿನ ಸಾವಿನ ನಂತರ. ಕುರುಕ್ಷೇತ್ರ ಯುದ್ಧದಲ್ಲಿ ಮಹಾವಿದ್ವಾಂಸ ಗಳು ನಡೆಯುತ್ತವೆ. ಅರ್ಜುನ ಮಹಾ ಶಪಥವನ್ನು ಮಾಡಿ ದ್ರೋಣ ಹಾಗೂ ಕರ್ಣ ರನ್ನು ಸಂಹರಿಸುತ್ತಾನೆ. ಈ ಕಾರಣಕ್ಕಾಗಿ ಯುದ್ಧದ ವೇಗವನ್ನು ಹೆಚ್ಚಿಸಲು ಶ್ರೀಕೃಷ್ಣ ಅಭಿಮನ್ಯುವಿನ ಸಾವನ್ನು ತಡೆಯುವುದಿಲ್ಲ. ಅಭಿಮನ್ಯುವಿನ ಸಾವಿನ ಕುರಿತಾಗಿ ಇರುವ ಇದು ಒಂದು ಕಥೆಯಾದರೆ ಇನ್ನೊಂದು ಕಥೆ ಕೂಡ ಇದೆ. ಇನ್ನೊಂದು ಪೌರಾಣಿಕ ಕಥೆ ಎಂದರೆ ಅಭಿಮನ್ಯು ಅವನ ಹಿಂದಿನ ಜನ್ಮದಲ್ಲಿ ಒಬ್ಬ ಅಸುರನಾಗಿರುತ್ತಾನೆ. ಕೃಷ್ಣನ ಸೋದರ ಮಾವ ಕಂಸನ ಸೇವಕನಾಗಿ ಅವಿಕಾಸುರ ಎಂಬ ಹೆಸರಿನಲ್ಲಿ ಜನಿಸಿರುತ್ತಾನೆ ಅಭಿಮನ್ಯು. ಕೃಷ್ಣ ಕಂಸ ನನ್ನು ಸಂಹಾರ ಮಾಡಿದವ ಕೃಷ್ಣನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಕೊಂಡಿರುತ್ತಾನೆ ಅವೀಕಾಸುರ. ಕೃಷ್ಣ ಇದನ್ನೆಲ್ಲ ಮೊದಲೇ ತಿಳಿದು ಅವೀಕಾರನನ್ನು ಒಂದು ಹುಳುವನ್ನಾಗಿಸಿ ಬಂಧಿಸಿಡುತ್ತಾನೆ. ಸುಭದ್ರ ಹಾಗೂ ಅರ್ಜುನರ ವಿವಾಹವಾದ ಸಂದರ್ಭದಲ್ಲಿ ಹುಳುವಿನ ರೂಪದಲ್ಲಿದ್ದ ಅಸುರ ಬಿಡುಗಡೆಹೊಂದಿ ಸುಭದ್ರೆಯ ಮಡಿಲು ಸೇರುತ್ತಾನೆ. ಅದೇ ಸಮಯದಲ್ಲಿ ಅರ್ಜುನ ಹೇಳುವ ಚಕ್ರವ್ಯೂಹದ ಕಥೆಯನ್ನು ಈ ಅಸುರ ಸುಭದ್ರೆ ಹೊಟ್ಟೆಯಲ್ಲಿ ಇದ್ದುಕೊಂಡು ಕೇಳಿಕೊಳ್ಳುತ್ತಾನೆ. ಇದೇ ಕಾರಣಕ್ಕಾಗಿ ಚಕ್ರವ್ಯೂಹ ಭೇದಿಸುವ ಕಥೆಯನ್ನು ಸುಭದ್ರೆ ಪೂರ್ತಿಯಾಗುತ್ತದೆ ಹಾಗೂ ಅಭಿಮನ್ಯುವಿನ ಆಯುಷ್ಯ ಅಷ್ಟಕ್ಕೆ ಇರುವಂತೆಯೂ ಕೃಷ್ಣ ತಡೆಯುತ್ತಾ ನಂತೆ. ಮುಂದೆ ಅಭಿಮನ್ಯುವಿನ ಜನನವಾದ ನಂತರ ಬಲರಾಮ ಹಾಗೂ ಕೃಷ್ಣನ ಮಾರ್ಗದರ್ಶನದಲ್ಲಿ ಅವಿಕಾಸುರನ ಬಾಲ್ಯ ಸಚ್ಚಾರಿತ್ರ್ಯ ಒಳ್ಳೆಯ ಗುಣಗಳನ್ನು ತುಂಬಿರುತ್ತದೆ. ಆದರೆ ಮುಂದೆ ಯಾವಾಗಲಾದರೂ ಅಭಿಮನ್ಯುವಿನ ಲ್ಲಿ ಇರುವಂತಹ ಅಸುರು ಗುಣ ಹೊರಬಂದರೆ ಇಡೀ ಜಗತ್ತಿಗೆ ಮಾರಕ ಎಂಬುದನ್ನು ಅರಿತ ಶ್ರೀ ಕೃಷ್ಣ , ಕುರುಕ್ಷೇತ್ರ ರಣರಂಗದಲ್ಲಿ ಅಭಿಮನ್ಯೂ ಚಕ್ರವ್ಯೂಹ ಭೇದಿಸುವುದು ಅರ್ಧ ತಿಳಿದಿರುವ ವಿಷಯ ತಿಳಿದಿದ್ದರೂ ಸಹ ಅಭಿಮನ್ಯುವನ್ನು ತಡೆಯಲು ಹೋಗಲಿಲ್ಲ. ಈ ಎರಡು ಪುರಾಣ ಕಥೆಗಳಿಂದ ನಾವು ಶ್ರೀಕೃಷ್ಣ ಅಭಿಮನ್ಯುವಿನ ಸಾವನ್ನು ಯಾಕೆ ತಡೆಯಲಿಲ್ಲ ಎನ್ನುವುದನ್ನು ತಿಳಿದುಕೊಳ್ಳಬಹುದು.

Leave A Reply

Your email address will not be published.